ಮಕ್ಕಳ ಆರೋಗ್ಯಕ್ಕೆ 'ಕಲ್ಲಂಗಡಿ ಹಣ್ಣು' ಬಹಳ ಒಳ್ಳೆಯದು...

By: Deepu
Subscribe to Boldsky

ಬೇಸಿಗೆಯಲ್ಲಿ ಅತಿಯಾದ ಉಷ್ಣತೆಯನ್ನು ತಡೆಯಲು ಪ್ರಮುಖವಾಗಿ ನಾವು ಆದಷ್ಟು ಮಟ್ಟಿಗೆ ನೀರನ್ನು ಕುಡಿಯಬೇಕು. ನೀರು ಕುಡಿದರೆ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಇರದು. ಕೇವಲ ನೀರು ಮಾತ್ರವಲ್ಲ, ನೀರಿನಾಂಶ ಹೆಚ್ಚಿಗೆ ಇರುವಂತಹ ಹಣ್ಣುಗಳನ್ನು ಕೂಡ ತಿನ್ನಬೇಕು. ಕಲ್ಲಂಗಡಿ ಹಣ್ಣಿನಲ್ಲಿರುವ ಗುಣಗಳು ಒಂದಾ ಎರಡಾ...

ಅದರಲ್ಲಿಯೂ ಪ್ರಮುಖವಾಗಿ ಕಲ್ಲಂಗಡಿ ಹಣ್ಣುಗಳನ್ನು ತಿಂದರೆ ಅದರಲ್ಲಿ ಇರುವಂತಹ ಹೆಚ್ಚಿನ ನೀರಿನಾಂಶವು ನಮ್ಮ ದೇಹಕ್ಕೆ ತುಂಬಾನೇ ಉಪಯೋಗಕಾರಿ.  ಕಲ್ಲಂಗಡಿ ಹಣ್ಣಿನ ಬೀಜದ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಆದರೆ ಮಕ್ಕಳು ಕಲ್ಲಂಗಡಿ ಹಣ್ಣನ್ನು ತಿನ್ನಬಹುದೇ ಎನ್ನುವ ಪ್ರಶ್ನೆ ಬರುತ್ತದೆ. ಆದರೆ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಕಲ್ಲಂಗಡಿ ಹಣ್ಣನ್ನು ತಿನ್ನಿಸಬಾರದು. ಆದರೆ ಎರಡು ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ಕಲ್ಲಂಗಡಿ ಹಣ್ಣನ್ನು ತಿನ್ನಿಸಿದರೆ ಅದರಿಂದ ಆಗುವ ಲಾಭಗಳು ಯಾವುದು ಎಂದು ತಿಳಿಯಿರಿ....  

ಎರಡು ವರ್ಷ ದಾಟಿದ ಮಗುವಿಗೆ

ಎರಡು ವರ್ಷ ದಾಟಿದ ಮಗುವಿಗೆ

ಹೌದು ಎರಡು ವರ್ಷ ದಾಟಿದ ಮಗುವಿಗೆ ಮಾತ್ರ ಕಲ್ಲಂಗಡಿ ಹಣ್ಣನ್ನು ತಿನ್ನಿಸಬೇಕು. ಇದು ಮಗುವಿನ ದೇಹದಲ್ಲಿ ನೀರಿನಾಂಶವನ್ನು ಕಾಪಾಡಲು ನೆರವಾಗುವುದು. ಬೇಸಿಗೆ ಕಾಲದಲ್ಲಿ ಮಗುವನ್ನು ನಿರ್ಜಲೀಕರಣದಿಂದ ಕಾಪಾಡುವುದು.

ವಿಟಮಿನ್ ಎ

ವಿಟಮಿನ್ ಎ

ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಬೆಟಾಕ್ಯಾರೋಟಿನ್ ಸಮೃದ್ಧವಾಗಿದೆ..ಹಾಗಾಗಿ ಮಕ್ಕಳು ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಆರೋಗ್ಯಕರ ಚರ್ಮ, ಒಳ್ಳೆಯ ದೃಷ್ಟಿ ಮತ್ತು ಹಲ್ಲುಗಳಿಗೆ ಇದು ಅತ್ಯಗತ್ಯ.

ದೃಷ್ಟಿಯ-ಹೃದಯದ ಸಮಸ್ಯೆಗೆ ರಾಮಬಾಣ

ದೃಷ್ಟಿಯ-ಹೃದಯದ ಸಮಸ್ಯೆಗೆ ರಾಮಬಾಣ

ಕಲ್ಲಂಗಡಿಯಲ್ಲಿ ಇರುವಂತಹ ಪೋಷಕಾಂಶಗಳು ದೃಷ್ಟಿಯ ಸಮಸ್ಯೆ, ಹೃದಯದ ಸಮಸ್ಯೆ ಮತ್ತು ಇತರ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಕಾರಿ.

ಮೂಳೆಯ ಬೆಳವಣಿಗೆಗೆ

ಮೂಳೆಯ ಬೆಳವಣಿಗೆಗೆ

ಮಕ್ಕಳ ಮೂಳೆಯ ಬೆಳವಣಿಗೆಗೆ ಕ್ಯಾಲ್ಸಿಯಂ ಮತ್ತು ಸ್ನಾಯುಗಳ ಬೆಳವಣಿಗೆ ಮತ್ತು ನರಗಳ ಕಾರ್ಯಚಟುವಟಿಕೆಗೆ ಮೆಗ್ನಿಶಿಯಂ ಬೇಕಾಗಿದೆ. ಕಲ್ಲಂಗಡಿಯಲ್ಲಿ ಈ ಎರಡೂ ಖನಿಜಾಂಶಗಳು ಇದೆ.

ವಿಟಮಿನ್ ಬಿ6

ವಿಟಮಿನ್ ಬಿ6

ಕಲ್ಲಂಗಡಿಯಲ್ಲಿ ವಿಟಮಿನ್ ಬಿ6, ನಿಯಾಸಿನ್, ರಿಬೊಫ್ಲಾವಿನ್ ಮತ್ತು ಥೈಮೆನ್ ಎನ್ನುವ ವಿಟಮಿನ್ ಗಳಿವೆ. ಮಕ್ಕಳ ಬೆಳವಣಿಗೆಗೆ ಈ ವಿಟಮಿನ್‌ಗಳು ಅತೀ ಅಗತ್ಯ.

ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ

ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ

ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವು ಕಬ್ಬಿನಾಂಶವನ್ನು ಬೇಗನೆ ಹೀರಿಕೊಳ್ಳಲು ನೆರವಾಗುವುದು. ಇದು ಮಕ್ಕಳಿಗೆ ತುಂಬಾ ಒಳ್ಳೆಯದು.

 
English summary

Can Kids Eat Watermelon?

Can kids eat water melon? Well, babies below the age of two shouldn't be fed with water melon. But after that age, you can offer water melon to your kid and the benefits are as follows.
Please Wait while comments are loading...
Subscribe Newsletter