ಗರ್ಭಿಣಿಯರೇ, ಆದಷ್ಟು ಇಂತಹ ಆಹಾರಗಳಿಂದ ದೂರವಿರಿ...

By: suma
Subscribe to Boldsky

ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು. ಹತ್ತು ಹಲವು ಹರಕೆ ಹೊತ್ತು ವೈದ್ಯರ ಸಲಹೆಗಳನ್ನು ಪಾಲಿಸಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ಬಳಿಕ ಹಾಗು ನಿಮ್ಮ ಗರ್ಭದಲ್ಲಿ ಬೆಳೆಯುವ ಪುಟ್ಟ ಕಂದಮ್ಮನ ಕನಸನ್ನು ನನಸಾಗಿಸಿದ ಬಳಿಕ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದೇ ಇದ್ದರೆ ಅನಾಹುತವಾಗಬಹುದು. ನಿಮ್ಮ ಕಂದ ನಿಮ್ಮ ಗರ್ಭದೊಳಗೆ ಬೆಚ್ಚಗೆ ಒಂಬತ್ತು ತಿಂಗಳು ಬೆಳೆದು, ಆರೋಗ್ಯಕರ, ಪರಿಪೂರ್ಣ ಶಿಶುವಾಗಿ ಜನ್ಮತಳೆಯಲು ನೀವು ಕೆಲವೊಂದು ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿ ಬರಬಹುದು.

ಕೆಲವು ಆಹಾರಗಳಂತೂ ಗರ್ಭದ ಶಿಶುವಿಗೆ ಅತ್ಯಂತ ಮಾರಕವಾಗಿದೆ. ಉದಾಹರಣೆಗೆ ನಿಮ್ಮ ಧೂಮಪಾನದ ಅಭ್ಯಾಸ. ಇದರಿಂದ ನಿಮ್ಮ ರಕ್ತದೊಡನೆ ಮಿಶ್ರಿತವಾದ ನಿಕೋಟಿನ್ ನಿಮ್ಮ ಮಗುವೂ ಹಂಚಿಕೊಳ್ಳಬೇಕಾಗುತ್ತದೆ. ಇದು ನಿಮಗೆ ಸಹ್ಯವಲ್ಲ ಅಲ್ಲವೇ? ಇಂತಹ ಖಡಾಖಂಡಿತವಾಗಿ ಬೇಡ ಎಂದು ನೀವು ಹೇಳಲೇಬೇಕಾದ ಕೆಲವೊಂದು ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ, ಮುಂದೆ ಓದಿ... 

ಕೆಫೀನ್, ಟೀ ಹಾಗೂ ಆಲ್ಕೋಹಾಲ್

ಕೆಫೀನ್, ಟೀ ಹಾಗೂ ಆಲ್ಕೋಹಾಲ್

ಗರ್ಭಿಣಿಯಾದಾಗ ಕೆಫೀನ್, ಟೀ ಮತ್ತು ಆಲ್ಕೋಹಾಲ್‍ಗಳನ್ನು ಸೇವಿಸುವುದನ್ನು ನಿಯಂತ್ರಿಸಿ. ಏಕೆಂದರೆ ಇವುಗಳು ನಿಮ್ಮ ಗರ್ಭದ ಮೇಲೆ ಅಥವಾ ಹೆರಿಗೆಯ ಸಮಯದಲ್ಲಿ ನಿಮಗೆ ಅಪಾಯವನ್ನು ತಂದೊಡ್ಡಬಹುದು. ಈ ಮೂರು ಬಗೆಯ ಪಾನೀಯಗಳನ್ನು ಅತಿಯಾಗಿ ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಸಹ ಇದೆ ಎಂಬುದನ್ನು ಮರೆಯಬೇಡಿ.

ಸಾಧ್ಯವಾದಷ್ಟು ಮೀನು ತಿನ್ನಬೇಡಿ...

ಸಾಧ್ಯವಾದಷ್ಟು ಮೀನು ತಿನ್ನಬೇಡಿ...

