For Quick Alerts
ALLOW NOTIFICATIONS  
For Daily Alerts

ಸ್ನಾನ ಮಾಡುವ ಸಮಯದಲ್ಲಿ ಮಗು ಹೆದರುವುದು ಏಕೆ?

|

ತಾಯಿಯ ಗರ್ಭದಲ್ಲಿ ಬೆಚ್ಚಗೆ ಬೆಳೆಯುತ್ತಿರುವ ಮಗು ಒಂದು ದಿನ ಹೊರಗಿನ ಪ್ರಪಂಚಕ್ಕೆ ಕಾಲಿಡುತ್ತದೆ. ತಾಯಿಯ ಗರ್ಭದಲ್ಲಿ ಇರುವ ವಾತಾವರಣ ಹಾಗೂ ಬೆಚ್ಚನೆಯ ಅನುಭವವು ದೂರವಾಗುತ್ತದೆ. ಹೊಸದಾದ ಗಾಳಿ, ಬೆಳಕುಗಳು ಮಗುವಿಗೆ ಭಯದ ಅನುಭವವನ್ನು ನೀಡುತ್ತದೆ. ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳು, ವಸ್ತುಗಳು, ವಾತಾವರಣ ಎಲ್ಲವೂ ಹೊಸತನವನ್ನು ಪರಿಚಯಿಸುತ್ತವೆ. ಜೊತೆಗೆ ಸಾಕಷ್ಟು ಭಯವನ್ನು ಮೂಡಿಸುತ್ತವೆ. ಮಗುವಿನ ಬೆಳವಣಿಗೆ ಮುಂದುವರಿದಂತೆ ನಿಧಾನವಾಗಿ ಭಯವು ಕಡಿಮೆಯಾಗುತ್ತಾ ಹೋಗುತ್ತದೆ.

Baby Afraid During Bath Time

ಮಕ್ಕಳ ಬೆಳವಣಿಗೆ ಹಾಗೂ ಅವರ ಆರೈಕೆಯ ಬಗ್ಗೆ ಹೆಚ್ಚು ಗಮನ ಹಾಗೂ ಕಾಳಜಿ ನಮಗಿರಬೇಕು. ಕೇವಲ ಬಿಳಿ ಹಾಳೆಯಂತಿರುವ ಮಕ್ಕಳ ಮನಸ್ಸಿನಲ್ಲಿ ನಾವು ಬೆಳೆಸುವ ರೀತಿ ಹಾಗೂ ಮಾತುಗಳು ಪ್ರಭಾವ ಬೀರುತ್ತಾ ಹೋಗುತ್ತವೆ. ಅವುಗಳಿಗೆ ಅನುಗುಣವಾಗಿ ಮಕ್ಕಳ ವರ್ತನೆ ಹಾಗೂ ಸಂವಹನಗಳು ರೂಢಿಯಾಗುತ್ತವೆ. ಆದಾಗ್ಯೂ ಕೆಲವು ವರ್ತನೆಗಳಲ್ಲಿ ಹಾಗೂ ವಿಷಯಗಳಲ್ಲಿ ಮಕ್ಕಳಿಗೆ ಸಾಕಷ್ಟು ಆತಂಕ ಹಾಗೂ ಭಯವು ಸಾಮಾನ್ಯವಾಗಿರುತ್ತದೆ. ಉದಾಹರಣೆಗೆ ಸ್ನಾನ ಮಾಡುವಾಗ ಭಯ ಪಡುವುದು, ಕಣ್ಣು ಕಟ್ಟಿದಾಗ ಭಯವಾಗುವುದು, ಅವರ ಕಣ್ಣೆದುರು ತಾಯಿ ಇಲ್ಲದಿದ್ದರೆ ಭಯವಾಗುವುದು, ಅಪರಿಚಿತರು ಎತ್ತಿಕೊಂಡಾಗ ಭಯವಾಗುವುದು.

