For Quick Alerts
ALLOW NOTIFICATIONS  
For Daily Alerts

ಶೀತ ಜ್ವರದ ವೇಳೆ ಮಕ್ಕಳ ಆರೋಗ್ಯದ ಆರೈಕೆಗೆ ಒಂದಿಷ್ಟು ಸರಳ ಟಿಪ್ಸ್

|

ದೊಡ್ಡವರಿಗೆ ಆರೋಗ್ಯದಲ್ಲಿ ಏರುಪೇರಾಗಿ, ಶೀತ, ಜ್ವರ ಬಂದುಬಿಟ್ಟರೆ ಆಗ ಹೈರಾಣಾಗಿ ಹೋಗುವರು. ಅದೇ ಮಕ್ಕಳಿಗೆ ಶೀತ ಜ್ವರ ಬಂದರೆ ಅವರ ಪರಿಸ್ಥಿತಿ ಹೇಗಿರಬಹುದು ಎಂದು ನೀವು ಊಹೆ ಮಾಡಿ ನೋಡಿ. ದೊಡ್ಡವರಿಗೆ ಹೇಗಾದರೂ ಮಾಡಿ ತಡೆದುಕೊಳ್ಳುವ ಶಕ್ತಿಯು ಇರುವುದು. ಅದೇ ಮಕ್ಕಳಿಗೆ ಇದು ತುಂಬಾ ಕಠಿಣವಾಗುವುದು. ಇದರಿಂದ ಶೀತ ಜ್ವರ ಬಂದರೆ ಆಗ ಮಕ್ಕಳು ಸಂಪೂರ್ಣವಾಗಿ ಕುಗ್ಗಿ ಹೋಗುವರು. ಅವರು ಯಾವುದೇ ಚಟುವಟಿಕೆ ನಡೆಸುವುದಿಲ್ಲ ಮತ್ತು ಆಹಾರ ಕೂಡ ಕಡಿಮೆ ಸೇವಿಸುವರು.

Treating Kids with a Cold and Flu

ಜ್ವರದಿಂದಾಗಿ ಮತ್ತು ಔಷಧಿ ಸೇವನೆಯ ಪರಿಣಾಮ ನಾಲಗೆ ರುಚಿ ಕಡಿಮೆ ಆಗಿರುವ ಕಾರಣದಿಂದಾಗಿ ಮಕ್ಕಳು ಇಂತಹ ಸಮಯದಲ್ಲಿ ಆಹಾರ ಕಂಡರೆ ಸಿಡಿದು ಬೀಳುವರು. ಇದು ಪೋಷಕರಿಗೆ ದೊಡ್ಡ ಸವಾಲಾಗಿರುವುದು. ಯಾಕೆಂದರೆ ಕೇವಲ ಶೀತ ಜ್ವರಕ್ಕೆ ಮದ್ದು ಕೊಡುವ ಜತೆಗೆ ಮಕ್ಕಳ ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯಬೇಕು. ಆಗ ಮಾತ್ರ ಅವರು ಬೇಗನೆ ಚೇತರಿಕೆ ಪಡೆಯಲು ಸಾಧ್ಯ. ಹೀಗಾಗಿ ಮಕ್ಕಳಿಗೆ ಶೀತ ಜ್ವರ ಬಂದರೆ ಅದು ಪೋಷಕರಿಗೆ ದೊಡ್ಡ ಅಗ್ನಿ ಪರೀಕ್ಷೆ. ಶೀತ ಜ್ವರದ ವೇಳೆ ಮಕ್ಕಳ ಆರೈಕೆಯ ಐದು ವಿಧಾನಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ. ಇದನ್ನು ನೀವು ತಿಳಿದುಕೊಂಡು ಶೀತ ಜ್ವರದ ಸಮಯದಲ್ಲಿ ಮಕ್ಕಳ ಆರೈಕೆ ಮಾಡಬಹುದು.

