For Quick Alerts
ALLOW NOTIFICATIONS  
For Daily Alerts

ಊಟದ ವಿಷಯದಲ್ಲಿ ಮಕ್ಕಳು ರಂಪಾಟ ಮಾಡುತ್ತಾರೆಯೇ?

By Arshad
|

ತಾಯಿಯಾದ ಬಳಿಕ ಬಾಣಂತಿಗೆ ತನ್ನ ದೇಹವನ್ನು ಕಾಪಾಡಿಕೊಳ್ಳುವ ಜೊತೆಗೇ ಮಗುವಿನ ಲಾಲನೆ ಪಾಲನೆಯ ಬಗ್ಗೆ ಹೆಚ್ಚು ಜವಾಬ್ದಾರಿಗಳು ಎದುರಾಗುತ್ತವೆ. ಪ್ರತಿದಿನವೂ ಹೊಸದೊಂದು ಕಲಿಯುವಂತಾಗುತ್ತದೆ. ಹಗಲಿಡೀ ಮಲಗುವ ಮಗು ರಾತ್ರಿ ತಾಯಿಯನ್ನು ನಿದ್ದೆ ಮಾಡಲು ಬಿಡದೇ ಆಗಾಗ ಅಳುತ್ತಿರುತ್ತದೆ. ಕೆಲವೊಮ್ಮೆ ಮಕ್ಕಳು ಅಕಾರಣವಗಿ ಅಳುವುದು, ರಚ್ಚೆ ಹಿಡಿಯುವುದು, ಕುಡಿಯಲು ತಿನ್ನಲು ಹಠಮಾಡುವುದು

ಮೊದಲಾದವುಗಳನ್ನು ಹೇಗೆ ನಿಭಾಯಿಸಬೇಕೆಂಬುದೇ ನಿಮಗೆ ಗೊತ್ತಾಗುವುದಿಲ್ಲ. ಆಗ ನಿಮಗೆ ನಿಮ್ಮ ತಾಯಿಯ ಅಥವಾ ಅನುಭವವುಳ್ಳ ಇತರ ದಾದಿಯರ ನೆರವು ಬೇಕೇ ಬೇಕು. ಕೆಲವೊಮ್ಮೆ ಮಕ್ಕಳು ತಮಗೆ ಇಷ್ಟವಿಲ್ಲದ ಆಹರಗಳನ್ನು ನುಂಗುವುದೇ ಇಲ್ಲ. ನಿಮ್ಮ ಮಗುವೂ ಕೆಲವೊಂದು ಆಹಾರಗಳನ್ನು ನುಂಗಲು ಹಠ ಮಾಡುತ್ತಿದ್ದರೆ ಮತ್ತು ನುಂಗಿದ ಬಳಿಕ ಸತತವಾಗಿ ಅಳುತ್ತಿದ್ದರೆ ಅದಕ್ಕೆ ಈ ರುಚಿ ಹಿಡಿಸಲಿಲ್ಲ ಎಂದೇ ಅರ್ಥ. ಆದರೆ ಇನ್ನೂ ಮಾತು ಬರದ ಮಗು ನಿಮಗೆ ಹೇಗೆ ಹೇಳಲು ಸಾಧ್ಯ? ಅದಕ್ಕೇ ಈ ರಂಪಾಟವನ್ನು ಅನುಸರಿಸುತ್ತದೆ. ಒಂದು ವೇಳೆ ನೀವು ನಿಮ್ಮ ಮಗುವಿನಿಂದ ಇಂತಹ ರಂಪಾಟವನ್ನು ಎದುರಿಸುತ್ತಿದ್ದರೆ ಮತ್ತು ಇದರಿಂದ ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗಿ ಹೋಗುತ್ತಿದ್ದರೆ ಕೆಳಗಿನ ಸ್ಲೈಡ್ ಷೋ ನಲ್ಲಿ ನೀಡಲಾಗಿರುವ ಉಪಯುಕ್ತ ವಿಧಾನಗಳು ವರವಾಗಿ ಪರಿಣಮಿಸಲಿವೆ.