ಶಿಶುಗಳಿಗೆ ತಲೆ ಸ್ನಾನ ಮಾಡಿಸುವಾಗ

ಶಿಶುಗಳಿಗೆ ತಲೆ ಸ್ನಾನ ಮಾಡಿಸುವಾಗ

ಮಗುವಿಗೆ ಯಾವುದರ ಬಗ್ಗೆಯೂ ಹೆಚ್ಚು ಅರಿವಿರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ಅತಿಯಾಗಿ ಭಯಕ್ಕೆ ಒಳಗಾಗುವುದು ಏಕೆ? ಎನ್ನುವ ಪ್ರಶ್ನೆ ಕೆಲವೊಮ್ಮೆ ಕಾಡುವುದು ಸುಳ್ಳಲ್ಲ. ಅದರಲ್ಲೂ ಮಗುವಿಗೆ ಸ್ನಾನ ಮಾಡುವಾಗ ಹೆಚ್ಚು ಭಯಕ್ಕೆ ಒಳಗಾಗುತ್ತದೆ. ಕೆಲವು ಮಕ್ಕಳು ತಲೆ ಸ್ನಾನ ಮಾಡುವಾಗ ಹೆಚ್ಚು ಭಯಪಡುತ್ತಾರೆ. ಹನ್ನೆರಡು ವರ್ಷವಾದರೂ ತಲೆ ಸ್ನಾನ ಮಾಡುವಾಗ ಭಯಪಡುವ ಮಕ್ಕಳಿರುತ್ತಾರೆ. ತಲೆಗೆ ನೀರನ್ನು ಹಾಕುವಾಗ ಎಂತಹ ಭಯ ಕಾಡಬಹುದು? ಅವರಿಗೇಕೆ ಅಷ್ಟು ಭಯ ಕಾಡುವುದು? ಎನ್ನುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಶಿಶುಗಳಿಗೆ ತಲೆ ಸ್ನಾನ ಮಾಡಿಸುವಾಗ ಅಧಿಕವಾಗಿ ಭಯಪಡುತ್ತಾರೆ. ಇದರಿಂದ ಅತಿಯಾಗಿ ಅಳುತ್ತಾರೆ. ಕೊನೆಗೆ ಅತ್ತು ಅತ್ತು ಆಯಾಸವಾಗಿ ನಿದ್ರೆಗೆ ಜಾರಿಬಿಡುತ್ತಾರೆ.

ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ

ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ

ಶಿಶು ಅಭಿವೃದ್ಧಿ ಸಂಸ್ಥೆ ನಡೆಸಿರುವ ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಮಕ್ಕಳು ಮತ್ತು ಶಿಶುಗಳು ತಲೆ ಸ್ನಾನ ಮತ್ತು ಸ್ನಾನ ಮಾಡುವಾಗ ಅಲುವುದು ಸಹಜ ಪ್ರಕ್ರಿಯೆ. ಅದರಲ್ಲೂ ಒಂದು ವರ್ಷದ ಒಳಗಿನ ಮಕ್ಕಳಿಗೆ ಅಧಿಕವಾಗಿ ಭಯವಿರುತ್ತದೆ. ಬೆಳವಣಿಗೆ ಹೊಂದಿದಂತೆ ನೀರಲ್ಲಿ ಸ್ನಾನ ಮಾಡುವುದರ ಬಗ್ಗೆ ಭಯವು ಕಡಿಮೆಯಾಗುತ್ತಾ ಹೋಗುವುದು. ಶಿಶುಗಳು ಸಹ ಆರಂಭದಲ್ಲಿ ನೀರನ್ನು ಕಂಡರೆ ಹಾಗೂ ಅದರಲ್ಲಿ ಸ್ನಾನ ಮಾಡುವುದು ಎಂದರೆ ಸಾಮಾನ್ಯವಾಗಿ ಭಯಪಡುತ್ತಾರೆ. ನಂತರ ನೀರಲ್ಲಿಯೇ ಹೆಚ್ಚು ಆಟ ಆಡುವರು ಎಂದು ಹೇಳಲಾಗುವುದು. ನಿಮಗೂ ನಿಮ್ಮ ಮಗು ಸ್ನಾನ ಮಾಡುವುದಕ್ಕೆ ಭಯ ಪಡುವುದು ಎನ್ನುವ ಭಯ ಹಾಗೂ ಬೇಸರವಿದೆ, ಆ ಭಯವನ್ನು ಹೇಗೆ ನಿವಾರಿಸುವುದು? ಸ್ನಾನಕ್ಕೆ ಹೇಗೆ ಸಜ್ಜುಗೊಳಿಸುವುದು? ಸ್ವಚ್ಛತೆಯ ಆರೈಕೆಯನ್ನು ಹೇಗೆ ಕೈಗೊಳ್ಳುವುದು? ಎನ್ನುವಂತಹ ಪ್ರಶ್ನೆಗಳು ಇದ್ದರೆ ಈ ಮುಂದೆ ವಿವಿರಿಸಿರುವ ವಿವರಣೆಯ ಪ್ರಕಾರ ನಿಧಾನವಾಗಿ ಬದಲಾವಣೆಯನ್ನು ಪರಿಚಯಿಸಿ, ಮಗುವಿಗೆ ಇರುವ ಸ್ನಾನದ ಭಯವನ್ನು ಓಡಿಸಿ.

