For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಲು ಗಮನಿಸಬೇಕಾದ 10 ಪ್ರಮುಖ ಅಂಶಗಳು

By ವನಿತ
|

ಮದುವೆಯಾಗಿ 2 ವರ್ಷ ಕಳೆಯುತ್ತಿದ್ದಂತೆ ಮನೆಯ ಹಿರಿಯರು "ನಮಗೊಂದು ಮಗು ಯಾವಾಗ ಕೊಡುತ್ತೀಯಾ?" ಎಂದು ಕೇಳಲಾರಂಭಿಸುತ್ತಾರೆ. ಕೆಲವರು ಕೆರಿಯರ್ ರೂಪಿಸಬೇಕು, ಇನ್ನೂ ಕೆಲವರು ಮದುವೆಯಾಗಿ ಸ್ವಲ್ಪ ಕಾಲ ಮಕ್ಕಳು, ಮರಿ ಅಂತ ಬೇಡ, ಲೈಫ್ ಎಂಜಾಯ್ ಮಾಡೋಣ ಎಂದು ಮದುವೆಯಾಗಿ ಕೆಲವು ವರ್ಷಗಳವರೆಗೆ ಗರ್ಭಿಣಿಯಾಗ ಬಯಸುವುದಿಲ್ಲ.

ಆದರೆ ಗರ್ಭಿಯಾಗುವುದೇ ಬೇಡ ಎಂಬ ಆಸೆ ಯಾರಿಗೂ ಇರುವುದಿಲ್ಲ. ಕೆಲವರು ಸ್ವಲ್ಪ ಕಾಲ ಬೇಡ ಎಂದೆಷ್ಟೇ ಮುಂದೂಡಿರುತ್ತಾರೆ. ಒಂದಲ್ಲಾ ಒಂದು ದಿನ ದಂಪತಿಗಳು ನಮಗೆ ಮಗು ಬೇಕೆಂದು ಬಯಸುತ್ತಾರೆ. ಗರ್ಭಿಣಿಯಾಗ ಬಯಸಿ, ಫಲಿತಾಂಶ ಇನ್ನೂ ದೊರೆಯದಿದ್ದಾಗ ಕೆಲವರಿಗೆ ನಿರಾಸೆಯಾಗುತ್ತದೆ. ನಿರಾಸೆ ಪಡಬೇಕಾಗಿಲ್ಲ, ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರೆದಿದೆ, ಅಲ್ಲದೆ ಗರ್ಭಿಣಿಯಾಗ ಬಯಸುವವರು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟು ಪ್ರಯತ್ನಿಸಿದರೆ ಗರ್ಭಧಾರಣೆಯಾಗುವುದು:

ಗರ್ಭಿಣಿಯಾಗ ಬಯಸುವವರು ಈ ಅಂಶಗಳನ್ನು ಗಮನದಲ್ಲಿಡುವುದು ಒಳ್ಳೆಯದು:

ತೂಕದ ನಿಯಂತ್ರಣ

ತೂಕದ ನಿಯಂತ್ರಣ

ಗರ್ಭಿಣಿಯಾಗ ಬಯಸುವವರು ತಮ್ಮ ತೂಕದ ಬಗ್ಗೆ ಗಮನಕೊಡಬೇಕು. ತುಂಬಾ ತೆಳ್ಳಗಿರುವವರು ಸ್ವಲ್ಪ ದಪ್ಪಗಾಗಬೇಕು, ಅಧಿಕ ತೂಕವಿರುವವರು ಮೈ ತೂಕವನ್ನು ಕರಗಿಸಬೇಕು.

 ವ್ಯಾಯಾಮ

ವ್ಯಾಯಾಮ

ವ್ಯಾಯಾಮ ನಿಮ್ಮ ಮೈ ತೂಕ ಕರಗಲು ಮತ್ತು ದೇಹದಲ್ಲಿ ಹಾರ್ಮೋನ್ ಗಳು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಓವ್ಯೂಲೇಶನ್ ಕ್ಯಾಲೆಂಡರ್

ಓವ್ಯೂಲೇಶನ್ ಕ್ಯಾಲೆಂಡರ್

ಓವ್ಯೂಲೇಶನ್ ದಿನವನ್ನು ಗಮನದಲ್ಲಿಡಬೇಕು. ಗರ್ಭಧಾರಣೆಗೆ ಓವ್ಯೂಲೇಶನ್ ಟೈಮ್ ಬೆಸ್ಟ್. ಓವ್ಯೋಲೇಶನ್ ಕ್ಯಾಲೆಂಡರ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಓವ್ಯೂಲೇಶನ್ ಸ್ಟ್ರಿಪ್

