For Quick Alerts
ALLOW NOTIFICATIONS  
For Daily Alerts

ಮಕ್ಕಳನ್ನು ಹೇಗೆ ಬೆಳೆಸಬೇಕು: ವ್ಯಕ್ತಿತ್ವ ವಿಕಸನ ತರಬೇತುದಾರರಿಂದ ಟಿಪ್ಸ್

|

ಎಲ್ಲಾ ಪೋಷಕರು ಮಕ್ಕಳನ್ನು ಬೆಳೆಸುತ್ತಾರೆ. ಆದರೆ ಕೆಲ ಪೋಷಕರು ಮಾತ್ರ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪೋಷಕರು ಮಕ್ಕಳಿಂದ ಏನು ಬಯಸುತ್ತಾರೋ ಮೊದಲು ಆ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ ತರಬೇತುದಾರರಾದ ಜಯಪ್ರಕಾಶ್‌ ನಾಗತಿಹಳ್ಳಿಯವರು ಮಕ್ಕಳ ಪೋಷಣೆ ಹೇಗಿರಬೇಕೆಂಬ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

Jayaprakash Nagathihalli
ಕೋವಿಡ್ 19 ಸಾಂಕ್ರಾಮಿಕ: ಪೋಷಕರು ಮಾಡಬೇಕಾಗಿರುವುದು ಏನು? | Part I | Boldsky Kannada

ಸಾಮಾನ್ಯವಾಗಿ ಮಕ್ಕಳಿಗೆ ನೀನು ಚೆನ್ನಾಗಿ ಮಾರ್ಕ್ಸ್ ತೆಗೆದರೆ ಗಿಫ್ಟ್ ಕೊಡುತ್ತೇನೆ ಎಂದು ಹೇಳುತ್ತೇವೆ. ಮೊಬೈಲ್ ನೋಡಿದರೆ ಅದು ನೋಡಬೇಡ ಎಂದು ಗದರುತ್ತೇವೆ ಹೀಗೆ ನಮಗೇ ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ.

ನಾಗತಿಹಳ್ಳಿಯವರು ಮಕ್ಕಳನ್ನು ಹೇಗೆ ಬೆಳೆಸಬೇಕು, ಅವರಲ್ಲಿ ಕಲಿಕೆಯಲ್ಲಿ ಆಸಕ್ತಿ, ಇತರ ದೈಹಿಕ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಯಲು ಏನು ಮಾಡಬೇಕು, ವಿನಯಶೀಲರಾಗಿ ಬೆಳೆಸುವುದು ಹೇಗೆ ಎಂಬೆಲ್ಲಾ ಬಗ್ಗೆ ಮಾಹಿತಿ ನೀಡಿದ್ದಾರೆ ನೋಡಿ:

ಮಕ್ಕಳಿಗೆ ಗಿಫ್ಟ್ ಕೊಡುವುದು ಒಳ್ಳೆಯ ಅಭ್ಯಾಸವೇ?

ಮಕ್ಕಳಿಗೆ ಗಿಫ್ಟ್ ಕೊಡುವುದು ಒಳ್ಳೆಯ ಅಭ್ಯಾಸವೇ?

ಈ ಕುರಿತು ಹೇಳುತ್ತಾ ಮಕ್ಕಳಿಗೆ ನೀನು ಹೇಳಿದ ಮಾತು ಕೇಳಿದರೆ ಅದು ಕೊಡಿಸುತ್ತೀನಿ, ಇದು ಕೊಡಿಸುತ್ತೀನಿ ಎಂದ ಗಿಫ್ಟ್ ಆಸೆ ತೋರಿಸಿದರೆ ಮಕ್ಕಳು ಅದನ್ನೇ ಪ್ರತೀಬಾರಿ ನಮ್ಮಿಂದ ಬಯಸುತ್ತಾರೆ. ಅದನ್ನು ಕೊಡಿಸಲು ಸಾಧ್ಯವಾಗದೇ ಹೋದಾಗ ಮನಸ್ತಾಪಗಳು ಬರುತ್ತವೆ. ಅದಕ್ಕೆ ಬದಲಾಗಿ ಮಕ್ಕಳಿಗೆ ವಿನಯಶೀಲತೆ ಕಲಿಸಬೇಕು. ಎಲ್ಲರ ಜೊತೆ ಬೆರೆತು ಬಾಳುವುದನ್ನು ಕಲಿಸಬೇಕು.

 ಮಕ್ಕಳಿಗೆ ಮೊಬೈಲ್‌ ಕೊಡಬಹುದೇ?