Most Read: ಸಣ್ಣ ಮಗುವಿನ ತಲೆಯಲ್ಲಿ ಬೆವರುವಿಕೆ ಜಾಸ್ತಿ ಏಕೆ ಗೊತ್ತೆ?

ಸ್ನಾನದ ಭಯ ಓಡಿಸಿ

ಸ್ನಾನದ ಭಯ ಓಡಿಸಿ

ಬೆಚ್ಚಗಿರುವ ಮಗುವನ್ನು ಅಥವಾ ಶಿಶುವನ್ನು ನೀರಿನಲ್ಲಿ ನಿಲ್ಲಿಸಿದಾಗ ಅಥವಾ ಕೂರಿಸಿದಾಗ ತಂಪಾದ ಅನುಭವಕ್ಕೆ ಒಳಗಾಗುತ್ತಾರೆ. ಒಮ್ಮೆಲೇ ತಂಪಾದ ಅನುಭ ಉಂಟಾಗುವುದಕ್ಕೆ ಮಕ್ಕಳಲ್ಲಿ ಆತಂಕವು ಬಹುಬೇಗ ಕಾಡುವುದು. ಇದರಿಂದಾಗಿ ಸ್ನಾನವನ್ನು ನಿರಾಕರಿಸುತ್ತಾರೆ. ಜೊತೆಗೆ ಸ್ನಾನ ಮಾಡುವ ಮೊದಲೇ ಅಳಲು ಪ್ರಾರಂಭಿಸುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ನೀವು ನಿಮ್ಮ ಮಗುವಿಗೆ ನೀರಿನೊಂದಿಗೆ ಸಂತೋಷವನ್ನುಂಟುಮಾಡುವ ಪ್ರಕ್ರಿಯೆಯನ್ನು ಪರಿಚಯಿಸಬೇಕು. ಮಗುವನ್ನು ಸ್ನಾನ ಮಾಡಿಸಬೇಕು, ನಿಮಗೆ ಸಮಯವಿಲ್ಲ ಎನ್ನುವ ಕಾರಣಕ್ಕೆ ದಭ-ದಭನೆ ನೀರನ್ನು ಮಗುವಿನ ತಲೆ ಮತ್ತು ಮೈ ಮೇಲೆ ಸುರಿಯಬಾರದು. ಮಗುವಿಗೆ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಳ್ಳುವುದು ಹಾಗೂ ದೀರ್ಘ ಸಮಯಗಳ ಕಾಲ ಕಣ್ಣನ್ನು ಬಿಡದೆ ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಒಂದೇ ಸಮನೆ ನೀರು ಸುರಿದರೆ ಮಗುವಿಗೆ ಹೆಚ್ಚು ಭಯ ಉಂಟಾಗುವುದು. ಜೊತೆಗೆ ಮೂಗಿನೊಳಗೆ ನೀರು ಹೋಗುವ ಸಾಧ್ಯತೆಗಳು ಹೆಚ್ಚು.

