For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳು ಸ್ವತಂತ್ರರಾಗಿ ಬೆಳೆಯಲು ಪೋಷಕರು ಈ ಸಲಹೆಗಳನ್ನು ಪಾಲಿಸಿ

|

ಎಲ್ಲ ಮಕ್ಕಳು ವಿಭಿನ್ನ ಹಾಗೂ ವಿಶಿಷ್ಟ, ಒಂದು ಮಗುವಿನಂತೆ ಮತ್ತೊಂದು ಇರಲು ಸಾಧ್ಯವಿಲ್ಲ. ವಿಭಿನ್ನವಾಗಿ ವರ್ತಿಸುತ್ತದೆ, ವಿಶಿಷ್ಟವಾಗಿ ಚಿಂತಿಸುತ್ತದೆ. ಪೋಷಕರು ತಮ್ಮ ಮಕ್ಕಳಲ್ಲಿನ ಗುಣ, ವರ್ತನೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಮುಖ್ಯವಾಗುತ್ತದೆ.

ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆಯೋ ಅವರು ಹಾಗೆಯೇ ಬೆಳಯುತ್ತಾರೆ. ಚಿಕ್ಕ ಮಕ್ಕಳಲ್ಲಿ ಸರಿಯಾದ ದಾರಿಯಲ್ಲಿ ನಡೆಸದೇ, ಬುದ್ಧಿ ಕಲಿಸದೇ ಇಷ್ಟಬಂದಂತೆ ಬೆಳೆಸಿದರೆ ಭವಿಷ್ಯದಲ್ಲಿ ಇದು ಅವರ ಮೇಲೆ ಪರಿಣಾಮ ಬೀರುತ್ತದೆ. ಹಾಗೆಂದ ಮಾತ್ರಕ್ಕೆ ಬಹಳ ಕಟ್ಟುನಿಟ್ಟಿನಿಂದ, ಸಾಕಷ್ಟು ನಿಯಮಗಳನ್ನು ಮಕ್ಕಳ ಮೇಲೆ ಹೇರಿ ಬೆಳೆಸುವುದು ಸಹ ಪೋಷಕರು ಮಾಡುವ ತಪ್ಪುಗಳಲ್ಲಿ ಒಂದು.

ಹಾಗಿದ್ದರೆ ಮಕ್ಕಳನ್ನು ಬೆಳೆಸುವ ಸರಿಯಾದ ಕ್ರಮ ಯಾವುದು, ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮವಾದ ಪ್ರಜೆಯಾಗಲು ಪೋಷಕರು ಮಕ್ಕಳನ್ನು ಮಾದರಿಯಾಗಿ ಹೇಗೆ ಬೆಳೆಸಬೇಕು ನಾವಿಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ:

1. ಪ್ರೀತಿ ಮಿತವಾಗಿಲಿ ಗಾಢ ಪ್ರೀತಿ ಮನಸ್ಸಿನಲ್ಲಿ ಮಾತ್ರ ಇರಲಿ

1. ಪ್ರೀತಿ ಮಿತವಾಗಿಲಿ ಗಾಢ ಪ್ರೀತಿ ಮನಸ್ಸಿನಲ್ಲಿ ಮಾತ್ರ ಇರಲಿ

ಪ್ರತಿಯೊಬ್ಬ ಪೋಷಕರು ತಮ್ಮ ಮಗುವನ್ನು ಪ್ರೀತಿಸುತ್ತಾರೆ ಮತ್ತು ಆರಾಧಿಸುತ್ತಾರೆ, ಆದರೆ ನೀವು ನಿಮ್ಮ ಪ್ರೀತಿಯನ್ನು ಒಂದು ಗಡಿಯಲ್ಲಿ ಮಾತ್ರ ಇಡಬೇಕು. ನಿಮ್ಮ ಮಗುವಿನ ಬಗ್ಗೆ ನೀವು ಹೊಂದಿರುವ ಪ್ರೀತಿಗೆ ಯಾವುದೇ ಮಿತಿಯಿಲ್ಲ ಎಂಬುದುಗೊತ್ತು ಆದರೆ, ಈ ಗಾಢ ಪ್ರಿತಿ ಮನಸ್ಸಿನಲ್ಲಿರಲಿ. ಮಗುವಿನ ಮುಂದೆ ತೋರ್ಪಡಿಸುವುದು ಅವರನ್ನು ನಿಮ್ಮ ಅಗಾಧ ಪ್ರೀತಿಯ ಮುಳುಗಿಸುವುದರಿಂದ, ಪ್ರೀತಿಯ ಹೆಸರಿನಲ್ಲಿ ಇತರ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳಲು ಆರಂಭಿಸಬಹುದು.

2. ನೀವು ಏನು ಮಾಡುತ್ತೀರಿ ಎಂಬುದು ಮುಖ್ಯ

2. ನೀವು ಏನು ಮಾಡುತ್ತೀರಿ ಎಂಬುದು ಮುಖ್ಯ

ಮಕ್ಕಳು ದೊಡ್ಡವರಿಂದ ಕಲಿಯುತ್ತಾರೆ. ಅವರು ನಿಮ್ಮ ಪ್ರತಿಯೊಂದು ನಡೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಾರೆ. ನೀವು ಮಾತನಾಡುವ ರೀತಿ, ವರ್ತಿಸುವ ರೀತಿ, ಇತರರೊಂದಿಗೆ ವರ್ತಿಸುವ ರೀತಿ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ನೀವು ವರ್ತಿಸುವ ರೀತಿ. ನಿಮ್ಮ ಮಗು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ನೀವು ಬಯಸಿದರೆ, ಮೊದಲು ನೀವು ನಿಮ್ಮಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಿಮ್ಮ ನಿರ್ಧಾರವು ನಿಮ್ಮ ಮಗುವಿನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಯಾವಾಗಲೂ ನಿಮ್ಮ ಮನಸ್ಸಿನಲ್ಲಿರಲಿ.

3. ಮಗುವಿಗೆ ಅದ್ಯತೆಯ ಸಮಯ ನೀಡಿ

3. ಮಗುವಿಗೆ ಅದ್ಯತೆಯ ಸಮಯ ನೀಡಿ

ಕಚೇರಿ ಕೆಲಸ ಜತೆಗೆ ಮನೆಯನ್ನು ನಿರ್ವಹಿಸುವುದು ನಿಮಗೆ ಕಷ್ಟವಾಗಬಹುದು, ಅದರ ನಡುವೆ ಮಗುವಿಗೆ ಸಮಯ ನೀಡುವುದು ಇನ್ನು ಕಷ್ಟವೇ ಅರ್ಥವಾಗುತ್ತದೆ. ಆದರೆ ಈ ಎಲ್ಲ ಒತ್ತಡಗಳು ನಿಮ್ಮ ಮತ್ತು ಮಗುವಿನ ನಡುವೆ ಬರಬಾರದು. ನಿಮ್ಮ ಆದ್ಯತೆಗಳನ್ನು ಪ್ರಧಾನ್ಯವಾಗಿಸಿಕೊಳ್ಳಿ, ನಿಮ್ಮ ಮಗುವಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಲಭ್ಯವಿರಿ. ಒಟ್ಟಾರೆ ನಾವು ಮಾಡುವ ಕೆಲಸ ಆಗಲಿ, ಏನೇ ಆದರೂ ಅಂತಿಮವಾಗಿ ನಮ್ಮ ಮಗುವಿಗಾಗಿಯೇ, ಅವರಿಗೇ ನಮ್ಮ ಅಮೂಲ್ಯ ಸಮಯ ನೀಡಿಲ್ಲ ಎಂದಾದರೆ ನಿಮ್ಮ ಗಳಿಕೆ ಇಂದಾಗುವ ಲಾಭವಾದರೂ ಏನು?

