For Quick Alerts
ALLOW NOTIFICATIONS  
For Daily Alerts

ಮಗು ರಚ್ಚೆ ಹಿಡಿದು ಅಳುತ್ತಿದ್ದರೆ, ಶಿಕ್ಷಿಸಲು ಮುಂದಾಗದಿರಿ

By Manu
|

ಸಾಮಾನ್ಯವಾಗಿ ಮಕ್ಕಳು ತಮ್ಮ ಬೇಡಿಕೆಗಳನ್ನು ಮತ್ತು ಭಾವನೆಗಳನ್ನು ಅಳುವಿನ ಮೂಲಕ ವ್ಯಕ್ತಪಡಿಸುತ್ತವೆ. ಮಗು ಹಸಿವಿನಿಂದ ಅಳುತ್ತಿದೆಯೋ ಅಥವಾ ಹೊಟ್ಟೆನೋವು ಮೊದಲಾದ ಯಾವುದಾದರೂ ತೊಂದರೆಯಿಂದ ಅಳುತ್ತಿದೆಯೋ ಎಂದು ಪಾಲಕರು ಅರಿಯದೇ ವ್ಯಾಕುಲಗೊಳ್ಳುತ್ತಾರೆ. ಅದರಲ್ಲೂ ಕೆಲವೊಮ್ಮೆ ಪಾಲಕರು ತನ್ನ ದಿನದ ಕೆಲಸದಿಂದ ಸುಸ್ತಾಗಿ ಮನೆಗೆ ಬಂದಿರುವಾಗ ಮಕ್ಕಳು ರಚ್ಚೆ ಹಿಡಿದು ಅತ್ತರೆ ಮಾತ್ರ ಪರಿಸ್ಥಿತಿ ಎದುರಿಸಲು ಸಾಧ್ಯವೇ ಇಲ್ಲ ಎಂಬಂತಾಗುತ್ತದೆ. ಎಳೆಯ ಮಗು ರಚ್ಚೆ ಹಿಡಿದು ಅಳಲು ಕಾರಣವೇನು?

ಅಳುತ್ತಿರುವ ಮಗುವನ್ನು ಸಂತೈಸುವುದು ಅಷ್ಟು ಸುಲಭವಾದ ಕೆಲಸವಲ್ಲ. ಏಕೆಂದರೆ ಇದು ಅಪಾರವಾದ ತಾಳ್ಮೆ ಮತ್ತು ಹೊಂದಿಕೊಳ್ಳಲು ತಯಾರಾಗಬೇಕು. ಆದರೆ ಎಲ್ಲಾ ತಂದೆ ತಾಯಿಯರಲ್ಲಿ ಈ ಗುಣಗಳು ಕಂಡುಬರದ ಕಾರಣ ಮಕ್ಕಳನ್ನು ಶಿಕ್ಷಿಸುವ ಉಪಾಯವನ್ನು ಅವರು ಹೆಚ್ಚಾಗಿ ಪರಿಗಣಿಸುತ್ತಾರೆ. ಆದರೆ ತಾಳ್ಮೆ ಮತ್ತು ಸಹನೆಯನ್ನು ತಮ್ಮ ಮಕ್ಕಳಿಗಾಗಿಯಾದರೂ ಎಲ್ಲಾ ತಂದೆತಾಯಿಯರು ಈ ಗುಣಗಳನ್ನು ಬೆಳೆಸಿಕೊಳ್ಳಲೇಬೇಕಾಗಿದೆ.

