For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ದುಃಸ್ವಪ್ನವೆಂಬ ಪೆಡಂಭೂತದ ಕಾಟ..!

By Deepak
|

ನಮ್ಮ ಕರಾವಳಿ ಒಂದು ಗ್ರಾಮದ ಕಥೆಯಂತೆ ಅಮೇರಿಕಾಕ್ಕೆ ಹೊರಟಿದ್ದ ತರುಣ ವೈದ್ಯರೊಬ್ಬರನ್ನು ತರುಣಿಯೊಬ್ಬಳು ತನ್ನ ಅನಾರೋಗ್ಯದ ನೆಪ ಹೇಳಿ ತಡೆದು ನಿಲ್ಲಿಸಿ ಊರಿಗೊಬ್ಬರೇ ಇರುವ ನೀವು ಹೋದರೆ ತನ್ನ ಪ್ರಾಣಕ್ಕೇ ಅಪಾಯ ಎಂದು ಹೇಳಿ ಆ ವಿಮಾನವನ್ನು ತಪ್ಪಿಸಿದ್ದಳಂತೆ. ಮರುದಿನ ಪತ್ರಿಕೆಗಳಲ್ಲಿ ಆ ವೈದ್ಯರು ಹೋಗಬೇಕಾಗಿದ್ದ ವಿಮಾನ ಪತನಗೊಂಡು ಎಲ್ಲರೂ ತೀರಿಹೋಗಿದ್ದ ವರ್ತಮಾನ ಬಂತಂತೆ. ವಾಸ್ತವವಾಗಿ ಈ ವಿಮಾನ ಪತನದ ಬಗ್ಗೆ ದುಃಸ್ವಪ್ನದ ಮೂಲಕ ಮೊದಲೇ ತಿಳಿದಿದ್ದ ಆ ತರುಣಿ ಅನಾರೋಗ್ಯದ ನೆಪ ಹೇಳಿ ವೈದ್ಯರ ಪ್ರಾಣ ಉಳಿಸಿದಳಂತೆ.

ಇದನ್ನು ಮೆಚ್ಚಿದ ವೈದ್ಯರು ಆ ತರುಣಿಯನ್ನೇ ಮದುವೆಯಾದರಂತೆ. ಕಥೆ ಕೇಳಲಿಕ್ಕೆ ಕುತೂಹಲಕರವಾಗಿದ್ದರೂ ವಾಸ್ತವವಾಗಿ ನಮ್ಮೆಲ್ಲರಿಗೆ ಕೆಲವೊಮ್ಮೆ ಮುಂಬರುವ ಸೂಚನೆಗಳು ಕೆಲವು ರೂಪದಲ್ಲಿ ಪ್ರಕಟವಾಗುತ್ತವೆ. ಅವುಗಳಲ್ಲಿ ಒಳ್ಳೆಯ ಸುದ್ದಿಯೂ ಇರಬಹುದು, ಕೆಟ್ಟ ಸುದ್ದಿಯೂ ಇರಬಹುದು. ಒಳ್ಳೆಯ ಸುದ್ದಿ ಬಂದರೆ ಸಂತೋಷಗೊಳ್ಳುವ ನಾವು ಕೆಟ್ಟ ಸುದ್ದಿ (ಅದರಲ್ಲೂ ಸಾವಿನ ಸುದ್ದಿ) ಕೇಳಿದರೆ ಭಯಭೀತರಾಗುವ ನಾವು ಅದಕ್ಕೆ 'ದುಃಸ್ವಪ್ನ' ಎಂಬ ಹೆಸರು ಕೊಟ್ಟುಬಿಡುತ್ತೇವೆ ಹಾವಿನ ಕನಸ್ಸು ಬಿದ್ದರೆ ಏನಂತ ಅರ್ಥ?

