For Quick Alerts
ALLOW NOTIFICATIONS  
For Daily Alerts

ಏಕೆ ನನ್ನ ಮಗು ಎದೆ ಹಾಲು ಕುಡಿಯುತ್ತಿಲ್ಲ?

|

ಮಗುವಿಗೆ ಎದೆಹಾಲುಣಿಸುವುದು ಒಂದು ಅದ್ಭುತವಾದ ಅನುಭವ. ಮಗು ತೊಟ್ಟಿಗೆ ಬಾಯಿ ಹಾಕಿ ಎದೆ ಹಾಲು ಹೀರಿ ಕುಡಿಯುತ್ತಿದ್ದರೆ ಆ ಮಗುವಿನ ಮುಗ್ಧ ಮುಖ ನೋಡುವುದೇ ತಾಯಿಗೆ ಮಹಾದಾನಂದ. ಮಗುವಿಗೂ ಅಷ್ಟೇ ತಾಯಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಹಾಲನ್ನು ಹೀರಿ ಕುಡಿಯುವುದನ್ನು ಇಷ್ಟ ಪಡುತ್ತದೆ.

When Your Baby Wont Breastfeed

ಮಗು ಹುಟ್ಟಿ ಆರು ತಿಂಗಳಾಗುವವರೆಗೆ ಮಗುವಿಗೆ ಎದೆ ಹಾಲು ಬಿಟ್ಟು ಬೇರೆ ಯಾವ ಆಹಾರವೂ ನೀಡಬೇಡಿ ಎಂದು ವೈದ್ಯರು ಹೇಳುತ್ತಾರೆ. ಈ ಎದೆಹಾಲುಣಿಸುವ ಸಮಯದಲ್ಲಿ ತಾಯಿಗೆ ಸವಾಲುಗಳು ಎದುರಾಗುತ್ತವೆ.
ಅದರಲ್ಲೂ ಹೆರಿಗೆಯಾದ ಬಳಿಕ ಮಗುವಿಗೆ ಎದೆ ಹಾಲುಣಿಸುಲು ಪ್ರಯತ್ನಿಸುವಾಗ ಮಗುವಿಗೆ ಹಾಲನ್ನು ಹೀರಿಕೊಳ್ಳುವುದು ತಿಳಿಯದೇ ಹೋದಾಗ ಅಥವಾ ಎದೆ ಹಾಲು ಬಾರದೇ ಇದ್ದರೆ ಅಥವಾ ಮೊಲೆತೊಟ್ಟು ಮಗುವಿನ ಬಾಯಿಗೆ ಸಿಗದೇ ಹೋದರೆ ಮಗು ಅಳಲಾರಂಭಿಸುತ್ತದೆ, ತಾಯಿಗೂ ಒಂಥರಾ ಮಾನಸಿಕ ವೇದನೆ ಉಂಟಾಗುವುದು.

ಮಗುವಿಗೆ ಎದೆಹಾಲುಣಿಸುವುದು ಒಂದು ಅದ್ಭುತವಾದ ಅನುಭವ. ಮಗು ತೊಟ್ಟಿಗೆ ಬಾಯಿ ಹಾಕಿ ಎದೆ ಹಾಲು ಹೀರಿ ಕುಡಿಯುತ್ತಿದ್ದರೆ ಆ ಮಗುವಿನ ಮುಗ್ಧ ಮುಖ ನೋಡುವುದೇ ತಾಯಿಗೆ ಮಹಾದಾನಂದ. ಮಗುವಿಗೂ ಅಷ್ಟೇ ತಾಯಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಹಾಲನ್ನು ಹೀರಿ ಕುಡಿಯುವುದನ್ನು ಇಷ್ಟ ಪಡುತ್ತದೆ.