ಒಂದು ವೇಳೆ ಅಳುವ ಮಕ್ಕಳನ್ನು ನಿರ್ಲಕ್ಷಿಸಿದರೆ ಮಕ್ಕಳ ಮೇಲೆ ಇದು ಅಪಾರವಾದ ಪ್ರಭಾವ ಬೀರುತ್ತದೆ. ಅವರ ಯೋಚನಾಲಹರಿ ಬೇರೆ ದಿಕ್ಕಿನಲ್ಲಿ ಹರಿಯತೊಡಗುತ್ತದೆ. ತಮ್ಮ ತಂದೆತಾಯಿಯರು ನಮ್ಮ ಕಡೆ ಗಮನ ನೀಡುವುದಿಲ್ಲ ಎಂಬು ಅತೀವವಾಗಿ ನೊಂದುಕೊಳ್ಳುತ್ತಾರೆ. ಇದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆಂದು ಯೋಚಿಸಿಕೊಳ್ಳಲೂ ಸಾಧ್ಯವಿಲ್ಲ. ಕೇವಲ ಐಸ್ ಕ್ಯಾಂಡಿ ಕೊಳ್ಳಲು ಹಣ ಕೊಡದ ಅಮ್ಮನ ಮೇಲೆ ಮುನಿಸಿಕೊಂಡು ಮನೆಯಿಂದ ಓಡಿದ ಮಕ್ಕಳಿದ್ದಾರೆ. ಆದ್ದರಿಂದ ಅಳುವ ಮಕ್ಕಳನ್ನು ಖಂಡಿತಾ ನಿರ್ಲಕ್ಷಿಸಬೇಡಿ. ಆದರೆ ಸಂತೈಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಕಲಿಯಿರಿ...

ಮಗು ಅಳಲು ಕಾರಣವೇನು ಎಂಬುದನ್ನು ಅರಿಯಿರಿ

ಮಗು ಅಳಲು ಕಾರಣವೇನು ಎಂಬುದನ್ನು ಅರಿಯಿರಿ

ಹೆಚ್ಚಾಗಿ ಮಕ್ಕಳು ತಮ್ಮ ತೊಂದರೆಯನ್ನು ವ್ಯಕ್ತಪಡಿಸಲೆಂದೇ ಅಳುತ್ತವೆ. ಹಸಿವಿನಿಂದ ಅಳುವ ಮಕ್ಕಳು ಮಾತು ಕಲಿತ ಬಳಿಕ ಮಾತಿನಲ್ಲಿಯೇ ಹೇಳುತ್ತವೆಯೇ ಹೊರತು ಅಳುವ ಮೂಲಕ ಅಲ್ಲ. ಯಾವುದಕ್ಕೂ ಮಗುವಿನ ಅಳುವನ್ನು ಬಲವಂತವಾಗಿ ನಿಲ್ಲಿಸಲು ಯತ್ನಿಸಬೇಡಿ. ಮಗು ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎಂಬುದನ್ನು ಗಮನವಿಟ್ಟು ಕೇಳಿ. ಆ ವಿಷಯವನ್ನು ಪರಿಗಣಿಸಿ ನಿಮ್ಮ ತೀರ್ಮಾನ ನೀಡಿ. ತನಗೆ ನ್ಯಾಯ ಸಿಕ್ಕಿದೆ ಎಂದು ಅರಿವಾದೊಡನೆ ಮಗು ಅಳುವುದನ್ನು ನಿಲ್ಲಿಸುತ್ತದೆ.

ಮಗುವಿನ ಮಾತನ್ನು ಗಮನವಿಟ್ಟು ಕೇಳಿ

ಮಗುವಿನ ಮಾತನ್ನು ಗಮನವಿಟ್ಟು ಕೇಳಿ

ಅಳುತ್ತಿರುವ ಮಗು ಹೇಳುವ ಮಾತನ್ನು ತುಂಡರಿಸದೇ ಮಾತನ್ನು ಪೂರ್ಣಗೊಳಿಸಲು ಅನುವು ಮಾಡಿ. ಒಂದು ವೇಳೆ ತಡೆದರೆ ಅಮೂಲ್ಯವಾದ ಮಾಹಿತಿಯನ್ನು ಮಗು ಹೇಳದೇ ಹೋಗಬಹುದು. ಅಳುವ ಮಕ್ಕಳು ತಮ್ಮ ಸಿಟ್ಟನ್ನು ಮೊದಲು ತೋರ್ಪಡಿಸಿ ಅದರ ಕಾರಣವನ್ನು ಬಳಿಕ ತಿಳಿಸುತ್ತಾರೆ. ಆದ್ದರಿಂದ ಮಗು ತನ್ನ ಎಲ್ಲಾ ಮಾತನ್ನು ಪೂರ್ಣಗೊಳಿಸಲು ಬಿಡಿ.

