ಪುರುಷರು ರಾತ್ರಿ ಬೇಗನೇ ಮಲಗಬೇಕಂತೆ! ಯಾಕೆ ಗೊತ್ತೇ?

By: Arshad
Subscribe to Boldsky

ತಂದೆಯಾಗ ಬಯಸುವ ಪುರುಷರಿಗೆ ತಮ್ಮ ಪ್ರಯತ್ನಗಳು ಕೈ ಕೊಡುತ್ತಿದ್ದರೆ ಇವರ ತಡರಾತ್ರಿಯವರೆಗೆ ಎಚ್ಚರಾಗಿದ್ದು ತಡವಾಗಿ ಏಳುವ ಅಭ್ಯಾಸ ಪ್ರಮುಖ ಕಾರಣವಾಗಿರಬಹುದು. ಏಕೆಂದರೆ ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ರಾತ್ರಿ ಎಂಟರಿಂದ ಹತ್ತರ ನಡುವೆ ಮಲಗುವ ಪುರುಷರ ವೀರ್ಯಾಣುಗಳು ಅತ್ಯಂತ ಆರೋಗ್ಯಕರವಾಗಿರುತ್ತವೆ. ಮಲಗಲು ತಡಮಾಡಿದಷ್ಟೂ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಕಡಿಮೆಯಾಗುತ್ತಾ ಹೋಗುವುದನ್ನು ಕಂಡುಕೊಳ್ಳಲಾಗಿದೆ. 

men sleep

ಅದರಲ್ಲೂ ಮಧ್ಯರಾತ್ರಿ ಬಳಿಕ ಮಲಗುವ ಪುರುಷರ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿತ ಹಾಗೂ ಇರುವ ವೀರ್ಯಾಣುಗಳೂ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪುತ್ತವೆ. ಮಲಗುವ ಅವಧಿ ಆರು ಗಂಟೆಗಳಿಗೂ ಕಡಿಮೆ ಇದ್ದರೆ ಹಾಗೂ ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ನಿದ್ದೆ ಮಾಡುತ್ತಿದ್ದರೆ ಈ ತೊಂದರೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

sperm

ಅಲ್ಲದೇ ಆರು ಗಂಟೆಗಳು ತಡರಾತ್ರಿ ಪ್ರಾರಂಭವಾಗಿ ಬೆಳಿಗ್ಗೆಯೂ ತಡವಾಗಿ ಏಳುವಂತಿದ್ದರೂ, ದಿನದಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯದೇ ಇದ್ದರೂ ಈ ಚಟುವಟಿಕೆಗಳೆಲ್ಲಾ ವೀರ್ಯಾಣುಗಳಿಗೆ ಪ್ರತಿಕೂಲವಾದ ಆಂಟಿಬಾಡಿ ಅಥವಾ ಪ್ರತಿವಿಷದ ಪ್ರಮಾಣವನ್ನು ಹೆಚ್ಚಿಸುತ್ತದೆ.

ಈ ಪ್ರತಿವಿಷ ದೇಹದ ರೋಗ ನಿರೋಧಕ ವ್ಯವಸ್ಥೆಯೇ ಉತ್ಪಾದಿಸುವ ಒಂದು ಬಗೆಯ ಪ್ರೋಟೀನಾಗಿದ್ದು ಆರೋಗ್ಯಕರ ವೀರ್ಯಾಣುಗಳ ಉತ್ಪತ್ತಿಯನ್ನು ಕಡಿಮೆಗೊಳಿಸುವುದು ಹಾಗೂ ಉತ್ಪತ್ತಿಯಾದ ವೀರ್ಯಾಣುಗಳನ್ನು ಘಾಸಿಗೊಳಿಸುವ ಮೂಲಕ ಇವುಗಳ ಕ್ಷಮತೆಯನ್ನು ಕಡಿಮೆಗೊಳಿಸುವ ಗುಣ ಹೊಂದಿದೆ ಎಂದು ಚೀನಾದ ಹರ್ಬಿನ್ ವಿಶ್ವವಿದ್ಯಾಲಯದ ಸಂಶೋಧಕರು 'ದ ಡೇಲಿ ಮೇಲ್' ಎಂಬ ನಿಯತಕಾಲಿಕದ ಮೂಲಕ ಪ್ರಕಟಿಸಿದ್ದಾರೆ.

ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು  

ಇದಕ್ಕೂ ಹಿಂದೆ ನಡೆಸಿದ ಸಂಶೋಧನೆಯಲ್ಲಿ ಪ್ರತಿದಿನ ಆರು ಗಂಟೆಗೂ ಕಡಿಮೆ ನಿದ್ದೆ ಮಾಡುವ ಪುರುಷರ ವೀರ್ಯಾಣುಗಳ ಸಂಖ್ಯೆ ಎಂಟು ಗಂಟೆ ಕಾಲ ನಿದ್ದೆ ಮಾಡುವ ಪುರುಷರ ವೀರ್ಯಾಣುಗಳ ಸಂಖ್ಯೆಗಿಂತ ಶೇ 25 ಕಡಿಮೆ ಇದ್ದುದನ್ನು ಕಂಡುಕೊಳ್ಳಲಾಗಿದೆ.

couples sleeping

Medical Science Monitor ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಈ ತಂಡ 981 ಆರೋಗ್ಯವಂತ ಪುರುಷರನ್ನು ಆಯ್ದುಕೊಳ್ಳಲಾಗಿದ್ದು ಇವರ ನಿದ್ದೆಯ ಅವಧಿಯ ಪ್ರಕಾರ ರಾತ್ರಿ ಎಂಟರಿಂದ ಹತ್ತರ ನಡುವೆ, ಹತ್ತರಿಂದ ಹನ್ನೆರಡು ಗಂಟೆಯ ನಡುವೆ ಹಾಗೂ ರಾತ್ರಿ ಹನ್ನೆರಡರ ಬಳಿಕ ನಿದ್ದೆಗೆ ಜಾರುವ ಕ್ರಮವನ್ನು ಆಧರಿಸಿ ಅಧ್ಯಯನ ನಡೆಸಲಾಗಿತ್ತು. 

men sleeping

ಅಷ್ಟೇ ಅಲ್ಲ, ಇವರೆಲ್ಲರಿಗೂ ನಿದ್ರಿಸಿದ ಬಳಿಕ ಸರಿಯಾಗಿ ಆರು ಘಂಟೆಗಳ ಬಳಿಕ, ಏಳರಿಂದ ಎಂಟು ಘಂಟೆಗಳ ಬಳಿಕ ಅಥವಾ ಒಂಭತ್ತಕ್ಕೂ ಹೆಚ್ಚು ಗಂಟೆಯ ನಿದ್ದೆಯ ಬಳಿಕ ಏಳುವಂತೆ ಅಲಾರಾಂ ಇಡುವಂತೆ ಸೂಚಿಸಲಾಗಿತ್ತು. ಕಾಲಕಾಲಕ್ಕೆ ಪಡೆಯಲಾದ ವೀರ್ಯಾಣುಗಳ ಸಂಖ್ಯೆ, ಆಕಾರ ಮತ್ತು ಚಲನಶೀಲತೆಯನ್ನು ಆಧರಿಸಿ ಇವರೆಲ್ಲರಿಂದ ಪಡೆದುಕೊಂಡ ಮಾಹಿತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ.

ಮಾಹಿತಿ: IANS

English summary

Men Who Sleep Early May Have Healthier Sperm!

For men wanting to become a father, going to bed before midnight may be key to healthier and fitter sperm, a study has showed.The study showed that those falling asleep between 8 and 10 p.m., had the best sperm motility, meaning the sperm are better swimmers and have a greater chance of fertilising an egg. On the other hand, men who went to bed after midnight had lower sperm counts and their sperm died much sooner too.
Subscribe Newsletter