For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಬೆನ್ನುನೋವೇ ಹೀಗೆ ಮಾಡಿ

By Super
|

ಪ್ರಪಂಚದಲ್ಲಿ ಹೆಣ್ಣಿಗೆ ತಾಯಿಯಾಗುವ ಅನುಭವವನ್ನು ಮೀರಿಸುವ ಮತ್ತೊಂದು ಅನುಭವ ಯಾವುದಿದೆ? ಇದು ನೀಡುವ ಅನುಭೂತಿ ಮತ್ಯಾವುದರಲ್ಲಿ ದೊರೆಯಲು ಸಾಧ್ಯ. ಒಂಬತ್ತು ತಿಂಗಳ ಈ ಪ್ರಕ್ರಿಯೆಯು ಇಷ್ಟುಧೀರ್ಘ ಅವಧಿ ತೆಗೆದುಕೊಳ್ಳಲು ಕಾರಣವೆಂದರೆ, ಅದಕ್ಕೆ ನಾವು ಹೊಂದಿಕೊಂಡು ಬದಲಾಗಬೇಕಾದ ಅಗತ್ಯವಿರುತ್ತದೆ. ಇದೇ ಸಮಯದಲ್ಲಿ ತಾಯಿಯಾಗುತ್ತಿರುವ ಹೆಣ್ಣಿನ ಮನದಲ್ಲಿ ಹೆರಿಗೆಯ ಬಗೆಗೆ, ಅದರ ಪೂರ್ವದಲ್ಲಿ ಉಂಟಾಗುವ ಬೆನ್ನು ನೋವು ಮತ್ತು ಇತರ ನೋವುಗಳ ಬಗ್ಗೆ ಹಲವಾರು ಸಂಶಯಗಳು ಮೂಡುವುದು ಸಹಜ. ಏಕೆಂದರೆ ಗರ್ಭಿಣಿಯರು ಗರ್ಭಾವಧಿಯಲ್ಲಿ ತಮ್ಮ ಭಂಗಿಗಳಿಗೆ ಸಂಬಂಧಿಸಿದಂತೆ ದೇಹದ ವಿವಿಧ ಭಾಗಗಳಲ್ಲಿ ಹಲವಾರು ನೋವುಗಳಿಂದ ಬಳಲುತ್ತಿರುತ್ತಾರೆ.

ಹೆರಿಗೆ ಅವಧಿಯ ಬೆನ್ನು ನೋವು ಎಂದರೆ ಹೆರಿಗೆಯ ಅವಧಿಯಲ್ಲಿ ಕಾಡುವ ಒಂದು ಬಗೆಯ ಅಸೌಖ್ಯವಾಗಿರುತ್ತದೆ. ಈ ಬೆನ್ನು ನೋವು ಮಗುವು ತಾಯಿ ಗರ್ಭದಲ್ಲಿ ತನ್ನ ಭಂಗಿಗಳನ್ನು ಬದಲಾಯಿಸುತ್ತ ಜನನ ನಾಳದಲ್ಲಿ ಚಲಿಸುವಾಗ ಕಾಣಿಸಿಕೊಳ್ಳುತ್ತದೆ. ಯಾವಾಗಲು ಇದೊಂದೆ ಕಾರಣ ಎಂದು ಹೇಳಲಾಗುವುದಿಲ್ಲ. ಹೆರಿಗೆ ನೋವು ಎಂಬುದು ಹೆಣ್ಣಿನಿಂದ ಹೆಣ್ಣಿಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಇತರರಿಗಿಂತ ಹೆಚ್ಚಿನ ಬೆನ್ನು ನೋವು ಬರಬಹುದು. ಒಂದು ವೇಳೆ ಈ ನೋವು ಬಂದರು ಅದು ಅಪಾಯಕಾರಿ ಅಥವಾ ಅಸ್ವಾಭಾವಿಕವಲ್ಲ. ಈ ನೋವು ತಾಯಿಯ ಗರ್ಭದಲ್ಲಿ ಮಗುವು ಸುಲಲಲಿತವಾಗಿ ಬೆಳವಣಿಗೆಯಾಗುವುದರ ಜೊತೆಗೆ ತನ್ನ ಭಂಗಿಗಳನ್ನು ಬದಲಾಯಿಸುತ್ತ ಜನನ ಸರಾಗವಾಗುವಂತೆ ಮಾಡುತ್ತದೆ.

ಇಲ್ಲಿ ಈ ಬೆನ್ನು ನೋವನ್ನು ನಿವಾರಿಸಿಕೊಳ್ಳಲು ನಾವು ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ ಓದಿಕೊಳ್ಳಿ, ಇಲ್ಲಿ ನೀಡುತ್ತಿರುವುದು ಕೇವಲ ಸಲಹೆಗಳು ಮಾತ್ರ. ಯಾವುದಕ್ಕು ಒಮ್ಮೆ ನಿಮ್ಮ ವೈಧ್ಯರನ್ನು ಕಂಡು ನಿಮ್ಮ ನೋವಿನ ಬಗ್ಗೆ ತಿಳಿಸಿರಿ.

1. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

1. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ಗರ್ಭಧಾರಣೆಯ ಅವಧಿಯಲ್ಲಿ ಬರುವ ಬೆನ್ನುನೋವನ್ನು ನಿವಾರಿಸಿಕೊಳ್ಳಲು ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಡೆದಾಡಿ, ಮತ್ತಿತರ ಸುಲಭ ಕೆಲಸ ಕಾರ್ಯಗಳನ್ನು ಮಾಡಿ. ಈ ದೈಹಿಕ ಚಟುವಟಿಕೆಗಳಿಂದ ನಿಮಗೆ ಸ್ವಲ್ಪ ಆರಾಮ ಸಿಗಬಹುದು.

2. ನೀರಿನ ಮಸಾಜ್ ಮಾಡಿಸಿಕೊಳ್ಳಿ

2. ನೀರಿನ ಮಸಾಜ್ ಮಾಡಿಸಿಕೊಳ್ಳಿ

ಹೆರಿಗೆ ಸಮಯದಲ್ಲಿ ಬರುವ ಬೆನ್ನು ನೋವನ್ನು ನಿವಾರಿಸಲು ನೀರಿನ ಮಸಾಜ್ ಮಾಡಿಸಿಕೊಳ್ಳಿ. ಇದಕ್ಕಾಗಿ ಯಾವ ಸ್ಪಾಗು ಹೋಗುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯ ಶವರಿನ ಕೆಳಗೆ ನಿಂತು ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಅಥವಾ ನಿಮ್ಮ ಗಂಡನ ಸಹಾಯದಿಂದ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಆಗ ಸ್ವಲ್ಪ ಬೆಚ್ಚನೆಯ ನೀರನ್ನು ಬೆನ್ನು ನೋವು ಇರುವ ಕಡೆ ಹಾಕಲು ತಿಳಿಸಿ.

3. ಒತ್ತಡದ ತಂತ್ರಗಳು

3. ಒತ್ತಡದ ತಂತ್ರಗಳು

ನಿಮ್ಮ ಸೊಂಟದ ಮೇಲ್ಭಾಗವನ್ನು ನಿಮ್ಮ ಎರಡೂ ಕೈಗಳಿಂದ ಒತ್ತಿ ಮಸಾಜ್ ಮಾಡಿ, ಇದರಿಂದ ನಿಮ್ಮ ಬೆನ್ನು ನೋವು ಸ್ವಲ್ಪ ಕಡಿಮೆಯಾಗಬಹುದು. ಬಹಳಷ್ಟು ಗರ್ಭಿಣಿಯರು ಈ ಭಾಗದಲ್ಲಿ ಸ್ವಲ್ಪ ಒತ್ತಡವನ್ನು ಪಡೆಯಲು ಮತ್ತು ಆ ಮೂಲಕ ಆರಾಮ ಪಡೆಯಲು ಬಯಸುತ್ತಾರೆ.

4. ಕೈ ಮತ್ತು ಮೊಣಕಾಲಿನ ಮೇಲೆ

4. ಕೈ ಮತ್ತು ಮೊಣಕಾಲಿನ ಮೇಲೆ

ಕೈ ಮತ್ತು ಮೊಣಕಾಲಿನ ಮೇಲೆ ಭಾರ ಬಿಡುವ ಮೂಲಕ ಗರ್ಭಕಾಲದ ಬೆನ್ನು ನೋವಿನಿಂದ ಸ್ವಲ್ಪ ಉಪಶಮನ ಪಡೆಯಬಹುದು. ಈ ಎರಡು ಭಾಗಗಳ ಮೇಲೆ ಭಾರಬಿಡುವ ಮೂಲಕ ಮಗುವು ಪೆಲ್ವಿಸ್ ಭಾಗಕ್ಕೆ ಸರಿಯಲು ಅವಕಾಶ ಮಾಡಿಕೊಡಬಹುದು. ಜೊತೆಗೆ ಮಗುವು ಸುತ್ತು ಹಾಕಲು ಅನುಕೂಲವಾಗುತ್ತದೆ. ಈ ಭಂಗಿಯು ಬೆನ್ನು ನೋವಿಗೆ ಅಧಿಕ ಒತ್ತಡ ನೀಡುವ ಭಂಗಿಯಾಗಿದೆ.

