For Quick Alerts
ALLOW NOTIFICATIONS  
For Daily Alerts

ಪೋಷಕರಿಗೆ ಬೊಜ್ಜಿನ ದೇಹವಿದ್ದರೆ ಮಕ್ಕಳಿಗೂ ಒಬೆಸಿಟಿ ಬರಬಹುದು: ತಡೆಗಟ್ಟುವುದು ಹೇಗೆ?

|

ಇತ್ತೀಚೆಗೆ ಚಿಕ್ಕ ಪ್ರಾಯದಲ್ಲಿಯೇ ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ಕಂಡು ಬರುತ್ತಿದೆ. ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ನಾನಾ ಕಾರಣಗಳಿಂದ ಉಂಟಾಗುತ್ತಿದೆ.

ಮಕ್ಕಳಲ್ಲಿ ದೈಹಿಕ ಚಟುವಟಿಕೆ ಕಡಿಮೆ ಇದ್ದರೆ ಅಂದರೆ ಈಗ ಹೆಚ್ಚಿನ ಮಕ್ಕಳು ಹೊರಗಡೆ ಹೋಗಿ ಆಡುವುದಿಲ್ಲ, ಶಾಲೆ, ಶಾಲೆಯಿಮದ ಬಂದರೆ ಮನೆಯಲ್ಲಿ ಟಿವಿ, ಮೊಬೈಲ್‌ ಅಂತ ಇರುತ್ತಾರೆ, ಈ ಕಾರಣದಿಂದಾಗಿಯೂ ಮೈ ತೂಕ ಹೆಚ್ಚಾಗಿದೆ.

ಕೊರೊನಾ ಸಾಂಕ್ರಮಿಕ ಸಮಯದಲ್ಲಿ ಮನೆಯೊಳಗೇ ಇದ್ದಿದ್ದರಿಂದ ಮೈ ತೂಕ ಹೆಚ್ಚಾಗಿದೆ, ಜಂಕ್ಸ್‌ ಫುಡ್ಸ್‌ ಸೇವನೆ, ಸ್ಪೋರ್ಟ್ಸ್‌ ಮತ್ತಿತರ ದೈಹಿಕ ಚಟುವಟಿಕೆ ಕಡೆ ಕಡಿಮೆ ಗಮನ ಹರಿಸುತ್ತಿರುವ ಕಾರಣದಿಂದಾಗಿ ಈ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಅಷ್ಟು ಮಾತ್ರವಲ್ಲ ಅಪ್ಪ-ಅಮ್ಮನಿಗೆ ಬೊಜಿದ್ದರೆ ಅವರ ಮಕ್ಕಳಲ್ಲಿಯೂ ಈ ಸಮಸ್ಯೆ ಇರುತ್ತದೆ ಎಂದು ಇತ್ತೀಚೆಗೆ ನಡೆಸಿದ ಸಂಶೋಧನೆಯೂ ಹೇಳಿದೆ.

ಅಪ್ಪ-ಅಮ್ಮನ ಬೊಜ್ಜು ಮಕ್ಕಳ ಆರೋಗ್ಯದ ಮೇಲೆ ಬೀರುವ ಪರಿಣಾಮವೇನು ಎಂದು ನೋಡೋಣ:

ಮಕ್ಕಳಲ್ಲಿ ಒಬೆಸಿಟಿಗೆ ಕಾರಣಗಳು

ಮಕ್ಕಳಲ್ಲಿ ಒಬೆಸಿಟಿಗೆ ಕಾರಣಗಳು

ಹೆಲ್ತ್‌ ಸೈಟ್‌ಗೆ ಡಾ. ಮೋಟ್ವಾನಿ ನೀಡಿರುವ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಿಂದ 825 ರೋಗಿಗಳು ವಿವಿಧ ಬಗೆಯ ಬ್ಯಾರಿಯಾಟ್ರಿಕ್‌ ಸರ್ಜರಿಗೆ ಒಳಪಟ್ಟಿದ್ದಾರೆ, ಅದರಲ್ಲಿ ಶೇ. 38ರಷ್ಟು ಜನರಿಗೆ ವಂಶವಾಹಿ ಬಂದಿರುವುದಾಗಿದೆ.

ಪೋಷಕರು ಬೊಜ್ಜಿನ ಮೈ ಹೊಂದಿದ್ದರೆ ಮಕ್ಕಳಲ್ಲಿಯೂ ಈ ಸಮಸ್ಯೆ ಕಂಡು ಬರವ ಸಾಧ್ಯತೆ ಹೆಚ್ಚು. ಜೀನ್ಸ್ ಹಾಗೂ ಹವ್ಯಾಸಗಳು, ಆಹಾರಕ್ರಮ ಇವೆಲ್ಲಾ ಕಾರಣದಿಂದಾಗಿ ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ಹೆಚ್ಚುವುದು. ಅಧಿಕ ಕ್ಯಾಲೋರಿ ಹಾಗೂ ಕೊಬ್ಬಿನಂಶವಿರುವ ಆಹಾರಗಳ ಸೇವನೆ, ಮನೆಯೊಳಗಡೆ ಮಾತ್ರ ಆಟ ಆಡುವುದು, ಜಂಕ್ಸ್‌ ಆಹಾರ ಸೇವನೆ, ಕೃತಕ ಸಿಹಿಯ ಪಾನೀಯಗಳ ಸೇವನೆ ಈ ಎಲ್ಲಾ ಕಾರಣಗಳಿಂದ ಮಕ್ಕಳಲ್ಲಿ ಒಬೆಸಿಟಿ ಹೆಚ್ಚಾಗುತ್ತಿದೆ.

ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಹೆಚ್ಚುವುದು

ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಹೆಚ್ಚುವುದು

ಪೋಷಕರು ಮಕ್ಕಳ ಮೈ ತೂಕದ ಕಡೆ ತುಂಬಾನೇ ಗಮನ ನೀಡಬೇಕು, ಅವರ ಆಹಾರಕ್ರಮ ಆರೋಗ್ಯವಾಗಿರಲಿ. ಮಕ್ಕಳ ಜಂಕ್‌ ಫುಡ್ ಹೆಚ್ಚು ಇಷ್ಟಪಡುತ್ತಾರೆ ಎಂದು ಅದನ್ನೇ ತಂದು ಕೊಡಬೇಡಿ. ಅವರ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಅಧಿಕವಿರಲಿ. ಬೇಕರಿ ಆಹಾರಗಳನ್ನು ತುಂಬಾ ತಂದುಕೊಡಬೇಡಿ. ಮಕ್ಕಳಿಗೆ ಪ್ರತಿದಿನ ದೈಹಿಕ ವ್ಯಾಯಾಮ ಇರಬೇಕು. ಅವರು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು. ಅರ ಮೈ ತೂಕ ಹೆಚ್ಚಾಗುತ್ತಿದ್ದರೆ ಅವರನ್ನು ಮೈದಾನಕ್ಕೆ ಕರೆದುಕೊಂಡು ಹೋಗಿ ಹೆಚ್ಚು ಆಟದ ಕಡೆ ಗಮನ ನೀಡುವಂತೆ ಮಾಡಿ.

ದೈಹಿಕ ವ್ಯಾಯಾಮ ಮಕ್ಕಳ ಮಾನಸಿಕ ಆರೋಗ್ಯವನ್ನೂ ಕೂಡ ಹೆಚ್ಚಿಸುತ್ತದೆ.

ಮೊಬೈಲ್‌ ದೂರವಿಡಿ

ಮೊಬೈಲ್‌ ದೂರವಿಡಿ

ಈಗೀನ ಮಕ್ಕಳು ಮೊಬೈಲ್‌ನಲ್ಲಿ ತುಂಬಾ ಸಮಯ ಕಳೆಯಲು ಇಷ್ಟಪಡುತ್ತಾರೆ, ಅವರಿಗೆ ಮೊಬೈಲ್‌ ಸಮಯವನ್ನು ಲಿಮಿಟ್ ಮಾಡಿ. ಅಂದರೆ ಇಂತಿಷ್ಟೇ ಸಮಯ ನೀಡುವುದು ಎಂದು ಸ್ಪಷ್ಟವಾಗಿ ಹೇಳಿ. ಮಕ್ಕಳನ್ನು ಸ್ವಿಮ್ಮಿಂಗ್, ಕ್ರಿಕೆಟ್, ಶೆಟಲ್ ಹೀಗೆ ಅವರಿಷ್ಟದ ಆಟಗಳನ್ನು ಆಡಲು ಹುರಿದುಂಬಿಸಿ.

ಮಕ್ಕಳಲ್ಲಿ ಒಬೆಸಿಟಿ ತಡೆಗಟ್ಟಲು ಈ ಅಂಶಗಳ ಕಡೆ ಗಮನ ನೀಡಿ

ಮಕ್ಕಳಲ್ಲಿ ಒಬೆಸಿಟಿ ತಡೆಗಟ್ಟಲು ಈ ಅಂಶಗಳ ಕಡೆ ಗಮನ ನೀಡಿ

* ಅವರ ಆಹಾರಕ್ರಮ: ಅವರಿಗೆ ಇಷ್ಟದ ಅಡುಗೆ ಅಂತ ಮಾಡಿ ಬಡಿಸುವ ಬದಲಿಗೆ ಅವರಿಗೆ ಆರೋಗ್ಯಕರವಾದ ಆಹಾರ ಹೆಚ್ಚು ಮಾಡಿ ಕೊಡಿ. ಆದಷ್ಟೂ ಜಂಕ್‌ ಫುಡ್ಸ್ ದೂರವಿಡಿ. ಜಂಕ್‌ ಫುಡ್‌ ನೀಡುವುದೇ ಇಲ್ಲ ಅಂದರೆ ಮಕ್ಕಳು ಕೇಳಲ್ಲ, ಆದರೆ ಮಿತಿಯಲ್ಲಿರಿ.

* ದೈಹಿಕ ವ್ಯಾಯಾಮ: ಕೆಲ ಪೋಷಕರು ಮಕ್ಕಳು ಶಾಲೆ ಬಿಟ್ಟು ಮನೆಗೆ ಬಂದರೆ ಹೊರಗಡೆ ಹೋಗಬೇಡ, ಮನೆಯೊಳಗಡೇ

English summary

Obese Parents Are Likely To Have Obese Or Overweight Children says Study

Obese parents are likely to have obese or overweight children says study, Read on.....
Story first published: Thursday, June 23, 2022, 12:32 [IST]
X
Desktop Bottom Promotion