Latest Updates
-
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ!
ಮಗುವಿಗೆ ಎದೆಹಾಲು ಕುಡಿಸದೇ ಇದ್ದರೆ, ನಿಮ್ಮ ಆರೋಗ್ಯಕ್ಕೇ ತೊಂದರೆ!
ಈ ಬಗ್ಗೆ ನೀವೆಂದಾದರೂ ಯೋಚಿಸಿದ್ದೀರೋ? ಇಂದಿನ ಆಧುನಿಕ ಯುಗದಲ್ಲಿ ಕೆಲವು ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸುವುದನ್ನು ಇಷ್ಟ ಪಡುವುದಿಲ್ಲ ಅಥವಾ ಕೆಲವರಿಗೆ ತಮ್ಮ ಉದ್ಯೋಗ ಮೊದಲಾದ ಕಾರಣಗಳಿಂದ ಸಾಧ್ಯವಾಗದೇ ಇರಬಹುದು. ಈ ಸಂದರ್ಭದಲ್ಲಿ ಉತ್ಪತ್ತಿಯಾದ ಹಾಲು ಏನಾಗುತ್ತದೆ? ಒಂದೇ ವಾಕ್ಯದ ಉತ್ತರ ಹೇಳಬೇಕೆಂದರೆ ದೇಹಕ್ಕೆ ಈ ಹಾಲನ್ನು ಇನ್ನಷ್ಟು ಉತ್ಪಾದಿಸುವ ಅಗತ್ಯವೇ ಬೀಳದೇ ಈ ಹಾಲು ಇಂಗಿದ ಬಳಿಕ ಮುಂದೆಂದಿಗೂ ಹಾಲು ಉತ್ಪತ್ತಿಯಾಗದೇ ಹೋಗಬಹುದು.
ಹೆರಿಗೆಯ ಬಳಿಕ ಪ್ರಾರಂಭದ ದಿನಗಳಲ್ಲಿ ಅತಿ ಹೆಚ್ಚು ಹಾಲು ಉತ್ಪತ್ತಿಯಾಗುವ ಕಾರಣ ಸ್ತನಗಳ ಗಾತ್ರವೂ ಅಪಾರವಾಗಿ ಹೆಚ್ಚುತ್ತದೆ. ಹಾಗೂ ಒಳಗಿನ ಒತ್ತಡ ಹೆಚ್ಚಾಗಿ ಹಾಲು ಸ್ತನತೊಟ್ಟುಗಳಿಂದ ಹೊರಸೂಸಬಹುದು. ಒಂದು ವೇಳೆ ಮಗು ಈ ಹಾಲನ್ನು ಕುಡಿಯದೇ ಹೋದರೆ ಹಾಲು ಉತ್ಪತ್ತಿಯಾಗುವುದು ನಿಂತೇ ಹೋಗುತ್ತದೆ. ಎಷ್ಟು ದಿನಗಳವರೆಗೆ? ಬರೆಯ ಆರರಿಂದ ಏಳು ದಿನಗಳಲ್ಲಿ ಹಾಲಿನ ಉತ್ಪನ್ನ ಸೊನ್ನೆಗೆ ಇಳಿಯುತ್ತದೆ....

ಇದಕ್ಕೆ ಕಾರಣವೇನು:?
ಹಾಲು ಮಗುವಿನ ಬೆಳವಣಿಗೆಗೆ ತುಂಬಾ ಅಗತ್ಯವಾದ ಆಹಾರವಾಗಿದ್ದು ಇದನ್ನು ಮಗು ಕುಡಿದಷ್ಟೂ ತಾಯಿಯ ದೇಹದಲ್ಲಿ ಇನ್ನಷ್ಟು ಉತ್ಪತ್ತಿಯಗುತ್ತದೆ. ಯಾವಾಗ ಮಗುವಿಗೆ ಹಾಲುಣಿಸುವುದಿಲ್ಲವೋ ಆಗ ಉತ್ಪತ್ತಿ ನಿಂತೇ ಹೋಗುತ್ತದೆ.