ಓವ್ಯೂಲೇಶನ್ ಸ್ಟ್ರಿಪ್

ಓವ್ಯೂಲೇಶನ್ ಸ್ಟ್ರಿಪ್ ದೊರೆಯುತ್ತದೆ, ಅದನ್ನು ಜನನೇಂದ್ರೀಯದ ಒಳಕ್ಕೆ ಹಾಕಿದಾಗ ಅದರಲ್ಲಿ ಕೆಂಪು ಗೆರೆ ಕಂಡರೆ ಓವ್ಯೂಲೇಶನ್ ಟೈಮ್ ಎಂದರ್ಥ. ಈ ಸಮಯದಲ್ಲಿ ಪ್ರಯತ್ನಿಸಿದರೆ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು.

ಧೂಮಪಾನ

ಧೂಮಪಾನ

ಮಹಿಳೆಯರಿಗೆ ಧೂಮಪಾನದ ಅಭ್ಯಾಸವಿದ್ದರೆ ಮೊದಲು ಬಿಡಬೇಕು. ಪುರುಷರು ಮಿತಿ ಮೀರಿ ಧೂಮಪಾನ ಮಾಡಿದರೆ ಮಕ್ಕಳಾಗದ ಸಮಸ್ಯೆ ಕಂಡು ಬರಬಹುದು.

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ಆಹಾರಕ್ರಮದ ಬಗ್ಗೆಯೂ ಗಮನಹರಿಸಬೇಕು. ಒಮೆಗಾ 3 ಕೊಬ್ಬಿನಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನಿ. ಹಣ್ಣು-ತರಕಾರಿಗಳು ನಿಮ್ಮ ಆಹಾರ ಕ್ರಮದಲ್ಲಿರಲಿ. ಪಿಜ್ಜಾ, ಬರ್ಗರ್ ಗಳನ್ನು ದೂರವಿಡಿ.

 ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಬೇಕು

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಬೇಕು

ಪುರುಷರು ಪ್ರತೀದಿನ ವ್ಯಾಯಾಮ ಮಾಡಬೇಕು, ಧೂಮಪಾನ ಕಮ್ಮಿ ಮಾಡಬೇಕು, ಆರೋಗ್ಯಕರ ಜೀವನ ಶೈಲಿ ಪಾಲಿಸಿ, ಇವೆಲ್ಲಾ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವಂತೆ ಮಾಡುತ್ತದೆ.

 ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಒಳ್ಳೆಯದು

ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಒಳ್ಳೆಯದು

ಮಹಿಳೆಯರಲ್ಲಿ ಮುಟ್ಟು ಆದ ಸ್ವಲ್ಪ ದಿನಗಳ ಬಳಿಕ ತೇವಾಂಶ ಕಂಡು ಬರುತ್ತದೆ. ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧಾರಣೆಯಾಗುವುದು.

ಮಾನಸಿಕ ಒತ್ತಡ ತುಂಬಾ ಡೇಂಜರ್

ಮಾನಸಿಕ ಒತ್ತಡ ತುಂಬಾ ಡೇಂಜರ್

ಹೆಚ್ಚಿನವರಿಗೆ ಮಾನಸಿಕ ಒತ್ತಡದಿಂದಾಗಿ ಗರ್ಭಧಾರಣೆಯಾಗುತ್ತಿಲ್ಲ, ಮಾನಸಿಕ ಒತ್ತಡವನ್ನು ಹೊರಹಾಕುವ ಮಾರ್ಗ ಕಂಡು ಹಿಡಿಯಿರಿ.

ಅಗತ್ಯ ಪರೀಕ್ಷೆಗಳನ್ನು ಮಾಡಿಸಿ

ಅಗತ್ಯ ಪರೀಕ್ಷೆಗಳನ್ನು ಮಾಡಿಸಿ

ಇಲ್ಲಿ ನೀಡಿರುವ ಸಲಹೆಗಳು ಪ್ರಯೋಜನಕ್ಕೆ ಬಾರದಿದ್ದರೆ ವೈದ್ಯರನ್ನು ಕಂಡು ನೀವು ಮತ್ತು ನಿಮ್ಮ ಸಂಗಾತಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ರೀತಿ ಪರೀಕ್ಷೆ ಮಾಡಿಸಿಕೊಳ್ಳಲು ವಿಳಂಬ ಮತ್ತು ಮುಜುಗರ ಬೇಡ.

English summary

10 Things To Help You Get Pregnant | Tips For Couple

Some of the things that can help you get pregnant fast are tools and others are lifestyle changes. For example, ovulation strips and ovulation calendars are tools that can prompt you to get pregnant fast.
X
Desktop Bottom Promotion