ಮಗು ಹುಟ್ಟಿ ಆರು ತಿಂಗಳಾಗುವವರೆಗೆ ಮಗುವಿಗೆ ಎದೆ ಹಾಲು ಬಿಟ್ಟು ಬೇರೆ ಯಾವ ಆಹಾರವೂ ನೀಡಬೇಡಿ ಎಂದು ವೈದ್ಯರು ಹೇಳುತ್ತಾರೆ. ಈ ಎದೆಹಾಲುಣಿಸುವ ಸಮಯದಲ್ಲಿ ತಾಯಿಗೆ ಸವಾಲುಗಳು ಎದುರಾಗುತ್ತವೆ.
ಅದರಲ್ಲೂ ಹೆರಿಗೆಯಾದ ಬಳಿಕ ಮಗುವಿಗೆ ಎದೆ ಹಾಲುಣಿಸುಲು ಪ್ರಯತ್ನಿಸುವಾಗ ಮಗುವಿಗೆ ಹಾಲನ್ನು ಹೀರಿಕೊಳ್ಳುವುದು ತಿಳಿಯದೇ ಹೋದಾಗ ಅಥವಾ ಎದೆ ಹಾಲು ಬಾರದೇ ಇದ್ದರೆ ಅಥವಾ ಮೊಲೆತೊಟ್ಟು ಮಗುವಿನ ಬಾಯಿಗೆ ಸಿಗದೇ ಹೋದರೆ ಮಗು ಅಳಲಾರಂಭಿಸುತ್ತದೆ, ತಾಯಿಗೂ ಒಂಥರಾ ಮಾನಸಿಕ ವೇದನೆ ಉಂಟಾಗುವುದು.

ಇನ್ನು ಎದೆಹಾಲು ಸ್ತನದಲ್ಲಿಯೇ ಗಟ್ಟಿಯಾದರೆ ಮತ್ತೊಂದು ರೀತಿಯ ಹಿಂಸೆ, ಆಗ ಸಹಿಸಲು ಸಾಧ್ಯವಾಗದಷ್ಟು ನೋವುಂಟಾಗುವುದು. ಮನೆಯಲ್ಲಿ ಅಮ್ಮ, ಅಜ್ಜಿ ಅಥವಾ ಆಸ್ಪತ್ರೆಯಲ್ಲಾದರೆ ನರ್ಸ್‌ಗಳು ಮಗುವಿಗೆ ಯಾವ ರೀತಿ ಹಾಲುಣಿಸಬೇಕೆಂದು ಚೊಚ್ಚಲ ಹೆರಿಗೆಯಲ್ಲಿ ತಿಳಿಸಿಕೊಡುತ್ತಾರೆ.

ಕೆಲ ನವಜಾತ ಶಿಶುಗಳು ಹಾಲು ಕುಡಿಯುವುದೇ ಇಲ್ಲ, ಒಂದೇ ಸಮನೆ ಅಳಲಾರಂಭಿಸುತ್ತವೆ ಆಗ ಮಗುವಿಗೆ ಏನಾಗಿದೆ ಎಂದು ಗಾಬರಿ ಬೀಳುತ್ತೇವೆ ಹಾಗೂ ಮಗುವಿಗೆ ಹಾಲುಣಿಸುವುದೇ ಒಂದು ಸವಾಲಾಗಿರುತ್ತದೆ. ಈ ಸಮಯದಲ್ಲಿ ಗಾಬರಿಯಾಗಬೇಡಿ, ತಾಳ್ಮೆ ಕಳೆದುಕೊಳ್ಳಬೇಡಿ ಅನುಭವಸ್ಥರ ಸಲಹೆ ಕೇಳಿ, ನಿಮ್ಮ ವೈದ್ಯರ ಬಳಿ ಮಾತನಾಡಿ.

