For Quick Alerts
ALLOW NOTIFICATIONS  
For Daily Alerts

ಮಕ್ಕಳ ಜೀರ್ಣಕ್ರಿಯೆ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು

|

ಪ್ರಕೃತಿ ನೀಡಿರುವಂತಹ ಅದ್ಭುತವಾದ ಕೊಡುಗೆ ಎಂದರೆ ಅದು ಹೆಣ್ಣು. ತನ್ನೊಳಗೆ ಮತ್ತೊಂದು ಜೀವವನ್ನು ಬೆಳೆಸುವಂತಹ ಸಾಮರ್ಥ್ಯ ಹೊಂದಿರುವ ಹೆಣ್ಣು ಪ್ರಕೃತಿಗೆ ಸಮ ಎಂದೇ ಹೇಳಬಹುದು. ಹೀಗಾಗಿ ಹೆಣ್ಣಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನಮಾನ ನೀಡಲಾಗಿದೆ. ಹೆಣ್ಣಿಗೆ ತಾಯ್ತನವು ಜನ್ಮ ಸಾರ್ಥಕಗೊಳಿಸುವುದು ಎನ್ನುವ ಮಾತಿದೆ. ಹೆಣ್ಣು ತಾನು ಜನ್ಮ ನೀಡುವಂತಹ ಮಗುವಿನ ಲಾಲನೆ ಪಾಲನೆಯನ್ನು ತುಂಬಾ ಜವಾಬ್ದಾರಿಯಿಂದ ನಿಭಾಯಿಸುವುದು ಮಾತ್ರವಲ್ಲದೆ, ಸಮಾಜದಲ್ಲಿ ಆ ಮಗು ಒಂದು ಉನ್ನತ ಸ್ಥಾನ ಪಡೆದುಕೊಳ್ಳಲು ಪ್ರಮುಖ ಕಾರಣವಾಗುವಲು.

baby digestion

ಆದರೆ ಆ ಹೆಣ್ಣಿಗೆ ಹೆರಿಗೆ ಬಳಿಕ ಶಿಶುವಿನ ಆರೈಕೆ ಮಾಡುವುದು ಎಷ್ಟು ಕಷ್ಟದ ಕೆಲಸ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಮಗು ಸಣ್ಣ ಸಣ್ಣ ವಿಚಾರಕ್ಕೂ ಅಳುತ್ತಿರುತ್ತದೆ. ಮಗುವಿಗೆ ಮಾತು ಬರದೇ ಇರುವ ಕಾರಣ ಅದು ತನಗೆ ನೋವಾದರೂ ಅಥವಾ ಖುಷಿಯಾದರೂ ದುಃಖಿಸುತ್ತಲೇ ತಿಳಿಸುವುದು. ಹೀಗಾಗಿ ಮಗುವಿನ ಅಳುವನ್ನು ಅರ್ಥ ಮಾಡಿಕೊಳ್ಳುವುದು ಹೆಣ್ಣಿಗೆ ಸವಾಲಿನ ಕೆಲಸ. ಸಣ್ಣ ಮಕ್ಕಳು ಹೆಚ್ಚಾಗಿ ಅಳುವುದು ಅಜೀರ್ಣ ಸಮಸ್ಯೆಯಿಂದಾಗಿ. ಇದು ಶಿಶುಗಳಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆ. ಹೀಗಾಗಿ ಮಗು ಅಳುತ್ತಲಿದ್ದರೆ ಆಗ ಅದಕ್ಕೆ ಅಜೀರ್ಣ ಸಮಸ್ಯೆಯು ಕಾಡುತ್ತಲಿರಬಹುದು ಎಂದು ತಿಳಿಯಬಹುದು. ಮೊದಲ ಹೆರಿಗೆಯ ಮಹಿಳೆಯರಿಗೆ ಇದೆಲ್ಲವನ್ನೂ ತಿಳಿದುಕೊಳ್ಳುವುದು ಅತೀ ಅಗತ್ಯ. ಹೀಗಾಗಿ ನಿಮ್ಮ ಮುಂದೆ ಈ ಲೇಖನವನ್ನು ಇಡುತ್ತಿದ್ದೇವೆ. ಇದರಿಂದ ಸಣ್ಣ ಮಕ್ಕಳು ಎದುರಿಸುವಂತಹ ಅಜೀರ್ಣ ಸಮಸ್ಯೆ ಮತ್ತು ಅದನ್ನು ನಿವಾರಿಸುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ.

