For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕೊಡಬಾರದ ಏಳು ಆಹಾರಗಳು

By Super
|

ಒಂದು ಯಶಸ್ವಿ ಅಮ್ಮ ಎನಿಸಿಕೊಳ್ಳುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ನಿಮ್ಮದು ಮೊದಲ ಮಗು ನೀವು ಮೊದಲ ಬಾರಿ ತಾಯಿ ಆಗುತ್ತಿದ್ದೀರಿ ಎಂದರೆ ಅದು ಸುಲಭ ಅಲ್ಲವೆಅಲ್ಲ. ತಾಯಿಯಾಗಿ ನೀವು ಹೆದರುವ ಮೊದಲ ಅಂಶವೆಂದರೆ ಮಗುವಿಗೆ ಯಾವುದು ಒಳ್ಳೆಯ ಆಹಾರ ಅಥವಾ ಯಾವುದು ಹಾನಿಕಾರಕ ಎಂಬುದರ ಬಗ್ಗೆ.

ಮಗು ಪದೇ ಪದೇ ಅಳಲು ಕಾರಣಗಳೇನು?

ಕೆಲವು ಆಹಾರಗಳಿಂದ ಮಕ್ಕಳಿಗೆ ಅಲರ್ಜಿ ಉಂಟಾಗಬಹುದು.ಆದ್ದರಿಂದ ವೈಧ್ಯರು ನಿಮ್ಮ ಮಗು 4 ರಿಂದ 6 ತಿಂಗಳಿಗೆ ಬರುವ ಮೊದಲು ಸಾಲಿಡ್ಸ್ ಅನ್ನು ಕೊಡಬೇಡಿ ಎಂದು ಸಲಹೆ ನೀಡುತ್ತಾರೆ. ಕೆಲವೊಮ್ಮೆ ತಾಯಂದಿರು ತಾವು ತಿನ್ನುತ್ತಿರುವ ಆಹಾರವನ್ನು ಮಗುವಿಗೆ ಕೊಡದಿರಲು ಆಗುವುದೇ ಇಲ್ಲ ಎನ್ನುತ್ತಾರೆ.ಆದರೆ ನೀವು ಸ್ವಲ್ಪ ಸಮಯ ಕಾಯಬೇಕು.

ನಿಮ್ಮ ಮಗುವಿಗೆ ಯಾವುದು ಸೂಕ್ತ ಮತ್ತು ಆರೋಗ್ಯಯುತ ಆಹಾರ ಎಂಬುದನ್ನು ತಿಳಿದುಕೊಳ್ಳಲು ನೀವು ಸ್ವಲ್ಪ ತಾಳ್ಮೆಯಿಂದ ಕಾಯಬೇಕು.ಈ ಕೆಳಗೆ ನಾವು ಮಗುವಿಗೆ ಹಾನಿಕಾರಕವಾದ ಕೆಲವು ಆಹಾರಗಳನ್ನು ನೀಡಿದ್ದೇವೆ. ಮಗು ಕಾಯಿಲೆ ಬೀಳುವುದನ್ನು ತಪ್ಪಿಸಲು ಇದನ್ನು ತಿಳಿದುಕೊಳ್ಳಿ.

ಮಕ್ಕಳು ಬಿಕ್ಕುತ್ತಾ ಮಾತನಾಡುವ ಸಮಸ್ಯೆಗೆ ಪರಿಹಾರ

ಹಸುವಿನ ಹಾಲು:

ಹಸುವಿನ ಹಾಲು:

ನಿಮ್ಮ ಮಗು ಒಂದು ವರ್ಷ ತುಂಬುವುದರ ಒಳಗೆ ಮಗುವಿಗೆ ಹಸುವಿನ ಹಾಲು ನೀಡಬೇಡಿ.ಎದೆ ಹಾಲು ಒಂದು ವರ್ಷದ ಒಳಗಿನ ಮಗುವಿಗೆ ಉತ್ತಮ ಆಹಾರ.ನಿಮ್ಮ ಮಗು ಹಸುವಿನ ಹಾಲು ಸೇವಿಸಬಾರದು ಎಂಬುದಕ್ಕೆ ಕೆಲವು ನಿರ್ಧಿಷ್ಟ ಕಾರಣವಿದೆ.ಉದಾಹರಣೆಗೆ - ಹಸುವಿನ ಹಾಲು ಮಗುವಿಗೆ ಕಬ್ಬಿಣದ ಕೊರತೆಯನ್ನು ತಂದೊಡ್ಡಬಹುದು.ಇದರ ಜೊತೆಗೆ ಹಸುವಿನ ಹಾಲಿನಲ್ಲಿ ವಿಟಮಿನ್ ಸಿ,ಇ ಮತ್ತು ಸತುವಿನ ಅಂಶ ಇರುವುದಿಲ್ಲ.ಜೊತೆಗೆ ಹಸುವಿನ ಹಾಲು ಜೀರ್ಣವಾಗುವುದು ಕಷ್ಟ.ಹಸುವಿನ ಹಾಲನ್ನು ಕುಡಿಸುವುದರಿಂದ ನಿಮ್ಮ ಮಗುವಿನ ಕಿಡ್ನಿಗೆ ತೊಂದರೆಯಾಗಬಹುದು.

