For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ವಾಂತಿಯ ಕಿರಿಕಿರಿಗೆ, ಶುಂಠಿ ರಾಮಬಾಣ

By Deepu
|

ಹೆಣ್ಣಿನ ಜೀವನದಲ್ಲಿ ಗರ್ಭಿಣಿಯಾಗಿರುವ ಕಾಲವು ಬಹುಕಾಲ ನೆನಪಿನಲ್ಲುಳಿಯುವ ದಿನಗಳಾಗಿರುತ್ತದೆ. ಬಹುತೇಕ ಹೆಂಗಸರಿಗೆ ಈ ಕಾಲವು ಸುಲಭವಾಗಿ ಸಾಗಿ ಹೋಗುತ್ತದೆ. ಆದರೆ ಕೆಲವರಿಗೆ ನಾಸಿಯಾ ಮತ್ತು ವಾಂತಿಯ ದೆಸೆಯಿಂದ ಇದು ನರಕ ಸದೃಶ್ಯವಾಗಿರುತ್ತದೆ. ವಾಂತಿಯನ್ನು ಮಾರ್ನಿಂಗ್ ಸಿಕ್‍ನೆಸ್ ಅಥವಾ ಮುಂಜಾನೆಯ ಮಂಕು ಕವಿಯುವಿಕೆ ಎಂದು ಸಹ ಗುರುತಿಸಬಹುದು. ಇದು ಗರ್ಭಿಣಿಯಾಗಿರುವಾಗ

ಸಾಮಾನ್ಯವಾಗಿ ಕಂಡು ಬರುವ ಒಂದು ಲಕ್ಷಣವಾಗಿರುತ್ತದೆ. ವಿಶೇಷವಾಗಿ ಮೊದಲ ಮೂರು ತಿಂಗಳಿನಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಾಸ್ತವಾಂಶವೇನೆಂದರೆ ಶೇ.65ಕ್ಕೂ ಅಧಿಕ ಜನ ಗರ್ಭಿಣಿ ಮಹಿಳೆಯರಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿ ಕಂಡು ಬರುತ್ತದೆ.

ಸಾಮಾನ್ಯವಾಗಿ, ಗರ್ಭಿಣಿಯಾಗಿರುವಾಗ ದೇಹವು ಎಚ್‌ಸಿಜಿ (ಹ್ಯೂಮನ್ ಕೊರಿಯನಿಕ್ ಗೊನಡೊಟ್ರೊಪಿನ್) ಎಂಬ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತದೆ. ಇದು ನಾಸಿಯಾ ಸಂಬಂಧಿತ ಭಾವನೆಗಳನ್ನು ಹುಟ್ಟು ಹಾಕುತ್ತದೆ, ಅಲ್ಲದೆ ಮುಂಜಾನೆ ಮಂಕುತಕ್ಕೂ ಕಾರಣವಾಗಿ ಬಿಡುತ್ತದೆ. ಸಾಮಾನ್ಯವಾಗಿ ಹಾರ್ಮೋನ್‌ಗಳ ಬದಲಾವಣೆ ಜೊತೆಗೆ, ಒತ್ತಡ, ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣ, ಮಲಬದ್ಧತೆ, ಆತಂಕ ಮತ್ತು ಪೋಷಕಾಂಶದ ಕೊರತೆಯನ್ನು ಸಹ ಉಂಟು ಮಾಡುತ್ತದೆ. ಅದರಲ್ಲೂ, ಮುಂಜಾನೆ ಮಂಕುತನಕ್ಕೆ ಹಲವಾರು ಪರಿಹಾರಗಳು ಇವೆ. ಆದರೆ ಅದರಲ್ಲಿ ಶುಂಠಿ ಪರಿಹಾರವನ್ನು ಹಲವರು ಬಳಸುತ್ತಾರೆ. ಹದಿಹರೆಯದಲ್ಲಿ ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳೇನು?

How To Use Ginger For Morning Sickness In Pregnancy

ಶುಂಠಿಯಲ್ಲಿ ಅದ್ಭುತವಾದ ಔಷಧೀಯ ಗುಣಗಳು ಇವೆ. ಇದರಲ್ಲಿ ಜಿಂಜೆರೊಲ್‌ಗಳು ಎಂಬ ರಾಸಾಯನಿಕ ಪದಾರ್ಥವಿದೆ. ಇದು ನಾಸಿಯಾದಿಂದ ಗುಣಮುಖರಾಗಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲಗಳನ್ನು ತಟಸ್ಥಗೊಳಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಆದ್ದರಿಂದ ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮಗಾಗಿ ಶುಂಠಿಯನ್ನು ಬಳಸಿಕೊಂಡು ಮುಂಜಾನೆ ಮಂಕುತನವನ್ನು ಹೇಗೆ ನಿವಾರಿಸಿಕೊಳ್ಳುವುದು ಎಂದು ತಿಳಿಸುತ್ತಿದ್ದೇವೆ. ಬನ್ನಿ ಅದು ಹೇಗೆ ಎಂದು ನೋಡಿಕೊಂಡು ಬರೋಣ.