ಶಿಶುಗಳಲ್ಲಿ ಜೀರ್ಣಕ್ರಿಯೆ ಸಮಸ್ಯೆಗೆ ಕಾರಣಗಳು ಏನು?

ಶಿಶುಗಳಲ್ಲಿ ಜೀರ್ಣಕ್ರಿಯೆ ಸಮಸ್ಯೆಗೆ ಕಾರಣಗಳು ಏನು?

ಶಿಶುಗಳ ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ಸೂಕ್ಷ್ಮವಾಗಿರುವ ಕಾರಣದಿಂದಾಗಿ ಮಕ್ಕಳಲ್ಲಿ ಜೀರ್ಣಕ್ರಿಯೆ ಸಮಸ್ಯೆಯು ಹೆಚ್ಚಾಗಿರುವುದು. ಅನ್ನನಾಳದ ಸ್ಪಿಂಕ್ಟರ್ ಎನ್ನುವುದು ಹೊಟ್ಟೆಯಿಂದ ಆಹಾರವು ಅನ್ನನಾಳಕ್ಕೆ ಮರಳಿ ಬರದಂತೆ ತಡೆಯುವುದು. ಶಿಶುಗಳಲ್ಲಿ ಇದು ಬೆಳವಣಿಗೆ ಹಂತದಲ್ಲಿ ಇರುವ ಕಾರಣದಿಂದಾಗಿ ಅಜೀರ್ಣ ಕಾಡಬಹುದು. ಹೀಗಾಗಿ ಬೆಳೆಯುವ ಮಕ್ಕಳು ಜೀರ್ಣಕ್ರಿಯೆಯಲ್ಲಿ ಅತಿ ದೊಡ್ಡ ಸಮಸ್ಯೆ ಎದುರಿಸಬಹುದು. ಇದರಿಂದಾಗಿ ಮಕ್ಕಳಲ್ಲಿ ಆಮ್ಲವು ಹಿಮ್ಮುಖವಾಗಿ ಹರಿಯುವ ಸಮಸ್ಯೆಯು ಎದುರಾಗಬಹುದು.

ಶಿಶುಗಳಲ್ಲಿ ಕಂಡುಬರುವ ಅಜೀರ್ಣ ಸಮಸ್ಯೆಗೆ ಇತರ ಕಾರಣಗಳು

ಶಿಶುಗಳಲ್ಲಿ ಕಂಡುಬರುವ ಅಜೀರ್ಣ ಸಮಸ್ಯೆಗೆ ಇತರ ಕಾರಣಗಳು

ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕು. ಇಂತಹ ಸೋಂಕು ಮಕ್ಕಳನ್ನು ಮೇಲಕ್ಕೆ ಎಸೆಯುವುದು. ಶಿಶುಗಳು ಆರಂಭದ ಕೆಲವು ತಿಂಗಳಲ್ಲಿ ಹೆಚ್ಚಿನ ಗಾಳಿಯನ್ನು ಎಳೆದುಕೊಳ್ಳುವುದು. ಇದರಿಂದಾಗಿ ಗ್ಯಾಸ್ ಉಂಟಾಗುವುದು ಮತ್ತು ಬೆಳೆಯುತ್ತಿರುವಂತೆ ಇದು ಕಡಿಮೆ ಆಗುವುದು. ಮಕ್ಕಳು ಘನ ಆಹಾರ ಸೇವನೆ ಮಾಡಲು ಆರಂಭಿಸಿದರೆ ಅವರಲ್ಲಿ ಮಲಬದ್ಧತೆಯು ಕಂಡುಬರುವುದು.

ಮಕ್ಕಳ ಅಜೀರ್ಣ ಸಮಸ್ಯೆಯ ಲಕ್ಷಣಗಳು

ಮಕ್ಕಳ ಅಜೀರ್ಣ ಸಮಸ್ಯೆಯ ಲಕ್ಷಣಗಳು

ಶಿಶುಗಳಲ್ಲಿ ಕಂಡುಬರುವ ಅಜೀರ್ಣ ಸಮಸ್ಯೆಯ ಕೆಲವು ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳು.

