For Quick Alerts
ALLOW NOTIFICATIONS  
For Daily Alerts

ಪೋಷಕರ ಸಣ್ಣ ತಪ್ಪುಗಳಿಂದ ಮಕ್ಕಳ ಜೀವನ ಅಭದ್ರ

By Super
|

ಮಕ್ಕಳನ್ನು ಬೆಳೆಸುವುದು ಮತ್ತು ಅವರನ್ನು ಪ್ರಜ್ಞಾವಂತ ನಾಗರನ್ನಾಗಿ ಮಾಡುವುದು ಪಾಲಕರಿಗೆ ನಿಜಕ್ಕೂ ಒಂದು ಸವಾಲಿನ ಕೆಲಸ. ಎಷ್ಟೇ ಕಾಳಜಿ ತೆಗೆದುಕೊಂಡರೂ ಕೂಡ ಕೆಲವೊಮ್ಮೆ ಮಕ್ಕಳನ್ನು ಬೆಳೆಸುವುದರಲ್ಲಿ ತಪ್ಪುಗಳು ನಡೆದುಬಿಡುತ್ತವೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಬೇಕು ಎಂಬ ಆಸೆಯಿರುತ್ತದೆ.

ಆದರೆ ಎಷ್ಟೇ ಕಾಳಜಿ ತೆಗೆದುಕೊಂಡರೂ ಕೂಡ ಕೆಲವೊಮ್ಮೆ ಮಕ್ಕಳನ್ನು ಬೆಳೆಸುವುದರಲ್ಲಿ ತಪ್ಪುಗಳು ನಡೆದುಬಿಡುತ್ತವೆ. ಎಲ್ಲಕ್ಕಿಂತ ಮುಖ್ಯವಾದುದು ಮಕ್ಕಳಿಗೆ ಸರಿಯಾದ ಮೌಲ್ಯವನ್ನು ಕಲಿಸಿಕೊಡುವುದು. ಮಕ್ಕಳ ಆಹಾರ, ಬಟ್ಟೆ, ಮನೆ ಇವೆಲ್ಲವುಗಳ ಜೊತೆಗೆ ಅವರನ್ನು ಸರಿಯಾದ ದಾರಿಯಲ್ಲಿ ಬೆಳೆಸುವುದು, ಸರಿಯಾದ ವ್ಯಕ್ತಿತ್ವವನ್ನು ಕಳಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಪೋಷಕರು ಮಾಡಬಹುದಾದ ತಪ್ಪುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು

Things That Parents Do Wrong

ಶಿಸ್ತು
ಎಲ್ಲಾ ತಂದೆತಾಯಿಯೂ ಮಕ್ಕಳಿಗೆ ಶಿಸ್ತನ್ನು ಕಲಿಸಲು ಪ್ರಯತ್ನಿಸುತ್ತಾರೆ. ಮಕ್ಕಳಿಗೆ ತಕ್ಕ ಮಟ್ಟಿಗೆ ಶಿಸ್ತನ್ನು ಕಲಿಸುವುದು ಮುಖ್ಯ ಆದರೆ ಅದೇ ಅತಿಯಾದರೆ ಮಕ್ಕಳು ನಿಮ್ಮನ್ನು ಶಾಶ್ವತವಾಗಿ ವಿರೋಧಿಸಲು ಪ್ರಾರಂಭಿಸಬಹುದು. ಆದ್ದರಿಂದ ಮಕ್ಕಳ ಬಾಲ್ಯವನ್ನು ಅತಿಯಾದ ಒತ್ತಡದ ಮೂಲಕ ಹಾಳು ಮಾಡಿಬಿಡಬೇಡಿ.

ಮುದ್ದಿಸುವುದು
ಅತಿಯಾದ ಮುದ್ದು ಮಕ್ಕಳನ್ನು ಹಾಳು ಮಾಡಬಹುದು.ನಿಮ್ಮ ಮಕ್ಕಳಿಗೆ ಸಾಕಷ್ಟು ಕಾಳಜಿ ಮತ್ತು ವಾತ್ಸಲ್ಯವನ್ನು ನೀಡಿ ಆದರೆ ಇದು ಅವರನ್ನು ಹಾಳು ಮಾಡದಂತೆ ನೋಡಿಕೊಳ್ಳಿ. ಒಳ್ಳೆಯ ವ್ಯಕ್ತಿತ್ವವನ್ನು ರೂಡಿಸಿಕೊಳ್ಳುವುದಕ್ಕೆ ತಿಳುವಳಿಕೆ ನೀಡಲು ಮುದ್ದು ಮಾಡಿ ಕಲಿಸುವುದರಿಂದ ಮಕ್ಕಳು ಬೇಗ ಕಲಿಯುತ್ತಾರೆ. ಆದರೆ ಅತಿಯಾದ ಮುದ್ದು ಮಕ್ಕಳನ್ನು ಹಾಳು ಮಾಡಬಹುದು ಎಂಬುದರ ಬಗ್ಗೆಯೂ ಗಮನವಿರಲಿ.

ನಿರ್ಲಕ್ಷ್ಯತೆ
ಸಾಮಾನ್ಯವಾಗಿ ಪೋಷಕರು ಮಾಡುವ ಕಿರಿಕಿರಿಗಳಲ್ಲಿ ಇದು ಕೂಡ ಒಂದು. ಮಕ್ಕಳ ಭಾವನೆಗಳಿಗೆ ಬೆಲೆ ಕೊಡದೆ ಅವರನ್ನು ನಿರ್ಲಕ್ಷಿಸಿದರೆ ಮಕ್ಕಳು ಆಘಾತಕ್ಕೆ ಒಳಗಾಗುತ್ತಾರೆ. ಕ್ಕಳಿಗೆ ಅಗತ್ಯವಿರುವಾಗ ಅವರ ಬಗ್ಗೆ ಕಾಳಜಿ ತೆಗೆದುಕೊಂಡು ಅವರಿಗೆ ನಾವಿದ್ದೇವೆ ಎಂಬ ಭಾವನೆಯನ್ನು ಮೂಡಿಸುವುದು ಸೂಕ್ತ.

ಅಹಂ ಉತ್ತೇಜಿಸುವುದು
ಮಕ್ಕಳಿಗೆ ಆರೋಗ್ಯಕರವಾದ, ಒಳ್ಳೆಯ ವ್ಯಕ್ತಿತ್ವ ರೂಡಿಸುವುದು ಒಳ್ಳೆಯದು. ನಿಮ್ಮ ಮಕ್ಕಳನ್ನು ಅಗತ್ಯಕ್ಕಿಂತ ಹೆಚ್ಚು ಹೊಗಳಿದರೆ ಅಥವಾ ಅಗತ್ಯಕ್ಕಿಂತ ಹೆಚ್ಚು ಮುದ್ದಿಸಿದರೆ ಮಕ್ಕಳಲ್ಲಿ ಅಹಂ ಹೆಚ್ಚಬಹುದು.ಮಕ್ಕಳಲ್ಲಿ ಸೊಕ್ಕು ಬೆಳೆಯದಂತೆ ತಡೆಯಲು ಒಳ್ಳೆಯ ವ್ಯಕ್ತಿತ್ವ ಮತ್ತು ಮೃದುತನವನ್ನು ಕಲಿಸುವುದು ಸೂಕ್ತ. ಮಕ್ಕಳ ಅಧ್ಯಯನದ ಮೇಜನ್ನು ವ್ಯವಸ್ಥಿತವಾಗಿರಿಸಿಕೊಳ್ಳುವುದು ಹೇಗೆ?

ಹೆಚ್ಚಿನ ಕಾಳಜಿ
ಇಂದು ಹೆಚ್ಚಿನ ತಂದೆತಾಯಿಯರು ತಮ್ಮ ಮಕ್ಕಳ ಬಗೆಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ನೀವು ಅವರ ಸುರಕ್ಷತೆಯ ಬಗೆಗೆ ಅತಿಯಾದ ಕಾಳಜಿ ವಹಿಸುವುದರಿಂದ ಸ್ವತಂತ್ರವಾಗಿರಲು ಅವರಿಗೆ ಮುಕ್ತವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ದೊಡ್ಡ ಜಗತ್ತಿನಲ್ಲಿ ಒಬ್ಬರೇ ಬದುಕನ್ನು ಹೇಗೆ ಎದುರಿಸಬೇಕೆಂಬ ಛಲ ಅವರಲ್ಲಿ ಇರುವುದಿಲ್ಲ. ಎಲ್ಲಾ ಹೆತ್ತವರು ತಿಳಿದುಕೊಳ್ಳಬೇಕಾದ ಒಂದು ಅಂಶವೆಂದರೆ: ಮಕ್ಕಳ ಬಗೆಗೆ ಅತಿಯಾಗಿ ಕಾಳಜಿ ವಹಿಸದೇ ಇರುವುದಾಗಿದೆ! ಅವರ ಸಮಸ್ಯೆಯನ್ನು ಅವರೇ ನಿವಾರಿಸಲಿ, ಮತ್ತು ಅವರಿಗೆ ಮಾರ್ಗದರ್ಶಿಯಾಗಿ ನೀವು ಅವರೊಂದಿಗೆ ಇರುವುದು ಅತ್ಯವಶ್ಯಕ.

English summary

Things That Parents Do Wrong

There are some things that parents do wrong. Of course, parenting is not an easy task. Several things might go wrong even when lots of care is taken. But still, its better to know about certain basic things that parents do wrong so that you as a parent can try to avoid such mistakes.
X
Desktop Bottom Promotion