For Quick Alerts
ALLOW NOTIFICATIONS  
For Daily Alerts

ಆನ್‌ಲೈನ್ ಕ್ಲಾಸ್‌: ಮಕ್ಕಳು ಅತಿಯಾಗಿ ಟೆಕ್ ಬಳಸುವುದು ತಪ್ಪಿಸುವುದು ಹೇಗೆ?

|

ಕೋವಿಡ್‌ 19 ಇಡೀ ಜಗತ್ತಿನ ಕಾರ್ಯವೈಖರಿ ಹಾಗೂ ಜನರ ಜೀವನಶೈಲಿಯನ್ನೇ ಬದಲಾಯಿಸಿದೆ. ದಿನಾ ಬೆಳಗ್ಗೆ ಆಫೀಸ್‌ ಎಂದು ಎದ್ದೂ ಬಿದ್ದು ಓಡುತ್ತಿದ್ದವರಿಗೆ ವರ್ಕ್‌ ಫ್ರಂ ಹೋಂ ಸಿಕ್ಕಿದೆ. ಮಕ್ಕಳಿಗೆ ಮೊಬೈಲ್‌ ಮುಟ್ಟ ಬೇಡ, ಲ್ಯಾಪ್‌ಟಾಪ್‌ ಮುಟ್ಟಬೇಡ ಗದರುತ್ತಿದ್ದ ಪೋಷಕರೇ ಸ್ವತಃ ತಾವೇ ಮಕ್ಕಳಿಗೆ ಕ್ಲಾಸ್ ಇದೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಂದೆ ಕೂರು ಎಂದು ಹೇಳುವ ಪರಿಸ್ಥಿತಿ ಉಂಟಾಗಿದೆ.

ಆನ್‌ಲೈನ್‌ ಮೂಲಕ ತರಗತಿಗಳು ನಡೆಯುತ್ತಿವೆ. ಈ ಕಾರಣಕ್ಕಾಗಿ ಮೊದಲೇ ಮೊಬೈಲ್ ಎಂದರೆ ತುಂಬಾ ಇಷ್ಟಪಡುವ ಮಕ್ಕಳಿಗೆ ರೋಗಿ ಬಯಸಿದ್ದು ಹಾಲನ್ನೇ.. ವೈದ್ಯ ಹೇಳಿದ್ದು ಹಾಲನ್ನೇ ಎಂಬಂತೆ, ಮಕ್ಕಳು ಬಯಸುವುದು ಮೊಬೈಲ್‌ಯನ್ನೇ, ಈಗ ಪೋಷಕರು ನೀಡುತ್ತಿರುವುದು ಮೊಬೈಲ್‌ಯನ್ನೇ ಎಂಬಂತಾಗಿದೆ.

ಮಕ್ಕಳು 6 ಗಂಟೆಗೂ ಅಧಿಕ ತಾಸು ಸ್ಕ್ರೀನ್‌ ಮುಂದೆ ಕಳೆಯುತ್ತಿದ್ದಾರೆ. ಪೋಷಕರಿಗೆ ಅಯ್ಯೋ ಅಷ್ಟು ಹೊತ್ತು ಮೊಬೈಲ್‌ ನೋಡುವುದರಿಂದ ಮಕ್ಕಳ ಕಣ್ಣು ಏನಾಗುತ್ತದೆ? ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೇ ಎಂಬ ಆತಂಕ ಕಾಡುತ್ತಿರುವುದು ಸಹಜ.

ನಾವು ಮಕ್ಕಳು ಸ್ಕ್ರೀನ್ ಮುಂದೆ ಹೆಚ್ಚು ಕಳೆಯುವುದನ್ನು ತಡೆಗಟ್ಟಲು ಪರಿಣಿತರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ಅದರ ಸಾರಂಶ ಇಲ್ಲಿ ನೀಡಿದ್ದೇವೆ ನೋಡಿ:

ಮಕ್ಕಳು ಆನ್‌ಲೈನ್‌ನಲ್ಲಿರುವಾಗ ಪೋಷಕರು ಏನು ಮಾಡಬೇಕು?

ಮಕ್ಕಳು ಆನ್‌ಲೈನ್‌ನಲ್ಲಿರುವಾಗ ಪೋಷಕರು ಏನು ಮಾಡಬೇಕು?

ಮಕ್ಕಳು ಆನ್‌ಲೈನ್‌ ಕ್ಲಾಸ್‌ನಲ್ಲಿರುವಾಗ ಅವರಿಗೆ ಬೇಕಾದ ಸಹಾಯ ಮಾಡಿ, ನಂತರ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಬೇಕು. ಆಗ ಮಕ್ಕಳ ಕ್ಲಾಸ್‌ ಮುಗಿದ ಬಳಿಕ ಅವರೊಡನೆ ಆಟ ಆಡಬಹುದು. ಇದರಿಂದ ಮಕ್ಕಳು ಕ್ಲಾಸ್ ಮುಗಿದ ಬಳಿಕ ಪುನಃ ಮೊಬೈಲ್ ನೋಡುತ್ತಾ ಅಥವಾ ಟಿವಿ ನೋಡುತ್ತಾ ಕಳೆಯುವುದನ್ನು ತಪ್ಪಿಸಬಹುದು. ಇದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು.