ನಟ್ಸ್:

ನಟ್ಸ್:

ನಿಮ್ಮ ಮಗು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನದಾಗಿದ್ದರೆ ಮಗುವಿಗೆ ಯಾವುದೇ ರೀತಿಯ ನಟ್ಸ್ ಕೊಡಬೇಡಿ. ಮುಖ್ಯ ಕಾರಣವೆಂದರೆ ಉಸಿರು ಕಟ್ಟುವ ಸಂಭವ ಇರುತ್ತದೆ.ಕೇವಲ ನಟ್ಸ್ ಮಾತ್ರವಲ್ಲ ಬೆಣ್ಣೆ ಕೂಡ ಮಗುವಿಗೆ ನೀಡುವುದು ಒಳ್ಳೆಯದಲ್ಲ.ಇತ್ತೀಚಿಗೆ ಸಾಕಷ್ಟು ಜನರಿಗೆ ಅಲರ್ಜಿ ಸಂಭವಿಸುತ್ತಿದೆ.ನಿಮ್ಮ ಮಗು ಇದಕ್ಕೆ ಹೊರತಲ್ಲ.ನಿಮ್ಮ ಮಗುವಿಗೆ ಯಾವುದೇ ರೀತಿಯ ನಟ್ಸ್ ಕೊಡುವುದರಿಂದ ಅದು ಅಲರ್ಜಿ ಹೊಂದಬಹುದು.ನಿಮ್ಮ ಮಗುವಿಗೆ ನಟ್ಸ್ ಕೊಡುವ ಮೊದಲು ವೈದ್ಯರ ಸಲಹೆ ಪಡೆಯಲು ಮರೆಯದಿರಿ.

ಮೀನು:

ಮೀನು:

ಸಾಕಷ್ಟು ಪೋಷಕರು ತಮ್ಮ ಪುಟ್ಟ ಕಂದಮ್ಮಗಳಿಗೆ ಮೀನನ್ನು ಕೊಡಲು ಹೆದರುತ್ತಾರೆ.ಅದರಲ್ಲಿ ಹೆದರುವುದೇನಿದೆ ಎನ್ನುತ್ತೀರಾ? ಇಲ್ಲಿವೆ ಕೆಲವು ಉತ್ತರಗಳು.ಮೀನಿನಲ್ಲಿರುವ ಪಾದರಸದ ಅಂಶಗಳು ಮಗುವಿನ ಬೆಳವಣಿಗೆಯನ್ನು ಕುಂಟಿತಗೊಳಿಸಬಹುದು.ಅದರಲ್ಲೂ ಕತ್ತಿ ಮೀನು ಮತ್ತು ಕಿಂಗ್ ಮಾರ್ಷಲ್ ಮೀನನ್ನು ಮಗುವಿಗೆ ಕೊಡಲೇ ಬಾರದು.ಅವುಗಳಲ್ಲಿ ಪಾದರಸ ಅಂಶ ಹೆಚ್ಚಿರುತ್ತದೆ.ಕೆಲವು ಮೀನಿನಿಂದ ಅಲರ್ಜಿ ಕೂಡ ಸಂಭವಿಸುತ್ತದೆ. ಆದ್ದರಿಂದ ಮಗುವು ಎರಡು ಅಥವಾ ಮೂರು ವರ್ಷವಾಗುವವರೆಗೆ ಕಾದು ನಂತರ ಮೀನನ್ನು ಚೆನ್ನಾಗಿ ಬೇಯಿಸಿ ಮಗುವಿಗೆ ನೀಡಿ.ಈ ರೀತಿ ಮಾಡುವುದರಿಂದ ನಿಮ್ಮ ಮಗುವಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

ಮೊಟ್ಟೆ:

ಮೊಟ್ಟೆ:

ಬಹುಷಃ ನಿಮಗೆ ಇದು ಆಶ್ಚರ್ಯ ಎನಿಸಬಹುದು ಆದರೆ ಮೊಟ್ಟೆ ಕೂಡ ಮಗುವಿನ ಆರೋಗ್ಯಕ್ಕೆ ಹಾನಿಕಾರಕ.ಎಲ್ಲಾ ತಾಯಂದಿರು ಕೂಡ ಮಗುವಿಗೆ ಮೊಟ್ಟೆ ಅಲರ್ಜಿ ಎಂಬುದನ್ನು ತಿಳಿದುಕೊಳ್ಳಲೇಬೇಕು.ಆದರೆ ನಿರಾಶರಾಗಬೇಡಿ.ಮಕ್ಕಳು ಬೆಳೆದಂತೆ ಅಲರ್ಜಿ ಸಂಭವ ಕೂಡ ಕಡಿಮೆಯಾಗುತ್ತದೆ.ನಿಮ್ಮ ಮಗು ಐದು ವರ್ಷವಾಗುತ್ತಿದ್ದಂತೆ ಮೊಟ್ಟೆ ಕೊಡಬಹುದು.ಮೊಟ್ಟೆಯಿಂದ ಕೆಲವು ಅಲರ್ಜಿ ಚಿನ್ಹೆಗಳನ್ನು ಪ್ರತಿಯೊಬ್ಬ ತಾಯಿಯೂ ತಿಳಿದಿರಬೇಕು.ಅವುಗಳೆಂದರೆ ತೀವ್ರ ಹೃದಯ ಬಡಿತ,ಉಸಿರಾಟದ ತೊಂದರೆ ಇವುಗಳು ಕಂಡು ಬಂದಲ್ಲಿ ವೈದ್ಯರನ್ನು ಕಾಣುವುದು ಒಳಿತು.

ಉಸಿರುಕಟ್ಟಿಸುವ ಯಾವುದೇ ರೀತಿಯ ಆಹಾರಗಳು:

ಉಸಿರುಕಟ್ಟಿಸುವ ಯಾವುದೇ ರೀತಿಯ ಆಹಾರಗಳು:

ತಾಜಾ ತರಕಾರಿ ಮತ್ತು ಹಣ್ಣುಗಳು ಆರೋಗ್ಯಕ್ಕೆ ಒಳಿತು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ.ಆದರೆ ಇದು ವಯಸ್ಕರಿಗೆ ಮಾತ್ರ.ನೀವು ನಿಮ್ಮ ಮಕ್ಕಳಿಗೆ ಹಸಿ ತರಕಾರಿಯನ್ನು ನೀಡಿದರೆ ಮಗುವಿಗೆ ಹಾನಿಯಾಗುವ ಸಂಭವ ಇರುತ್ತದೆ.ಮೊದಲನೆಯದಾಗಿ ಮಗುವಿಗೆ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಕಷ್ಟವಾಗುತ್ತದೆ.ಎರಡನೆಯದಾಗಿ ಮಗುವಿಗೆ ಇದರಿಂದ ಉಸಿರಾಡಲು ಕಷ್ಟವಾಗಬಹುದು. ಮಗುವಿಗೆ ಹಣ್ಣುಗಳನ್ನು ನೀಡುವಾಗ ಚಿಕ್ಕದಾಗಿ ಕತ್ತರಿಸಿ ಕೊಟ್ಟರೆ ಅದು ಒಳ್ಳೆಯದು.ನಾಲ್ಕು ವರ್ಷದ ಮಗುವಿಗೂ ಕೂಡ ಸಣ್ಣದಾಗಿ ಹೆಚ್ಚಿ ಕೊಡುವುದನ್ನು ನೀವು ನೋಡಿರಬಹುದು.ಇದರಿಂದ ಮಗುವಿಗಾಗುವ ಆಪತ್ತನ್ನು ತಪ್ಪಿಸಬಹುದು.

ಜೇನುತುಪ್ಪ:

ಜೇನುತುಪ್ಪ:

ಜೇನಿನಿಂದ ಸಾಕಷ್ಟು ಉಪಯೋಗಗಳಿವೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.ನಾವು ಜೇನುತುಪ್ಪ ಬಳಸುವುದರಿಂದ ನಮ್ಮ ದೇಹ ಸಾಕಷ್ಟು ವಿಟಮಿನ್ ಮತ್ತು ಪೋಷಕಾಂಶಗಳನ್ನೂ ಪಡೆಯುತ್ತದೆ. ಪ್ರತಿಯೊಬ್ಬರಿಗೂ ಗಂಟಲು ಕೆರೆತಕ್ಕೆ ಜೇನುತುಪ್ಪ ಉತ್ತಮ ಎಂಬುದು ತಿಳಿದಿರುತ್ತದೆ.ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಜೇನುತುಪ್ಪವನ್ನು ಮಗುವಿನ ಆಹಾರದಿಂದ ದೂರವಿರಿಸುವುದು ಒಳ್ಳೆಯದು.ನಿಮ್ಮ ಮಗು ಒಂದು ವರ್ಷವಾದ ನಂತರ ಸ್ವಲ್ಪ ನೀಡುವುದರಲ್ಲಿ ತಪ್ಪಿಲ್ಲ.

