ಅಧ್ಯಯನ ವರದಿ: ಅಧಿಕ ಕೊಬ್ಬಿನಾಂಶದ ಆಹಾರ ಸೇವನೆ ಮಗುವಿನ ಮೇಲೆ ಪರಿಣಾಮ

By: Hemanth
Subscribe to Boldsky

ಗರ್ಭಿಣಿ ಮಹಿಳೆಯರು ಸೇವಿಸುವಂತಹ ಆಹಾರದಲ್ಲಿ ಕೆಲವು ಕ್ರಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಹುಟ್ಟುವ ಮಗುವಿನ ಮೇಲೆ ಅದರ ಪರಿಣಾಮ ಬೀರುತ್ತದೆ. ಗರ್ಭಿಣಿ ಮಹಿಳೆಯರು ಅತಿಯಾದ ಕೊಬ್ಬನಾಂಶವಿರುವ ಆಹಾರ ಸೇವನೆ ಮಾಡಿದರೆ ಅದರಿಂದ ಹುಟ್ಟುವ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯಾದ ಆತಂಕ ಮತ್ತು ಖಿನ್ನತೆ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳಿವೆ.

Maternal High-Fat Diet

ಅನಾರೋಗ್ಯಕರ ಆಹಾರ ಸೇವನೆಯಿಂದ ತಾಯಿಯಲ್ಲೂ ಕೆಲವೊಂದು ಆರೋಗ್ಯ ಸಮಸ್ಯೆ ಉಂಟು ಮಾಡಬಹುದು ಎಂದು ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಇಷ್ಟು ಮಾತ್ರವಲ್ಲದೆ ಹುಟ್ಟುವ ಮಕ್ಕಳಲ್ಲಿ ಮೆದುಳು ಮತ್ತು ಅಂತಃಸ್ರಾವಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ದೀರ್ಘಕಾಲದ ಮಾನಸಿಕ ಅನಾರೋಗ್ಯ ಕಾಡಬಹುದು ಎನ್ನಲಾಗಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕರಗದೆ ಇರುವ ಕೊಬ್ಬಿನಾಂಶ ಅಧಿಕವಾಗಿರುವ ಆಹಾರ ಸೇವನೆ ಮತ್ತು ಗರ್ಭಿಣಿ ಮಹಿಳೆಯರು ಬೊಜ್ಜು ಬೆಳೆಸಿಕೊಳ್ಳುವುದು ಹೆಚ್ಚಾಗಿದೆ. ಭವಿಷ್ಯದ ಮಕ್ಕಳ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಯನವು ತುಂಬಾ ಮುಖ್ಯವಾಗಿದೆ ಎಂದು ಅಮೆರಿಕಾದ ಒರೆಗಾನ್ ಹೆಲ್ತ್ ಆ್ಯಂಡ್ ಸೈನ್ಸ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ಎಲಿನೋರ್ ಸುಲೀವಾನ್ ಹೇಳಿದ್ದಾರೆ.

Maternal High-Fat Diet

ಗರ್ಭಾವಸ್ಥೆಯಲ್ಲಿ ಮತ್ತು ಗರ್ಭದಲ್ಲಿರುವ ಮಗು ಹೆಚ್ಚಿನ ಬೆಳವಣಿಗೆಯ ಸಯದಲ್ಲಿ ಅಧಿಕ ಕೊಬ್ಬಿನ ಆಹಾರ ಸೇವನೆ ಮಾಡಿರುವುದರಿಂದ ಮೆದುಳಿನ ಅಭಿವೃದ್ಧಿಗೆ ಪ್ರಮುಖವಾಗಿರುವ ಸಿರೋಟೋನಿಕ್ ನರಗಳ ಬೆಳವಣಿಗೆ ದುರ್ಬಲವಾಗುವುದು, ಮಗುವಿಗೆ ಬಾಲ್ಯದಲ್ಲೇ ಆರೋಗ್ಯಕರ ಆಹಾರ ನೀಡಿದರೂ ಈ ಸಮಸ್ಯೆ ಮಾತ್ರ ಸರಿಯಾಗಿಲ್ಲವೆಂದು ಎಂದು ಅಧ್ಯಯನಗಳು ತಿಳಿಸಿವೆ.