ಸಾಮಾನ್ಯವಾಗಿ ನವಜಾತ ಶಿಶು ಈ ಕಾರಣಗಳಿಂದ ಹಾಲು ಕುಡಿಯುವುದಿಲ್ಲ

ಮಗುವಿಗೆ ಹಾಲು ಎಳೆಯಲು ಗೊತ್ತಾಗುವುದಿಲ್ಲ

ಮಗುವಿಗೆ ಹಾಲು ಎಳೆಯಲು ಗೊತ್ತಾಗುವುದಿಲ್ಲ

ಹೆರಿಗೆಯಾದ ಅರ್ಧ ಗಂಟೆಯೊಳಗೆ ಎದೆ ಹಾಲುಣಿಸುತ್ತಾರೆ. ಸಹಜ ಹೆರಿಗೆಯಾದವರಿಗೆ ಈ ಸಮಯದಲ್ಲಿ ಹಾಲುಣಿಸಲು ಅಷ್ಟೇನು ತೊಂದರೆ ಉಂಟಾಗುವುದಿಲ್ಲ, ಅದೇ ಸಿ ಸೆಕ್ಷನ್‌ ಆಗಿದ್ದರೆ ಕೂತು ಎದೆ ಹಾಲುಣಿಸಲು ಕಷ್ಟವಾಗುವುದು. ಮಗುವಿಗೂ ಕುಡಿಯುವುದು ಹೇಗೆ ಅಂತ ತಿಳಿದಿರುವುದಿಲ್ಲ. ಇನ್ನು ಕೆಲವರಿಗೆ ಹಾಲು ಇನ್ನೂ ಅಷ್ಟಾಗಿ ಉತ್ಪತ್ತಿಯಾಗಿರುವುದಿಲ್ಲ, ಮಗು ಎಳೆದು ಕುಡಿದಾಗ ಉತ್ಪತ್ತಿ ಅಧಿಕವಾಗುತ್ತದೆ. ಆದರೆ ಮಗು ಚೀಪಿದಾಗ ಅದಕ್ಕೆ ಹಾಲು ಸಿಗುವುದಿಲ್ಲ.

ಹಾಲು ಸಿಗದೇ ಹೋದಾಗ ಅಳಲಾರಂಭಿಸುತ್ತದೆ, ಕುಡಿಯಲು ಮುಂದಾಗುವುದಿಲ್ಲ. ಮಗುವಿಗೆ ಹಸಿವು ಉಂಟಾಗಿರುತ್ತದೆ, ಹಾಲು ಎಳೆದು ಕುಡಿಯಲೂ ಗೊತ್ತಿರುವುದಿಲ್ಲ ಹಾಗಾಗಿ ಕಿರುಚಿ ಅಳುತ್ತಾ ತನ್ನ ಅಸಮಾಧಾನ ಹೊರ ಹಾಕುತ್ತದೆ.

ಇನ್ನು ಸಿ ಸೆಕ್ಷನ್ ಆದಾಗ ತಾಯಿಗೆ ಹಾಲುಣಿಸಲು ಕಷ್ಟವಾದಾಗ ಲ್ಯಾಕ್ಟೋಜಿನ್ ನೀಡುವಂತೆ ಸಲಹೆ ನೀಡುತ್ತಾರೆ, ಮಗು ಲ್ಯಾಲ್ಟೋಜಿನ್ ಕುಡಿದರೆ ನಂತರ ಅದೇ ರೀತಿ ಸುಲಭದಲ್ಲಿ ಸಿಗುವಂತೆ ಬಯಸುತ್ತದೆ, ಎಳೆದು ಕುಡಿಯಲು ಸಿದ್ಧವಿರುವುದಿಲ್ಲ.

ಮಗು ಹಾಲು ಎಳೆದು ಕುಡಿಯಲು ಮೊಲೆತೊಟ್ಟುಗಳು ಮಗುವಿನ ಬಾಯಿಯೊಳಗೆ ಸರಿಯಾಗಿ ಇಟ್ಟುಕೊಡಬೇಕು. ಇಲ್ಲಿ ತಾಯಿ ತಾಳ್ಮೆಯಿಂದ ಮಗುವನ್ನು ಸಮಧಾನ ಮಾಡಬೇಕು. ಅದು ಒಂದೆರಡು ದಿನಗಳಲ್ಲಿ ಹಾಲು ಕುಡಿಯುವುದನ್ನು ಕಲಿತು ಬಿಡುತ್ತದೆ.

ಮಗು ಅವಧಿ ಪೂರ್ವ ಹುಟ್ಟಿದ್ದರೆ

ಮಗು ಅವಧಿ ಪೂರ್ವ ಹುಟ್ಟಿದ್ದರೆ

ಅವಧಿ ಪೂರ್ವ ಹುಟ್ಟಿದ ಮಗುವಾಗಿದ್ದರೆ ಕೂಡ ಹಾಲು ಕುಡಿಸುವಾಗ ಸಮಸ್ಯೆ ಎದುರಾಗಬಹುದು. ಅದಕ್ಕೆ ಕುಡಿಯಲು ಗೊತ್ತಾಗುವುದಿಲ್ಲ ಹಾಗೂ ನಿಮಗೂ ಹಾಲು ಅಷ್ಟಾಗಿ ಉತ್ಪತ್ತಿಯಾಗಿರುವುದಿಲ್ಲ. ಅವಧಿ ಪೂರ್ವ ಮಗು NICUನಲ್ಲಿ ಇದ್ದರೂ ಕೂಡ ಆಗಾಗ ತಾಯಿ ಬಳಿ ಹಾಲುಣಿಸುತ್ತಾರೆ. ಅದಕ್ಕೆ ಚೀಪುವುದು ತಿಳಿಯದಿದ್ದರೆ ಸಿರೇಂಜ್‌ನಲ್ಲಿ ಎಳೆದು ನೀಡಬೇಕಾಗುತ್ತದೆ. ಮಗು ಕೂಡ ನಿಧಾನಕ್ಕೆ ಹಾಲು ಹೀರಿಕೊಳ್ಳಲು ಕಲಿಯುತ್ತದೆ. ಡಿಸ್ಚಾರ್ಜ್ ಆಗುವಷ್ಟರಲ್ಲಿ ಸರಿಯಾಗುವುದು.