ಮಕ್ಕಳಿಗೆ ಮೊಬೈಲ್‌ ಕೊಡಬಹುದೇ?

ಮಕ್ಕಳಿಗೆ ಮೊಬೈಲ್‌ ಕೊಡುವುದು ತಪ್ಪು ಎಂದು ಮಕ್ಕಳಿಗೆ ಹೇಳಿದರೆ ಅವರು ಕೇಳುವುದಿಲ್ಲ. ಅದಕ್ಕೆ ಬದಲಾಗಿ ಆ ಮೊಬೈಲ್‌ನಲ್ಲಿ ಏನು ನೋಡಬೇಕು ಎಂಬುವುದನ್ನು ಮಾರ್ಗದರ್ಶನ ಮಾಡಿ. ನೀವು ಮೊದಲು ಏನು ಮಕ್ಕಳಿಗೆ ತೋರಿಸಬೇಕು ಎಂಬುವುದನ್ನು ಹೋಂವರ್ಕ್ ಮಾಡಿ, ನಂತರ ಮಕ್ಕಳಿಗೆ ಪುಟ್ಟಾ ಇದು ನೋಡು ಅಂತೆಲ್ಲಾ ಅವರಲ್ಲಿನ ಕೌಶಲ್ಯ ಹೆಚ್ಚಿಸುವ ವೀಡಿಯೋ ತೋರಿಸಿ. ಅಲ್ಲದೆ ಮಕ್ಕಳಿಗೆ ಮೊಬೈಲ್‌ ಕೊಡುವುದಕ್ಕೂ ಒಂದು ಸಮಯ ಅಂತ ನಿಗದಿ ಮಾಡಿ.

 ಮಕ್ಕಳನ್ನು ಟಿವಿ, ಮೊಬೈಲ್ ಬಿಟ್ಟು ಬೇರೆ ವಿಷಯದ ಕಡೆ ಗಮನ ಸೆಳೆಯುವುದು ಹೇಗೆ?

ಮಕ್ಕಳನ್ನು ಟಿವಿ, ಮೊಬೈಲ್ ಬಿಟ್ಟು ಬೇರೆ ವಿಷಯದ ಕಡೆ ಗಮನ ಸೆಳೆಯುವುದು ಹೇಗೆ?

ಮಕ್ಕಳು ಓದಬೇಕು, ವ್ಯಾಯಾಮ ಮಾಡಬೇಕು ಎಂದು ಮಕ್ಕಳಲ್ಲಿ ಹೇಳಿ ಪೋಷಕರು ಆರಾಮವಾಗಿ ಕೂತು ಟಿವಿ ನೋಡುವುದು, ಮೊಬೈಲ್‌ ನೋಡುವುದು ಮಾಡುತ್ತಿದ್ದರೆ ಅದು ಪೋಷಕರು ಮಾಡುವ ತಪ್ಪು. ಬದಲಿಗೆ ಅವರ ಜೊತೆ ನಾವೂ ಓದಬೇಕು, ವ್ಯಾಯಾಮ ಮಾಡಬೇಕು, ಆಡಬೇಕು ಆಗ ಅವರು ನಮ್ಮನ್ನು ನೋಡಿ ಕಲಿಯುತ್ತಾರೆ.

ಮಕ್ಕಳಿಗೆ ಓದಿದ್ದು ಮರೆತು ಹೋಗದಂತೆ ತಡೆಯುವುದು ಹೇಗೆ?

ಮಕ್ಕಳಿಗೆ ಓದಿದ್ದು ಮರೆತು ಹೋಗದಂತೆ ತಡೆಯುವುದು ಹೇಗೆ?

ಮಕ್ಕಳಿಗೆ ಒಂದು ಕತೆ ಪುಸ್ತಕ ಕೊಟ್ಟು ನೋಡಿ, ಆ ಕತೆ ಅವರಿಗೆ ನೆನಪಿರುತ್ತದೆ. ಮಕ್ಕಳು ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿದರೆ ಮರೆತು ಹೋಗುವುದಿಲ್ಲ. ಅವರನ್ನು ಓದುವಂತೆ ಗದರಬೇಡಿ, ಅವರಿಗೆ ಓದುವ ಆಸಕ್ತಿ ಬೆಳೆಯುವಂತೆ ಮಾಡಿ. ಮಕ್ಕಳು ಓದುವಾಗ ನೀವು ಸೀರಿಯಲ್ ನೋಡುವುದು ಅವರನ್ನು ಓದಲು ಹೇಳುವುದು ಸರಿಯಲ್ಲ. ಮಕ್ಕಳಿಂದ ನೀವೇನು ಬಯಸುತ್ತೀರೋ ಅದರ ಜೊತೆಯೇ ಸಾಗಬೇಕು. ಅವರನ್ನು ಓದಲು ಹೇಳಿದಾಗ ನೀವು ಕೂಡ ಓದಿ, ಅವರಿಗೆ ಆಸಕ್ತಿಕರ ಕತೆ ಹೇಳಿ.