4. ನಿಮ್ಮ ಮಗುವಿಗೆ ಸರಿಹೊಂದುವ ಪೋಷಣೆ ನಿಮ್ಮದಾಗಲಿ

4. ನಿಮ್ಮ ಮಗುವಿಗೆ ಸರಿಹೊಂದುವ ಪೋಷಣೆ ನಿಮ್ಮದಾಗಲಿ

ಮಕ್ಕಳನ್ನು ಬೆಳೆಸಲು ಯಾವುದೇ ರೀತಿಯ ಇಂಥದ್ದೇ ಆದ್ದಂಥ ನಿಯಮಗಳಿಲ್ಲ ಅಥವಾ ಸ್ಥಿರ ಮಾರ್ಗವಿಲ್ಲ. ನಿಮ್ಮ ಮಗುವಿನ ಅಗತ್ಯಗಳಿಗೆ ಸರಿಹೊಂದುವುದನ್ನು ನೀವು ಮಾಡಬೇಕಾಗುತ್ತದೆ, ಅವರಿಗೆ ಇಷ್ಟವಾದ ವಿಭಿನ್ನ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಕಿರಿಯ ಮಕ್ಕಳಿಗೆ ಹಿರಿಯರಂತೆ ಬೋಧನೆ ಅಥವಾ ತರಬೇತಿ ವಿಧಾನವನ್ನು ಪ್ರಯತ್ನಿಸಲು ಸಾಧ್ಯವಿಲ್ಲ. ನಿಮ್ಮ ಮಗುವಿಗೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಅದಕ್ಕೆ ತಕ್ಕಂತೆ ನಿಮ್ಮ ಪಾಲನೆಯ ಶೈಲಿಯನ್ನು ಅಳವಡಿಸಿಕೊಳ್ಳಿ.

5. ನಿಯಮಗಳನ್ನು ರೂಪಿಸಿ ತಿಳಿಹೇಳಿ

5. ನಿಯಮಗಳನ್ನು ರೂಪಿಸಿ ತಿಳಿಹೇಳಿ

ನಿಮ್ಮ ಮಗುವಿನಲ್ಲಿ ಉತ್ತಮ ನಡವಳಿಕೆಯನ್ನು ಹುಟ್ಟುಹಾಕಲು ಬಯಸಿದರೆ ಅದನ್ನು ಚಿಕ್ಕ ವಯಸ್ಸಿನಿಂದಲೇ ನಿಯಮಗಳನ್ನು ರೂಪಿಸಬೇಕು. ಯಾವುದು ಸ್ವೀಕಾರಾರ್ಹ ಮತ್ತು ಯಾವುದು ಅಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ಇದನ್ನು ಮಾಡಿದರೆ ಏಕೆ ತಪ್ಪು, ಇದನ್ನು ಏಕೆ ಮಾಡಬೇಕು ಎಂಬುದನ್ನು ನಿಮ್ಮ ಸ್ವೀಕರಿಸುವ ರೀತಿಯಲ್ಲಿಯೇ ಹೇಳಿ. ನಿಯಮಗಳನ್ನು ಉಲ್ಲಂಘಿಸುವುದರಿಂದ ಉಂಟಾಗುವ ಪರಿಣಾಮಗಳನ್ನು ಅವರಿಗೆ ತಿಳಿಸಿ ಮತ್ತು ಅವುಗಳ ಮೇಲೆ ದೃಢವಾಗಿರಿ. ಅವರು ಆರಂಭದಲ್ಲಿ ಸರಿಹೊಂದಿಸಲು ಕಷ್ಟವಾಗಬಹುದು, ಆದರೆ ಇದು ಅವರ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತದೆ.

6. ನಿಮ್ಮ ಮಗುವಿನ ಸ್ವಾತಂತ್ರ್ಯವನ್ನು ಪೋಷಿಸಿ

6. ನಿಮ್ಮ ಮಗುವಿನ ಸ್ವಾತಂತ್ರ್ಯವನ್ನು ಪೋಷಿಸಿ

ನಿಮ್ಮ ಮಗುವಿಗೆ ಸಮಸ್ಯೆ ಎದುರಾದಾಗ ಪ್ರತಿ ಬಾರಿಯೂ ನಿಮ್ಮ ಮಗುವಿನ ಸಮಸ್ಯೆಗಳನ್ನು ರಕ್ಷಿಸಲು ಮತ್ತು ಪರಿಹರಿಸಲು ನೀವು ಅಲ್ಲಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸ್ವಲ್ಪ ಸ್ವಾತಂತ್ರ್ಯವನ್ನು ನೀಡುವುದು ಮುಖ್ಯವಾಗುತ್ತದೆ. ಇದು ಅವರಿಗೆ ನಿರ್ದೇಶನದ ಪ್ರಜ್ಞೆಯನ್ನು ಬೆಳೆಸಲು ಮತ್ತು ಅವರ ಆತ್ಮವಿಶ್ವಾಸ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವರ ಜೀವನದ ಎಲ್ಲಾ ನಿರ್ಧಾರಗಳನ್ನು ನಿಯಂತ್ರಿಸುವುದು ಅವರನ್ನು ಬಂಡಾಯ ಅಥವಾ ಅವಿಧೇಯರನ್ನಾಗಿ ಮಾಡುತ್ತದೆ.