ಮಗುವಿಗೆ ಜೀನುತುಪ್ಪದಿಂದ ಏನು ತೊಂದರೆ ಎಂದರೆ ಇದು ನಂಜು ಉಂಟುಮಾಡುವ ಸಾಧ್ಯತೆ ಇರುತ್ತದೆ.ಇದು ಜೇನುತುಪ್ಪದಲ್ಲಿ ಕಂಡುಬರುವ ವಿಶೇಷ ಬ್ಯಾಕ್ಟೀರಿಯಾದ ಕಾರಣದಿಂದಾಗುತ್ತದೆ.ಹಾಗೆಂದು ಜೇನುತುಪ್ಪವನ್ನು ತಿಂದ ಪ್ರತಿಯೊಬ್ಬ ಮಗುವಿಗೂ ಇದು ಸಂಭವಿಸುತ್ತದೆ ಎನ್ನಲಾಗುವುದಿಲ್ಲ,ಆದರೆ ನಂಜು ಆಗುವ ಸಂಭವ ಹೆಚ್ಚು.ನಿಮ್ಮ ಮಗುವಿಗೆ ಜೇನುತುಪ್ಪ ನೀಡಬೇಕೆಂಬುದು ನಿಮ್ಮ ಬಯಕೆಯಾದರೆ ಆಹಾರದಲ್ಲಿ ಬಳಸಿ ನೀಡಿ.ಜೇನನ್ನು ಆಹಾರದಲ್ಲಿ ಬಳಸುವುದರಿಂದ ಇದು ಅಲರ್ಜಿ ನೀಡುವುದಿಲ್ಲ.ಆದರೆ ಯಾವುದೇ ರೀತಿಯ ಬ್ಯಾಕ್ಟೀರಿಯದಿಂದ ಮಗುವಿನ ಆರೋಗ್ಯಕ್ಕೆ ಹಾನಿ ಆಗಬಹುದು ಎಂಬುದನ್ನು ತಿಳಿದುಕೊಂಡಿರಿ.

ಕೆಫೈನ್ ಅಂಶವಿರುವ ಪಾನೀಯ:

ಕೆಫೈನ್ ಅಂಶವಿರುವ ಪಾನೀಯ:

ನಮ್ಮ ದೇಹಕ್ಕೆ ಕೆಫೈನ್ ನ ಅಗತ್ಯವಿರುವುದಿಲ್ಲ.ನಮ್ಮ ದೇಹ ಕೆಫೈನ್ ಇಲ್ಲದಿದ್ದರೇ ಸರಿಯಾಗಿ ಕೆಲಸ ಮಾಡಬಲ್ಲದು. ಕೆಫೈನ್ ದೇಹಕ್ಕೆ ಸೇರಿದಾಗ ಅದರಿಂದ ಯಾವುದೇ ವಿಟಮಿನ್ ಅಥವಾ ಖನಿಜಾಂಶಗಳು ದೇಹಕ್ಕೆ ದೊರೆಯುವುದಿಲ್ಲ. ಇದರಿಂದ ಆರೋಗ್ಯಕ್ಕೆ ಯಾವುದೇ ಸಹಾಯಕವಾಗುವುದಿಲ್ಲ. ಮಗುವಿನ ದೇಹಕ್ಕೆ ಕೆಫೈನ್ ನೀಡುವುದರಿಂದ ನಿದ್ರಾಹೀನತೆ ಸಂಭವಿಸಬಹುದು.

ಒಟ್ಟಾರೆಯಾಗಿ ನಿಮ್ಮ ಮಗುವಿಗೆ ಏನಾದರೂ ಸಾಲಿಡ್ಸ್ ಅನ್ನು ತಿನ್ನಿಸುವ ಮೊದಲು ಶಿಶು ತಜ್ಞರನ್ನು ಭೇಟಿ ಮಾಡಿ.ನಿಮಗೆ ತಿಳಿಯದ ಸಾಕಷ್ಟು ವಿಷಯಗಳನ್ನು ವೈದ್ಯರು ನಿಮಗೆ ತಿಳಿಸಿಕೊಡುತ್ತಾರೆ.ಇದರಿಂದ ನಿಮಗೆ ಯಾವ ಆಹಾರ ತಿನಿಸಬೇಕು,ಯಾವುದು ತಿನಿಸಬಾರದು ಎಂಬುದು ತಿಳಿಯುತ್ತದೆ.

English summary

7 Most Dangerous Foods for Babies

The greatest risks that can be caused by some foods include a choking hazard and an allergic reaction. It is recommended by doctors to avoid giving solids foods to your babies until they are 4-6 months old.
Story first published: Saturday, April 26, 2014, 18:03 [IST]
X
Desktop Bottom Promotion