For Quick Alerts
ALLOW NOTIFICATIONS  
For Daily Alerts

ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು

By Super
|

ಎದೆ ಹಾಲು ಅಮೃತಕ್ಕೆ ಸಮಾನ. ಇದರ ವಿಶೇಷತೆಯೇನೆಂದರೆ, ಇದು ಮಗು ಬೆಳೆದಂತೆಲ್ಲ ಅದರ ಬೆಳವಣಿಗೆಯ ಅಗತ್ಯಗಳಿಗೆ ತಕ್ಕಂತೆ ತಾನೂ ಪರಿವರ್ತನೆಯಾಗುತ್ತದೆ. ಎದೆ ಹಾಲಿನಲ್ಲಿ ದೊರೆಯುವ ಪೋಷಕಾಂಶಗಳು ನಿಜಕ್ಕು ನಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತವೆ. ಮೂಲಗಳ ಪ್ರಕಾರ, ತಾಯಿಯ ಎದೆಹಾಲು ವಿವಿಧ ಹಂತಗಳಲ್ಲಿ ವಿವಿಧ ರುಚಿ ಮತ್ತು ಬಣ್ಣಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಇನ್ನೂ ಬೆಳವಣಿಗೆಯಾಗದ ಮಗುವಿನ ತಾಯಿಯ ಎದೆಹಾಲಿನಲ್ಲಿ ಮಗುವಿಗೆ ಶಕ್ತಿಯನ್ನು ಹೆಚ್ಚಿಸುವಂತಹ ಪೋಷಕಾಂಶಗಳುಳ್ಳ ಎದೆಹಾಲು ಇರುತ್ತದೆ. ಹಾಗೆಯೇ ಬೆಳವಣಿಗೆಯಾಗಿರುವ ಮಗುವಿಗೆ ದೊರೆಯುವ ಎದೆಹಾಲಿನ ಬಣ್ಣ ಮತ್ತು ರುಚಿಗಳು ಸಹ ಬೇರೆ ಇರುತ್ತದೆ. ಇದರಲ್ಲಿ ಮಗುವಿನ ಆಗಿನ ಅವಶ್ಯಕತೆಗಳನ್ನು ಪೂರೈಸುವ ಗುಣಗಳು ಇರುತ್ತವೆ.

ಆದರೂ ತಾಯಿಯ ಎದೆ ಹಾಲು ಎಲ್ಲಾ ವಯೋಗುಣದ ಮಕ್ಕಳಿಗೆ ಬೇಕಾದ ಪೋಷಕಾಂಶಗಳನ್ನು ಮತ್ತು ರಕ್ಷಣಾತ್ಮಕ ಘಟಕಾಂಶಗಳನ್ನು ಹೊಂದಿರುತ್ತದೆ. ಹಾಗಾಗಿ ಎದೆ ಹಾಲಿನಲ್ಲಿ ದೊರೆಯುವ ಪೋಷಕಾಂಶಗಳ ಕುರಿತು ತಿಳುವಳಿಕೆಯನ್ನು ಹೊಂದಿರಬೇಕಾದುದು ಅಗತ್ಯ. ಬನ್ನಿ ನಿಮ್ಮ ಮಗು ಎದೆ ಹಾಲನ್ನು ಕುಡಿಯುವಾಗ ಪಡೆಯುವ ಪೋಷಕಾಂಶಗಳ ಕುರಿತು ತಿಳಿದುಕೊಳ್ಳಿ.

ಆದರೂ ತಾಯಿಯ ಎದೆಹಾಲಿನಲ್ಲಿ ಪ್ರೋಟೀನ್ ಅಂಶಗಳು ಕಡಿಮೆಯಿರುತ್ತವೆ. ಆದರೂ ಅದರಲ್ಲಿರುವ ಅಮೈನೋ ಆಮ್ಲಗಳು ಈ ಪ್ರೋಟೀನ್‍ಗಳನ್ನು ಮಹತ್ವಕಾರಿಯನ್ನಾಗಿ ಮಾಡುತ್ತವೆ. ಟೌರಿನ್ ಎಂಬ ಅಮೈನೊ ಆಮ್ಲವು ತಾಯಿಯ ಎದೆಹಾಲಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಧ್ಯಯನಗಳ ಪ್ರಕಾರ ಈ ಟೌರಿನ್ ಮಾನವನ ಮೆದುಳಿನ ಬೆಳವಣಿಗೆಗೆ ಅತ್ಯಗತ್ಯವಾಗಿ ಬೇಕಾಗಿರುವ ಅಂಶವಾಗಿದೆ ಎಂದು ಸಾಬೀತು ಮಾಡಿವೆ. ಇದೊಂದು ಒಳ್ಳೆಯ ಪ್ರೋಟೀನ್ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ವಾಭಾವಿಕವಾಗಿ ಎದೆಹಾಲು ಹೆಚ್ಚಿಸಲು ಇಲ್ಲಿದೆ ಟಿಪ್ಸ್

ನಿಮಗೆ ಗೊತ್ತೆ ಇಂತಹ ಪ್ರೋಟೀನ್‍ಗಳನ್ನು ಸೇವಿಸಿದಾಗ ಮಗುವು ಹೇಗೆ ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ ಎಂದು? ತಾಯಿಯ ಎದೆ ಹಾಲಿನಲ್ಲಿ ದೊರೆಯುವ ಪೋಷಕಾಂಶವು ಕೊಬ್ಬು ಆಗಿರುತ್ತದೆ. ಎದೆಹಾಲಿನಲ್ಲಿರುವ ಕೊಬ್ಬು ಲಿಪೇಸ್ ಎಂಬ ಕಿಣ್ವದ ಸಹಾಯದಿಂದ ಬರುತ್ತದೆ. ಈ ಕಿಣ್ವವು ಮಗುವಿನ ರಕ್ತ ಪರಿಚಲನೆಯಲ್ಲಿ ಸುಲಭವಾಗಿ ಕರಗಿ ಹೋಗುವಂತಹ ಸಣ್ಣ ಸಣ್ಣ ಗುಳಿಗೆಗಳಾಗಿ ಪರಿವರ್ತನೆಯಾಗುತ್ತದೆ.

