For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕೋವಿಡ್ 19 ಲಸಿಕೆ: ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಕೇಳುತ್ತಿರುವ ಈ 10 ಪ್ರಮುಖ ಪ್ರಶ್ನೆಗಳಿವು

|

ಭಾರತದಲ್ಲಿ ಕೊರೊನಾ ವೈರಸ್‌ ಕೇಸ್‌ಗಳು ಹೆಚ್ಚಾಗುತ್ತಿವೆ. ಭಾರತದಲ್ಲಿ ನಾಲ್ಕನೇ ಅಲೆ ಶುರುವಾಗಿಲ್ಲ ಎಂದು ICMR ಹೇಳಿದೆ. ಆದರೆ ICMR ಈ ಹೇಳಿಕೆ ನೀಡುವಾಗ ಯಾವುದೇ ಹೊಸ ರೂಪಾಂತರ ಭಾರತದಲ್ಲಿ ಪತ್ತೆಯಾಗಿರಲಿಲ್ಲ. ಇದೀಗ ಒಂದು XE ರೂಪಾಂತರ ಪತ್ತೆಯಾಗಿದೆ. ಇದು ತುಂಬಾ ವೇಗವಾಗಿ ಹರಡುವ ರೂಪಾಂತರವಾಗಿದೆ. ಇತರ ರೂಪಾಂತರಕ್ಕೆ ಹೋಲಿಸಿದರೆ ಇದು ಶೇ. 90ರಷ್ಟು ವೇಗದಲ್ಲಿ ಹರಡುವುದು ಎಂದು ತಜ್ಞರು ಹೇಳುತ್ತಿದ್ದಾರೆ.

ಇದೀಗ ಮೇ ತಿಂಗಳು ಇನ್ನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಶಾಲೆ ಶುರುವಾಗಲಿದೆ. ಈ ಬಾರಿ ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾವೈರಸ್‌ ಕಂಡು ಬರುತ್ತಿರುವುದರಿಂದ ಪೋಷಕರಿಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿದೆ. ಇದೀಗ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಿರುವುದರಿಂದ ಪೋಷಕರು ಲಸಿಕೆ ಹಾಕಲು ಬಯಸುತ್ತಿದ್ದಾರೆ. ಆದರೆ ಲಸಿಕೆ ಕುರಿತು ಹಲವಾರು ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ತಜ್ಞರ ಅಭಿಪ್ರಾಯ ಆಧಾರಿಸಿ ಉತ್ತರ ನೀಡಲಾಗಿದೆ ನೋಡಿ:

1. ಮಕ್ಕಳಿಗೆ ಯಾವ ಕೋವಿಡ್ 19 ಲಸಿಕೆ ನೀಡಲಾಗುವುದು?

1. ಮಕ್ಕಳಿಗೆ ಯಾವ ಕೋವಿಡ್ 19 ಲಸಿಕೆ ನೀಡಲಾಗುವುದು?

ಡಿಸಿಜಿಐ (The Drugs Controller General of India) ತುರ್ತು ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಿದ್ದು

* 5-12 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ (Corbevax)

* 6-12 ವರ್ಷದ ಮಕ್ಕಳಿಗೆ ನೀಡಲು ಕೊವಾಕ್ಸಿನ್‌ (ತುರ್ತು ಪರಿಸ್ಥಿತಿಯಲ್ಲಿ ನೀಡಲು)

* 12-14 ವರ್ಷದ ಮಕ್ಕಳಿಗೆ ನೀಡಲು ಈಗ ಜೈಡಸ್‌ಗ ಅನುಮತಿ ನೀಡಲಾಗಿದ್ದು ಎರಡು ಡೋಸ್‌ಗಳಂತೆ ನೀಡಲಾಗುವುದು.

* 12-17 ವರ್ಷದ ಮಕ್ಕಳಿಗೆ ನೀಡಲು ಕೋವಾವ್ಯಾಕ್ಸ್‌ ಲಸಿಕೆಗೆ ಅನುಮತಿ ಸಿಕ್ಕಿದೆ.

