For Quick Alerts
ALLOW NOTIFICATIONS  
For Daily Alerts

ಕಾಂಗೆರೋ ಕೇರ್‌: ಇದರಿಂದ ತಾಯಿ-ಮಗುವಿಗೆ ಈ ಪ್ರಯೋಜನಗಳಿವೆ

|

ಹೊಟ್ಟೆಯೊಳಗಡೆ ಇರುವಾಗ ನಮ್ಮ ಮಗು ಹೇಗಿರುತ್ತದೆ ಎಂದು ಮಗುವಿನ ಬಗ್ಗೆ ಪೋಷಕರಿಗೆ ಹೆಚ್ಚಿನ ಕುತೂಹಲವಿರುತ್ತದೆ, ಅದರಲ್ಲೂ ತಾಯಿಯಂತೂ ಬೇಬಿ ಕಿಕ್‌, ಹೊಟ್ಟೆಯೊಳಗಡೆ ಮಗು ಅಲುಗಾಡುವಾಗ ಆಗುವ ಕಚಗುಳಿ ಇವುಗಳನ್ನು ಅನುಭವಿಸುವಾಗ ಈ ಪುಟ್ಟ ಕಾಲುಗಳಿಗೆ ಮುತ್ತಿಕ್ಕಬೇಕು, ನನ್ನ ಮಗವನ್ನು ಅಪ್ಪಿ ಮುದ್ದಾಡಬೇಕೆಂದು ಬಯಸುತ್ತಿರುತ್ತಾಳೆ, ಅದು ಒಂಥರ ಫೀಲ್ ಆದರೆ ಹೆರಿಗೆಯ ಬಳಿಕ ತಾಯಿ-ಮಗುವಿನ ಮೊದಲ ಸ್ಪರ್ಶವಿದೆಯೆಲ್ಲಾ ಮ್ಯಾಜಿಕಲ್!

Kangaroo Care

ವೈದ್ಯಕೀಯ ದೃಷ್ಟಿಯಿಂದಲೂ ತಾಯಿ-ಮಗುವಿನ ಈ ಸ್ಪರ್ಶ ತುಂಬಾನೇ ಮುಖ್ಯ, ಮಗುವನ್ನು ತಾಯಿ ಅಪ್ಪಿಕೊಂಡಿದ್ದರೆ ತಾಯಿ ಹಾಗೂ ಮಗುವಿಗೆ ಅನೇಕ ಪ್ರಯೋಜನಗಳಿವೆ, ಅವುಗಳ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಮಗುವಿಗೆ
* ಜೀರ್ಣಕ್ರಿಯೆ ಉತ್ತಮವಾಗುವುದು
* ಮಗುವಿನ ದೇಹ ಬೆಚ್ಚಗಿರುತ್ತದೆ
* ಅಳುವುದು ಕಡಿಮೆಯಾಗುವುದು
* ಮಗುವಿನ ಮೈ ತೂಕ ಹೆಚ್ಚುವುದು
* ಮಗುವಿನ ಹೃದಯಬಡಿತ ಹಾಗೂ ಉಸಿರಾಟ ಸಮತೋಲನದಲ್ಲಿರುತ್ತದೆ.
* ಸ್ತನಹಾಲು ಚೆನ್ನಾಗಿ ಹೀರಿ ಕುಡಿಯುತ್ತದೆ
* ರೋಗ ನಿರೋಧಕ ಶಕ್ತಿ ಹೆಚ್ಚುವುದು.