ಸಮುದ್ರ ಜನ್ಯ ಆಹಾರಗಳಲ್ಲಿ ಒಮೆಗಾ- 3 ಕೊಬ್ಬಿನ ಆಮ್ಲಗಳು ಇರುತ್ತವೆ. ಇವು ಮಗುವಿನ ಆರೋಗ್ಯಕ್ಕೆ ಉಪಯೋಗಕಾರಿ. ಆದರೂ ಸಹ ಇವುಗಳಲ್ಲಿ ಅತಿಯಾದ ಪಾದರಸ ಇರುವ ಕಾರಣ ಇದನ್ನು ಸೇವಿಸುವುದನ್ನು ನಿಯಂತ್ರಿಸಿ. ಏಕೆಂದರೆ ಈ ಪಾದರಸವು ನಿಮ್ಮ ಮಗುವಿನ ಮೆದುಳಿನ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಿ, ಅದಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ಸಾಲ್ಮನ್, ಏಡಿ, ಮಾಂಸವನ್ನು ಸೇವಿಸುವುದನ್ನು ನಿಯಂತ್ರಿಸಿ. ಸಾಮಾನ್ಯವಾಗಿ ಈ ಬಗೆಯ ಮೀನು ಮತ್ತು ಸಮುದ್ರ ಜನ್ಯ ಆಹಾರಗಳಲ್ಲಿ ಪಾದರಸವು ಇರುತ್ತದೆ. ಯಾವುದಕ್ಕೂ ಒಮ್ಮೆ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಿ

ಹಾಗಲಕಾಯಿ

ಹಾಗಲಕಾಯಿ

ಹಾಗಲಕಾಯಿಯ ರಸವು ಗರ್ಭಿಣಿಯರಲ್ಲಿ ಹೊಟ್ಟೆನೋವು ಮತ್ತು ಸೆಳೆತವನ್ನುಂಟು ಮಾಡುತ್ತದೆ. ಇದರ ಜೊತೆಗೆ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಆಸಿಡಿಟಿ ಎಲ್ಲವೂ ಸೇರಿ ಹೊಟ್ಟೆಯ ಸ್ಥಿತಿಯನ್ನು ಹಾಳು ಮಾಡಿ ಬಿಡುತ್ತವೆ...ಹಾಗಾಗಿ ಆದಷ್ಟು ಹಾಗಲಕಾಯಿಯನ್ನು ಸೇವಿಸಬೇಡಿ...

ಗ್ರೀನ್ ಟೀ (ಹಸಿರು ಟೀ)

ಗ್ರೀನ್ ಟೀ (ಹಸಿರು ಟೀ)

ಎಲ್ಲೆಡೆ ಹಸಿರು ಟೀ ಆರೋಗ್ಯಕ್ಕೆ ಒಳ್ಳೆಯದು ಎಂದು ಟಾಂಟಾಂ ಆಗುತ್ತಿರುವಾಗ ಇದು ಮಾರಕ ಎಂದು ಹೇಳುತ್ತಿರುವುದು ಕೊಂಚ ಅಚ್ಚರಿ ತರಿಸುತ್ತಿದೆ ಅಲ್ಲವೇ? ಆದರೆ ಇದು ನಿಜ. ಏಕೆಂದರೆ ಹಸಿರು ಚಹಾ ಏಕಾಗಿ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರಚಾರ ಪಡೆಯುತ್ತಿದೆಯೋ ಅದೇ ಗರ್ಭಿಣಿಯರಿಗೆ ಮಾರಕವಾಗಿದೆ. ಹಸಿರು ಟೀ ಸೇವನೆಯಿಂದ ನಿಮ್ಮ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವುದರಿಂದ ಹೆಚ್ಚು ಶಕ್ತಿ ಮತ್ತು ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಭಿಸುವ ಪೋಷಕಾಂಶಗಳು ಉಳಿದ ಚಟುವಟಿಕೆಗಳನ್ನು ಚುರುಕುಗೊಳಿಸುತ್ತವೆ. ಆದರೆ ನಿಮ್ಮ ಕಂದನ ಬೆಳವಣಿಗೆ ಒಂದು ಖಚಿತವಾದ ವೇಳಾಪಟ್ಟಿಗೆ ಒಳಪಟ್ಟಿದೆ. ಈ ವೇಳಾಪಟ್ಟಿಯನ್ನು ಗಮನಿಸಿ ವೈದ್ಯರು ನಿಮ್ಮ ಕಂದನ ಆಗಮನದ ದಿನಾಂಕವನ್ನೂ ಹೆಚ್ಚೂ ಕಡಿಮೆ ಕರಾರುವಾಕ್ಕಾಗಿ ಹೇಳುತ್ತಾರೆ. ಹಸಿರು ಟೀ ಸೇವನೆಯಿಂದ ಈ ಬೆಳವಣಿಗೆಯ ಕ್ರಮದಲ್ಲಿ ಏರುಪೇರಾಗಿ ಕಂದನ ಆರೋಗ್ಯಕ್ಕೆ ಮಾರಕವಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ ಗ್ರೀನ್ ಟೀ ಗೆ ಕೆಂಪು ದೀಪ ತೋರಿಸಿ.

