For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಅವಧಿಯಲ್ಲಿ ಹರಳೆಣ್ಣೆಯಿಂದ ದೂರವಿರಿ

By Deepak
|

ಸಾಮಾನ್ಯವಾಗಿ ಆರೋಗ್ಯದ ಸಮಸ್ಯೆಗಳನ್ನು ಸ್ವಾಭಾವಿಕವಾಗಿ ಪರಿಹರಿಸಿಕೊಳ್ಳಲು ಇರುವಂತಹ ಕೆಲವೊಂದು ಎಣ್ಣೆಗಳಲ್ಲಿ ಹರಳೆಣ್ಣೆಗೂ ಸಹ ಕೂಡ ವಿಶಿಷ್ಟ ಸ್ಥಾನಮಾನವಿದೆ. ಇದರಲ್ಲಿರುವ ಆಂಟಿಸೆಪ್ಟಿಕ್ ಅಂಶಗಳು ಕೆಲವೊಂದು ತ್ವಚೆಯ ಸಮಸ್ಯೆಗಳನ್ನು (ಸನ್‍ಬರ್ನ್, ಮೊಡವೆ, ಒಣ ತ್ವಚೆ ಮತ್ತು ತ್ವಚೆಯ ಮೇಲಿನ ನೆರಿಗೆಗಳಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು) ಪರಿಹರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ, ಅಷ್ಟೇ ಏಕೆ ಮಲಬದ್ಧತೆ ಮುಂತಾದ ಸಮಸ್ಯೆಗಳಿಗೆ, ಇದು ರಾಮಬಾಣ.

ಆದರೆ ಇದನ್ನು ಪ್ರಸವದ ಸಂದರ್ಭದಲ್ಲಿ ಬಳಸುವುದು ಮಾತ್ರ ಅಷ್ಟೇನು ಸೂಕ್ತವಲ್ಲ! ಇದು ಗರ್ಭಿಣಿಯರಿಗೆ ಅನಾರೋಗ್ಯವನ್ನು ತರುವುದರ ಜೊತೆಗೆ ಕರುಳಿನ ನೋವು, ನಿರ್ಜಲೀಕರಣ, ಗರ್ಭಾಶಯದಲ್ಲಿ ಒತ್ತಡ, ವಾಂತಿ, ಬೇಧಿಗಳಿಂದ ಕೂಡ ಅವರು ನರಳುವಂತೆ ಕೂಡ ಮಾಡಿಬಿಡುತ್ತದೆ. ಪ್ರಾಚೀನ ಕಾಲದಲ್ಲಿ ಇದನ್ನು ಪ್ರಸವದ ನೋವು ಹೆಚ್ಚಿಸಲು ಬಳಸುತ್ತಿದ್ದರು, ಹಾಗಾಗಿ ಇದು ಗರ್ಭಾಶಯವನ್ನು ಕುಗ್ಗಿಸುತ್ತಿತ್ತು. ಅದಕ್ಕಾಗಿ ಹಳೆ ಕಾಲದ ದಾದಿಯರು ಮತ್ತು ಪ್ರಸೂತಿ ಮಾಡುವವರು ಹರಳೆಣ್ಣೆಯನ್ನು ಬಳಸುತ್ತಿದ್ದರು. ಆದರೆ ಈಗ ವೈದ್ಯಕೀಯ ಕ್ಷೇತ್ರ ಹಲವಾರು ಬೆಳವಣಿಗೆಗಳನ್ನು ಕಂಡಿದೆ.

Castor oil has many uses. Its main use is as a purgative (to treat constipation). It stimulates the peristaltic movements of the intestines by causing irritation which results in bowel movements. However, it also causes loose motions, cramps, nausea and vomiting.

ಆದ್ದರಿಂದ ಹರಳೆಣ್ಣೆಯನ್ನು ಬಳಸುವ ಪದ್ಧತಿ ಈಗ ಇಲ್ಲ. ಹೆರಿಗೆ ನೋವನ್ನು ಉದ್ದೀಪನ ಮಾಡಲು ಹಲವಾರು ಔಷಧಗಳು ಮತ್ತು ವಿಧಾನಗಳು ಈಗ ಜಾರಿಯಲ್ಲಿವೆ. ತಾಯಿ ಮತ್ತು ಮಗು ಇಬ್ಬರಿಗೂ ಇದು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬ ಕಾರಣಕ್ಕಾಗಿ ಅದರ ಬಳಕೆ ಯಾರು ಮಾಡುವುದಿಲ್ಲ. ಬನ್ನಿ ಹರಳೆಣ್ಣೆಯನ್ನು ಪ್ರಸವದ ನೋವನ್ನು ತರಲು ಬಳಸುವುದರಿಂದ ಏನೆಲ್ಲ ಅಡ್ಡ ಪರಿಣಾಮಗಳು ಉಂಟಾಗುತ್ತದೆ ಎಂದು ನೋಡೋಣ...