ಮಕ್ಕಳಿಗೆ ಹೆಚ್ಚು ನೀರಿನಾಂಶ ನೀಡಿ

ಮಕ್ಕಳಿಗೆ ಹೆಚ್ಚು ನೀರಿನಾಂಶ ನೀಡಿ

ಮಕ್ಕಳ ದೇಹವನ್ನು ತೇವಾಂಶದಿಂದ ಇಡುವುದು ಶೀತ ಹಾಗೂ ಜ್ವರದ ಲಕ್ಷಣಗಳಿಂದ ದೂರವಿಡುವ ಸರಳ ವಿಧಾನವಾಗಿದೆ. ಜ್ವರ, ವಾಂತಿ ಮತ್ತು ಬೇಧಿಯಿಂದಾಗಿ ಮಗುವಿನ ದೇಹವು ನಿರ್ಜಲೀಕರಣಕ್ಕೆ ಒಳಗಾಗಬಹುದು. ಈ ವೇಳೆ ಮಕ್ಕಳು ಹೆಚ್ಚು ನೀರು ಕುಡಿಯುವಂತೆ ಪ್ರೋತ್ಸಾಹಿಸಬೇಕು. ಹೆಚ್ಚು ನೀರು ಮತ್ತು ತಾಜಾ ಹಣ್ಣಿನ ಜ್ಯೂಸ್ ಕುಡಿಯಬೇಕು. ದೇಹವು ನಿರ್ಜಲೀಕರಣ ಗೊಂಡರೆ ಆಗ ಶೀತ ಜ್ವರವು ಬೇಗನೆ ನಿವಾರಣೆ ಆಗುವುದಿಲ್ಲ. ಬೇದಿ ಇದ್ದರೆ ಆಗ ದೇಹದಲ್ಲಿನ ನೀರಿನಾಂಶವು ಅಧಿಕವಾಗಿ ನಷ್ಟವಾಗುವುದು. ಈ ವೇಳೆ ಗಂಜಿ, ಎಳನೀರು ಇತ್ಯಾದಿಗಳನ್ನು ಮಕ್ಕಳಿಗೆ ನೀಡಿ ದೇಹದಲ್ಲಿ ತೇವಾಂಶ ಕಾಪಾಡಿಕೊಳ್ಳುವಂತೆ ಮಾಡಬೇಕು.

ಬಾಯಿ ಮುಕ್ಕಳಿಸಿ ಮತ್ತು ಹಬೆಗೆ ಮುಖ ಹಿಡಿಯಿರಿ

ಬಾಯಿ ಮುಕ್ಕಳಿಸಿ ಮತ್ತು ಹಬೆಗೆ ಮುಖ ಹಿಡಿಯಿರಿ

ಶೀತ ಹಾಗೂ ಜ್ವರದಿಂದ ಪಾರಾಗಲು ಬಿಸಿನೀರಿನ ಹಬೆಗೆ ಮುಖವನ್ನು ಇಡುವುದು ಮತ್ತು ಬಾಯಿ ಮುಕ್ಕಳಿಸಿಕೊಳ್ಳುವುದು ತುಂಬಾ ಹಳೆಯ ವಿಧಾನ ಎಂದು ಪರಿಗಣಿಸಲಾಗಿದೆ. ಆದರೆ ಸ್ಟೀಮ್ ಮತ್ತು ಬಾಯಿ ಮುಕ್ಕಳಿಸುವ ಕಾರಣದಿಂದಾಗಿ ಮಕ್ಕಳಿಗೆ ಆರಾಮ ಸಿಗುವುದು. ಬಿಸಿ ನೀರಿಗೆ ಉಪ್ಪು ಹಾಕಿಕೊಟ್ಟು, ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಲು ಹೇಳಿ ಮತ್ತು ಈ ವೇಳೆ ನೀವು ಮಕ್ಕಳ ಜತೆಗೆ ಇರಬೇಕು.

ಮನೆಯಲ್ಲೇ ಇರುವಂತೆ ಮಕ್ಕಳಿಗೆ ಸೂಚಿಸಿ

ಮನೆಯಲ್ಲೇ ಇರುವಂತೆ ಮಕ್ಕಳಿಗೆ ಸೂಚಿಸಿ

ಕೆಲವು ಮಕ್ಕಳು ಏನೇ ಅನಾರೋಗ್ಯ ಬಂದರೂ ಆಡುವುದನ್ನು ಮಾತ್ರ ಬಿಡಲ್ಲ. ಅನಾರೋಗ್ಯದ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ಬೇಕಿರುವುದು. ಶೀತ ಮತ್ತು ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸರಳ ವಿಧಾನ ಎಂದರೆ ಅದು ವಿಶ್ರಾಂತಿ. ಮಕ್ಕಳನ್ನು ಈ ಸಂದರ್ಭದಲ್ಲಿ ನೀವು ಹೊರಗಡೆ ಆಡಲು ಹೋಗಲು ಬಿಡಬೇಡಿ. ಮಕ್ಕಳಿಗೆ ವಿಶ್ರಾಂತಿ ಮಾಡಲು ಹೇಳಿ ಮತ್ತು ಅವರಿಗೆ ಕಂಬಳಿ ಹೊದ್ದು ಬಿಸಿಯಾಗಿಡಿ. ಉಣ್ಣೆ ಬಟ್ಟೆಯನ್ನು ಮಕ್ಕಳಿಗೆ ಸರಿಯಾಗಿ ಹಾಕಿಕೊಂಡು ಮಲಗಲು ಹೇಳಿ. ಅನಗತ್ಯವಾಗಿ ಅವರು ಮನೆಯಿಂದ ಹೋಗಲು ಬಿಡಬೇಡಿ.