ತಾಯಿಗೆ
* ಎದೆಹಾಲಿನ ಉತ್ಪತ್ತಿ ಹೆಚ್ಚುವುದು
* ಬಾಣಂತಿಯಲ್ಲಿ ಅಧಿಕ ರಕ್ತಸ್ರಾವ ಹಾಗೂ ಖಿನ್ನತೆ ಕಡಿಮೆ ಮಾಡುವುದು
* ಮಗುವಿಗೆ ಎದೆ ಹಾಲುಣಿಸುವುದು ಕೂಡ ಸುಲಭವಾಗುವುದು
* ಮಾನಸಿಕ ಒತ್ತಡ ಕಡಿಮೆಯಾಗುವುದು
* ಹಾರ್ಮೋನ್‌ಗಳ ಸಮತೋಲನಕ್ಕೆ ಸಹಕಾರಿ
* ರಕ್ತದೊತ್ತಡ ನಿಯಂತ್ರಣಕ್ಕೆ ತರುತ್ತದೆ.

ಕಾಯಿಲೆ ಇರುವ ಮಗುವಿನ ಆರೋಗ್ಯ ವೃದ್ಧಿಗೆ ಸಹಕಾರಿ
ಕೆಲವು ಮಕ್ಕಳು ಹುಟ್ಟುವಾಗ ತುಂಬಾ ಅನಾರೋಗ್ಯ ಹೊಂದಿರುತ್ತಾರೆ, ಅಂಥ ಮಕ್ಕಳ ಆರೋಗ್ಯ ವೃದ್ಧಿಗೆ ವೈದ್ಯರು ಕಾಂಗೆರೋ ಕೇರ್ ಹೇಳುತ್ತಾರೆ, ಇದರಿಂದ ಮಗುವಿನ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆ ಕಂಡು ಬರುವುದು.

ಸ್ಕಿನ್ ಟು ಸ್ಕಿನ್ ಕೇರ್‌ ಮಾಡುವಾಗ ಗಮನಿಸಬೇಕಾದ ಅಂಶಗಳು
* ನಿಮ್ಮ ಫೋನ್ ದೂರವಿಡಿ
* ಪ್ರತಿ ಬಾರಿ ಸ್ಕಿನ್ ಟು ಸ್ಕಿನ್ ಕೇರ್‌ ಮಾಡುವಾಗ ನಿಮ್ಮ ಮಗುವನ್ನು ತ್ವಚೆಗೆ ಅಂಟಿಸಿ ಕನಿಷ್ಠ 60 ನಿಮಿಷ ಹಿಡಿಯಿರಿ
* ಮಗುವನ್ನು ತ್ವಚೆಗೆ ಅಂಟಿಸಿ ಹಿಡಿಯುವಾಗ ನಿಮಗೆ ಯಾವುದೇ ತ್ವಚೆ ಅಲರ್ಜಿ ಇರಬಾರದು.
* ಯಾವುದೇ ಪರ್‌ಫ್ಯೂಮ್ ಬಳಸಿರಬಾರದು
* ನಿಮ್ಮ ಮೈ ವಾಸನೆ ಮಗುವಿಗೆ ಬಡೆಯುವಂತಿರಬೇಕು, ರಾಸಾಯನಿಕ ಅಧಿಕವಿರುವ ಸೋಪು ಕೂಡ ಬಳಸಿರಬಾರದು.
* ಸ್ಕಿನ್‌ ಟು ಸ್ಕಿನ್‌ ಕಾಂಟ್ಯಾಕ್ಟ್ ಮಾಡುವ ಮುನ್ನ ಸ್ಮೋಕ್ ಅಂದರೆ ಸಿಗರೇಟ್‌ ಸೇದಬಾರದು.
* ಕಾಂಗೆರೋ ಕೇರ್ ಮಾಡುವಾಗ ಬ್ರಾ ಬಟನ್‌ ತೆಗೆಯಬೇಕು ಮಗು ಬರಿ ಮೈಯಲ್ಲಿರಲಿ ಅಥವಾ ಡಯಾಪರ್ ಹಾಕಬಹುದು., ಮಗುವನ್ನು ನಿಮ್ಮ ಎದೆಯ ಮೇಲೆ ಮಲಗಿಸಬೇಕು.

