For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ಹೆರಿಗೆಯ ಬಳಿಕ ಮಹಿಳೆಯರು ಈ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಲೇಬೇಕು

|

ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಡೆಲಿವರಿಗಿಂತ ಸಿಸೇರಿಯನ್ ಹೆರಿಗೆ ಮೊರೆ ಹೋಗುವವರೇ ಹೆಚ್ಚು, ಇದಕ್ಕೆ ಕಾರಣ, ನಾರ್ಮಲ್ ಡೆಲಿವರಿಯಲ್ಲಿ ಮಹಿಳೆಯರು ಸಾಕಷ್ಟು ನೋವನ್ನು ಎದುರಿಸಬೇಕಾಗಿರುವುದು. ಆದರೆ, ಕೆಲವೊಮ್ಮೆ ವೈದ್ಯಕೀಯ ಕಾರಣಗಳಿಂದಲೂ ಸಹ ಅನಿವಾರ್ಯವಾಗಿ ಸಿ-ಸೆಕ್ಷನ್ ಅಂದರೆ ಸಿಸೇರಿಯನ್ ಹೆರಿಗೆ ಮಾಡಿಸಿಕೊಳ್ಳಬೇಕಾಗುತ್ತದೆ.

ನಾರ್ಮಲ್ ಡೆಲಿವರಿಯಿಂದ ಒಮ್ಮೆ ನೋವು ಅನುಭವಿಸಿದರೂ, ಮುಂದೆ ದೇಹಕ್ಕೆ ಹೆಚ್ಚಿನ ಕಾಳಜಿ ಅಗತ್ಯ ಬರುವುದಿಲ್ಲ, ಆದರೆ ಸಿಸೇರಿಯನ್ ಹೆರಿಗೆ ಹಾಗಲ್ಲ. ಇದರಲ್ಲಿ ಹೆರಿಗೆಯ ವೇಳೆ ಯಾವುದೇ ನೋವಿರದಿದ್ದರೂ, ಹೆರಿಗೆಯ ನಂತರ, ವಿಶೇಷ ಕಾಳಜಿಯ ಅಗತ್ಯವಿದೆ. ಹೆರಿಗೆಯ ನಂತರ ಹಾಕುವ ಹೊಲಿಗೆ ಹಾಕುವುದರಿಂದ, ತುಂಬಾ ಜಾಗರೂಕರಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಸಮಸ್ಯೆ ಹೆಚ್ಚಾಗಬಹುದು ಮತ್ತು ಹೊಲಿಗೆಗಳು ಬಿಚ್ಚಿಕೊಳ್ಳಬಹುದು. ಈ ಪರಿಸ್ಥಿತಿಯನ್ನು ತಪ್ಪಿಸಲು, ಮಹಿಳೆಯರು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವುಗಳಾವುವು ಇಲ್ಲಿ ನೋಡೋಣ.

ಸಿಸೇರಿಯನ್ ಹೆರಿಗೆಯ ನಂತರ ಮಹಿಳೆಯರು ಎಚ್ಚರಿಕೆ ವಹಿಸಬೇಕಾದ ವಿಷಯಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸ್ನಾನ ಮಾಡುವಾಗ ಎಚ್ಚರಿಕೆಯಿಂದಿರಿ:

ಸ್ನಾನ ಮಾಡುವಾಗ ಎಚ್ಚರಿಕೆಯಿಂದಿರಿ:

ಸೀಸೇರಿಯನ್ ಹೆರಿಗೆಯ ನಂತರ ಹೊಲಿಗೆಗಳಿಗೆ ನೀರು ತಾಗದಂತೆ ದೀರ್ಘಕಾಲ ಕಾಪಾಡಿಕೊಳ್ಳಬೇಕು. ನೀರು ತಾಗದೇ ಇರಲು, ಕೆಲವು ದಿನಗಳವರೆಗೆ ಮಹಿಳೆಯನ್ನು ಸ್ನಾನ ಮಾಡದಂತೆ ತಜ್ಞರು ಸಲಹೆ ನೀಡುತ್ತಾರೆ. ಆದರೆ ಅದರ ನಂತರವೂ, ಸ್ನಾನ ಮಾಡುವಾಗ, ಹೊಲಿದ ಭಾಗವನ್ನು ನೀರಿನಿಂದ ರಕ್ಷಿಸಿ. ಅಲ್ಲದೆ, ಹೊಲಿದ ಪ್ರದೇಶದ ಮೇಲೆ ಯಾವುದೇ ಭಾರ ಹಾಕಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕಾಸ್ಮೆಟಿಕ್/ ಸೌಂದರ್ಯ ವರ್ಧಕ ಬಳಸಬೇಡಿ:

ಕಾಸ್ಮೆಟಿಕ್/ ಸೌಂದರ್ಯ ವರ್ಧಕ ಬಳಸಬೇಡಿ:

ಹೊಲಿಗೆ ಹಾಕಿದ ಸ್ಥಳದಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸದಿರುವುದು ಉತ್ತಮ. ಇದರಲ್ಲಿರುವ ರಾಸಾಯನಿಕಗಳು ಹೊಲಿಗೆಗಳನ್ನು ಹುಣ್ಣಾಗಲು ಕಾರಣವಾಗಬಹುದು. ತಜ್ಞರು ಸೂಚಿಸಿದ ಔಷಧೀಯ ಪುಡಿ ಅಥವಾ ಕ್ರೀಮ್ ಮಾತ್ರ ಬಳಸಿ, ನೀವಾಗಿಯೇ ಯಾವುದೇ ಉತ್ಪನ್ನ ಅಥವಾ ಮನೆಮದ್ದುಗಳನ್ನು ಪ್ರಯತ್ನಿಸಬೇಡಿ.

ಶುಚಿತ್ವದ ಬಗ್ಗೆ ಕಾಳಜಿ ವಹಿಸಿ:

ಶುಚಿತ್ವದ ಬಗ್ಗೆ ಕಾಳಜಿ ವಹಿಸಿ:

ಹೊಲಿಗೆ ಹಾಕಿದ ಜಾಗದಲ್ಲಿ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. ನೀವು ಆ ಸ್ಥಳದ ಸುತ್ತಲೂ ಹಗುರವಾದ ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಬಹುದು. ಆದರೆ ಇದಕ್ಕೂ ಒಮ್ಮೆ ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ತಜ್ಞರ ಅಭಿಪ್ರಾಯವಿಲ್ಲದೆ ಈ ವಿಷಯದಲ್ಲಿ ಯಾವುದೇ ಹೆಜ್ಜೆ ಇಡಬೇಡಿ.

ಉಗುರಿನಿಂದ ಕೆರೆದುಕೊಳ್ಳಬೇಡಿ:

ಉಗುರಿನಿಂದ ಕೆರೆದುಕೊಳ್ಳಬೇಡಿ:

ಹೊಲಿಗೆಗಳು ಸ್ವಲ್ಪ ಒಣಗಲು ಪ್ರಾರಂಭಿಸಿದಾಗ, ಕೆಲವೊಮ್ಮೆ ಅಲ್ಲಿ ತುರಿಕೆಯ ಅನುಭವವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉಗುರುಗಳಿಂದ ಆ ಸ್ಥಳದಲ್ಲಿ ಸ್ಕ್ರಾಚ್ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. ನಿಮ್ಮ ಉಗುರುಗಳು ಹೊಲಿಗೆಗಳನ್ನು ತೆರೆಯಬಹುದು ಅಥವಾ ಸೋಂಕಿಗೆ ಕಾರಣವಾಗಬಹುದು. ಇದರಿಂದ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಹೊಲಿಗೆ ಹಾಕಿದ ಜಾಗವನ್ನು ಉಗುರಿನಿಂದ ಕೆರೆದುಕೊಳ್ಳಬೇಡಿ.

ಈ ವಿಷಯವನ್ನು ನೆನಪಿನಲ್ಲಿಡಿ:

ಈ ವಿಷಯವನ್ನು ನೆನಪಿನಲ್ಲಿಡಿ:

ಸಹಜವಾಗಿ, ಸಿಸೇರಿಯನ್ ಹೆರಿಗೆಯ ನಂತರ, ನೀವು ಪ್ರತಿದಿನ ಸ್ನಾನ ಮಾಡಬಾರದು, ಆದರೆ ಹೊಲಿಗೆಗಳ ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇಲ್ಲದಿದ್ದರೆ, ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಶುಚಿಗೊಳಿಸುವಾಗ ವೈದ್ಯರ ಸೂಚನೆಗಳನ್ನು ಅನುಸರಿಸಿ. ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.

English summary

Women Should Take These Precautions After Caesarean Delivery in Kannada

Here we talking about Women should take these precautions after caesarean delivery in Kannada, read on
Story first published: Saturday, March 5, 2022, 16:10 [IST]
X
Desktop Bottom Promotion