ಅಸಾಮಾನ್ಯವಾಗಿ ಅನಾರೋಗ್ಯಗೊಂಡ ಮಗು

* ಸೋಂಕಿನಿಂದಾಗಿ ಜ್ವರವು ಕಾಡಬಹುದು.

* ಅತಿಸಾರ

* ವಾಂತಿ

* ಮಲಬದ್ಧತೆ

* ಹೊಟ್ಟೆ ಉಬ್ಬರ

ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವ ಶಿಶುಗಳಲ್ಲಿ ಇಂತಹ ಲಕ್ಷಣಗಳು ಸಾಮಾನ್ಯವಾಗಿ ಇರುವುದು.

ಇಂತಹ ಯಾವುದೇ ಲಕ್ಷಣಗಳು ಶಿಶುಗಳಲ್ಲಿ ಕಂಡುಬಂದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ಈ ಕೆಲವು ಲಕ್ಷಣಗಳು ತೀವ್ರವಾಗಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ.

* ತೀವ್ರ ಜ್ವರ

* ಹೆಚ್ಚಾಗಿರುವ ಅತಿಸಾರ

* ಹಸಿವಿಲ್ಲದೆ ಇರುವುದು

* ತೂಕ ಕಳೆದುಕೊಳ್ಳುವುದು ಅಥವಾ ತುಂಬಾ ನಿಧಾನವಾಗಿ ತೂಕ ಹೆಚ್ಚಳ

* ಪದೇ ಪದೇ ಬಿಕ್ಕಳಿಕೆ ಬರುವುದು

* ಉಸಿರಾಟದ ತೊಂದರೆ

* ಹಸಿರು ದ್ರವದ ವಾಂತಿ

* ವಾಂತಿಯಲ್ಲಿ ರಕ್ತದ ಕಲೆಗಳು

* ನಿರ್ಜಲೀಕರಣ

* ಅತಿಯಾಗಿ ಜಡತ್ವ

* ಮಲದಲ್ಲಿ ರಕ್ತದ ಕಲೆಗಳು

* ಮಲ ವಿಸರ್ಜನೆ ಮಾಡದೆ ಇರುವುದು

ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣವೇ ವೈದ್ಯರಿಂದ ಪರೀಕ್ಷೆ ಮಾಡಿಸಿ.

ಶಿಶುಗಳ ಆಜೀರ್ಣ ಸಮಸ್ಯೆ ಪತ್ತೆ ಮಾಡುವುದು ಹೇಗೆ

ಶಿಶುಗಳ ಆಜೀರ್ಣ ಸಮಸ್ಯೆ ಪತ್ತೆ ಮಾಡುವುದು ಹೇಗೆ

ವೈದ್ಯರ ಬಳಿಗೆ ಮಗುವನ್ನು ಕರೆದುಕೊಂಡು ಹೋದ ವೇಳೆ ಅವರು ದೈಹಿಕವಾಗಿ ಮೊದಲು ಪರೀಕ್ಷೆ ಮಾಡುವರು ಮತ್ತು ಮಗುವಿನ ವೈದ್ಯಕೀಯ ಇತಿಹಾಸ ತಿಳಿದುಕೊಳ್ಳುವರು.

* ವೈದ್ಯರು ಈ ರೀತಿಯ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಬಹುದು.

* ಯಕೃತ್ ಸಮಸ್ಯೆ ಬಗ್ಗೆ ತಿಳಿಯಲು ಅಲ್ಬುಮಿನ್ ಪರೀಕ್ಷೆ ಮಾಡಿಸಬಹುದು.

* ಸೋಂಕು ಅಥವಾ ಅತಿಯಾದ ಹಾಲುಣಿಸುವ ಬಗ್ಗೆ ತಿಳಿಯಲು ಬ್ಲಡ್ ಕೌಂಟ್ ಪರೀಕ್ಷೆ ಮಾಡಿಸಬಹುದು.

* ಮಗು ನಿರ್ಜಲೀಕರಣಕ್ಕೆ ಒಳಗಾಗಿದೆಯಾ ಎಂದು ತಿಳಿಯಲು ಇಲೆಕ್ಟ್ರೋಲ್ಯಟ್ ಪರೀಕ್ಷೆ ಮಾಡಿಸಬಹುದು.

