For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ಮರೆಯದಿರಿ

|

ಸ್ತ್ರೀಯ ಜೀವನದಲ್ಲಿ ಗರ್ಭಧಾರಣೆ ಎನ್ನುವುದು ಮಹತ್ವದ ಘಟ್ಟವಾಗಿದೆ. ಈ ಸಮಯದಲ್ಲಿ ಆಕೆ ಆದಷ್ಟೂ ಜಾಗರೂಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನೂ ಇಡಬೇಕು. ತನ್ನೊಳಗೆ ಮತ್ತೊಂದು ಜೀವವನ್ನು ಕಾಪಾಡುವ ತಾಯಿಯ ಪಾತ್ರ ದೇವರು ಕೊಡುವ ನಿಜವಾದ ವರವಾಗಿದೆ. ತಾಯ್ತನದ ಸೌಭಾಗ್ಯ ಒಂದು ಹೆಣ್ಣಿಗೆ ಮಹಾಭಾಗ್ಯವಿದ್ದಂತೆ ಎಂಬುದು ಪುರಾತನ ಕಾಲದಿಂದಲೂ ನಂಬಿಕೊಂಡು ಬಂದಿರುವ ಸಿದ್ಧಾಂತವಾಗಿದೆ.

ಹೆಣ್ಣು ನವಮಾಸ ತುಂಬಿ ತನ್ನ ಕರುಳ ಕುಡಿಗೆ ಜನ್ಮ ನೀಡುವವರೆಗೂ ತನ್ನ ಹೆಜ್ಜೆಯನ್ನು ಅತೀ ಜಾಗರೂಕತೆಯಿಂದ ಇಡಬೇಕಾದ್ದು ಅನಿವಾರ್ಯವಾಗಿದೆ. ಅಷ್ಟೇ ಏಕೆ ಆಸ್ಪತ್ರೆಗಳಲ್ಲಿ ವೈದ್ಯರು ತಮ್ಮ ಗರ್ಭಿಣಿ ರೋಗಿಗೆ ನೀಡುವಾಗ ಆ ಔಷಧಿ ಸೂಕ್ತವೇ ಎಂದು ಪರಿಶೀಲಿಸಿಯೇ ನೀಡುತ್ತಾರೆ. ಮನೆಯ ಅಡುಗೆಯಲ್ಲಿಯೂ ಅಷ್ಟೇ, ಹಿರಿಯರು ಈ ಆಹಾರ ಗರ್ಭಿಣಿಗೆ ಸೂಕ್ತವೇ ಎಂದು ಪರಾಮರ್ಶಿಸಿಯೇ ನೀಡುತ್ತಾರೆ, ಅಲ್ಲವೇ?

ಅಂತೆಯೇ ಮಳೆಗಾಲದಲ್ಲಿಯೂ ಕೂಡ ಸಾಧ್ಯವಾದಷ್ಟು ಮುನ್ನೆಚ್ಚರಿಕೆಯನ್ನು ಪಾಲಿಸುವುದು ಅಷ್ಟೇ ಮುಖ್ಯ. ಗರ್ಭಿಣಿಯರು ಸೇವಿಸುವ ಆಹಾರವೇ ಒಡಲ ಕಂದನಿಗೂ ಆಹಾರವಾಗಿರುವುದರಿಂದ ಆಹಾರದ ಮೂಲಕ ಅನೈಚ್ಛಿಕವಾಗಿ ಸೇರುವ ವಿಷಕಾರಿ ಪದಾರ್ಥಗಳು ಕಂದನ ಹೊಟ್ಟೆಯನ್ನೂ ಸೇರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಸೇವಿಸುವ ಆಹಾರದ ಕುರಿತು ಕೊಂಚ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ. ಬಹುಪಯೋಗಿ ಕೇಸರಿ, ಗರ್ಭಿಣಿಯರ ಪಾಲಿನ ಸಂಜೀವಿನಿ