ನಮಗೆ ಹೇಗೆ ದಿನವೂ ವಿವಿಧ ರುಚಿಗಳೇ ಇಷ್ಟವೋ ಅಂತೆಯೇ ಮಕ್ಕಳಿಗೂ ಪ್ರತಿದಿನ ಬೇರೆ ಬೇರೆ ರುಚಿಯ ಆಹರಗಳನ್ನು ನೀಡುವುದು ಉತ್ತಮ. ಮಕ್ಕಳು ಕೊಂಚ ದೊಡ್ಡವರಾದ ಬಳಿಕವೂ ಊಟ ಮಾಡಲು ರಂಪಾಟ ಮಾಡುತ್ತಿದ್ದರೆ ಇದಕ್ಕೆ ಆಹಾರ ವೈವಿಧ್ಯಗಳ ಹೊರತಾಗಿ ಬೇರೆ ಕಾರಣಗಳಿವೆ. ಕೆಲವೊಮ್ಮೆ ಕಾರಣಗಳೇ ಬೇಕಾಗಿಲ್ಲ, ಸುಮ್ಮನೇ ಅಮ್ಮನನ್ನು ಸತಾಯಿಸಲೆಂದೇ ರಂಪಾಟ ಮಾಡುತ್ತಾರೆ. ಇದಕ್ಕೂ ಕೆಳಗಿನ ವಿಧಾನದಲ್ಲಿ ಸೂಕ್ತ ಪರಿಹಾರವಿದೆ....

 ಹರಡಬಹುದಾದ ಆಹಾರ

ಹರಡಬಹುದಾದ ಆಹಾರ

ಇನ್ನೂ ಹಲ್ಲು ಮೂಡಿರದ ಮಕ್ಕಳಿಗೆ ಮೆತ್ತನೆಯ ಮತ್ತು ಹರಡಬಹುದಾದ ಆಹಾರಗಳೇ ಇಷ್ಟ ಮತ್ತು ಸೂಕ್ತ. ಹಲ್ಲು ಮೂಡಿದ ಬಳಿಕವೂ ಮಕ್ಕಳು ಹರಡಬಹುದಾದ ಆಹಾರಗಳ ಕಡೆಗೆ ಹೆಚ್ಚಿನ ಒಲವು ತೋರುತ್ತಾರೆ.ಅಂತೆಯೇ ಮಕ್ಕಳಿಗೆ ಬೆಣ್ಣೆ, ಜಾಮ್, ಪೀನಟ್ ಬಟರ್, ಚೀಸ್ ಮೊದಲಾದವು ಇಷ್ಟವಾಗಿವೆ. ಇವುಗಳನ್ನು ಮೃದುವಾದ ಬ್ರೆಡ್ ಮೇಲೆ ಮಕ್ಕಳಿಗಾಗಿ ತಯಾರಿಸಿದ ಪ್ಲಾಸ್ಟಿಕ್ಕಿನ ಬೆಣ್ಣೆ ಚಮಚ ಬಳಸಿ ಸವರಿಕೊಂಡು ತಿನ್ನುವುದನ್ನು ಕಲಿಸಿದರೆ ಇದನ್ನು ಮಕ್ಕಳು ಅತೀವ ಕುತೂಹಲದಿಂದ ಕಲಿಯುತ್ತಾರೆ. ಬ್ರೆಡ್ ಬದಲಿಗೆ ಬಿಸ್ಕತ್ತ್ ಟೋಸ್ಟ್ ಗಳ ಮೇಲೂ ಹರಡಿ ವೈವಿಧ್ಯತೆ ಹೆಚ್ಚಿಸಬಹುದು.

ಮುಳುಗಿಸಬಹುದಾದ ಆಹಾರ

ಮುಳುಗಿಸಬಹುದಾದ ಆಹಾರ

ಮಕ್ಕಳಿಗೆ ಊಟದಲ್ಲಿಯೂ ಆಟ ಎಂದರೆ ಇಷ್ಟ. ಸುಮ್ಮನೇ ಚಮಚದಲ್ಲಿ ಬಲವಂತವಾಗಿ ತಿನ್ನುಸುತ್ತಿದ್ದರೆ ಮಕ್ಕಳು ಊಟವನ್ನು ಯಾಂತ್ರಿಕವಾಗಿ ಮಾಡುತ್ತಾರೆಯೇ ವಿನಃ ಅನುಭವಿಸುವುದಿಲ್ಲ. ಅದರಲ್ಲೂ ಒಂದು ವೇಳೆ ನಿಮ್ಮ ಮಗು ಕೊಂಚ ದೊಡ್ಡದಾಗಿದ್ದು ತರಕಾರಿ ತಿನ್ನಿಸುವ ಸಮಯವಾಗಿದ್ದರೆ ಇದನ್ನು ತಿನ್ನಲು ಮಕ್ಕಳು ತಕರಾರು ತೆಗೆಯುತ್ತಾರೆ. ಈ ಸಮಯದಲ್ಲಿ ಇವನ್ನು ಅವರ ಇಷ್ಟದ ದ್ರವಾಹಾರಗಳಲ್ಲಿ ಮುಳುಗಿಸಿ ನೀಡುವುದು ಜಾಣತನದ ಕ್ರಮವಾಗಿದೆ. ತರಕಾರಿಗಳನ್ನು ತೆಳ್ಳಗೆ ಹೆಚ್ಚಿ ಅಥವಾ ತುರಿದು ಕಾಟೇಜ್ ಚೀಸ್, ಮೊಸರು, ಪೀನಟ್ ಬಟರ್, ಗುವಾಕಾಮೋಲ್, ಜೇನುತುಪ್ಪು ಮೊದಲಾದವುಗಳಲ್ಲಿ ಮುಳುಗಿಸಿ ತಿನ್ನಿಸುವುದು ಉತ್ತಮ.