ಕೊವಾಕ್ಸಿನ್‌ ಲಸಿಕೆಯನ್ನು ICMR ಮತ್ತು ಭಾರತ್ ಬಯೋಟೆಕ್‌ ಸೇರಿ ತಯಾರಿಸಿದೆ.

ಕೋರ್ಬೆವ್ಯಾಕ್ಸ್‌ ಲಸಿಕೆಯನ್ನು ಹೈದರಾಬಾದ್‌ ಮೂಲದ ಬಯೋಲಾಜಿಕಲ್‌ ಇ ಫರ್ಮ್‌ ಟೆಕ್ಸಾಸ್‌ನ Children's Hospital Centre for Vaccine Development ಮತ್ತು ಹೂಸ್ಟನ್‌ನಲ್ಲಿರುವ Baylor College of Medicine ಜೊತೆ ಸೇರಿ ತಯಾರಿಸಿದೆ.

ಕ್ಯಾಡಿಲಾ ಹೆಲ್ತ್‌ಕೇರ್‌ ಜೈಕೋ ವಿ ಡಿ (ZyCoV-D) ಲಸಿಕೆ ತಯಾರಿಸಿದೆ.

ಯುಎಸ್‌ಎದ ನೋವಾವ್ಯಾಕ್ಸ್‌ ಜೊತೆ ಸೇರಿ ಸೆರಮ್‌ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ ಕೋವಾವ್ಯಾಕ್ಸ್‌ ತಯಾರಿಸಿದೆ.

2. ಮಕ್ಕಳಿಗೆ ಕರೊನಾ ಲಸಿಕೆ ನೀಡುವುದು ಎಷ್ಟು ಸುರಕ್ಷಿತ?

2. ಮಕ್ಕಳಿಗೆ ಕರೊನಾ ಲಸಿಕೆ ನೀಡುವುದು ಎಷ್ಟು ಸುರಕ್ಷಿತ?

ಮಕ್ಕಳಿಗೆ ನೀಡಲಾಗುತ್ತಿರುವ ಎಲ್ಲಾ ಲಸಿಕೆಗಳು ಸುರಕ್ಷಿತವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಜೀವಕ್ಕೆ ಅಪಾಯಕಾರಿಯಾದ ಅಡ್ಡಪರಿಣಾಮಗಳಿಲ್ಲ, ಅಲ್ಲದೆ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕೆಗಳು ಏನಾದರು ಅಡ್ಡಪರಿಣಾಮ ಬೀರುತ್ತಿದೆಯೇ ಎಂಬುವುದರ ಬಗ್ಗೆ ಕೂಲಂಕಷವಾಗಿ ಗಮನಿಸಲಾಗುತ್ತಿದೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಯಾರ ಮೇಲೂ ಒತ್ತಡ ಬೀರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಮಕ್ಕಳಿಗೆ ಲಸಿಕೆ ನೀಡುವಾಗ ತಜ್ಞರಲ್ಲಿ ಎರಡನೇ ಅಭಿಪ್ರಾಯ ಇರಬಾರದು, ಲಸಿಕೆ ಜಾಗತಿಕ ಮಾನದಂಡವನ್ನು ಹೊಂದಿರಬೇಕು, ಇದರ ಅಡ್ಡಪರಿಣಾಮಗಳ ಕುರಿತು ಆದಷ್ಟು ಬೇಗ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

3. ಮಕ್ಕಳ ಮೇಲೆ ಈ ಲಸಿಕೆಗಳು ಎಷ್ಟು ಪರಿಣಾಮಕಾರಿ?

3. ಮಕ್ಕಳ ಮೇಲೆ ಈ ಲಸಿಕೆಗಳು ಎಷ್ಟು ಪರಿಣಾಮಕಾರಿ?

ಕೋವಾವ್ಯಾಕ್ಸ್‌ ಕೊರೊನಾವೈರಸ್ ವಿರುದ್ಧ ಶೇ. 78ರಷ್ಟು ಹೋರಾಡುತ್ತದೆ, ಮಕ್ಕಳಲ್ಲಿ ಕೊರೊನಾ ವಿರುದ್ಧ ಆ್ಯಂಟಿಬಾಡಿ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ.