ಶುಂಠಿ ಜೊತೆಗೆ ಲಿಂಬೆ ಹಣ್ಣು, ಜೇನುತುಪ್ಪ ಮತ್ತು ಪುದೀನಾ:
ಲಿಂಬೆ ಹಣ್ಣು ರಸ, ಜೇನುತುಪ್ಪ ಮತ್ತು ಪುದಿನಾರಸಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅದಕ್ಕೆ ಒಂದು ಟೀ ಚಮಚ ಶುಂಠಿ ಪುಡಿಯನ್ನು ಬೆರೆಸಿಕೊಳ್ಳಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ಬೆಳಗ್ಗೆ ಮತ್ತು ಸಂಜೆ ಇದನ್ನು ಸೇವಿಸಿದಾಗ ನಿಮಗೆ ಮುಂಜಾನೆ ಮಂಕುತನದಿಂದ ಮುಕ್ತಿ ಸಿಕ್ಕುತ್ತದೆ.

ಶುಂಠಿ ಟೀ
ಮುಂಜಾನೆ ಮಂಕುತನವನ್ನು ನಿವಾರಿಸಿಕೊಳ್ಳಲು ಶುಂಠಿ ಟೀ ಅತ್ಯುತ್ತಮ ಪರಿಹಾರವಾಗಿರುತ್ತದೆ. ಇದರಲ್ಲಿರುವ ವಿಟಮಿನ್‌ಗಳು ನಿಮ್ಮನ್ನು ನಾಸಿಯಾದಿಂದ ಮುಕ್ತರನ್ನಾಗಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮುಂಜಾನೆ ಮಂಕುತನವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು.

ಶುಂಠಿ ಟೀ ಜೊತೆಗೆ ಶುಂಠಿ ಬೇರು
ಶುಂಠಿ ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಆತಂಕವನ್ನು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತವೆ. ಶುಂಠಿ ಟೀಗೆ ಜಜ್ಜಿದ ಶುಂಠಿ ಬೇರನ್ನು ಬೆರೆಸಿಕೊಳ್ಳಿ, ಜೊತೆಗೆ ನಿಂಬೆರಸ ಮತ್ತು ಜೇನು ತುಪ್ಪವನ್ನು ಸಹ ಸೇರಿಸಿ. ಇದನ್ನು ಸೇವಿಸುವುದರಿಂದ ಮುಂಜಾನೆ ಮಂಕುತನ ನಿವಾರಣೆಯಾಗುತ್ತದೆ. ಗರ್ಭಿಣಿಯರಿಗೆ ಟಾಪ್ 15 ಹೆಲ್ತ್ ಟಿಪ್ಸ್

ಶುಂಠಿ ಏಲ್
ಶುಂಠಿ ಏಲ್ ಗ್ಯಾಸ್ಟ್ರೋಇಂಟೆಸ್ಟಿನಲ್ ಟ್ರ್ಯಾಕ್ಟ್ ಅನ್ನು ಶಾಂತಗೊಳಿಸಲು ಉತ್ತಮ ಪರಿಹಾರವಾಗಿದೆ. ಇದು ಮುಂಜಾನೆ ಮಂಕುತನವನ್ನು ನಿವಾರಿಸುತ್ತದೆ. ಜೊತೆಗೆ ಇದರಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಇರುವುದರಿಂದಾಗಿ, ಇದನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ.

ಕ್ಯಾರೆಟ್ ರಸದ ಜೊತೆಗೆ ಶುಂಠಿ
ಶುಂಠಿಯನ್ನು ಕ್ಯಾರೆಟ್ ರಸದ ಜೊತೆಗೆ ಸಹ ಸೇವಿಸಬಹುದು. ಇದು ಮುಂಜಾನೆ ಮಂಕುತನವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ಸೂಪ್‌ ಜೊತೆಗೆ ಸ್ವಲ್ಪ ಶುಂಠಿ ಪುಡಿಯನ್ನು ಬೆರೆಸಿಕೊಳ್ಳಿ. ಇದನ್ನು ಪ್ರತಿದಿನ ಮುಂಜಾನೆ ಸೇವಿಸಿ ಮುಂಜಾನೆ ಮಂಕುತನದಿಂದ ನಿವಾರಣೆ ಪಡೆಯಿರಿ. ಮುಂಜಾನೆ ಮಂಕುತನದಿಂದ ಮುಕ್ತರಾಗಲು ಈ ಪರಿಹಾರಗಳನ್ನು ಪಾಲಿಸಿ.

English summary

How To Use Ginger For Morning Sickness In Pregnancy

Morning sickness or nausea is one of the most common symptoms that a woman faces in her pregnancy. It is most commonly seen in the first trimester of pregnancy. Therefore, in this article, we at Boldsky will be listing out some of the ways to use ginger to cure morning sickness during pregnancy. Have a look:
Story first published: Thursday, January 28, 2016, 10:19 [IST]
X
Desktop Bottom Promotion