ಪೋಷಕರೇ ನಿಮ್ಮ ಯೋಚನೆಯನ್ನು ಬದಲಾಯಿಸಿ

ಪೋಷಕರೇ ನಿಮ್ಮ ಯೋಚನೆಯನ್ನು ಬದಲಾಯಿಸಿ

ಮಕ್ಕಳ ಸ್ಕ್ರೀನ್ ಟೈಮ್ ಬಗ್ಗೆ ನೀವು ಯೋಚಿಸುವ ರೀತಿಯನ್ನು ಬದಲಾಯಿಸಬೇಕು. ಇಷ್ಟು ಹೊತ್ತಿಗೆ ಮಾತ್ರ ಮೊಬೈಲ್ ಮುಟ್ಟಬೇಕು, ಕ್ಲಾಸ್‌ ಮುಗಿದ ತಕ್ಷಣ ಮೊಬೈಲ್ ದೂರವಿಡಬೇಕು ಎಂಬ ರೂಲ್ಸ್ ಮಾಡಲು ಹೋದರೆ ಅದರಿಂದ ಮಕ್ಕಳಿಗೆ ಸಿಟ್ಟು, ಹಠ ಮತ್ತಷ್ಟು ಅಧಿಕವಾಗುವುದೇ ಹೊರತು ಮತ್ತೇನು ಪ್ರಯೋಜನ ಉಂಟಾಗುವುದಿಲ್ಲ. ಬದಲಿಗೆ ಪೋಷಕರೇ ನೀವು ಬದಲಾಗಬೇಕಾಗಿದೆ.

ಮಕ್ಕಳೊಂದಿಗೆ ಮೊಬೈಲ್‌ ಅಥವಾ ಟ್ಯಾಪ್‌ಟಾಪ್ ಬಳಕೆ ಬಗ್ಗೆ ಚರ್ಚಿಸಿ ಆಗ ಈ ತಂತ್ರಜ್ಞಾನವನ್ನು ಮತ್ತಷ್ಟು ಆರೋಗ್ಯಕರವಾಗಿ ಬಳಸುವುದು ಹೇಗೆ ಎಂಬ ಐಡಿಯಾ ನಿಮಗೂ, ಮಕ್ಕಳಿಗೂ ತಿಳಿಯುತ್ತದೆ. ಅವರಿಗೂ ಇದನ್ನು ತುಂಬಾ ಹಿಡಿದುಕೊಂಡು ಕೂರುವ ಬದಲು ಬೇರೆ ಆಟ ಆಡೋಣ ಎಂಬ ಮನಸ್ಸಾಗುವುದು, ಆಗ ನಿಮ್ಮ ಮಾತುಗಳನ್ನು ಕೇಳುವರು.

ಹೊಸ ಆ್ಯಪ್ ಕುರಿತು ಕಲಿಯಲು, ಗೇಮ್ ಕಲಿಯಲು ಬಿಡಿ

ಹೊಸ ಆ್ಯಪ್ ಕುರಿತು ಕಲಿಯಲು, ಗೇಮ್ ಕಲಿಯಲು ಬಿಡಿ

ಬರೀ ಪಠ್ಯಕ್ಕೆ ಮಾತ್ರ ಮೊಬೈಲ್ ಬಳಸು, ಅದರಲ್ಲಿ ಬೇರೇನೂ ನೋಡಬೇಡ ಎಂದೆಲ್ಲಾ ಹೇಳುತ್ತಾ ಇರಬೇಡಿ, ಇದರಿಂದ ಅವರಿಗೆ ಕಿರಿಕಿರ ಆಗುವುದು. ತಂತ್ರಜ್ಞಾನದಲ್ಲಿ ಕಲಿಯಲು ಅನೇಕ ಒಳ್ಳೆಯ ವಿಷಯಗಳಿರುತ್ತದೆ. ಅದನ್ನು ಕಲಿಯುವಂತೆ ಹುರಿದುಂಬಿಸಿ. ಅದೇ ಸಮಯದಲ್ಲಿ ಅವರು ಮೊಬೈಲ್‌ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುವುದರ ಕುರಿತು ಕೂಡ ಕಣ್ಣಿಟ್ಟರಬೇಕು.

ಮಕ್ಕಳು ತಮ್ಮ ಅನುಭವಗಳನ್ನು ಹೇಳುವಾಗ ತಾಳ್ಮೆಯಿಂದ ಕೇಳಿ

ಮಕ್ಕಳು ತಮ್ಮ ಅನುಭವಗಳನ್ನು ಹೇಳುವಾಗ ತಾಳ್ಮೆಯಿಂದ ಕೇಳಿ

ನಿಮಗೆ ಎಷ್ಟೇ ಕೆಲಸದ ಒತ್ತಡವಿರಲಿ ಅವರು ಅವರ ಪಠ್ಯಕ್ಕೆ ಸಂಬಂಧಿಸಿದ ಅಥವಾ ಹೊಸ ವಿಷಯಗಳಿಗೆ ಸಂಬಂಧಿಸಿದ ಏನಾದರೂ ವಿಷಯಗಳನ್ನು ಹೇಳುವಾಗ ತಾಳ್ಮೆಯಿಂದ ಕೇಳಿ, ಆಗ ಅವರಿಗೆ ಹೊಸತನ್ನು ಕಲಿಯುವ ಹುರುಪು ಮತ್ತಷ್ಟು ಅಧಿಕವಾಗುವುದು.

English summary

Experts Reveal Their Best Tips for Managing Kids Tech Use in Kannada

Online class for kids, here are best tips for managing kids tech use,read on...
X
Desktop Bottom Promotion