ವಿವಿಧ ಆಹಾರಗಳ ಮಿಶ್ರಣ

ವಿವಿಧ ಆಹಾರಗಳ ಮಿಶ್ರಣ

ಇತರ ಸಮಯದಲ್ಲಿ ಶಾಂತರಾಗಿರುವ ಮಕ್ಕಳೂ ಊಟದ ಸಮಯದಲ್ಲಿ ಹೆಚ್ಚು ರಂಪಾಟ ಮಾಡುತ್ತಾರೆ. ಹೆಚ್ಚಿನ ಮಕ್ಕಳು ಹಿಡಿಯುವ ಹಟವೆಂದರೆ ಆ ಸಮಯದಲ್ಲಿ ನೀವು ನೀಡುವ ಯಾವುದೇ ಆಹಾರವನ್ನು ನಿರಾಕರಿಸುವುದು ಮತ್ತು ನಿಮ್ಮ ಬಳಿ ಇಲ್ಲದೇ ಇರುವ ಆಹಾರವನ್ನು ಕೇಳುವುದು. ಉದಾಹರಣೆಗೆ ನೀವು ಚಪಾತಿ ತಿನ್ನಿಸಲು ಎಲ್ಲಾ ತಯಾರಿ ಮಾಡಿಕೊಂಡು ಬಂದರೆ ಮಗುವಿಗೆ ಚಪಾತಿ ಬೇಡ ಅನ್ನವೇ ಬೇಕು. ಈಗೇನು ಮಾಡುತ್ತೀರಿ? ಇದಕ್ಕೆ ಉತ್ತರ ವಿವಿಧ ಆಹಾರಗಳ ಮಿಶ್ರಣ. ತಟ್ಟೆಯಲ್ಲಿ ಮಗು ಇಷ್ಟಪಡುವ ಅಹಾರಗಳ ಜೊತೆಗೇ ಕೆಲವು ಹಣ್ಣುಗಳು, ಉದಾಹರಣೆಗೆ ಸೇಬು, ಬಾಳೆ, ಕಿತ್ತಳೆ, ಪೇರಳೆ ಇತ್ಯಾದಿ ಮತ್ತು ತರಕಾರಿಗಳಾದ ಕ್ಯಾರೆಟ್, ಬ್ರೊಕೋಲಿ, ಸೌತೆ, ಟೊಮಾಟೋ ಇತ್ಯಾದಿ ಎಲ್ಲವೂ ಕೊಂಚಕೊಂಚವಾಗಿ ಇರಲಿ. ಈಗ ಮಗುವಿನ ಎದುರು ಬಹಳ ಆಯ್ಕೆ ಇರುವ ಕಾರಣ ಯಾವುದಾದರೊಂದನ್ನು ನಿರಾಕರಿಸಿದರೆ ಇನ್ನೊಂದನ್ನು ಆಯ್ಕೆ ಮಾಡಿಕೊಳ್ಳುವ ಸಂಭವವಿದೆ. ನಿಧಾನವಾಗಿ ಮಕ್ಕಳು ಹಣ್ಣು ಮತ್ತು ತರಕಾರಿಗಳ ಬಗ್ಗೆ ಬೆಳೆಸಿಕೊಳ್ಳುವುದನ್ನು ಕಣ್ಣಾರೆ ಕಾಣಬಹುದು.