Most Read: ಮಕ್ಕಳಿಗೆ ಬೆನ್ನೇರಿ ಕಾಡುವ ಶೀತದ ಸಮಸ್ಯೆಗೆ ಸರಳ ಮನೆಮದ್ದು

ಸರಿಯಾದ ಆಹಾರ ನೀಡಿ

ಸರಿಯಾದ ಆಹಾರ ನೀಡಿ

ಸರಿಯಾದ ಆಹಾರದಿಂದ ಮಕ್ಕಳು ಫಿಟ್ ಇರುತ್ತಾರೆ. ಶೀತ ಮತ್ತು ಜ್ವರದ ವೇಳೆ ನೀವು ಮಕ್ಕಳಿಗೆ ಹೆಚ್ಚು ಸೂಪ್ ಅಥವಾ ಬಿಸಿ ಹಾಲು ನೀಡಿ. ಮಕ್ಕಳಿಗೆ ಬೇಗನೆ ಚೇತರಿಕೆಗೆ ನೆರವಾಗುವ ಆಹಾರವನ್ನು ನೀಡಿ ಮತ್ತು ವೈದ್ಯರು ಹೇಳಿರುವ ಆಹಾರ ನೀಡಿ. ಮಕ್ಕಳಿಗೆ ತಯಾರಿಸುವ ತರಕಾರಿ ಸೂಪ್ ಗೆ ಹೆಚ್ಚಿನ ತರಕಾರಿ ಹಾಕಿ. ಇದರಿಂದ ಮಕ್ಕಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯಲು ನೆರವಾಗುವುದು.

ಮಕ್ಕಳಿಗೆ ಕೆಮ್ಮು ಇದ್ದರೆ ತಕ್ಷಣವೇ ಚಿಕಿತ್ಸೆ ಕೊಡಿಸಿ

ಮಕ್ಕಳಿಗೆ ಕೆಮ್ಮು ಇದ್ದರೆ ತಕ್ಷಣವೇ ಚಿಕಿತ್ಸೆ ಕೊಡಿಸಿ

ಮಕ್ಕಳಿಗೆ ಶೀತ ಹಾಗೂ ಜ್ವರದ ಜತೆಗೆ ಕೆಮ್ಮು ಇದ್ದರೆ ಆಗ ನೀವು ಅವರಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಬೇಕು. ವೈದ್ಯರನ್ನು ಸಂಪರ್ಕಿಸಿ ಅವರು ಹೇಳಿರುವಂತಹ ಔಷಧಿಯನ್ನು ಕಾಲಕಾಲಕ್ಕೆ ನೀಡಬೇಕು. ಕೆಮ್ಮು ನಿವಾರಣೆ ಮಾಡಲು ನೀವು ಕೆಲವೊಂದು ಇತರ ನೈಸರ್ಗಿಕ ವಿಧಾನಗಳನ್ನು ಕೂಡ ಬಳಸಿಕೊಳ್ಳಬಹುದು. ಜೇನುತುಪ್ಪ ಮತ್ತು ಶುಂಠಿ ಕೊಟ್ಟರೆ, ಮಕ್ಕಳ ಕೆಮ್ಮು ನಿವಾರಣೆ ಆಗುವುದು. ತಾಜಾ ಶುಂಠಿಯಿಂದ ಸ್ವಲ್ಪ ರಸ ತೆಗೆಯಿರಿ. ಈ ರಸಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಮತ್ತು ಅದನ್ನು ನೀವು ಮಕ್ಕಳಿಗೆ ದಿನಕ್ಕೆ ಒಂದು ಸಲ ನೀಡಬಹುದು.

English summary

Tips for Treating Kids with a Cold and Flu

Keeping your kids hydrated is the easiest way to reduce the symptoms of cold and flu. Your kid may suffer from dehydration due to fever, vomiting and diarrhea. Encourage your kids to drink more fluids. Make them drink more water and natural fruit juice.
X
Desktop Bottom Promotion