Just In
- 1 hr ago
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- 5 hrs ago
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 15 hrs ago
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- 20 hrs ago
February Festivals 2023 : ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
Don't Miss
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಕ್ಕಳ ಜೀವ ಹಿಂಡುತ್ತಿದೆ ಮೀಸೆಲ್ಸ್: ಪೋಷಕರೇ ಈ ರೀತಿಯ ಗುಳ್ಳೆ ನಿರ್ಲಕ್ಷ್ಯ ಮಾಡಲೇಬೇಡಿ
ಭಾರತದಲ್ಲಿ ಮೀಸಲ್ಸ್ ಔಟ್‌ಬ್ರೇಕ್ ಆಗಿದೆ. ಮಕ್ಕಳಿಗೆ ಬರುತ್ತಿರುವ ಈ ಕಾಯಿಲೆ ಬಗ್ಗೆ ಪೋಷಕರೇ ತುಂಬಾನೇ ಎಚ್ಚರ. ಕಳೆದ ಎರಡು ತಿಂಗಳಿನಿಂದ ಸುಮಾರು 200 ಮಕ್ಕಳಲ್ಲಿ ಮೀಸೆಲ್ಸ್ ಪತ್ತೆಯಾಗಿದೆ, ಈಗಾಗಲೇ 12 ಮಕ್ಕಳು ಜೀವವನ್ನು ಕಳೆದುಕೊಂಡಿದ್ದಾರೆ.
ಏನಿದು ಮೀಸಲ್ಸ್, ಇದರ ಲಕ್ಷಣಗಳೇನು? ಮಕ್ಕಳಲ್ಲಿ ಕಾಣಿಸಿದಾಗ ಯಾವಾಗ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು? ಚಿಕಿತ್ಸೆ ಇದೆಯೇ ಎಂಬೆಲ್ಲಾ ಮಾಹಿತಿ ನೋಡೋಣ:

ಮೀಸೆಲ್ಸ್ ಲಕ್ಷಣಗಳೇನು?
* ಕೆಮ್ಮು
* ಜ್ವರ
* ಮೂಗು ಸೋರುವುದು
* ಕಣ್ಣು ಕೆಂಪಾಗುವುದು
* ಗಂಟಲು ಕೆರೆತ
* ಬಾಯಿಯೊಳಗೆ ಬಿಳಿ-ಬಿಳಿಯಾಗುವುದು
ಇದು ಮೊದಲಿಗೆ ತಲೆ ಭಾಗದಲ್ಲಿ ಕಂಡು ಬಂದು ನಂತರ ನಿಧಾನಕ್ಕೆ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಮೀಸೆಲ್ಸ್ ವೈರಸ್ ತಗುಲಿ 7 ದಿನಕ್ಕೆ ಲಕ್ಷಣಗಳು ಕಂಡು ಬರಲಾರಂಭಿಸುತ್ತದೆ, 14ನೇ ದಿನಕ್ಕೆ ರೋಗ ಲಕ್ಷಣಗಳು ತುಂಬಾನೇ ಹೆಚ್ಚಾಗುತ್ತದೆ.

ಮೀಸೆಲ್ಸ್‌ಗೆ ಕಾರಣವೇನು?
ಮೀಸೆಲ್ಸ್ paramyxovirus ಎಂಬ ವೈರಸ್ ಕಾರಣ, ಇದು ಉಸಿರಾಟದ ಮೂಲಕ ದೇಹವನ್ನು ಸೇರುತ್ತದೆ, ನಂತರ ಶ್ವಾಸಕೋಶದ ಮೇಲೆ ದಾಳಿ ಮಾಡಿ ನಿಧಾನಕ್ಕೆ ರಕ್ತನಾಳಕ್ಕೆ ಹರಡುತ್ತದೆ. ಮೀಸೆಲ್ಸ್ ಮನುಷ್ಯರ ಮೇಲೆ ಮಾತ್ರ ದಾಳಿ ಮಾಡುತ್ತದೆ, ಪ್ರಾಣಿಗಳಿಗೆ ಹರಡುವುದಿಲ್ಲ.
ಮೀಸೆಲ್ಸ್ ವೈರಸ್ ಗಾಳಿಯಿಂದ ಹರಡುವುದೇ?
ರೋಗಿ ಕೆಮ್ಮಿದಾಗ, ಸೀನಿದಾಗ ಗಾಳಿಗೆ ಈ ವೈರಸ್ ಹರಡುವುದು, ಆ ಗಾಳಿಯನ್ನು ಮತ್ತೊಬ್ಬ ವ್ಯಕ್ತಿ ಉಸಿರಾಡಿದಾಗ ಹರಡುತ್ತದೆ. ಇವುಗಳು ಗಾಳಿಯಲ್ಲಿ ಎರಡು ಗಂಟೆಗಳಿಗಿಂತ ಅಧಿಕ ಕಾಲ ಬದುಕಿರುತ್ತದೆ.