ಸ್ಮೂತಿಗಳು

ಸ್ಮೂತಿಗಳು

ಸದಾ ಹೊಸತನ್ನು ಬಯಸುವ ಮಕ್ಕಳು ಬೇಗಬೇಗನೇ ತಿಂದು ಮುಗಿಸುವ ಆತುರದಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಜಗಿದು ನುಂಗುವ ಆಹಾರಗಳಿಗಿಂತ ನೇರವಾಗಿ ನುಂಗುವ ಆಹಾರಗಳೇ ಹೆಚ್ಚು ಇಷ್ಟ. ಆದ್ದರಿಂದ ಕ್ಯಾರೆಟ್, ಬೀಟ್ ರೂಟ್ ಮೊದಲಾದ ಅವಶ್ಯಕ ತರಕಾರಿಗಳನ್ನು ತಿನ್ನಲು ಮಕ್ಕಳು ಹಟಮಾಡುತ್ತಿದ್ದರೆ ಇವನ್ನು ಸ್ಮೂತಿಯ ರೂಪದಲ್ಲಿ ನೀಡಿದರೆ ಇಷ್ಟಪಟ್ಟು ಕುಡಿಯುತ್ತಾರೆ. ಇದನ್ನು ಅವರ ಇಷ್ಟದ ಹಣ್ಣುಗಳೊಂದಿಗೆ ಬೆರೆಸಿ ಕ್ಯಾರೆಟ್ಟಿನ ಹೆಸರು ಸಹಾ ತೆಗೆಯದೇ ಆ ಹಣ್ಣಿನ ಸ್ಮೂತಿ ಎಂದು ಹೇಳಿದರೆ ಮಕ್ಕಳು ಎರಡನೆಯ ಬಾರಿ ಯೋಚಿಸದೇ ಕುಡಿದು ಬಿಡುತ್ತಾರೆ. ಉದಾಹರಣೆಗೆ ಬಾಳೆಹಣ್ಣು ಮತ್ತು ಕ್ಯಾರೆಟ್ ನ ಸ್ಮೂತಿಯಾಗಿದ್ದರೆ ಕೇವಲ ಬಾಳೆಹಣ್ಣಿನ ಸ್ಮೂತಿ ಎಂದರೆ ಸಾಕು. ಇದರಿಂದ ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗುವುದರ ಜೊತೆಗೇ ವಿವಿಧ ಹಣ್ಣು ಮತ್ತು ತರಕಾರಿಗಳನ್ನು ತಿನ್ನಿಸಿದಂತೆಯೂ ಆಗುತ್ತದೆ.

ಆಹಾರ ತಯಾರಿಸಲು ಮಕ್ಕಳನ್ನು ನೆರವಾಗಲು ಆಹ್ವಾನಿಸಿ

ಆಹಾರ ತಯಾರಿಸಲು ಮಕ್ಕಳನ್ನು ನೆರವಾಗಲು ಆಹ್ವಾನಿಸಿ

ಸಾಮಾನ್ಯವಾಗಿ ಅಮ್ಮ ಚಪಾತಿ ಮಾಡುವಾಗ ಮಕ್ಕಳೂ ತಾನೊಂದು ಚಪಾತಿ ಲಟ್ಟಿಸುತ್ತೇನೆ ಎಂದು ದುಂಬಾಲು ಬೀಳುವುದನ್ನು ಗಮನಿಸಬಹುದು. ಮಕ್ಕಳು ತಮ್ಮ ಹಿರಿಯರನ್ನು ಅನುಕರಿಸುವ ಮೂಲಕ ಹೆಚ್ಚು ಕಲಿಯುತ್ತಾರೆ. ಇದನ್ನು ಅವರ ಅಭಿವೃದ್ಧಿಗೆ ಬಳಸಲು ಮತ್ತು ಅವರ ಕೈಯಿಂದ ಮಾಡಿಸಿ ಅವರಿಗೆ ತಿನ್ನಿಸುವ ಮೂಲಕ ಆಹಾರದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಬಹುದು. ಇದು ಅವರ ಕ್ರಿಯಾತ್ಮಕತೆ ಮತ್ತು ಆಯ್ಕೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮಗೊಳಿಸುತ್ತದೆ. ಆದ್ದರಿಂದ ಮಕ್ಕಳ ಆಹಾರ ತಯಾರಿಸುವ ವೇಳೆ ನಿಮಗೆ ನೆರವಾಗಲು ಕರೆದು ಅವರು ಮಾಡಬಹುದಾದಂತಹ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಸಿ ತಿನ್ನಿಸಿದರೆ ತಾವು ಮಾಡಿದ ಕಾರ್ಯ ಎಂದು ತೃಪ್ತಿಪಟ್ಟು ಯಾವುದೇ ಹಟ ಹಿಡಿಯದೇ ತಿನ್ನುತ್ತಾರೆ.

English summary

Food Ideas For Your Fussy Babies

As a new mother, you will no doubt have a lot to learn. Your baby will keep you up at night and demand all the care and attention you can muster. Sometimes, these small setbacks can leave you feeling clueless and wishing you knew how to work your way around them. Here's a list of the best food ideas for your little picky eater.
X
Desktop Bottom Promotion