Monsoon Care Tips During Pregnancy

ಅಡುಗೆ ಎಣ್ಣೆಯ ಕುರಿತು ಇರಲಿ ಎಚ್ಚರ

ಸಾಮಾನ್ಯವಾಗಿ ಮಳೆಗಾಲದಲ್ಲಿ ಎಣ್ಣೆ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ. ದಿನನಿತ್ಯ ಆಹಾರಕ್ರಮದಲ್ಲಿ ತುಪ್ಪ, ಆಲೀವ್ ಎಣ್ಣೆ, ಜೋಳದ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಹಾರ ತಯಾರಿಸಲು ಬಳಸಿ. ಇವು ಲಘು ಎಣ್ಣೆಗಳು ಆರೋಗ್ಯಕ್ಕೆ ಉತ್ತಮ. ಸಾಸಿವೆ ಎಣ್ಣೆ, ಬೆಣ್ಣೆ, ಕಡಲೆ ಕಾಳು ಎಣ್ಣೆ ಮತ್ತು ಇನ್ನಿತರ ಭಾರವಾದ ಎಣ್ಣೆಗಳನ್ನು ಬಳಸಬೇಡಿ. ಈ ಎಣ್ಣೆಗಳು ಉಷ್ಣಕಾರಕ ಗುಣಗಳನ್ನು ಹೊಂದಿರುತ್ತವೆ. ಹೆರಿಗೆಯ ಅವಧಿಯಲ್ಲಿ ಹರಳೆಣ್ಣೆಯಿಂದ ದೂರವಿರಿ

ಸಾಕುಪ್ರಾಣಿಗಳಿಂದ ಸಾಧ್ಯವಾದಷ್ಟು ದೂರವಿರಿ

ಮಳೆಗಾಲದಲ್ಲಿ ಸಾಕುಪ್ರಾಣಿಗಳಿಂದ ಆದಷ್ಟು ದೂರವಿರುವುದೇ ಸೂಕ್ತ. ಮಳೆಗಾಲದಲ್ಲಿ ಸಾಕುಪ್ರಾಣಿಯ ಸುತ್ತಲೂ ಇರುವಂತಹ ಕಲುಷಿತ ಗಾಳಿ ಉಸಿರಾಡಿದರೆ, ಅಥವಾ ಅವುಗಳನ್ನು ಸ್ಪರ್ಶಿಸಿದರೆ ಕೂಡ ಅಪಾಯವನ್ನು ಎದುರಿಸಬೇಕಾಗಿ ಬರಬಹುದು. ಏಕೆಂದರೆ ಮಳೆಗಾಲದಲ್ಲಿ ಸಾಕು ಪ್ರಾಣಿಗಳು ಸೋಂಕಿಗೆ ತುತ್ತಾಗುವುದು ಸಾಮಾನ್ಯ, ಅಷ್ಟೇ ಏಕೆ ನಿಮ್ಮ ಗರ್ಭದಲ್ಲಿರುವ ಶಿಶುವಿಗೆ ಕೂಡ ಇದರಿಂದ ತೊಂದರೆ ಉಂಟಾಗಬಹುದು! ಆದ್ದರಿಂದ ಮಳೆಗಾಲದಲ್ಲಿ ಸಾಕುಪ್ರಾಣಿಗಳಿಂದ ಆದಷ್ಟು ದೂರವಿರಿ.

ಮೊಟ್ಟೆ

ಸಾಮಾನ್ಯವಾಗಿ ಗರ್ಭಿಣಿಯರು ಮೊಟ್ಟೆಯನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಹಸಿ ಅಥವಾ ಅರೆಬೆಂದ ಮೊಟ್ಟೆಯು ಗರ್ಭಿಣಿ ಮಹಿಳೆಯರು ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಸೇರಲ್ಪಡುತ್ತದೆ. ಹಸಿ ಮೊಟ್ಟೆ ಹಾಕಿರುವಂತಹ ಪದಾರ್ಥಗಳಾದ ಕುಕ್ಕಿ ಡೌಗ್, ಕೇಕ್, ಮನೆಯಲ್ಲೇ ತಯಾರಿಸಿದ ಸಾಸ್ ಇತ್ಯಾದಿಗಳಿಂದ ಆದಷ್ಟು ದೂರವಿರುವುದೇ ಉತ್ತಮ. ಪ್ಲಾಸೆಂಟಾ ಎಂದರೇನು? ಗರ್ಭಾವಸ್ಥೆಯಲ್ಲಿ ಇದರ ಪ್ರಾಮುಖ್ಯತೆ ಏನು?

