For Quick Alerts
ALLOW NOTIFICATIONS  
For Daily Alerts

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರ: ಬೇರೆಯವರ ತೊಡೆ ಮೇಲೆ ಕೂರಲು ಬಿಡಲೇಬೇಡಿ

|

ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು ಪೋಷಕರು ತುಂಬಾನೇ ಎಚ್ಚರಿಕೆವಹಿಸಬೇಕು. ಅಲ್ಲದೆ ಅವರು ಅಂಥ ವಿಷಯಗಳ ಕಡೆ ಆಕರ್ಷಿತರಾಗದಿರಲು ಮುನ್ನೆಚ್ಚರಿಕೆವಹಿಸಬೇಕು, ಇಲ್ಲದಿದ್ದರೆ ಚಿಕ್ಕ ಮಕ್ಕಳ ಪುಟ್ಟ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದು. ನಿಮ್ಮ ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ನೀವು ಕೆಲವೊಂದು ವಿಷಯಗಳ ಕಡೆ ಅವರಿಗೆ ತಿಳುವಳಿಕೆ ಮೂಡಿಸಬೇಕು, ಅಲ್ಲದೆ ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಬೇಕು.

ಚಿಕ್ಕ ಪ್ರಾಯದಲ್ಲಿ ಲೈಂಗಿಕ ದೌರ್ಜನ್ಯ ಉಂಟಾದರೆ ಅದರ ಆಗಾತ ಜೀವನಪೂರ್ತಿ ಕಾಡುವುದು, ಆ ಭೀಕರ ಅನುಭವದಿಂದ ಹೊರಬರುವುದು ಕಷ್ಟವಾಗುವುದು, ಆದ್ದರಿಮದ ಮಕ್ಕಳ ದೇಹ ಮತ್ತು ಮನಸ್ಸಿಗೆ ಆಘಾತ ಉಂಟಾಗದಿರಲು ಪೋಷಕರು ಎಚ್ಚರಿಕೆವಹಿಸಬೇಕು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಷಕರು ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕೆಂದು ಹೇಳಲಾಗಿದೆ ನೋಡಿ:

ಮಕ್ಕಳನ್ನು ಬೇರೆಯವರ ತೊಡೆ ಮೇಲೆ ಕೂರಲು ಬಿಡಬೇಡಿ

ಮಕ್ಕಳನ್ನು ಬೇರೆಯವರ ತೊಡೆ ಮೇಲೆ ಕೂರಲು ಬಿಡಬೇಡಿ

1. ನಿಮ್ಮ ಮಕ್ಕಳಿಗೆ ಯಾರ ತೊಡೆ ಮೇಲೆ ಕೂರದಂತೆ ಎಚ್ಚರಿಕೆ ನೀಡಿ, ಅದು ಅಂಕಲ್‌ ಆಗಿರಲಿ ಅಥವಾ ಇತರ ಸಂಬಂಧಿಕರಾಗಿರಲಿ ಯಾರ ತೊಡೆ ಮೇಲೆಯೂ ಕೂರಬೇಡಿ ಎಂದು ಹೇಳಿ.

2. ಎರಡು ವರ್ಷ ಮೇಲ್ಪಟ್ಟ ಮಕ್ಕಳ ಎದುರಿನಲ್ಲಿ ಬಟ್ಟೆ ಬದಲಾಯಿಸಬೇಡಿ.

3. ದೊಡ್ಡವರು ನಿಮ್ಮ ಮಕ್ಕಳಿಗೆ ನನ್ನ ಹೆಂಡತಿ, ನನ್ನ ಗಂಡ ಅಂತ ತಮಾಷೆ ಮಾಡುವುದಕ್ಕೆ ಬಿಡಬೇಡಿ.

4. ನಿಮ್ಮ ಮಗು ಯಾರ ಬಳಿ ಕಂಫರ್ಟ್ ಆಗಿರುವುದಿಲ್ಲವೋ ಅವರ ಬಳಿ ಇರುವಂತೆ ಒತ್ತಾಯ ಮಾಡಬೇಡಿ. ಅದೇ ಸಮಯದಲ್ಲಿ ನಿಮ್ಮ ಮಗು ಯಾರನ್ನಾದರೂ ತುಂಬಾ ಇಷ್ಟ ಪಡುತ್ತಿದ್ದರೆ ಅದನ್ನು ಗಮನಿಸಿ.

