For Quick Alerts
ALLOW NOTIFICATIONS  
For Daily Alerts

ಕೋವಿಡ್ 19: 12-18 ವರ್ಷದವರೆಗೆ ತುರ್ತುಪರಿಸ್ಥಿತಿಯಲ್ಲಿ ನೀಡಲು ನೋವಾವ್ಯಾಕ್ಸ್ ಲಸಿಕೆಗೆ ಅನುಮತಿ

|

ಕೊರೊನಾದ ಆತಂಕ ಮರೆಯಾಯ್ತೇ, ಇಲ್ಲವೇ ಎಂದು ಹೇಳಲು ವಿಜ್ಞಾನಿಗಳಿಗೆ ಸಾಧ್ಯವಾಗ್ತಿಲ್ಲ, ಮುಂಬರುವ ದಿನಗಳಲ್ಲಿಯೂ ಕೊರೊನಾ ಬರಬಹುದು ಎಂದು ಎಚ್ಚರಿಸಿದ್ದಾರೆ, ಒಂದು ಮಾಹಿತಿ ಪ್ರಕಾರ ಕೊರೊನಾ ಸೀಸನಲ್‌ ಕಾಯಿಲೆ ರೀತಿ ಬರುತ್ತಾ ಇರಬಹುದು.

Novavax COVID Vaccine

ಆದ್ದರಿಂದ ಕೊರೊನಾ ತಡೆಗಟ್ಟಲು ಭಾರತ ದೇಶ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿದೆ. ಈಗಾಗಲೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಡ್ರಗ್ಸ್‌ ಕಂಟ್ರೋಲರ್‌ ಜನರೆಲ್ ಆಫ್‌ ಇಂಡಿಯಾ 12-18 ವರ್ಷದವರಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೋವಾವ್ಯಾಕ್ಸ್ ಕೋವಿಡ್‌ 19 ಲಸಿಕೆ ನೀಡಲು ಅನುಮತಿ ನೀಡಿದೆ.

ನೋವಾವ್ಯಾಕ್ಸ್ ಲಸಿಕೆಯನ್ನು NVX-CoV2373 ಎಂದು ಕರೆಯಲಾಗುವುದು. ಇದನ್ನು ಸೆರಮ್‌ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿದ್ದು ಕೋವಾವ್ಯಾಕ್ಸ್‌ ಎಂಬ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಲಸಿಕೆ ಸುರಕ್ಷಿತವಾಗಿದೆ ಎಂದು ಸಾಬೀತಾಗಿದ್ದು ಇದು ಪ್ರೊಟೀನ್‌ ಆಧಾರಿತ ಕೋವಿಡ್‌ 19 ಲಸಿಕೆಯಾಗಿದೆ.

ಇದಕ್ಕಿಂತ ಮೊದಲು ಹದಿಹರೆಯದ ಮಕ್ಕಳಿಗೆ ನೀಡಲು DCGI ಕೋವಾವ್ಯಾಕ್ಸ್‌ಗೆ ಅನುಮತಿ ನೀಡಿತ್ತು. ಇದೀಗ ಅದರ ಜೊತೆ ಮತ್ತೊಂದು ಲಸಿಕೆಗೆ ಕೂಡ ಅನುಮತಿ ಸಿಕ್ಕಿರುವುದು ಹದಿ ಹರೆಯದ ಮಕ್ಕಳಿಗೆ ಕೋವಿಡ್‌ 19ನಿಂದ ಮತ್ತಷ್ಟು ಸುರಕ್ಷತೆ ನೀಡಿದೆ.

English summary

Novavax COVID Vaccine Gets Emergency Use Authorisation For 12-18 Age Group In India; Know details

Novavax COVID Vaccine Gets Emergency Use Authorisation For 12-18 Age Group In India; Know details, read on...
Story first published: Friday, March 25, 2022, 9:10 [IST]
X
Desktop Bottom Promotion