ಬೇಧಿ ಮತ್ತು ನಿರ್ಜಲೀಕರಣ
ಹರಳೆಣ್ಣೆಯನ್ನು ಕುಡಿದ ನಂತರ ತಾಯಿಯಲ್ಲಿ ಬೇಧಿ ಕಾಣಿಸಿಕೊಳ್ಳುತ್ತದೆ, ಜೊತೆಗೆ ಹೊಟ್ಟೆ ನೋವು ಸಹ ಬರುತ್ತದೆ. ಅತಿಯಾದ ಬೇಧಿಯು ತಾಯಿಯನ್ನು ಸುಸ್ತಾಗುವಂತೆ ಮಾಡುವುದರ ಜೊತೆಗೆ, ಮಲದಲ್ಲಿ ನೀರಿನಂಶವು ಹೆಚ್ಚಾಗಿ ಹೋಗುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮಗುವಿಗೆ ಹೆಚ್ಚು ಹಾನಿಯಾಗುವ ಸಂಭವ ಜಾಸ್ತಿ.

ಸೆಳೆತ ಮತ್ತು ನೋವು
ಹರಳೆಣ್ಣೆಯು ಕೆಳ ಹೊಟ್ಟೆಯಲ್ಲಿ ಕಿರಿಕಿರಿಯನ್ನುಂಟು ಮಾಡುವುದರ ಜೊತೆಗೆ, ಅತಿಯಾದ ಸೆಳೆತವನ್ನು ಉಂಟುಮಾಡುತ್ತದೆ. ಅಲ್ಲದೆ ಈ ನೋವು ಗರ್ಭಿಣಿಯರಿಗೆ ಸಹಿಸಿಕೊಳ್ಳಲು ಅಸಾಧ್ಯವಾಗಿ ಬಿಡಬಹುದು. ಏಕೆಂದರೆ ಈ ಹೊತ್ತಿಗಾಗಲೆ ತಾಯಿಯಲ್ಲಿ ಸ್ವಲ್ಪ ಪ್ರಮಾಣದ ನೋವು ಕಾಣಿಸಿಕೊಂಡಿರುತ್ತದೆ. ಜೊತೆಗೆ ಇದು ಸಹ ಸೇರಿ ಅಸಹನೀಯವಾದ ನೋವು ಅವರಿಗೆ ಉಂಟಾಗಬಹುದು.

ವಾಂತಿ
ಹರಳೆಣ್ಣೆಯನ್ನು ಸೇವಿಸುವುದರಿಂದ ತಾಯಿಯಲ್ಲಿ ವಾಂತಿ ಕೂಡ ಹೆಚ್ಚಾಗಿ ಸಂಭವಿಸುತ್ತದೆ. ಇದು ಸಹ ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಇಷ್ಟೇ ಅಲ್ಲದೆ ಪ್ರಸವವಾಗುವಾಗ ನೀಡುವ ಅರವಳಿಕೆ ಮದ್ದಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಹೆರಿಗೆ ನೋವು ಮತ್ತು ಪ್ರಸವದ ಸಂದರ್ಭದಲ್ಲಿ ಅಡೆತಡೆಗಳು
ಬಹುಶಃ ಇದರಿಂದ ಗರ್ಭದ ಮೇಲೆ ಅಧಿಕ ಒತ್ತಡ ಉಂಟಾಗಬಹುದು. ಅಂದರೆ ಹರಳೆಣ್ಣೆಯನ್ನು ಕುಡಿದ ತಕ್ಷಣ ಮಗುವು ಹೆರಿಗೆಯಾಗಲು ಸಿದ್ಧಗೊಂಡಿರುತ್ತದೆ. ಹರಳೆಣ್ಣೆಯನ್ನು ಬಳಸುವುದರಿಂದ ಆಮ್ಲಜನಕದ ಪೂರೈಕೆಯು ಮಗುವಿಗೆ ಕಡಿಮೆಯಾಗುತ್ತದೆ. ತಕ್ಷಣ ಹೆರಿಗೆಯಾಗಲಿಲ್ಲವಾದಲ್ಲಿ, ಮಗುವು ಗರ್ಭದಲ್ಲಿಯೇ ಸಾವನ್ನಪ್ಪಬಹುದು.

ಮೆಕೊನಿಯಮ್


ಹರಳೆಣ್ಣೆಯನ್ನು ಬಳಸುವುದರಿಂದ ಮಗುವು ಗರ್ಭದಲ್ಲಿ ಮತ್ತಷ್ಟು ಚಲನವಲನ ಮಾಡಿಕೊಂಡು ಇರುವಂತೆ ಮಾಡುತ್ತದೆ. ಇದರಿಂದ ತಾಯಿ ಮತ್ತು ಮಗು ಇಬ್ಬರ ಪ್ರಾಣಕ್ಕೆ ಹಾನಿಯಾಗುವ ಸಂಭವ ಇರುತ್ತದೆ.
English summary

Is Castor Oil Safe For Labour Induction?

Castor oil has many uses. Its main use is as a purgative (to treat constipation). It stimulates the peristaltic movements of the intestines by causing irritation which results in bowel movements. However, it also causes loose motions, cramps, nausea and vomiting.
Story first published: Saturday, June 20, 2015, 19:41 [IST]
X
Desktop Bottom Promotion