ಹಾಲು ಉಣಿಸದೇ ಸ್ತನಗಳ ಗಾತ್ರ ಹೆಚ್ಚದಿರಲು ಏನು ಮಾಡಬೇಕು?
ಅನಿವಾರ್ಯ ಕಾರಣಗಳಿಂದ ಹಾಲೂಡಿಸಲು ಸಾಧ್ಯವಾಗದೇ ಇರುವ ತಾಯಂದಿರು ಸ್ತನಗಳಿಗೆ ಕೊಂಚ ಬಿಗಿಯಾಗುವ ಕಂಚುಕವನ್ನುಧರಿಸಬೇಕು. ತೊಟ್ಟುಗಳ ಬಳಿ ಒಸರುವ ಹಾಲನ್ನು ಹೀರಿಕೊಳ್ಳುವ ಹತ್ತಿಯುಂಡೆಯನ್ನು ಇರಿಸಬೇಕು. ಉತ್ಪತ್ತಿಯಾದ ಹಾಲು ಬಳಕೆಯಾಗದೇ ಹೋದರೆ ದೇಹ ಈ ಹಾಲನ್ನು ಹಿಂದೆ ಪಡೆದುಕೊಳ್ಳುತ್ತದೆ ಹಾಗೂ ಹೊಸದಾಗಿ ಹಾಲನ್ನು ಉತ್ಪಾದಿಸುವುದಿಲ್ಲ. ಹಾಗಾಗಿ ಹಾಲು ಎಂದಿಗೂ ವ್ಯರ್ಥವಾಗಿ ಹೋಗುವುದಿಲ್ಲ ಬದಲಿಗೆ ದೇಹವೇ ಮತ್ತೊಮ್ಮೆ ಹೀರಿಕೊಳ್ಳುತ್ತದೆ. ಆದರೆ ಇದು ಆರೋಗ್ಯಕರವಲ್ಲ, ಕೆಲವು ಮಹಿಳೆಯರಿಗೆ ಸ್ತನದಲ್ಲಿ ನೋವು, ಮೊಲೆತೊಟ್ಟುಗಳ ಬಳಿ ಚರ್ಮ ಸೀಳಿದಂತಾಗಿ ಎದುರಾಗುವ ಸೋಂಕು (mastitis), ತೊಟ್ಟಿನ ಬುಡ ಉಬ್ಬಿಕೊಂಡಿರುವುದು (clogged duct) ಮೊದಲಾದ ಲಕ್ಷಣಗಳು ಕಂಡುಬರಬಹುದು.

ಈಗೇನು ಮಾಡಬೇಕು?
ಒಂದು ವೇಳೆ ಹಾಲೂಣಿಸುವುದು ಅಸಾಧ್ಯವೇ ಆಗಿದ್ದರೆ ಮೊದಲಿಗೆ ನಿಮ್ಮ ವೈದ್ಯರನ್ನು ಕೇಳಿ ಸಲಹೆ ಪಡೆಯಬೇಕು. ನಿಮ್ಮ ವೈದ್ಯರು ಸೂಕ್ತ ಸಲಹೆ ನೀಡಬಲ್ಲರು ಹಾಗೂ ಹಾಲೂಡಿಸದೇ ಇರುವ ಅಡ್ಡಪರಿಣಾಮಗಳ ಬಗ್ಗೆ ಅರಿವು ಮೂಡಿಸಬಲ್ಲರು.

ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ...
ಇಂದು ಎದೆಹಾಲನ್ನು ಸಂಗ್ರಹಿಸಿಡುವ ಉಪಕರಣಗಳು ಹಾಗೂ ಶೀತಲೀಕರಿಸಿ ಮಗುವಿಗೆ ಮುಂದಿನ ಘಂಟೆಗಳಲ್ಲಿ ಕುಡಿಸಬಹುದಾದ ಆಯ್ಕೆಗಳಿದ್ದು ಇವನ್ನು ಅನುಸರಿಸುವ ಮೂಲಕ ತಾಯಿ ಮತ್ತು ಮಗು ಇಬ್ಬರ ಆರೋಗ್ಯವೂ ಉತ್ತಮವಾಗಿರಲು ಸಾಧ್ಯ.



Click it and Unblock the Notifications