ಸಾಮಾನ್ಯವಾಗಿ ರಾತ್ರಿ ಮಲಗಿದಾಗ ನಮಗೆಲ್ಲರಿಗೂ ಕನಸುಗಳು ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯ, ಆದರೆ ಅವುಗಳಲ್ಲಿ ಕೆಲವೊಂದು ನಮಗೆ ನೆನಪಿರುವುದಿಲ್ಲ. ಸುಮ್ಮನೆ ಹಾಗೆ ಬಂದು ಹೀಗೆ ಹೋಗುವ ಕನಸುಗಳಿಂದ ನಮಗೆ ಸಮಸ್ಯೆ ಇಲ್ಲ. ಆದರೆ ಕೆಲವೊಂದು ದುಃಸ್ವಪ್ನಗಳು ಹಿರಿಯರನ್ನೇ ಅಲ್ಲಾಡಿಸಿಬಿಡುತ್ತವೆ. ಇನ್ನು ಮಕ್ಕಳಲ್ಲಿ? ಹೌದು, ದುಃಸ್ವಪ್ನಗಳು ಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಒಂದು ವೇಳೆ ನಿಮ್ಮ ಮಗುವಿಗೆ ಇದರ ಅನುಭವವಾಗಿದ್ದಲ್ಲಿ, ಒಬ್ಬ ಪೋಷಕರಾಗಿ ನಿಮ್ಮ ಮಗುವಿನ ಸಹಾಯಕ್ಕೆ ಮೊದಲು ಧಾವಿಸಿ. ನಿಮ್ಮ ಮಗುವಿಗೆ ಸ್ವಲ್ಪ ಆರಾಮವನ್ನು ನೀಡಿ. ದುಃಸ್ವಪ್ನವನ್ನು ಕಂಡು ಹೆದರಿ ಎದ್ದ ಮಗುವಿಗೆ ಮತ್ತೆ ನಿದ್ದೆ ಬರುವುದು ಕಷ್ಟ. ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

ಹಾಗಾದರೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ದುಃಸ್ವಪ್ನಗಳನ್ನು ಹೇಗೆ ನಿಲ್ಲಿಸುವುದು? ಒಂದು ವೇಳೆ ನಿಮ್ಮ ಮಗುವಿಗೆ ನೀವು ನೀಡುವ ಆರೈಕೆಯು ವಿಫಲಗೊಂಡಲ್ಲಿ ಅಥವಾ ನಿಮ್ಮ ಮಗು ಪ್ರತಿದಿನವೂ ದುಃಸ್ವಪ್ನಗಳನ್ನು ಕಂಡು ಹೆದರುತ್ತಿದ್ದಲ್ಲಿ, ತಪ್ಪದೆ ನಿಮ್ಮ ಮಗುವನ್ನು ಒಬ್ಬ ಒಳ್ಳೆಯ ಮನೋವಿಜ್ಞಾನಿ ಹತ್ತಿರ ಪರೀಕ್ಷೆಗಾಗಿ ಕರೆದುಕೊಂಡು ಹೋಗಿ. ಆದರೆ ಹಾಗೆ ಹೋಗುವ ಮುನ್ನ, ಈ ಕೆಳಕಂಡ ಹಂತಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ...

ಮಕ್ಕಳು ಭಯಪಡದಂತೆ ಎಚ್ಚರವಹಿಸಿ

ಮಕ್ಕಳು ಭಯಪಡದಂತೆ ಎಚ್ಚರವಹಿಸಿ

ಒಂದು ವೇಳೆ ನಿಮ್ಮ ಮಗು ಆಗಾಗ ದುಃಸ್ವಪ್ನವನ್ನು ಕಂಡು ಎದ್ದರೆ, ಅದಕ್ಕಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಆ ಸಮಯದಲ್ಲಿ ನೀವು ಅವರ ಜೊತೆಗೆ ಇದ್ದು, ಅವರಿಗೆ ಸ್ವಲ್ಪ ಭದ್ರತೆಯ ಭಾವವನ್ನು ನೀಡಿ, ಅವರನ್ನು ಮಲಗಿಸಿ. ಸಾಧ್ಯವಾದರೆ ನಿಮ್ಮ ಪಕ್ಕದಲ್ಲಿಯೇ ಅವರನ್ನು ಮಲಗಿಸಿಕೊಳ್ಳಿ.