* ಹೀಗೆ ಮಾಡುವಾಗ ತಾಯಿ ಹಾಗೂ ಮಗು ರಿಲ್ಯಾಕ್ಸ್ ಆಗಿರಬೇಕು.
* ನೀವು ದಿನದಲ್ಲಿ ಎಷ್ಟು ಬಾರಿ ಮಾಡಲು ಸಾಧ್ಯವೋ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು.
* ನಿಮ್ಮ ಮಗು ಕೂಡ ಈ ಸಮಯದಲ್ಲಿ ತುಂಬನೇ ರಿಲ್ಯಾಕ್ಸ್ ಆಗಿ ನಿದ್ದೆ ಮಾಡುವುದರಿಂದ ನಿಮಗೂ ಆರಾಮ ಅನಿಸುವುದು.

ತಂದೆ ಕಾಂಗೆರೋ ಕೇರ್ ಮಾಡಬಹುದೇ?
ತಂದೆ ಕೂಡ ಕಾಂಗೆರೋ ಕೇರ್‌ ಮಾಡಿರುವ ಹಲವಾರು ಉದಾಹರಣೆಗಳಿವೆ, ತಾಯಿಯಷ್ಟೇ ತಂದೆ ಪಾತ್ರ ಕೂಡ ಮುಖ್ಯ. ಸಿಂಗಲ್‌ ಪೇರೆಂಟ್‌ ಅಥವಾ ತಾಯಿಗೆ ಏನಾದರೂ ಆರೋಗ್ಯ ಸಮಸ್ಯೆಗಳಿದ್ದರೆ ತಂದೆ ಕಾಂಗೆರೋ ಕೇರ್‌ ನೀಡಬಹುದು. ಕಾಂಗೆರೋ ಕೇರ್‌ ನೀಡುವುದರಿಂದ ತಂದೆ ಮಗುವಿನ ಬಾಂಧವ್ಯ ಗಟ್ಟಿಯಾಗುವುದು.

ಕಾಂಗೆರೋ ಕೇರ್ ಬಗ್ಗೆ ಈ ಬಗೆಯ ತಪ್ಪು ಕಲ್ಪನೆಗಳಿವೆ
1. ಕಾಂಗೆರೋ ಕೇರ್ ಹಾಗೂ ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ ಎರಡೂ ಬೇರೆ ಬೇರೆ: ಅಲ್ಲ ಎರಡೂ ಒಂದೇ ವಿಧಾನ.

2. ಕಾಂಗೆರೋ ಕೇರ್‌ ಪ್ರೀಮೆಚ್ಯೂರ್‌ ಬೇಬಿಗೆ ಮಾತ್ರ ಸಾಕು. ಇಲ್ಲ 9 ತಿಂಗಳು ಪೂರ್ಣಗೊಂಡು ಹುಟ್ಟಿದ ಮಗುವಿಗೂ ಕೊಡಬಹುದು.

3. ನವಜಾತ ಶಿಶುಗಳಿಗೆ ಮಾತ್ರ ಸ್ಕಿನ್‌ ಟು ಸ್ಕಿನ್‌ ಕೇರ್ ಬೇಕು: ಹಾಗೇನೂ ಇಲ್ಲ ನಿಮ್ಮ ಮಗು ಒಂದು ವರ್ಷ ಆಗುವವರೆಗೆ ಸ್ವಲ್ಪ ಹೊತ್ತು ಸ್ಕಿನ್‌ ಟು ಸ್ಕಿನ್ ಕೇರ್ ಕೊಡಬಹುದು.

4. ಕಾಂಗೆರೋ ಕೇರ್ ಮಗುವಿಗೆ ಮಾತ್ರ ಪ್ರಯೋಜನಕಾರಿ: ಅಲ್ಲ ಇದರಿಂದ ತಾಯಿ ಹಾಗೂ ಮಗು ಇಬ್ಬರು ಪ್ರಯೋಜನ ಪಡೆಯುತ್ತಾರೆ.

English summary

Why Skin To Skin Contact Or Kangaroo Care is a Powerful Therapy

Kangaroo Care: Why it is important for mother and Baby read on..
X
Desktop Bottom Promotion