7. ಕಠಿಣ ಶಿಸ್ತನ್ನು ತಪ್ಪಿಸಿ

7. ಕಠಿಣ ಶಿಸ್ತನ್ನು ತಪ್ಪಿಸಿ

ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಮಗುವನ್ನು ಶಿಕ್ಷಿಸುವುದು ಮುಖ್ಯವಲ್ಲ ಬದಲಾಗಿ ಆ ತಪ್ಪನ್ನು ಮತ್ತೆ ಮಾಡದೇ ಇರುವಂತೆ ಮಾಡುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ಕೆಲವು ಸಂದರ್ಭಗಳಲ್ಲಿ ಶಿಕ್ಷೆ ನೀಡುವುದು ಅನಿವಾರ್ಯವಾದರೂ ನೀವು ಅದನ್ನು ಆಯ್ಕೆ ಮಾಡುವ ವಿಧಾನದ ಬಗ್ಗೆ ಜಾಗರೂಕರಾಗಿರಿ. ಶಿಕ್ಷೆ ಅವರು ಮಾಡಿದ ತಪ್ಪಿಗೆ ಅನುಗುಣವಾಗಿರಬೇಕು. ದೈಹಿಕ ಶಿಕ್ಷೆಯನ್ನು ಕಡ್ಡಾಯವಾಗಿ ತಪ್ಪಿಸಿ. ಆರೋಗ್ಯಕರ ಶಿಸ್ತು ತಂತ್ರಗಳನ್ನು ಆರಿಸಿಕೊಳ್ಳಿ.

8. ನಿಮ್ಮ ಮಗುವನ್ನು ಗೌರವದಿಂದ ನೋಡಿಕೊಳ್ಳಿ

8. ನಿಮ್ಮ ಮಗುವನ್ನು ಗೌರವದಿಂದ ನೋಡಿಕೊಳ್ಳಿ

ಹೆಚ್ಚಿನ ಪೋಷಕರು ಮಾಡುವ ಸಾಮಾನ್ಯ ತಪ್ಪು ಇದು. ನಿಮ್ಮ ಮಗು ನಿಮ್ಮನ್ನು ಮತ್ತು ನಿಮ್ಮ ನಿರ್ಧಾರಗಳನ್ನು ಗೌರವಿಸುತ್ತದೆ ಎಂದು ನೀವು ನಿರೀಕ್ಷಿಸಿದರೆ, ಮೊದಲು ನೀವು ಅವರ ನಿರ್ಧಾರವನ್ನು ಸಹ ಗೌರವಿಸಬೇಕು. ಇದು ದ್ವಿಮುಖ ಪ್ರಕ್ರಿಯೆ. ಗೌರವವನ್ನು ಕೋರಲು ಸಾಧ್ಯವಿಲ್ಲ, ಇದನ್ನು ಯಾವಾಗಲೂ ಗಳಿಸಲಾಗುತ್ತದೆ. ನೀವು ನಿಮ್ಮ ಮಗುವಿನೊಂದಿಗೆ ಸೌಜನ್ಯದಿಂದ ಮಾತನಾಡಿದರೆ ಮತ್ತು ಅವರನ್ನು ದಯೆಯಿಂದ ನೋಡಿದರೆ, ಅವರು ಅದೇ ರೀತಿ ಪ್ರತಿಕ್ರಿಯಿಸುವ ಸಾಧ್ಯತೆಯಿದೆ.

English summary

Basic Principles of Good Parenting in Kannada

Here we are discussing about Basic Principles of Good Parenting in Kannada. Read more.
Story first published: Wednesday, August 11, 2021, 15:51 [IST]
X
Desktop Bottom Promotion