Monsoon Care Tips During Pregnancy

ರಸ್ತೆ ಬದಿಯ ಆಹಾರದಿಂದ ಆದಷ್ಟು ದೂರವಿರಿ

ನೀವು ಆಹಾರವನ್ನು ಸೇವಿಸುವ ಪರಿಸರವು ಶುಚಿಯಾಗಿ ಮತ್ತು ಆರೋಗ್ಯಕರವಾಗಿದೆಯೇ ಎಂಬುದನ್ನು ಗಮನಿಸಿ. ತೆರೆದಿಟ್ಟ ಆಹಾರವನ್ನು ಯಾವುದೇ ಕಾರಣಕ್ಕು ಸೇವಿಸಲು ಹೋಗಬೇಡಿ. ಅದರಲ್ಲೂ ರಸ್ತೆ ಬದಿಯ ವ್ಯಾಪಾರಿಗಳ ಬಳಿ ಬೇಡವೇ ಬೇಡ. ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದನ್ನು ಮಾತ್ರ ಮರೆಯಬೇಡಿ.

ಮೀನಿನ ರುಚಿಗೆ ಮರುಳಾಗದಿರಿ

ಸಾಮಾನ್ಯವಾಗಿ ಕಾರ್ಖಾನೆಗಳ ತ್ಯಾಜ್ಯ ವಸ್ತುಗಳಿಂದ ಪಾದರಸವು ಕಡಲನ್ನು ಸೇರುತ್ತದೆ. ಹೀಗೆ ಸೇರಿದ ಪಾದರಸವು ಮೀಥೈಲ್ ಮರ್ಕುರಿಯಾಗಿ ಪರಿವರ್ತನೆಗೊಳ್ಳುತ್ತದೆ. ಈ ಅಪಾಯಕಾರಿ ಸಂಯುಕ್ತವು ಆ ಕಲುಷಿತ ನೀರಿನಲ್ಲಿರುವ ಮೀನುಗಳನ್ನು ಸೇರಿ ಅದರ ಮಾಂಸದೊಡನೆ ಒಂದುಗೂಡುತ್ತದೆ. ಕೆಲವೊಮ್ಮೆ ಮೀನನ್ನು ಸರಿಯಾಗಿ ಬೇಯಿಸಿದ ನಂತರವೂ ಅಲ್ಲೇ ಉಳಿಯುತ್ತದೆ.

Monsoon Care Tips During Pregnancy

ಹಾಗಾಗಿ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಪಾದರಸದ ಸೇವನೆಯಾದಲ್ಲಿ ಮಗುವಿನ ಮಿದುಳಿನ ಹಾಗು ನರಮಂಡಲದ ಬೆಳವಣಿಗೆ ಕುಂದುವುದು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನಿಮ್ಮ ಮೀನು ಸೇವನೆಗೆ ಮಿತಿ ಇಡಿ. ಯಾವುದಕ್ಕೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

ಕಸದ ತೊಟ್ಟಿ

ಮಳೆಗಾಲದಲ್ಲಿ ಸಾಧ್ಯವಾದಷ್ಟು ಕಸದ ತೊಟ್ಟಿಗಳಿಂದ ದೂರವಿರಿ. ಸಾಮಾನ್ಯವಾಗಿ ಇದರಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾ ಮತ್ತು ಕೆಲವೊಂದು ವಿಧದ ರಾಸಾಯನಿಕವನ್ನು ಒಳಗೊಂಡಿರುವುದರಿಂದ ನಿಮ್ಮ ಗರ್ಭದಲ್ಲಿರುವ ಶಿಶುವಿಗೆ ಇದು ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಆದಷ್ಟು ಕಸದ ತೊಟ್ಟಿಯಿಂದ ದೂರವಿರಿ

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Monsoon Care Tips During Pregnancy

Monsoon can be quite an uncomfortable season during pregnancy. But you can still enjoy this season through extra care and by following some important tips as explained below. have a look
Story first published: Thursday, July 9, 2015, 16:28 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X