5. ಪೆಲ್ವಿಕ್ ಭಾಗುವಿಕೆಗಳನ್ನು ಪ್ರಯತ್ನಿಸಿ ನೋಡಿ

5. ಪೆಲ್ವಿಕ್ ಭಾಗುವಿಕೆಗಳನ್ನು ಪ್ರಯತ್ನಿಸಿ ನೋಡಿ

ಇದು ಗರ್ಭಿಣಿ ಹೆಂಗಸು ಸಾಮಾನ್ಯವಾಗಿ ಮಾಡುವ ಒಂದು ವ್ಯಾಯಾಮವಾಗಿದೆ. ಜೊತೆಗೆ ಇದು ಬೆನ್ನು ನೋವನ್ನು ನಿವಾರಿಸುವ ಅತ್ಯುತ್ತಮ ವ್ಯಾಯಾಮವಾಗಿದೆ. ಇದಕ್ಕೆ ಯಾವುದೇ ಉಪಕರಣಗಳ ಅವಶ್ಯಕತೆಯಿಲ್ಲ. ಕೇವಲ ನಿಮ್ಮ ಕಾಲುಗಳನ್ನು ಕಟ್ಟಿಕೊಂಡು ನಿಮ್ಮ ಬೆನ್ನನ್ನು ನೆಟ್ಟಗೆ ಮಾಡಲು ಪ್ರಯತ್ನಿಸಿ ಸಾಕು.

6. ಇನ್ನಿತರ ಸಾಧನಗಳು

6. ಇನ್ನಿತರ ಸಾಧನಗಳು

ನಿಮ್ಮ ಬೆನ್ನು ನೋವನ್ನು ನಿವಾರಿಸಿಕೊಳ್ಳಲು ಇನ್ನಿತರ ಸಾಧನಗಳನ್ನು ನೀವು ಬಳಸಬಹುದು. ಉದಾಹರಣೆಗೆ ಬರ್ತ್ ಬಾಲ್ ಹಾಗು ಇನ್ನಿತರ ಸಾಧನಗಳನ್ನು ಸಹಾ ನೀವು ಬಳಸಿಕೊಳ್ಳಬಹುದು. ಇವುಗಳ ಮೂಲಕ ಭಾವಿ ತಾಯಂದಿರು ತಮಗೆ ಅನುಕೂಲವಾದ ಭಂಗಿಗಳನ್ನು ಮತ್ತು ಬೆನ್ನು ನೋವನ್ನು ನಿವಾರಿಸಿಕೊಳ್ಳುವ ಉಪಾಯಗಳನ್ನು ಕಂಡು ಕೊಳ್ಳಬಹುದು. ಇವುಗಳ ಜೊತೆಗೆ ರೋಲಿಂಗ್ ಪಿನ್‍ ಹಾಗು ಇನ್ನಿತರ ಒತ್ತಡಕಾರಕ ವಸ್ತುಗಳನ್ನು ಮತ್ತು ಬೆನ್ನು ನೋವು ನಿವಾರಿಸುವ ಸಾಧನಗಳನ್ನು ಸಹ ಸುರಕ್ಷಿತವಾಗಿ ಪ್ರಯತ್ನಿಸಿ ನೋಡಬಹುದು.

7. ನಿಮ್ಮ ವೈಧ್ಯರನ್ನು ಕಾಣಿರಿ.

7. ನಿಮ್ಮ ವೈಧ್ಯರನ್ನು ಕಾಣಿರಿ.

ನಿಮ್ಮ ಬೆನ್ನು ನೋವನ್ನು ನಿವಾರಿಸಿಕೊಳ್ಳಲು ನಿಮ್ಮ ವೈಧ್ಯರ ಸಲಹೆ ಪಡೆಯಿರಿ. ಇವರು ನಿಮಗೆ ಆರಾಮವನ್ನುಂಟು ಮಾಡುವ ಭಂಗಿಗಳನ್ನು ನಿಮಗೆ ಸೂಚಿಸುತ್ತಾರೆ. ಇದರ ಜೊತೆಗೆ ನಿಲ್ಲುವ ಭಂಗಿಗಳನ್ನು ಸಹ ನಿಮಗೆ ತಿಳಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳು ನಿಮ್ಮ ಮಗುವು ಗರ್ಭದಲ್ಲಿ ಸ್ವಲ್ಪ ಸ್ಥಾನ ಬದಲಾವಣೆ ಮಾಡಲು ಮತ್ತು ಭಂಗಿಯನ್ನು ಬದಲಾಯಿಸಲು ಸಹಕರಿಸುತ್ತದೆ. ಹೆರಿಗೆ ಎಂಬ ಪ್ರಕ್ರಿಯೆಗೆ ಸಾಕಷ್ಟು ಮುತುವರ್ಜಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ಪ್ರತಿ ಹಂತದಲ್ಲು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಉತ್ತಮ.

English summary

Way to ease back pain in labour

For a woman giving birth to a child is a life time experience. Before delivery during prenatal she undergoes several changes in her body. Also faces pain in various parts of the body. Back pain is one major thing that stays with her through out this period. To get relief from this pain here are few tips.
X
Desktop Bottom Promotion