ಆಟದೊಂದಿಗೆ ಭಯವನ್ನು ಓಡಿಸಿ

ಆಟದೊಂದಿಗೆ ಭಯವನ್ನು ಓಡಿಸಿ

ಮಗುವನ್ನು ನೀರಿನಲ್ಲಿ ಸ್ನಾನ ಮಾಡಿಸುವ ಮುನ್ನ ಸ್ವಲ್ಪ ಸಮಯ ನೀರಿನಲ್ಲಿ ಆಡಲು ಅಥವಾ ಉಗುರು ಬೆಚ್ಚಗಿನ ನೀರನ್ನು ಒಂದು ಟಬ್‍ದಲ್ಲಿ ಸ್ವಲ್ಪ ಹಾಕಿ. ನಂತರ ಅದರಲ್ಲಿ ಕೂರಿಸಿ, ಆಡಲು ಬಿಡಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಮೈಮೇಲೆ ಸುರಿಯಿರಿ. ಆಗ ಮಗುವಿಗೆ ಸಂತೋಷ ಹಾಗೂ ಆಡುವ ಉತ್ಸಾಹದಲ್ಲಿ ಸ್ನಾನ ಮಾಡಲು ಸಹಕರಿಸುವುದು. ತಲೆ ಸ್ನಾನ ಮಾಡಿಸುವ ಮುನ್ನವೂ ಒಂದೇ ಸಮನೆ ನೀರನ್ನು ತಲೆಯ ಮೇಲೆ ಸುರಿಯಬಾರದು. ನಿಧಾನವಾಗಿ ಮೊದಲು ನೀರನ್ನು ತಲೆಗೆ ಚಿಮುಕಿಸಿ. ಇದು ಮಗುವಿಗೆ ಖುಷಿಯನ್ನು ನೀಡುವುದು. ನಂತರ ನಿಧಾನವಾಗಿ ನೀರನ್ನು ಸುರಿದು ಸ್ನಾನ ಮಾಡಿಸಿ. ನೀರು ಮತ್ತು ಶ್ಯಾಂಪೂವಿನ ಅಂಶ ಕಣ್ಣಿನ ಒಳಗೆ ಹೋಗದಂತೆ ಎಚ್ಚರ ವಹಿಸಬೇಕು. ತಲೆಯನ್ನು ಮುಂದೆ ಭಾಗಿಸಿ ಸ್ನಾನ ಮಾಡಿಸುವುದರಿಂದ ಹೆಚ್ಚು ನೀರು ಮುಖದ ಮೇಲೆ ಹಾಗೂ ಕಣ್ಣಿನ ಮೇಲೆ ಬೀಳುತ್ತವೆ. ಆಗ ಮಗು ಹೆಚ್ಚು ಭಯ ಪಡುವುದು, ಅಳುವುದು ಸಾಮ್ಯಾನ್ಯವಾಗಿರುತ್ತದೆ. ಹಾಗಾಗಿ ಆದಷ್ಟು ತಲೆಯನ್ನು ಹಿಂದಕ್ಕೆ ಭಾಗಿಸಿ ಸ್ನಾನ ಮಾಡಿಸಿ. ಅದು ಮಗುವಿಗೆ ಭಯ ಉಂಟಾಗದಂತೆ ಮಾಡುವುದು. ಜೊತೆಗೆ ತಲೆ ಮತ್ತು ದೇಹದ ಸ್ವಚ್ಛತೆಯನ್ನು ಸುಲಭವಾಗಿ ಮಾಡಬಹುದು.

Most Read: ಪುಟ್ಟ ಮಕ್ಕಳೇಕೆ ರಾತ್ರಿ ಹೊತ್ತು ಅಳುತ್ತವೆ? ಇಲ್ಲಿವೆ ಹತ್ತು ಕಾರಣಗಳು

ಮಗು ಸ್ನಾನದ ತೊಟ್ಟಿ ಅಥವಾ ಟಬ್‍ಅಲ್ಲಿ ಕೂರಲು ಭಯಪಟ್ಟರೆ ಏನು ಮಾಡುವುದು?

ಮಗು ಸ್ನಾನದ ತೊಟ್ಟಿ ಅಥವಾ ಟಬ್‍ಅಲ್ಲಿ ಕೂರಲು ಭಯಪಟ್ಟರೆ ಏನು ಮಾಡುವುದು?

ಒಮ್ಮೆಲೇ ಸ್ನಾನದ ಟಬ್‍ನಲ್ಲಿ ಕುಳಿತುಕೊಳ್ಳಲು ಮಗು ಭಯ ಪಡುವುದು ಸಹಜ. ಅಂತಹ ಸಂದರ್ಭದಲ್ಲಿ ಮಗುವು ಕುಳಿತುಕೊಳ್ಳಲು ಅನುಕೂಲವಾಗುವಂತಹ ಮೆತ್ತನೆಯ ಪ್ಲಾಸಿಟ್ ಮ್ಯಾಟ್ ಬಳಸಿ. ಜೊತೆಗೆ ಮಗುವನ್ನು ಆಕರ್ಷಿಸುವ ಸ್ನಾನದ ಟಾಯ್ ಅಥವಾ ಆಟಿಕೆ ಸಾಮಾನನ್ನು ಇರಿಸಿ. ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಮಗುವಿನ ಪಾದಗಳನ್ನು ಹಾಗೂ ಕೈಗಳನ್ನು ಅದ್ದಿ. ನಂತರ ನೀರಿನಲ್ಲಿ ಆಡಲು ಅನುವು ಮಾಡಿಕೊಡಿ. ನಿಧಾನವಾಗಿ ಮಗುವು ಟಬ್ ಹಾಗೂ ಆಟಿಕೆಯೊಂದಿಗೆ ತನ್ನ ಮಾನಸಿಕ ಸ್ಥಿತಿಯನ್ನು ಸಜ್ಜುಗೊಳಿಸಿಕೊಳ್ಳುವುದು. ಜೊತೆಗೆ ಆಟ ಆಡುವ ಭಾವನೆಯಲ್ಲಿಯೇ ಸ್ನಾನಕ್ಕೂ ಸಹಕಾರ ನೀಡುವುದು.