ಮೊಲೆ ತೊಟ್ಟು ಉದ್ದ ಇಲ್ಲದಿದ್ದರೆ

ಮೊಲೆ ತೊಟ್ಟು ಉದ್ದ ಇಲ್ಲದಿದ್ದರೆ

ಚೊಚ್ಚಲ ಗರ್ಭವತಿಯರು 5 ತಿಂಗಳು ಕಳೆಯುತ್ತಿದ್ದಂತೆ ಸ್ತನಗಳಿಗೆ ಮೆಲ್ಲನೆ ಮಸಾಜ್‌ ಮಾಡುವುದು, ಮೊಲೆ ತೊಟ್ಟುಗಳನ್ನು ಎಳೆಯುವುದು ಮಾಡುತ್ತಿದ್ದರೆ ಹೆರಿಗೆಯ ಬಳಿಕ ಮಗುವಿಗೆ ಹಾಲುಣಿಸುವಾಗ ತೊಂದರೆ ಉಂಟಾಗುವುದಿಲ್ಲ. ಇಲ್ಲದಿದ್ದರೆ ಮಗುವಿಗೆ ಹಾಲು ಹೀರಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಸಿರೇಂಜ್‌ನಲ್ಲಿ ಎಳೆದು ಮಗುವಿಗೆ ಹಾಲುಣಿಸಬೇಕಾಗುತ್ತದೆ.

ಹುಟ್ಟುವಾಗಲೇ ಮಗುವಿನಲ್ಲಿ ಏನಾದರೂ ನ್ಯೂನತೆ ಇದ್ದರೆ

ಹುಟ್ಟುವಾಗಲೇ ಮಗುವಿನಲ್ಲಿ ಏನಾದರೂ ನ್ಯೂನತೆ ಇದ್ದರೆ

ಸಹಜ ಹೆರಿಗೆಯಾದಾಗ ಕೆಲವೊಮ್ಮೆ ಮಗುವಿನ ತೋಳುಗಳಿಗೆ ಹಾನಿಯಾಗುವುದುಂಟು. ಆಗ ಮಗು ಹಾಲಯ ಕುಡಿಯಲು ಸಿದ್ಧವಾಗುವುದಿಲ್ಲ. ಆಗ ಪರೀಕ್ಷೆ ಮಾಡಿಸಿದರೆ ವೈದ್ಯರು ಸೂಕ್ತ ಸಲಹೆ ನೀಡುತ್ತಾರೆ. ಮಗುವಿನ ಭುಜ ಹೇಗೆ ಸರಿಪಡಿಸಬಹುದೆಂಬ ಸಲಹೆಯನ್ನೂ ವೈದ್ಯರು ನೀಡುತ್ತಾರೆ.

 ಹಾಲು ಉತ್ಪತ್ತಿ ತಡವಾಗಿ ಆದಾಗ

ಹಾಲು ಉತ್ಪತ್ತಿ ತಡವಾಗಿ ಆದಾಗ

ಕೆಲವರಲ್ಲಿ ಗರ್ಭಾವಸ್ಥೆಯಲ್ಲಿಯೇ ಹಾಲು ಉತ್ಪತ್ತಿಯಾದರೆ, ಇನ್ನು ಕೆಲವರಿಗೆ ಹೆರಿಗೆ ಆದ ಬಳಿಕವೂ ಹಾಲು ಉತ್ಪತ್ತಿಯಾಗಿರುವುದಿಲ್ಲ. ಮಗುವಿಗೆ ಹಾಲು ಸಿಗದೇ ಹೀದಾಗ ಅಸಮಧಾನ ಉಂಟಾಗುವುದು. ಈ ಸಮಯದಲ್ಲಿ ಮಗುವಿಗೆ ಫಾರ್ಮುಲಾ ಮಿಲ್ಕ್ ನೀಡಬೇಕಾಗುತ್ತದೆ.