ಮಗುವಿನಲ್ಲಿ ಬದಲಾವಣೆಯಾದರೆ ಗಮನಿಸಿ

ಮಗುವಿನಲ್ಲಿ ಬದಲಾವಣೆಯಾದರೆ ಗಮನಿಸಿ

5. ತುಂಬಾ ಲವಲವಿಕೆಯಿಂದ ಆಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಸೈಲೆಂಟ್‌ ಆದರೆ ನಿಧಾನಕ್ಕೆ ಅದರ ಬಳಿ ಕೇಳಿ, ಮೊದಲಿಗೆ ಮಗು ಹೇಳಲು ನಿರಾಕರಿಸಿದರೂ ನೀವು ಮಗುವಿನ ಬಳಿ ಪ್ರೀತಿಯಿಂದ ವಿಚಾರಿಸಿದರೆ ನಿಜ ಹೇಳುತ್ತೆ.

6. ನಿಮ್ಮ ಮಗು ಮಕ್ಕಳ ಜೊತೆ ಆಟವಾಡಲು ಹೋದಾಗ ಅವರು ಯಾವ ಆಟ ಆಡುತ್ತಿದ್ದಾರೆ ಎಂಬುವುದನ್ನೂ ಗಮನಿಸಬೇಕು, ಏಕೆಂದರೆ ಮಕ್ಕಳು ಕೂಡ ಲೈಂಗಿಕ ದೌರ್ಜನ್ಯ ಎಸಗಬಹುದು.

7. ಇದ್ದಕ್ಕಿದ್ದಂತೆ ನಿಮ್ಮ ಮಗುವಿನಲ್ಲಿ ನಾಚಿಕೆ ಸ್ವಭಾವ ಕಂಡರೆ ಅದನ್ನೂ ನಿರ್ಲಕ್ಷ್ಯ ಮಾಡಬೇಡಿ. ಏಕೆ ಮಗುವಿನ ಸ್ವಭಾವದಲ್ಲಿ ಬದಲಾವಣೆಯಾಗಿದೆ ಎಂಬುವುದನ್ನು ಗಮನಿಸಿ.

ಮಕ್ಕಳ ಮೇಲೆ ಕೆಟ್ಟ ಪರಿಣಮ ಬೀರದಂತೆ ಎಚ್ಚರವಹಿಸಿ

ಮಕ್ಕಳ ಮೇಲೆ ಕೆಟ್ಟ ಪರಿಣಮ ಬೀರದಂತೆ ಎಚ್ಚರವಹಿಸಿ

8. ನಿಮ್ಮ ಕೇಬಲ್‌ ನೆಟ್‌ವರ್ಕ್‌, ಮೊಬೈಲ್‌ನಲ್ಲಿ ಪೇರೆಂಟ್‌ ಕಂಟ್ರೋಲ್‌ ಇರಲಿ.

9. ನಿಮ್ಮ ಮಗು 3 ವರ್ಷ ಇರುವಾಗಲೇ ಖಾಸಗಿ ಭಾಗವನ್ನು ಯಾರಿಗೂ ಮುಟ್ಟಲು ಬಿಡದಂತೆ ತಿಳಿಸಿ, ಅಲ್ಲದೆ ಆ ಭಾಗದ ಶುಚಿತ್ವ ಬಗ್ಗೆ ತಿಳಿಸಿ, ಮೂತ್ರ ವಿಸರ್ಜನೆ, ಮಲವಿಸರ್ಜನೆ ಬಳಿಕ ಅವರೇ ತೊಳೆಯಲು ಅಭ್ಯಾಸ ಮಾಡಿಸಿ.

10. ಮಕ್ಕಳ ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಬೀರುವ ಸಿನಿಮಾ, ಮ್ಯೂಸಿಕ್ ಇವುಗಳನ್ನು ಕಾಣಲು ಬಿಡಬೇಡಿ. ಅಡಲ್ಟ್‌ ಕಂಟೆಂಟ್‌ ಇರುವ ಮನರಂಜನೆಯಿಂದ ದೂರವಿಡಿ.

11. ಮಗು ಯಾರ ಬಗೆಯಾದರೂ ಅವರು ನನ್ನನ್ನು ಮುಟ್ಟುತ್ತಾರೆ ಎಂದೆಲ್ಲಾ ದೂರಿದರೆ ಮೌನವಾಗಬೇಡಿ, ಮಗುವಿಗೆ ಅವರಿಂದ ದೂರವಿರಲು ಹೇಳಿ, ಅಗ್ಯತ ಬಿದ್ದರೆ ಆ ವ್ಯಕ್ತಿಗೆ ಎಚ್ಚರಿಕೆ ನೀಡಿ.

English summary

Ways Parents can Protect Kids From Child Sexual Abuse in Kannada

Ways parents can protect kids from child sexual abuse in Kannada, read on....
Story first published: Friday, January 28, 2022, 10:48 [IST]
X
Desktop Bottom Promotion