ಮಕ್ಕಳ ಶ್ಯಾಂಪೂ ಮತ್ತು ಸೋಪ್ ಅನ್ನು ಬಳಸಿ

ಮಕ್ಕಳ ಶ್ಯಾಂಪೂ ಮತ್ತು ಸೋಪ್ ಅನ್ನು ಬಳಸಿ

ಮಗುವಿನ ಸ್ನಾನಕ್ಕೆ ಅಣಿಯಾಗುವಾಗ ಮಕ್ಕಳಿಗಾಗಿಯೇ ವಿಶೇಷವಾಗಿ ಬಳಸುವ ಶ್ಯಾಂಪೂ ಮತ್ತು ಸೋಪ್ ಅನ್ನು ಬಳಸಬೇಕು. ಇದರಿಂದ ಮಗುವಿನ ತ್ವಚೆಗೆ ಹಾನಿ ಉಂಟಾಗದು. ಜೊತೆಗೆ ಕಣ್ಣಿಗೆ ಆಕಸ್ಮಿಕವಾಗಿ ಹೋದರೂ ನೋವನ್ನು ಅಥವಾ ಉರಿಯನ್ನುಂಟುಮಾಡದು. ಮಗುವಿನ ಕಣ್ಣಿಗೆ ಹಾಗೂ ತ್ವಚೆಗೆ ಅಪಾಯವನ್ನುಂಟು ಮಾಡದಂತಹ ಘಟಕಗಳನ್ನು ಬಳಸಿಯೇ ಮಕ್ಕಳ ಶ್ಯಾಂಪೂ ಹಾಗೂ ಸೋಪ್ ತಯಾರಿಸಲಾಗಿರುತ್ತದೆ. ಹಾಗಾಗಿ ಅವುಗಳ ಬಳಕೆಯಿಂದಲೇ ಮಕ್ಕಳ ಸ್ನಾನ ಮಾಡಿಸುವುದು ಸೂಕ್ತ.

ಸ್ವಲ್ಪ ದೊಡ್ಡವರಾಗಿದ್ದರೆ ಹೀಗೆ ಮಾಡಿ

ಸ್ವಲ್ಪ ದೊಡ್ಡವರಾಗಿದ್ದರೆ ಹೀಗೆ ಮಾಡಿ

ಮಕ್ಕಳು ಶಿಶುವಾಗಿದ್ದರಷ್ಟೇ ಅಲ್ಲ. ಸ್ವಲ್ಪ ದೊಡ್ಡವರಾಗಿದ್ದರೂ ಸ್ನಾನ ಮಾಡುವುದು ಎಂದರೆ ಸೋಮಾರಿತನ, ಬೇಸರ ಹಾಗೂ ಅಂಜಿಕೆಯನ್ನು ವ್ಯಕ್ತಪಡಿಸುತ್ತಾರೆ. ಹಾಗಾಗಿ ಸ್ವಲ್ಪ ದೊಡ್ಡ ಮಕ್ಕಳಿಗೆ ಸ್ನಾನಕ್ಕೆ ಅಣಿ ಮಾಡಿಸುವ ಮೊದಲು ಓದುವ ಮತ್ತು ಬರೆಯುವ ಪ್ರಕ್ರಿಯೆಗೆ ಒಳಪಡಿಸಿ. ನಂತರ ಸ್ನಾನಕ್ಕೆ ಆಣತಿ ಮಾಡಿ. ಹೀಗೆ ಮಾಡುವುದರಿಂದ ಓದಿ ಬೇಸರಕ್ಕೆ ಒಳಗಾಗಿರುತ್ತಾರೆ. ನಂತರ ನೀರಿನಲ್ಲಿ ಆಟ ಹಾಗೂ ಸ್ನಾನ ಮಾಡುವುದು ಅವರಿಗೆ ಸಂತೋಷ ಹಾಗೂ ಮಾನಸಿಕವಾಗಿ ಹೆಚ್ಚು ನಿರಾಳತೆಯನ್ನು ನೀಡುವುದು. ಜೊತೆಗೆ ಸ್ನಾನದಿಂದ ದೇಹವನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎನ್ನುವ ಮನೋಭಾವ ಮೂಡುವುದು.

English summary

Why Baby Afraid During Bath Time?

According to Child Development Institute, the fear of taking bath in babies is a normal experience for most of them. Although, the fear of bathing is mostly seen in babies aged a year,older babies may also be confronted with the fear. As far as babies are concerned, some may at first meeting with the baby tub find it fun, but suddenly flinch at its presence.This fear, however, stays only for a short while.
X
Desktop Bottom Promotion