ಆಘಾತ

ಆಘಾತ

ಒಂದು ವೇಳೆ ಆಘಾತದಿಂದ ನಿಮ್ಮ ಮಗುವಿಗೆ ದುಃಸ್ವಪ್ನಗಳು ಬರುತ್ತಿದ್ದಲ್ಲಿ, ಮೊದಲು ಆ ಆಘಾತಕ್ಕೆ ನಿಖರ ಕಾರಣಗಳನ್ನು ತಿಳಿದುಕೊಂಡು, ಅಂತಹ ಸಮಸ್ಯೆಯನ್ನು ಆದಷ್ಟು ಬೇಗ ಬಗೆಯರಿಸಲು ಪ್ರಯತ್ನಿಸಿ.

ಆತಂಕ

ಆತಂಕ

ಒಂದು ವೇಳೆ ನಿಮ್ಮ ಮಗುವಿನಲ್ಲಿ ನೀವು ಆತಂಕವನ್ನು ಕಂಡರೆ, ಮಗುವಿಗೆ ಅದರ ಕುರಿತಾಗಿ ತಿಳಿಸಿ. ಆತಂಕಪಟ್ಟುಕೊಳ್ಳುವುದರ ಬದಲಿಗೆ ಶಾಂತಿಯಾಗಿ, ಆರಾಮವಾಗಿ ಅದರ ಕುರಿತು ಆಲೋಚಿಸುವಂತೆ ತಿಳಿಹೇಳಿ. ಆತಂಕಪಡುವಂತಹ ಪೆಡಂಭೂತಗಳು ಭೂಮಿಯಲ್ಲಿ ಯಾವುದು ಇಲ್ಲ ಎಂದು ಅವರಿಗೆ ತಿಳಿಸಿ. ಅವರು ನಿಮ್ಮ ಜೊತೆ ಹೆಚ್ಚು ಸಮಯ ಕಾಲ ಕಳೆಯುವಂತೆ ಮಾಡಿ. ಇದರಿಂದ ಅವರಿಗೆ ಸುರಕ್ಷತೆಯ ಭಾವನೆ ಬೆಳೆದು ಆತಂಕ ದೂರವಾಗುತ್ತದೆ.

ಸ್ಥಳ ಬದಲಾವಣೆ

ಸ್ಥಳ ಬದಲಾವಣೆ

ಕೆಲವೊಮ್ಮೆ, ನಿದ್ದೆ ಮಾಡುವ ಸ್ಥಳವನ್ನು ಬದಲಾಯಿಸುವ ಮೂಲಕ ಸಹ ಈ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು. ಇಂತಹ ದುಃಸ್ವಪ್ನಗಳು ನಿಮ್ಮ ಮಗುವನ್ನು ಕಾಡುತ್ತಿದ್ದರೆ, ಅವರನ್ನು ನಿಮ್ಮ ಸಂಬಂಧಿಕರ ಮನೆಗೆ ಕಳುಹಿಸಿ. ಅಲ್ಲಿ ಅವರು ತಮ್ಮ ಸಮವಯಸ್ಕ ಮಕ್ಕಳ ಜೊತೆಗೆ ಮಲಗುವುದರಿಂದ, ಸ್ವಲ್ಪ ಧೈರ್ಯ ಸಹ ಅವರಿಗೆ ಬರಬಹುದು. ಜೊತೆಗೆ ಸ್ಥಳ ಬದಲಾವಣೆಯಿಂದ ಅವರಿಗೆ ದುಃಸ್ವಪ್ನಗಳು ಬರುವುದು ನಿಲ್ಲುತ್ತವೆ.

English summary

How To Help A Child With Nightmares

Nightmares in children are a normal phenomena. If your child experiences it, as a parent, reassure your kid and provide some comfort. Child nightmares can result in paranoid behaviour if parents don't pay attention. Once a child wakes up screaming due to a nightmare, he or she may find it difficult to sleep again. Some kids even describe their dreams whereas some fail to recollect the dream. As a parent, you can explain that a dream isn't reality.
X
Desktop Bottom Promotion