ಮಗುವಿಗೆ ಸಾಂತ್ವಾನ ಮತ್ತು ಭರವಸೆ ನೀಡಿ

ಮಗುವಿಗೆ ಸಾಂತ್ವಾನ ಮತ್ತು ಭರವಸೆ ನೀಡಿ

ಮಗುವಿನ ಅಳುವಿಗೆ ಕಾರಣ ತಿಳಿದ ಬಳಿಕ ಅದಕ್ಕೆ ತಕ್ಕ ಪರಿಹಾರ ಅಥವಾ ನಿರ್ಣಯವನ್ನು ನೀಡುವುದಾಗಿ ವಾಗ್ದಾನ ಮಾಡಿ ಹಾಗೂ ನೀವು ಮಗುವಿನ ಪಕ್ಷದಲ್ಲಿದ್ದೀರಿ ಎಂದು ಸ್ಪಷ್ಟಪಡಿಸಿ. ಇದು ಮಗುವಿಗೆ ಸುರಕ್ಷಿತ ಭಾವನೆ ಮೂಡಿಸುತ್ತದೆ ಹಾಗೂ ಅಳುವಿಗೆ ಕಾರಣವಾಗಿದ್ದ ನೋವು ಮರೆಯಲು ಸಾಧ್ಯವಾಗುತ್ತದೆ.

ಬುದ್ಧಿವಾದ ನೀಡಿ

ಬುದ್ಧಿವಾದ ನೀಡಿ

ಅಳು ನಿಂತ ಬಳಿಕ ಮಗು ನಿಮ್ಮ ಮಾತುಗಳನ್ನು ಕೇಳಲು ಸಿದ್ಧವಾಗಿರುತ್ತದೆ. ಈ ಸಮಯದಲ್ಲಿ ಪಾಲಕರು ತಮ್ಮ ವಿವೇಚನೆಯಿಂದ ಮಗುವಿಗೆ ಬುದ್ಧಿವಾದವನ್ನು ನೀಡಬೇಕು. ಇನ್ನೊಮ್ಮೆ ಇಂತಹ ತಪ್ಪು ಯಾವತ್ತೂ ಆಗದಿರುವಂತೆ ಭಾಷೆ ಅಥವಾ ಪ್ರಮಾಣವನ್ನು ತೆಗೆದುಕೊಳ್ಳಬೇಕು. ಇದನ್ನು ಮಗುವನ್ನು ತಮ್ಮ ಭರವಸೆಗೆ ತೆಗೆದುಕೊಂಡ ಬಳಿಕವೇ ಮಾಡಬೇಕೇ ವಿನಃ ಆತುರ ತೋರಬಾರದು. ಸೂಕ್ತ ಸಮಯಕ್ಕೂ ಮುನ್ನವೇ ಬುದ್ದಿವಾದ ಹೇಳಲು ಪ್ರಾರಂಭಿಸಿದರೆ ಇದು ಕೊರೆತದಂತೆ ಅನ್ನಿಸಿ ಮಗು ನಿಮ್ಮ ಮೇಲೆ ದ್ವೇಶದ ಭಾವನೆ ಮೂಡಿಸಿಕೊಳ್ಳಬಹುದು. ಬೈಗುಳದ ಅಥವಾ ಭಾರೀ ಪದಗಳನ್ನು ಖಂಡಿತಾ ಬಳಸದೇ ಕೇವಲ ಸೌಮ್ಯ ಪದಗಳನ್ನು ಮಾತ್ರ ಉಪಯೋಗಿಸಬೇಕು.ಒಂದು ವೇಳೆ ಇಂತಹ ಉಪಯುಕ್ತ ಮಾಹಿತಿ ತಮ್ಮಲ್ಲಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯ ಪುಟದ ಕೆಳಗಿರುವ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.

English summary

How To Console Your Crying Child

Generally, when kids start crying, parents may go clueless. You may also lose your patience especially if you see your kid crying when you just reach your home after a very tiresome day at the office. You might often wonder how to console your child. Well, consoling a child requires lots of patience and acceptance. Though all parents can't afford to have that level of patience, it is important to cultivate such qualities to offer better parenting to your kids.
Story first published: Wednesday, October 28, 2015, 18:01 [IST]
X
Desktop Bottom Promotion