ಗರ್ಭಿಣಿ ಮಹಿಳೆಯರನ್ನು ಇದಕ್ಕೆ ದುರಬೇಕಾಗಿಲ್ಲ. ಇದರ ಬದಲಿಗೆ ಅವರಿಗೆ ಸರಿಯಾದ ಜ್ಞಾನ ನೀಡಬೇಕು. ಗರ್ಭಾವಸ್ಥೆಯಲ್ಲಿ ಕೊಬ್ಬಿನಾಂಶ ಹೆಚ್ಚು ಇರುವಂತಹ ಆಹಾರ ಸೇವನೆಯಿಂದ ಮಗುವಿನ ಮೇಲೆ ಪರಿಣಾಮವಾಗುವುದು ಎಂದು ಮನೆಯವರು ತಿಳಿಹೇಳಬೇಕು. ಕುಟುಂಬದವರು ಆಕೆಗೆ ಸರಿಯಾದ ಬೆಂಬಲ ನೀಡಬೇಕು. ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಲು ಕೆಲವೊಂದು ಅಭಿಯಾನಗಳು ನಡೆಯಬೇಕು ಎಂದು ಸುವೆಲಿನ್ ಹೇಳಿದರು.

Maternal High-Fat Diet

ಗರ್ಭಧಾರಣೆ ವೇಳೆ ಮಹಿಳೆಯರು ಕೊಬ್ಬಿನಾಂಶವಿರುವ ಆಹಾರ ಹೆಚ್ಚು ಸೇವನೆ ಮಾಡಿದರೆ ಅದರಿಂದ ಸಮಸ್ಯೆಯಾಗುತ್ತದೆ ಎಂದು ಪ್ರಾಣಿಗಳಲ್ಲಿ ನಡೆಸಿದ ಅಧ್ಯಯನವು ಹೇಳಿವೆ. ಪ್ರಾಣಿಗಳು ತಮ್ಮ ಆಹಾರದಲ್ಲಿ ಕೆಲವೊಂದು ನಿಯಂತ್ರಣ ಮಾಡಿದೆ. ಆದರೆ ಮಾನವರಲ್ಲಿ ಇದು ಕಾಣಿಸುವುದಿಲ್ಲ. ಅಧ್ಯಯನಕ್ಕಾಗಿ ಸುಮಾರು 65 ಹೆಣ್ಣು ಕೋತಿಗಳನ್ನು ಎರಡು ವಿಭಾಗಗಳಾಗಿ ಮಾಡಲಾಯಿತು. ಒಂದು ಗುಂಪಿಗೆ ಕೊಬ್ಬಿನಾಂಶವಿರುವ ಆಹಾರ ಮತ್ತೊಂದು ಗುಂಪಿಗೆ ನಿಯಂತ್ರಿತ ಆಹಾರ ನೀಡಲಾಯಿತು.

Maternal High-Fat Diet

ಕೊಬ್ಬಿನಾಂಶ ಹೆಚ್ಚಿಗೆ ಇರುವ ಆಹಾರ ಸೇವನೆ ಮಾಡಿದ ಗರ್ಭಿಣಿ ಕೋತಿಗಳಿಗೆ ಹುಟ್ಟುವ ಮರಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಅದೇ ನಿಯಂತ್ರಿತ ಆಹಾರ ನೀಡಿದ ಕೋತಿಗಳ ಮರಿಗಳಲ್ಲಿ ಇದು ಕಡಿಮೆಯಿತ್ತು ಎಂದು ಅಧ್ಯಯನಗಳು ತಿಳಿಸಿವೆ.

English summary

Maternal High-Fat Diet May Affect Kids' Mental Health

Babies whose mothers consumed a high-fat diet during their pregnancy may be at an increased risk of developing mental health disorders such as anxiety and depression, a study has warned. The findings, of an animal study, showed that an unhealthy diet not only creates health problems for expectant mothers, but also alters childrens' development of the brain and endocrine system which may cause long-lasting mental health ramifications.
Story first published: Saturday, July 29, 2017, 23:41 [IST]
Subscribe Newsletter