For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ಕಲೆ ಮರೆಮಾಚಲು ನೈಸರ್ಗಿಕ ವಿಧಾನ

|
Reduce C Section Scars Naturally
ಸಿಸೇರಿಯನ್ ಆದರೆ ಹೊಟ್ಟೆಯಲ್ಲಿ ಕಲೆಗಳು ಹಾಗೆ ಉಳಿದುಕೊಂಡು ಬಿಡುತ್ತದೆ. ಈ ಕಲೆ ಸಿಸೇರಿಯನ್ ಆದವರಿಗೆ ಮುಜುಗರವನ್ನು ಉಂಟು ಮಾಡುತ್ತದೆ. ಈ ಕಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವುದು ಕಷ್ಟವಾದರೂ ಕೆಲವು ನೈಸರ್ಗಿಕ ವಿಧಾನದಿಂದ ಕಲೆ ಎದ್ದು ಕಾಣುವುದನ್ನು ತಡೆಗಟ್ಟಬಹುದು. ಸಿಸೇರಿಯನ್ ಕಲೆಯನ್ನು ಹೋಗಲಾಡಿಸುವುದರ ಬಗ್ಗೆ ತಿಲಿಯಲು ಮುಂದೆ ಓದಿ.

1. ನಿಂಬೆರಸ: ನಿಂಬೆ ಹಣ್ಣು ಕಲೆ ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿ. ಸಿಸೇರಿಯನ್ ಆದ 6 ತಿಂಗಳ ಬಳಿಕವಷ್ಟೆ ನಿಂಬೆ ಹಣ್ಣನ್ನು ಹಚ್ಚಬೇಕು. ಅದರ ಮೊದಲು ಗಾಯ ಅಷ್ಟಾಗಿ ಒಣಗಿರುವುದಿಲ್ಲ. ಆದ್ದರಿಂದ ಹಚ್ಚಲು ಹೋಗಬಾರದು. ನಿಂಬೆರಸವನ್ನು ಕಲೆಯ ಮೇಲೆ ಹಚ್ಚಿದಾಗ ಉರಿಯಾದರೆ ನಿಂಬೆರಸಕ್ಕೆ ನೀರು ಸೇರಿಸಿ ಹಚ್ಚಬೇಕು. ಈ ರೀತಿ ಹಚ್ಚಿ 3-4 ನಿಮಿಷಗಳಿಗಿಂತ ಅಧಿಕ ಸಮಯ ಬಿಡಬಾರದು. ತಣ್ಣೀರಿನಿಂದ ತೊಳೆದು ಬಾಡಿ ಲೋಷನ್ ಹಚ್ಚಬೇಕು.

2. ಟೊಮೆಟೊ ಪೇಸ್ಟ್:
ಟೊಮೆಟೊ ರಸವನ್ನು ಸಿಸೇರಿಯನ್ ಕಲೆ ಮೇಲೆ ಹಚ್ಚಿ 20-30 ನಿಮಿಷ ಬಿಟ್ಟು ನಂತರ ತೊಳೆಯಬೇಕು. ಈ ರೀತಿ ದಿನನವೂ ಮಾಡಿದರೆ ಕಲೆ ಕಡಿಮೆಯಾಗುತ್ತದೆ.

3. ಲೋಳೆಸರ: ಸ್ನಾನ ಮಾಡುವ 30 ನಿಮಿಷದ ಮೊದಲು ಲೋಳೆಸರವನ್ನು ಹಚ್ಚಿ ನಂತರ ಹದ ಬಿಸಿ ನೀರಿನಿಂದ ಹೊಟ್ಟೆಯನ್ನು ತೊಳೆಯಬೇಕು. ನಂತರ ಬಾಡಿಲೋಷನ್ ಹಚ್ಚುವುದರಿಂದ ಕಲೆ ಕಡಿಮೆಯಾಗುತ್ತದೆ.

4. ಆಪಲ್ ಸಡರ್ ವಿನಿಗರ್: ಆಪಲ್ ಸೈಡರ್ ವಿನಿಗರ್ ಅನ್ನು ನೀರಿನ ಜೊತೆ ಮಿಶ್ರಮಾಡಿ 20 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಕಲೆ ಅಷ್ಟಾಗಿ ಕಾಣುವುದಿಲ್ಲ.

English summary

Reduce C Section Scars Naturally | Tips To Reduce Scar | ಸಿಸೇರಿಯನ್ ಕಲೆಗಳನ್ನು ಹೋಗಲಾಡಿಸಲು ನೈಸರ್ಗಿಕ ವಿಧಾನ | ಕಲೆ ನಿವಾರಣೆಗೆ ಕೆಲ ಸಲಹೆ

Cesarean section delivery are hated by women only because the incision scars on the belly doesn't go therefore making the belly look ugly. C section scars or marks are difficult to remove completely however, you can try to reduce these incision scars naturally.
Story first published: Saturday, January 7, 2012, 14:53 [IST]
X
Desktop Bottom Promotion