ಸಾಧ್ಯವಾದಷ್ಟು ಇಂತಹ ಆಹಾರಗಳಿಂದ ದೂರವಿರಿ

ಸಾಧ್ಯವಾದಷ್ಟು ಇಂತಹ ಆಹಾರಗಳಿಂದ ದೂರವಿರಿ

ಗ್ಯಾಸ್ ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ. ಅವುಗಳನ್ನು ಸೇವಿಸದೆ ಇದ್ದಲ್ಲಿ ನಿಮಗೆ ಒಳ್ಳೆಯದು. ಯಾರಿಗೆ ಲ್ಯಾಕ್ಟೋಸ್ ಎಂದರೆ ಆಗುವುದಿಲ್ಲವೋ, ಅವರು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಬಹುದು. ಕರಿದ ಮತ್ತು ಕೊಬ್ಬು ಅಧಿಕವಾಗಿರುವ ಆಹಾರ ಪದಾರ್ಥಗಳಿಂದ ದೂರವಿರಿ. ಸೋಡಾ, ಹಣ್ಣಿನ ರಸ, ಜೋಳ, ಬೀನ್ಸ್, ಈರುಳ್ಳಿಗಳು, ಹೂಕೋಸು, ಪಿಯರ್ಸ್, ಎಲೆ ಕೋಸು, ಬ್ರೊಕ್ಕೊಲಿ, ಆಲೂಗಡ್ಡೆ, ಜೇನು ತುಪ್ಪ, ಅಸ್ಪರಗುಸ್ ಮತ್ತು ಕೃತಕ ಸಿಹಿತಿನಿಸುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ರಸ್ತೆಬದಿಯ ಆಹಾರ

ರಸ್ತೆಬದಿಯ ಆಹಾರ

ಹಾದಿಬದಿಯಲ್ಲಿ ಸಿಗುವ ಆಹಾರ ಎಷ್ಟೇ ಆಕರ್ಷಕ ಮತ್ತು ರುಚಿಯಾಗಿದ್ದರೂ ಗರ್ಭಿಣಿಯರು ಇದನ್ನು ಬೇಡ ಎಂದು ಹೇಳುವುದು ಒಳಿತು. ಏಕೆಂದರೆ ಈ ಆಹಾರ ತಯಾರಿಸಲು ಬಳಸಲಾಗಿರುವ ನೀರು, ಎಣ್ಣೆ, ಸ್ವಚ್ಛತೆಗೆ ಕೊಟ್ಟಿರುವ ಪ್ರಾಮುಖ್ಯತೆ, ಗಾಳಿಯಲ್ಲಿ ತೇಲಿ ಬಂದಿರುವ ಬ್ಯಾಕ್ಟೀರಿಯಾ, ಹೂವಿನ ಪರಾಗ, ಧೂಳು, ಆ ಅಂಗಡಿಗೆ ಬಂದವರು ತಮ್ಮೊಂದಿಗೆ ತಂದಿರಬಹುದಾದ ಸಾಂಕ್ರಾಮಿಕ ಕ್ರಿಮಿಗಳು, ಸೋಮಾರಿತನದಿಂದ ನಿನ್ನೆಯ ಪಾತ್ರೆಗಳನ್ನು ಸರಿಯಾಗಿ ತೊಳೆಯದೇ ಉಳಿದಿದ್ದ ಆಹಾರ ಕೊಳೆತು ಅದೇ ಪಾತ್ರೆಯನ್ನು ಮರುದಿನ ಆಹಾರ ತಯಾರಿಸಲು ಉಪಯೋಗಿಸಿರುವುದು, ಇಂತಹ ಹಲವಾರು ಸಾಧ್ಯತೆಗಳು ಆ ಆಹಾರದ ಬಗ್ಗೆ ಅನುಮಾನ ಹುಟ್ಟಿಸುತ್ತವೆ.

ಪಪ್ಪಾಯ

ಪಪ್ಪಾಯ

ಪಪ್ಪಾಯಿ ಅದರಲ್ಲೂ ಹಸಿ ಪಪ್ಪಾಯಿಯನ್ನು ಗರ್ಭಿಣಿ ಮಹಿಳೆಯರು ಸೇವಿಸಲೇಬಾರದು. ಯಾಕೆಂದರೆ ಇದರಿಂದ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿದೆ. ಪಪ್ಪಾಯಿಯಲ್ಲಿರುವಂತಹ ಲ್ಯಾಟೆಕ್ಸ್ ಅಂಶವು ಗರ್ಭಪಾತವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದ ಹಸಿ ಪಪ್ಪಾಯಿಯಿಂದ ದೂರ ಉಳಿಯಿರಿ.

English summary

Things to Avoid While Pregnant

Pregnancy is a time when you should be cautious about your daily intake and keep a tab on your vices, like smoking and drinking to safeguard your baby from its ill-effects.
Story first published: Friday, May 5, 2017, 23:33 [IST]
Subscribe Newsletter