* ಮಲ ಕೊಬ್ಬಿನ ಪರಿಕ್ಷೆ

* ಹಲವಾರು ದಿನಗಳ ಕಾಲ ಮಗುವಿಗೆ ಕೊಬ್ಬು ಹೆಚ್ಚಿರುವ ಆಹಾರ ನೀಡಿರುವ ಬಗ್ಗೆ ತಿಳಿಯಲು ಈ ಪರೀಕ್ಷೆ ಮಾಡಿಸಲಾಗುತ್ತದೆ. ಮಲದಲ್ಲಿ ಇರುವ ಕೊಬ್ಬನ್ನು ಪರೀಕ್ಷಿಸಲಾಗುವುದು. ಅಜೀರ್ಣವು ಕೊಬ್ಬನ್ನು ಸರಿಯಾಗಿ ಜೀರ್ಣವಾಗಲು ಬಿಡದು. ಇದರಿಂದ ಮಲದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಇರುವುದು.

* ಮಗುವಿನ ಮಲದಲ್ಲಿ ರಕ್ತ ಇದೆಯಾ ಎಂದು ಪರೀಕ್ಷೆ ಮಾಡುವರು.

* ಕಾರ್ಬೋಹೈಡ್ರೇಟ್ಸ್ ಸೂಕ್ಷ್ಮತೆ, ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆ ಇತ್ಯಾದಿ ತಿಳಿದುಕೊಳ್ಳಲು ಹೈಡ್ರೋಜನ್ ಬ್ಲಡ್ ಟೆಸ್ಟ್ ಮಾಡಿಸಲಾಗುತ್ತದೆ.

* ಬ್ಯಾಕ್ಟೀರಿಯಾ ಸೋಂಕು ತಿಳಿಯಲು ಮಲದ ಪರೀಕ್ಷೆ

* ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಹೆಲಿಕಾಬ್ಯಾಕ್ಟರ್ ಪೈಲೋರಿಯ ಉಪಸ್ಥಿತಿಯನ್ನು ನೋಡಲು ಯೂರಿಯಾ ಉಸಿರಾಟದ ಪರೀಕ್ಷೆ ಮಾಡಿಸಬಹುದು.

* ಇನ್ನು ಕೆಲವೊಂದು ಸಂದರ್ಭದಲ್ಲಿ ಕೆಲವು ಸ್ಕ್ಯಾನಿಂಗ್ ಕೂಡ ಮಾಡಿಸಬಹುದು. ಅದೇನೆಂದರೆ

* ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ ಸ್ಕ್ಯಾನ್)

* ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್(ಎಂಆರ್ ಐ) ಸ್ಕ್ಯಾನ್

* ಅಲ್ಟ್ರಾಸೌಂಡ್

* ಕೊಲೊನೊಸ್ಕೋಪಿ

ಈ ಎಲ್ಲಾ ವಿಧಾನಗಳಿಂದ ವೈದ್ಯರು ಮಗುವಿನ ವಿವಿಧ ಅಂಗಾಂಗಳನ್ನು ಸರಿಯಾಗಿ ಪರೀಕ್ಷೆ ಮಾಡುವರು ಮತ್ತು ಆಕೆ/ಆತ ಯಾವುದೇ ವ್ಯತಿರಿಕ್ತ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆಯಾ ಎಂದು ತಿಳಿಯುವರು.

ಅದಾಗ್ಯೂ, ಕೆಲವೊಂದು ಸಂದರ್ಭದಲ್ಲಿ ಜೀರ್ಣಕ್ರಿಯೆ ಸಮಸ್ಯೆಯು ಸಣ್ಣ ಮಟ್ಟದಿಂದ ಮಧ್ಯಮವಾಗಿ ಇರುವುದು. ಹೆಚ್ಚಿನ ಕಾಳಜಿ ವಹಿಸಿದರೆ ಇದನ್ನು ನಿವಾರಿಸಬಹುದು.

English summary

You Must Know These Things About Baby Digestion

Babies often struggle with digestion difficulties – thanks to their delicate digestive machinery. The esophageal sphincter, which is a valve that prevents food from the stomach from returning to the food pipe, is still developing in babies.
Story first published: Thursday, December 26, 2019, 11:02 [IST]
X
Desktop Bottom Promotion