ಮೀಸೆಲ್ಸ್ ವೈರಸ್ ಬೇಗನೆ ಹರಡುವುದೇ?
ಹೌದು, ಈ ವೈರಸ್ ತುಂಬಾನೇ ಬೇಗನೆ ಹರಡುತ್ತದೆ, ಅಲ್ಲದೆ ಒಬ್ಬ ವ್ಯಕ್ತಿಗೆ ಬಂದ್ರೆ ಆ ವ್ಯಕ್ತಿಯಿಂದ 9-18 ಜನರಿಗೆ ಹರಡುವ ಸಾಧ್ಯತೆ ಹೆಚ್ಚು. ಈ ವೈರಸ್ ತಗುಲಿದರೆ ಅದರ ಲಕ್ಷಣಗಳು ಕಂಡು 4 ದಿನಗಳ ಮುಂಚೆ ಈ ವೈರಸ್ ಬೇಗನೆ ಹರಡುತ್ತದೆ, ನಂತರ ಮೈ ಮೇಲೆ ಗುಳ್ಳೆಗಳು ಬಂದ ಮೇಲೆ 4 ದಿನಗಳವರೆಗೆ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚು, ನಂತರ ಕಡಿಮೆಯಾಗುವುದು.
ಮೀಸೆಲ್ಸ್ ಹರಡಲು ಪ್ರಮುಖ ಕಾರಣವೇನು?
ಇದಕ್ಕೆ ಲಸಿಕೆ ಪಡೆಯದಿರುವುದು ಮೀಸೆಲ್ಸ್ ಹರಡಲು ಪ್ರಮು ಕಾರಣವಾಗಿದೆ. ಮಕ್ಕಳು, ಗರ್ಭಿಣಿಯರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದರ ಅಪಾಯ ಹೆಚ್ಚು.

ಮೀಸೆಲ್ಸ್ ಪತ್ತೆ ಹೇಗೆ?
ಜ್ವರ, ಮೈ ಮೇಲೆ ಗುಳ್ಳೆಗಳು ಕಂಡು ಬಂದರೆ ಸೀನುವಾಗ , ಕೆಮ್ಮುವಾಗ ಮಾಸ್ಕ್ ಧರಿಸಿ, ಕೂಡಲೇ ವೈದ್ಯರ ಬಳಿ ಬಂದು ಪರೀಕ್ಷಿಸಿ. ಬಾಯಿಯೊಳಗಡೆ ಬಿಳಿ, ಬಿಳಿ ಗುಳ್ಳೆಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.
ಚಿಕಿತ್ಸೆಯೇನು?
ಇದಕ್ಕೆ ಪ್ರತ್ಯೇಕ ಚಿಕಿತ್ಸೆಯಿಲ್ಲ, ವೈದ್ಯರು ಲಕ್ಷಣಗಳನ್ನು ನೀಡಿ ಚಿಕಿತ್ಸೆ ನೀಡಲಾಗುವುದು.
* ಮೀಸೆಲ್ಸ್ ಲಕ್ಷಣಗಳು ಕಂಡು ಬಂದ 72 ಗಂಟೆಯೊಳಗಡೆ ಮೀಸೆಲ್ಸ್ ಲಸಿಕೆ ಹಾಕಲಾಗುವುದು.
* mmunoglobulin ಎಂಬ ಇಮ್ಯೂನೆ ಪ್ರೊಟೀನ್ ಅನ್ನು ಮೀಸೆಲ್ಸ್ ಬಂದ 6 ದಿನದೊಳಗೆ ಹಾಕಬೇಕು.
* ಇನ್ನು ವೈದ್ಯರು ಜ್ವರಕ್ಕೆ ಔಷಧಿ ಕೊಡಬಹುದು
* ವಿಶ್ರಾಂತಿ ಪಡೆಯಿರಿ
* ಸಾಕಷ್ಟು ನೀರು ಕುಡಿಯಿರಿ
* ವಿಟಮಿನ್ ಎ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ.