For Quick Alerts
ALLOW NOTIFICATIONS  
For Daily Alerts

ಮನಸ್ಸಿಗೆ ಮುದ ನೀಡುವ ಮಕ್ಕಳೊಂದಿಗಿನ ಒಡನಾಟ

By Super
|

ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ಸ್ವಂತ ಖರ್ಚುಗಳಿಗೆ ಕೊಂಚ ಕಡಿವಾಣ ಹಾಕಿದರೂ ಮಕ್ಕಳ ಬೇಡಿಕೆಯನ್ನು ಈಡೇರಿಸಲು ಹಿಂದೆ ಮುಂದೆ ನೋಡುವುದಿಲ್ಲ. ಈ ವಾಸ್ತವವನ್ನೇ ಬಹುರಾಷ್ಟ್ರೀಯ ಸಂಸ್ಥೆಗಳು ಬಹುವಾಗಿ ನೆಚ್ಚಿಕೊಂಡಿವೆ. ಹಿರಿಯರ ಬಟ್ಟೆಗಿಂತಲೂ ಕಡಿಮೆ ಬಟ್ಟೆ ಬಳಸಿಕೊಳ್ಳುವ ಮಕ್ಕಳ ಬಟ್ಟೆಗಳಿಗೆ ಹಿರಿಯರ ಬಟ್ಟೆಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆ! ಮಕ್ಕಳ ಆಟಿಕೆಗಳಿಗಂತೂ ಎಂಟು ಪಟ್ಟು ಬೆಲೆ! ಏಕೆಂದರೆ ಬಟ್ಟೆ ಮತ್ತು ಆಟಿಕೆಗಳು ಮೊದಲಾದವನ್ನು ಕೊಡಿಸಿ ಮಕ್ಕಳು ಪಡುವ ಖುಷಿಯನ್ನು ಹಿರಿಯರು ಅನುಭವಿಸುವಾಗ ಆ ಸಂತೋಷದ ಮುಂದೆ ದುಬಾರಿ ಬೆಲೆ ಸರ್ವಥಾ ಸಾಟಿಯಲ್ಲ.

ನಿತ್ಯದ ಜಂಜಡಗಳೆಷ್ಟಿದ್ದರೂ ಮನೆಗೆ ಬಂದ ಬಳಿಕ ಕುಟುಂಬದವರೊಡನೆ ಮತ್ತು ವಿಶೇಷವಾಗಿ ಮಕ್ಕಳೊಡನೆ ಕಳೆಯುವ ಸಮಯ ಆ ಆಯಾಸವನ್ನೆಲ್ಲಾ ನಿವಾರಿಸಿಬಿಡುತ್ತದೆ. ಮಕ್ಕಳೊಂದಿಗೆ ಕಳೆದ ಆ ಕ್ಷಣಗಳಷ್ಟೂ ಜೀವನಪರ್ಯಂತ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಆದರೆ ಕೆಲಸದ ನಿಮಿತ್ತ ಎಲ್ಲರಿಗೂ ಎಲ್ಲಾ ಸಮಯದಲ್ಲಿ ಕುಟುಂಬದವರೊಂದಿಗೆ ಇರುವ ಭಾಗ್ಯ ಒದಗಿ ಬರದು. ಆದರೆ ಆಗಾಗ ಬರುವ ಹಬ್ಬ ಮತ್ತು ಇತರ ರಜಾದಿನಗಳು ಮಕ್ಕಳೊಂದಿಗೆ ಕಳೆಯಲು ಸೂಕ್ತವಾದ ಅವಕಾಶವನ್ನು ಒದಗಿಸುತ್ತವೆ. ಇದನ್ನು ಬಳಸಿಕೊಳ್ಳದೇ ಇರುವವರೇ ನಿಜವಾದ ನಿರ್ಭಾಗ್ಯರು. ಮಕ್ಕಳಿಗೆ ಕಾಡುವ ದುಃಸ್ವಪ್ನವೆಂಬ ಪೆಡಂಭೂತದ ಕಾಟ..!

ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯ ಎಂದು ತಜ್ಞರು ತಿಳಿಸುತ್ತಾರೆ. ಹಿರಿಯರ ಮನದಲ್ಲಿ ಓಡುತ್ತಿರುವ ಆಲೋಚನೆಗಳು ಮಕ್ಕಳ ಮುಗ್ಧತೆ ಮತ್ತು ಸಂತೋಷದ ಮೂಲಕ ನಿಜವಾದ ದಿಕ್ಕು ಪಡೆಯುತ್ತವೆ. ಹಲವಾರು ಒತ್ತಡಗಳಿಂದ ಮುದುಡಿದ್ದ ಮನ ಮಗುವಿನ ಕಿಲಕಿಲ ನಗೆಯಿಂದ ಪ್ರಫುಲ್ಲವಾಗುತ್ತದೆ. ಇದನ್ನೇ ವಿಲಿಯಂ ವರ್ಡ್ಸ್ ವರ್ಥ್ ರವರು Child is father of the man ಎಂಬ ಸುಭಾಷಿತದ ಮೂಲಕ ತಿಳಿಸಿದ್ದಾರೆ. ರಜಾದಿನಗಳಲ್ಲಿ ಮಕ್ಕಳೊಂದಿಗಿನ ಒಡನಾಟದ ಅನುಕೂಲತೆಗಳನ್ನು ಈ ಕೆಳಗೆ ನೀಡಲಾಗಿದೆ ಮುಂದೆ ಓದಿ..

Importance Of Holidays In A Child's Life

ಮಕ್ಕಳಿಗೆ ರಜಾದಿನಗಳು ದಿನಚರಿಯಿಂದ ಬಿಡುವು ನೀಡಬಲ್ಲುದು
ನಿಮಗೆ ಕಚೇರಿ ಅಥವಾ ನಿಮ್ಮ ನಿತ್ಯದ ಚಟುವಟಿಕೆಯ ಅನುಕ್ರಮವಿರುವಂತೆಯೇ ಮಕ್ಕಳಿಗೂ ಅವರ ಶಾಲೆಯ ಮತ್ತು ಇತರ ಚಟುವಟಿಕೆಯ ಅನುಕ್ರಮಗಳಿರುತ್ತವೆ. ಪ್ರತಿವರ್ಷದ ಪರೀಕ್ಷೆಗಳನ್ನು ಎದುರಿಸಲು ನಡೆಸುವ ಸಿದ್ಧತೆ ಮತ್ತು ಪಾಠಗಳು ಅವರ ನಿತ್ಯದ ಪರಿಪಾಠವಾಗುತ್ತವೆ. ಆದರೆ ಒಮ್ಮೆ ಪರೀಕ್ಷೆ ಮುಗಿಯಿತೋ, ಪಠ್ಯಪುಸ್ತಕಗಳನ್ನು ಬದಿಗೆ ಹಾಕಿ ಆಟಕ್ಕೆ ಅಣಿಯಾಗುತ್ತಾರೆ. ಒಂದು ವೇಳೆ ರಜೆ ಇಲ್ಲದೇ ಹೋಗಿದ್ದರೆ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ಇದು ಹತ್ತು ಹಲವು ತೊಂದರೆಗಳಿಗೆ ದಾರಿಯಾಗುತ್ತದೆ. ಆದ್ದರಿಂದಲೇ ಪ್ರತಿ ಹಬ್ಬ ಮತ್ತು ಮುಖ್ಯ ರಾಷ್ಟ್ರೀಯ ದಿನಗಳಂದು ರಜೆ ನೀಡಲಾಗುತ್ತದೆ.
ರಜಾದಿನದಲ್ಲಿ ಹಿರಿಯರಂತೆಯೇ ಮಕ್ಕಳೂ ಸಹಾ ತಮ್ಮ ಇಷ್ಟದ ಕೆಲಸ ಅಥವಾ ಆಟವನ್ನು ಮನದಣಿಯೆ ಆಡಿ ಸಂತೃಪ್ತರಾಗುತ್ತಾರೆ. ಇದು ನಿತ್ಯದ ದಿನಚರಿಯಿಂದ ಬೇಗುದಿಗೆ ಒಳಗಾಗಿದ್ದ ಮನಕ್ಕೆ ಮುದ ನೀಡಬಲ್ಲುದು.

ಮಕ್ಕಳಲ್ಲಿ ನಿಮ್ಮ ಬಗ್ಗೆ ಗೌರವ ಭಾವನೆ ಹುಟ್ಟಿಸಬಲ್ಲುದು
ಮಕ್ಕಳಿಗೆ ತಮ್ಮ ಪಾಲಕರ ಮೇಲೆ ಅಭಿಮಾನ ಮತ್ತು ಗೌರವ ಹುಟ್ಟಲು ಅವರೊಡನೆ ಒಡನಾಟವಿರುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ವರ್ಷ ಪೂರ್ತಿ ಮನೆಯಿಂದ ಹೊರಗೇ ಇದ್ದು ಯಾವಾಗಲೋ ಒಮ್ಮೆ ಬರುವ ತಂದೆಯರನ್ನು ಮಕ್ಕಳು ಒಂದು ಹೆಸರನ್ನಾಗಿ ಮಾತ್ರ ಗುರುತಿಸುತ್ತಾರೆಯೇ ವಿನಃ ಆಪ್ತರಂತಲ್ಲ. ಆಯಾಗಳ ಆರೈಕೆಯಲ್ಲಿ ಬೆಳೆದ ಮಕ್ಕಳು ದೊಡ್ಡವರಾದ ಬಳಿಕ ಹಿರಿಯರನ್ನು ಬಿಟ್ಟು ತಮ್ಮದೇ ಮನೆ ಮಾಡಿ ಆ ಆಯಾರನ್ನು ತಮ್ಮ ಮನೆಯ ಹಿರಿಯರನ್ನಾಗಿಸಿಕೊಂಡಿರುವ ಘಟನೆಗಳು ಈ ಬಗ್ಗೆ ಎಚ್ಚರ ಹುಟ್ಟಿಸುತ್ತವೆ. ಆದ್ದರಿಂದ ರಜಾದಿನಗಳು ಬಂದಾಗ ತಪ್ಪದೇ ತಮ್ಮ ಮನೆಗೆ ಹಿಂದಿರುಗಿ ಸಾಧ್ಯವಾದಷ್ಟು ಹೊತ್ತು ಮಕ್ಕಳೊಂದಿಗೆ ಕಾಲ ಕಳೆಯುವುದು ಅಗತ್ಯ.

ಮಕ್ಕಳಿಗೆ ನಮ್ಮ ಸಂಸ್ಕೃತಿ ತಿಳಿಸಲು ಯೋಗ್ಯವಾದ ಸಮಯ
ಮಕ್ಕಳ ಮನಸ್ಸು ಬಿಳಿಯ ಕಾಗದವಿದ್ದ ಹಾಗೆ. ಪಾಲಕರು ಮತ್ತು ಶಿಕ್ಷಕರು ಏನನ್ನು ಕಲಿಸುತ್ತಾರೋ ಅದನ್ನೇ ಮನಸ್ಸಿನಲ್ಲಿ ನಾಟಿಸಿಕೊಳ್ಳುತ್ತಾ ಹೋಗುತ್ತಾರೆ. ಆದರೆ ಶಾಲೆಯಲ್ಲಿ ಶಿಕ್ಷಕರು ಕಲಿಸುವ ಪಾಠಗಳು ಮತ್ತು ಮನೆಯಲ್ಲಿ ಪಾಲಕರು ಕಲಿಸುವ ಪಾಠಗಳು ಬೇರೆಬೇರೆಯಾಗಿರುತ್ತವೆ. ನಮ್ಮ ಮಾತೃಭಾಷೆ, ನಮ್ಮ ಸಂಸ್ಕೃತಿ, ನಮ್ಮ ಕುಟುಂಬ, ಹಿರಿಯರಿಗೆ ತೋರುವ ಗೌರವ ಮೊದಲಾದವನ್ನು ಪಾಲಕರು ಸ್ವತಃ ಅನುಸರಿಸಿ ಮಕ್ಕಳಿಗೂ ಅನುಸರಿಸಲು ಪ್ರೇರಣೆ ನೀಡಿದಾಗ ಮಾತ್ರ ಮಕ್ಕಳೂ ಆ ಸಂಸ್ಕೃತಿಯನ್ನು ಮುಂದುವರೆಸಲು ಸಾಧ್ಯ. ಮಕ್ಕಳಿಗೆ ನೀವೇ ರೋಲ್ ಮಾಡೆಲ್‌ಗಳಾಗಿರಿ

ಮಕ್ಕಳೊಡನೆ ಸಾಧಿಸಿದ ಸಾಧನೆ ಅವಿಸ್ಮರಣೀಯ

ನಿಮ್ಮ ಮಕ್ಕಳೊಂದಿಗೆ ಸೇರಿ ಯಾವುದಾದರೂ ಕಾರ್ಯವನ್ನು ಸಾಧಿಸಿದಾಗ, ಆ ಸಾಧನೆ ಇಡಿಯ ಜೀವಮಾನ ನೆನಪಿನಲ್ಲಿಡುವಂತಹದ್ದಾಗುತ್ತದೆ. ಉದಾಹರಣೆಗೆ ಗಾಳಿಪಟ ಮಾಡುವ ವಿಧಾನವನ್ನು ಮಕ್ಕಳಿಗೆ ಕಲಿಸಿ ಮುಂದಿನ ಬಾರಿ ಅವರೇ ಸ್ವತಃ ಗಾಳಿಪಟ ತಯಾರಿಸಿ ಹಾರಿಸುವುದನ್ನು ನೋಡಿದಾಗ ಆಗುವ ಸಂತೋಷವನ್ನು ಅಳೆಯಲು ಸಾಧ್ಯವಿಲ್ಲ. ಮಕ್ಕಳೂ ತಮ್ಮ ಪಾಲಕರಿಂದ ಇಂತಹ ಹತ್ತು ಹಲವಾರು ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಮನೆಯ ಉದ್ಯಾನ, ಜೇಡಿಮಣ್ಣಿನ ಪಾತ್ರೆಗಳು, ಅಡುಗೆ ಮಾಡುವುದು, ಒಟ್ಟಾರೆ ಹೀಗೇ ಎಂದಿಲ್ಲ, ಯಾವುದೇ ಚಟುವಟಿಕೆ ಮಕ್ಕಳನ್ನು ವ್ಯಸ್ತರನ್ನಾಗಿಸಿ ಹವ್ಯಾಸವನ್ನು ಬೆಳೆಸಿಕೊಳ್ಳಲು ನೆರವಾದರೆ ಸಾಕು.

ಮರೆಯಲಾಗದ ವಿಹಾರಕೂಟದ ಮಜಾ
ರಜಾದಿನಗಳನ್ನು ಕಳೆಯಲು ಅತ್ಯುತ್ತಮವಾದ ವಿಧಾನವೆಂದರೆ ಮನೆಯವರೆಲ್ಲಾ ಸೇರಿ ವಿಹಾರಕೂಟಕ್ಕೆ ಎಲ್ಲಾದರೂ ಹೋಗುವುದು. ಇದಕ್ಕೆ ನಗರದಿಂದ ಹೊರಗೆ ಯಾವುದೇ ಪ್ರದೂಷಣೆಯಿಲ್ಲದ, ವಾಹನಗಳ ಕರ್ಕಶ ಶಬ್ದವಿಲ್ಲದ, ತಂಪುತಾಣವನ್ನು ಆಯ್ಕೆ ಮಾಡಿ ಇಡಿಯ ದಿನವನ್ನು ಕಳೆಯುವುದು ಉತ್ತಮ.


ಅದರಲ್ಲೂ ಮಕ್ಕಳ ಸ್ನೇಹಿತರ ಕುಟುಂಬಗಳು ಸೇರಿ ಒಂದು ಸ್ಥಳಕ್ಕೆ ಹೋಗುವುದು ಇನ್ನೂ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಮೊದಲೇ ಮಾತನಾಡಿಕೊಂಡು ಒಂದೊಂದು ಕುಟುಂಬದವರು ಒಂದೊಂದು ಖಾದ್ಯವನ್ನು ಮನೆಯಿಂದ ಮಾಡಿ ತಂದು ಎಲ್ಲರೂ ಹಂಚಿ ತಿಂದು ಸಂಭ್ರಮಿಸಿದಾಗ ಆಗುವ ಆನಂದ ಅವಿಸ್ಮರಣೀಯವಾಗಿದೆ.
English summary

Importance Of Holidays In A Child's Life

Spending time with family is a great way to unwind and relax. In fact, every moment you spend your valuable time with your kids would be a sweet memory in your life. Kids could be stress busters but you seldom gets some time to spend with them due to your busy schedules. But that is why festivals and holidays are for. There are some benefits of spending time with family on holidays. Firstly, you can relax well, feel secure and also feel blessed for having a family of your own.
X
Desktop Bottom Promotion