ಮಕ್ಕಳ ಮಾನಸಿಕ ಆರೋಗ್ಯಕ್ಕೆ ಏನು ಮಾಡಬೇಕು?

ಮಕ್ಕಳ ಮಾನಸಿಕ ಆರೋಗ್ಯಕ್ಕೆ ಏನು ಮಾಡಬೇಕು?

ಮಕ್ಕಳು ಮಾನಸಿಕ ಆರೋಗ್ಯಕ್ಕಾಗಿ ಮೊದಲು ಮಕ್ಕಳ ಮುಂದೆ ಅಪ್ಪ-ಮ್ಮ ಜಗಳವಾಡಬಾರದು. ಏನೇ ಜಗಳವಾಡುವುದಾದರೂ ಮಕ್ಕಳಿಗೆ ತಿಳಿಯದಂತೆ ಆಡಿ. ಮಕ್ಕಳ ಮುಂದೆ ಆಡುವುದರಿಂದ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳಿಗೂ ಅಪ್ಪ-ಅಮ್ಮನ ಮೇಲೆ ತಪ್ಪಾದ ಭಾವನೆ ಮೂಡುತ್ತದೆ.

ಮಕ್ಕಳನ್ನು ಹೇಗೆ ಬೆಳೆಸಬೇಕು?

ಮಕ್ಕಳನ್ನು ಹೇಗೆ ಬೆಳೆಸಬೇಕು?

ಸಾಮಾನ್ಯವಾಗಿ 3 ವರ್ಗದ ಪೋಷಕರಿದ್ದಾರೆ

1. ಸರ್ವಾಧಿಕಾರಿಯಂತೆ ವರ್ತಿಸುವವರು: ನಾನು ಹೇಳಿದಂತೆ ಕೇಳಬೇಕು, ನಡೆಯಬೇಕು ಎಂಬ ಧೋರಣೆ ಕೆಲ ಪೋಷಕರಲ್ಲಿರುತ್ತದೆ. ಇಂಥ ಪೋಷಕರು ಮಕ್ಕಳ ಮನಸ್ಸಿನಲ್ಲಿ ಭಯವನ್ನು ತುಂಬಿ ಬೆಳೆಸುತ್ತಾರೆ.

2. ಎಲ್ಲೆ ಮೀರಿದ ಸ್ವಾತಂತ್ರ್ಯ: ಮಕ್ಕಳು ಹೇಳಿದಂತೆ ಕೇಳುವುದು, ಮಕ್ಕಳು ತಪ್ಪು ಮಾಡಿದರೂ ಅವರ ಪರವಾಗಿ ಮಾತನಾಡುವುದು, ತಿದ್ದಲು ಪ್ರಯತ್ನ ಮಾಡದೇ ಇರುವುದು.

ಈ ಎರಡೂ ವರ್ಗ ಮಕ್ಕಳನ್ನು ಬೆಳಸುವಲ್ಲಿ ಮಾದರಿ ಪೋಷಕರು ಎಂದೆನಿಸಲು ಸಾಧ್ಯವಿಲ್ಲ.

3. ಮಾದರಿ ಪೋಷಕರು: ಇವರು ಮಕ್ಕಳಿಗೆ ಸ್ವಾತಂತ್ರ್ಯ ನೀಡುತ್ತಾರೆ ಆದರೆ ಅದಕ್ಕೆ ಒಂದು ಮಿತಿ ಹಾಕಿರುತ್ತಾರೆ. ಇಂಥ ಮಕ್ಕಳು ಸರಿ ತಪ್ಪನ್ನು ಅರಿತು ಸರಿಯಾದ ರೀತಿಯಲ್ಲಿ ಬೆಳೆಯುತ್ತಾರೆ.

English summary

Parenting Tips By Soft Skill Trainer Jayaprakash Nagathihalli

Here are parenting tips by soft skill trainer Jayaprakash Nagathihalli, Have a look
X
Desktop Bottom Promotion