ಕೋರ್ಬೇವ್ಯಾಕ್ಸ್‌ ಟ್ರಯಲ್‌ನಲ್ಲಿ ಕೊರೊನಾವೈರಸ್‌ ರೋಗ ಲಕ್ಷಣ ತಡೆಗಟ್ಟಲು ಶೇ. 90ರಷ್ಟು ಪರಿಣಾಮಕಾರಿಯಾಗಿದೆ. ZyCoV- D ಶೇ. 67ರಷ್ಟು ಕೊರೊನಾವೈರಸ್‌ ತಡೆಗಟ್ಟುತ್ತೆ ಹಾಗೂ ರೋಗ ಸ್ಥಿತಿ ಗಂಭೀರವಾಗುವುದನ್ನು ಶೇ. 100ರಷ್ಟು ತಡೆಗಟ್ಟುತ್ತೆ. ಕೋವಾವ್ಯಾಕ್ಸ್‌ ಕೊರೊನಾವೈರಸ್‌ ತೆಗಟ್ಟಲು ಶೇ.90ರಷ್ಟು ಪರಿಣಾಮಕಾರಿಯಾಗಿದೆ ಎಂದು 3 ಹಂತದಲ್ಲಿ ನಡೆದ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಸಾಬೀತಾಗಿದೆ.

4. 2-18 ವರ್ಷದ ಮಕ್ಕಳಲ್ಲಿ ಕೊರೊನಾ ಲಸಿಕೆ ಬೀರುವ

4. 2-18 ವರ್ಷದ ಮಕ್ಕಳಲ್ಲಿ ಕೊರೊನಾ ಲಸಿಕೆ ಬೀರುವ

ಅಡ್ಡಪರಿಣಾಮಗಳೇನು?

ಕೊರೊನಾ ಲಸಿಕೆ ದೊಡ್ಡ ಅಡ್ಡಪರಿಣಾಮವೇನೂ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಕೊರೊನಾ ಲಸಿಕೆ ತೆಗೆದುಕೊಂಡಾಗ ಈ ಸಾಧಾರಣ ಅಡ್ಡಪರಿಣಾಮಗಳು ಕಂಡು ರಬರುವ ಸಾಧ್ಯತೆ ಇದೆ

* ಮೈಕೈ ನೋವು

* ಲಸಿಕೆ ಚುಚ್ಚಿದ ಜಾಗದಲ್ಲಿ ಊತ

* ಜ್ವರ

5. ಮಕ್ಕಳಿಗೆ ಎಷ್ಟು ಡೋಸ್ ಲಸಿಕೆ ನೀಡಬೇಕು?

5. ಮಕ್ಕಳಿಗೆ ಎಷ್ಟು ಡೋಸ್ ಲಸಿಕೆ ನೀಡಬೇಕು?

ಮಕ್ಕಳಿಗೆ ನೀಡಲು ಅನುಮತಿ ಸಿಕ್ಕಿರುವ ಎಲ್ಲಾ ಲಸಿಕೆಗಳನ್ನು ಎರಡು ಡೋಸ್‌ಗಳಂತೆ ನೀಡಲಾಗುವುದು. ಕೊವಾಕ್ಸಿನ್‌, ಕೋರ್ಬೆವ್ಯಾಕ್ಸ್, ZyCoV-D ಲಸಿಕೆಯನ್ನು ಮೊದಲ ಲಸಿಕೆ ಪಡೆದು 28 ದಿನಗಳ ಅಂತರದಲ್ಲಿ ನೀಡಲಾಗುವುದು. ಕೋವಾವ್ಯಾಕ್ಸ್ ಲಸಿಕೆಯ ಎರಡನೇ ಡೋಸ್ ಅನ್ನು 21 ದಿನಗಳ ಅಂತರದಲ್ಲಿ ಪಡೆಯಬಹುದು.

