For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮಿಸ್ ಮಾಡಲೇಬಾರದ ಹಣ್ಣುಗಳು ಯಾವುದು ಗೊತ್ತೇ?

|

ಗರ್ಭಿಣಿಯರು ತಮ್ಮ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಆಹಾರಗಳನ್ನು ತಿನ್ನಬಾರದು, ಕೆಲವೊಂದು ಆಹಾರಗಳನ್ನು ಪೋಷಕಾಂಶದ ಕೊರತೆ ಉಂಟಾಗದಿರಲು ಅವಶ್ಯಕವಾಗಿ ತಿನ್ನಬೇಕು. ಗರ್ಭಿಣಿಯರಿಗೆ ಅವಶ್ಯಕವಾದ ಪೋಷಕಾಂಶಗಳು ಕೆಲವೊಂದು ಹಣ್ಣುಗಳಲ್ಲಿವೆ.

ಅದರಲ್ಲೂ ಗರ್ಭಿಣಿಯರು ಈ ಕೆಳಗಿನ ಹಣ್ಣುಗಳನ್ನು ತಪ್ಪದೇ ತಮ್ಮ ಡಯಟ್ ನಲ್ಲಿ ಸೇರಿಸಿದರೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ ಹಾಗೂ ತಾಯಿ ಹಾಗೂ ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ಪ್ರತಿ ಗರ್ಭಿಣಿ ಸ್ತ್ರೀಯ ಅಹಾರಕ್ರಮದಲ್ಲಿ ಇರಲೇಬೇಕಾದ 7 ಅವಶ್ಯಕ ವಸ್ತುಗಳು

ದ್ರಾಕ್ಷಿ

ದ್ರಾಕ್ಷಿ

ಗರ್ಭಿಣಿಯರು ದ್ರಾಕ್ಷಿ ತಿನ್ನುವುದು ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇದ್ದು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಲಬದ್ಧತೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಸೇಬು ಹಣ್ಣು

ಸೇಬು ಹಣ್ಣು

ಗರ್ಭಿಣಿಯರು ಪ್ರತೀದಿನ ಒಂದು ಸೇಬು ತಿನ್ನುವುದು ಒಳ್ಳೆಯದು. ಸೇಬು ರಕ್ತಹೀನತೆ ಬರದಂತೆ ತಡೆಯುತ್ತದೆ.

ಕಿತ್ತಳೆ

ಕಿತ್ತಳೆ

ಗರ್ಭಿಣಿಯರು ಸ್ವಲ್ಪ ಹುಳಿ ಇರುವ ಹಣ್ಣುಗಳನ್ನು ತುಂಬಾ ಇಷ್ಟಪಡುತ್ತಾರೆ. ಈ ಕಿತ್ತಳೆಯಲ್ಲಿ ವಿಟಮಿನ್ಸ್ ಮತ್ತು ಪೋಷಕಾಂಶಗಳು ಅಧಿಕವಾಗಿರುತ್ತದೆ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಎಲ್ಲಾ ರೀತಿಯ ಬೆರ್ರಿ ಹಣ್ಣುಗಳನ್ನು ಗರ್ಭಿಣಿಯರು ತಿನ್ನಬಹುದು. ಈ ಬೆರ್ರಿ ಹಣ್ಣುಗಳಲ್ಲಿ antioxidants ಅಧಿಕವಿರುತ್ತದೆ.

ಬಾಳೆ ಹಣ್ಣು

ಬಾಳೆ ಹಣ್ಣು

ಬಾಳೆ ಹಣ್ಣು ದೇಹಕ್ಕೆ ಶಕ್ತಿಯನ್ನು ತುಂಬುವುದರ ಜೊತೆಗೆ ಮಲಬದ್ಧತೆ ಸಮಸ್ಯೆ ಬರದಂತೆ ಆರೋಗ್ಯ ರಕ್ಷಣೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ, ಬಿ6, ಪೊಟಾಷ್ಯಿಯಂ, ಪ್ರೊಟೀನ್, ಮ್ಯಾಗ್ನಿಷ್ಯಿಯಂ, ಫೋಲೆಟ್ ಹೀಗೆ ಅನೇಕ ಪೋಷಕಾಂಶಗಳಿವೆ.

ನಿಂಬೆ ಹಣ್ಣು

ನಿಂಬೆ ಹಣ್ಣು

ನಿಂಬೆ ಹಣ್ಣಿನ ವಾಸನೆ ವಾಂತಿಯನ್ನು ತಡೆಗಟ್ಟಿದರೆ, ಇದರಿಂದ ಪಾನೀಯಾ ಮಾಡಿ ಕುಡಿದರೆ ದೇಹಕ್ಕೆ ವಿಟಮಿನ್ ಸಿ ದೊರೆಯುತ್ತದೆ.

ಮಾವಿನ ಹಣ್ಣು

ಮಾವಿನ ಹಣ್ಣು

ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಇರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಹಣ್ಣು ಇದಾಗಿದೆ.

English summary

Super Fruits To Eat During Pregnancy

If you want to know which fruits you can have during pregnancy, here is a list. Check out the fruits you should include in your pregnancy diet for a healthy you and baby!
Story first published: Tuesday, June 3, 2014, 17:09 [IST]
X
Desktop Bottom Promotion