ಈ ಕೊಬ್ಬಿನಾಂಶವು ಮಕ್ಕಳಿಗೆ ಅದರಲ್ಲು ಇನ್ನೂ ಬೆಳವಣಿಗೆಯಾಗದ ಮಕ್ಕಳಿಗೆ ಅತ್ಯಂತ ಅವಶ್ಯಕವಾದ ಶಕ್ತಿಯ ಮೂಲವಾಗಿದೆ. ಮಕ್ಕಳ ಜೀರ್ಣಾಂಗವು ಇನ್ನೂ ಬೆಳವಣಿಗೆಯಾಗದಿರುವ ಕಾರಣದಿಂದ ಅವರು ಬೆಳೆಯಲು ಮತ್ತು ಶಕ್ತಿಶಾಲಿಯಾಗಲು ಇವುಗಳ ಅವಶ್ಯಕತೆ ಹೆಚ್ಚಿರುತ್ತದೆ.

ಇಷ್ಟೇ ಅಲ್ಲದೆ ಎದೆಹಾಲಿನಲ್ಲಿ ಮೂರು ಖನಿಜಗಳು ಅಂದರೆ ಕ್ಯಾಲ್ಶಿಯಂ, ರಂಜಕ ಮತ್ತು ಕಬ್ಬಿಣಾಂಶಗಳು ಸಹ ಇರುತ್ತವೆ. ಎದೆಹಾಲಿನಲ್ಲಿ ಈ ಖನಿಜಗಳು ಉನ್ನತವಾದ ಜೈವಿಕ ಲಭ್ಯತೆಯ ಪರಿಮಾಣಗಳಲ್ಲಿ ಲಭಿಸುತ್ತದೆ. ಉದಾಹಾರಣೆಗೆ, ತಾಯಿಯ ಎದೆಹಾಲಿನಲ್ಲಿ ಮಗುವು ಶೇ.50 ರಿಂದ 75 ರಷ್ಟು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ.

ಲಿಪೇಸ್ ಹೊರತು ಪಡಿಸಿ ಮಗುವಿನ ಜೀರ್ಣಕ್ರಿಯೆಗೆ ಸಹಕರಿಸುವ ಇನ್ನಿತರ ಕಿಣ್ವಗಳು ಎದೆಹಾಲಿನಲ್ಲಿ ಲಭಿಸುತ್ತವೆ. ತ್ವಚೆಯ ಬೆಳವಣಿಗೆಗೆ ಸಹಕರಿಸುವ ಅಂಶಗಳು ಸಹ ಎದೆ ಹಾಲಿನಲ್ಲಿ ಉತ್ತಮ ಪ್ರಮಾಣದಲ್ಲಿ ದೊರೆಯುತ್ತದೆ. ಇದರ ಜೊತೆಗೆ ಇವುಗಳು ಕರುಳುಗಳಲ್ಲಿರುವ ಕೋಶಗಳನ್ನು ಸಹ ಬೆಳವಣಿಗೆ ಮಾಡಲು ಸಹಕರಿಸುತ್ತವೆ. ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಕೆ?

ಎದೆಹಾಲಿನಲ್ಲಿ ದೊರೆಯುವ ಹಾರ್ಮೋನ್‍ಗಳು ಮಗುವಿನ ಜೀರ್ಣಕ್ರಿಯೆಯನ್ನು, ಬೆಳವಣಿಗೆಯನ್ನು ಮತ್ತು ದೈಹಿಕ ಚಲನವಲನಗಳ ಮೇಲೆ ಪ್ರಭಾವ ಬೀರುತ್ತದೆ. ಅಧ್ಯಯನಗಳ ಪ್ರಕಾರ ಎದೆ ಹಾಲಿನಲ್ಲಿರುವ ಕೊಬ್ಬಿನ ಆಮ್ಲಗಳು ಮಗುವಿನ ಮೆದುಳು ಮತ್ತು ರೆಟಿನಾದ ಬೆಳವಣಿಗೆಗೆ ಸಹ ಸಹಕರಿಸುತ್ತದೆ. ಒಂದು ಮಟ್ಟಕ್ಕೆ ಎದೆ ಹಾಲು ಮಗುವಿನ ಅರಿವಿನ ಬೆಳವಣಿಗೆಯನ್ನು ಸಹ ಹೆಚ್ಚಿಸುತ್ತವೆ.

English summary

Nutrients Found In Breast Milk

One of the wonderful characteristics of human breast milk is the way it changes to meet the baby's needs as he/she grows. The nutrients found in breast milk is shocking. According to sources, it is said that the milk produced by the mother at different stages tastes and even looks different.
X
Desktop Bottom Promotion