6. ಮಕ್ಕಳಲ್ಲಿ ಕೋವಿಡ್‌ 19 ತಗುಲಿದರೂ ಹೆಚ್ಚಿನವರಲ್ಲಿ ಅದರ

6. ಮಕ್ಕಳಲ್ಲಿ ಕೋವಿಡ್‌ 19 ತಗುಲಿದರೂ ಹೆಚ್ಚಿನವರಲ್ಲಿ ಅದರ

ಲಕ್ಷಣಗಳಿರುವುದಿಲ್ಲ, ಆದ್ದರಿಂದ ಮಕ್ಕಳಿಗೆ ಕೊರೊನಾ ಲಸಿಕೆಯ ಅವಶ್ಯಕತೆಯೇನು?

ಕೋವಿಡ್ 19 ಲಸಿಕೆ ಪಡೆಯುವ ಮೂಲಕ ನಿಮ್ಮ ಮಗುವಿಗೆ ಬೇರೆ ಮಕ್ಕಳಿಂದ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಅಲ್ಲದೆ ಮಕ್ಕಳ ಮೂಲಕ ಮನೆಯಲ್ಲಿ ವಯಸ್ಸಾದವರು, ರೊಗ ನಿರೊಧಕ ಶಕ್ತಿ ಕಡಿಮೆ ಇರುವವರಿಗೆ ಹರಡುವುದನ್ನು ತಡೆಗಟ್ಟಬಹುದು.

7. ಎಲ್ಲಾ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆಯೇ?

7. ಎಲ್ಲಾ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆಯೇ?

5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಿದೆ. ಆದರೆ ಕೊಡೊಸಬೇಕೆ, ಬೇಡ್ವೆ ಎಂಬುವುದು ಪೋಷಕರ ನಿರ್ಧಾರಕ್ಕೆ ಬಿಟ್ಟದ್ದು, ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವೇ ಇದೆ.

8. ಮಗುವಿಗೆ ಕೊರೊನಾ ಸೋಂಕು ತಗುಲಿದಾಗ ಲಸಿಕೆ ಕೊಡಿಸಬಹುದೇ?

8. ಮಗುವಿಗೆ ಕೊರೊನಾ ಸೋಂಕು ತಗುಲಿದಾಗ ಲಸಿಕೆ ಕೊಡಿಸಬಹುದೇ?

ಇಲ್ಲ, ಕೊರೊನಾ ಸೋಂಕು ತಗುಲಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದಿಲ್ಲ.

9. ಕೊರೊನಾ ಲಸಿಕೆ ಪಡೆದ ಬಳಿಕ ಇತರ ಲಸಿಕೆ ಯಾವಾಗ ಪಡೆಯಬಹುದು?

9. ಕೊರೊನಾ ಲಸಿಕೆ ಪಡೆದ ಬಳಿಕ ಇತರ ಲಸಿಕೆ ಯಾವಾಗ ಪಡೆಯಬಹುದು?

ನಿಮ್ಮ ಮಗುವಿನ ವಯಸ್ಸಿಗೆ ಅನುಸಾರ ನೀವು ಲಸಿಕೆ ಪಡೆಯಬಹುದು, ಅದಕ್ಕೂ ಕೊರೊನಾ ಲಸಿಕೆ ಪಡೆದಿರುವುದಕ್ಕೂ ಸಂಬಂಧವಿಲ್ಲ.

10. ಯಾವಾಗ ಮಕ್ಕಳು ಸಂಪೂರ್ಣ ಲಸಿಕೆ ಪಡೆದಂತಾಗುವುದು?

10. ಯಾವಾಗ ಮಕ್ಕಳು ಸಂಪೂರ್ಣ ಲಸಿಕೆ ಪಡೆದಂತಾಗುವುದು?

ಮಕ್ಕಳು ಎರಡು ಡೋಸ್‌ ಲಸಿಕೆ ಪಡೆದ ಬಳಿಕವಷ್ಟೇ ಸಂಪೂರ್ಣ ಕೊರೊನಾ ಲಸಿಕೆ ಪಡೆದಂತಾಗುವುದು.

English summary

Covid-19 vaccines for kids: Expert Answered For Parents Questions in Kannada

Covid-19 vaccines for kids: Expert Answered For Parents Questions in Kannada, read on....
X
Desktop Bottom Promotion