 ಮಗು ತುಂಬಾ ನಿದ್ದೆಯಲ್ಲಿದ್ದರೆ

ಮಗು ತುಂಬಾ ನಿದ್ದೆಯಲ್ಲಿದ್ದರೆ

ನವಜಾತ ಶಿಶುಗಳು ತುಂಬಾ ನಿದ್ದೆ ಮಾಡುತ್ತವೆ, ಕೆಲವೊಂದು ಮಕ್ಕಳು ಇನ್ನೂ ಅಧಿಕವೇ ನಿದ್ದೆ ಮಾಡುತ್ತದೆ, ನಿದ್ದೆಯಲ್ಲಿ ಹಾಲುಣಿಸಿದಾಗ ಅವು ಕುಡಿಯದೇ ಅಳಲಾರಂಭಿಸುತ್ತದೆ. ಇನ್ನು ಮಗುವಿಗೆ ಅರಿಶಿನ ಕಾಮಲೆ ಅಥವಾ ಇತರ ಆರೋಗ್ಯ ಸಮಸ್ಯೆ ಇದ್ದರೂ ಹಾಲು ಕುಡಿಯುವುದಿಲ್ಲ.

ಮಗು ತುಂಬಾ ನಿದ್ದೆ ಮಾಡುತ್ತಿದ್ದರೆ ಅದನ್ನು ಎತ್ತಿ ಅದರ ಕಾಲು, ಬೆನ್ನು ಮೆಲ್ಲನೆ ಉಜ್ಜಿ, ಬಟ್ಟೆ ಬಿಚ್ಚಿ ಆಗ ಎಚ್ಚರವಾಗಿ ಕುಡಿಯಲಾರಮಭಿಸುತ್ತದೆ

 ಒಂದು ವರ್ಷದೊಳಗಿನ ಮಗು ಏಕೆ ಹಾಲು ಕುಡಿಯುತ್ತಿಲ್ಲ

ಒಂದು ವರ್ಷದೊಳಗಿನ ಮಗು ಏಕೆ ಹಾಲು ಕುಡಿಯುತ್ತಿಲ್ಲ

ಚೆನ್ನಾಗಿ ಹಾಲು ಕುಡಿಯುತ್ತಿದ್ದ ಮಗು ಇದ್ದಕ್ಕಿದ್ದಂತೆ ಹಾಲುಣಿಸಲು ಹೋದಾಗ ಅಳಲಾರಂಭಿಸುತ್ತದೆ, ಅದಕ್ಕೆ ಹಾಲು ಬೇಕಿರುತ್ತದೆ ಆದರೆ ಕುಡಿಯುವುದಕ್ಕೆ ಸಿದ್ಧವಿರುವುದಿಲ್ಲ, ಆಗ ತಾಯಂದಿರು ಗಾಬರಿ ಬೀಳುವುದು ಸಹಜ. ಸಾಮಾನ್ಯ ಮಗು ಈ ಕಾರಣಕ್ಕೆ ಹಾಲು ಕುಡಿಯುವುದಿಲ್ಲ

ಶೀತ: ತುಂಬಾ ಶೀತ ಉಂಟಾದಾಗ ಮಗುವಿಗೆ ಹಾಲು ಕುಡಿಯಲು ಕಷ್ಟವಾಗುವುದು. ಮಗುವಿಗೆ ಮೂಗು ಕಟ್ಟಿರುತ್ತದೆ, ಬಾಯಿ ಮೂಲಕ ಉಸಿರಾಡುತ್ತಿರುತ್ತದೆ, ಆಗ ಹಾಲು ಕುಡಿಯುವಾಗ ಉಸಿರು ಕಟ್ಟಿದಂತೆ ಆಗುವುದರಿಂದ ಮಗು ಹಾಲು ಕುಡಿಯಲು ಹಿಂದೇಟು ಹಾಕುತ್ತದೆ.

ಬೇರೆ ಕಡೆ ಗಮನ: ಮಗು ಬೆಳೆಯುತ್ತಿದ್ದಂತೆ ಆಟದಲ್ಲಿ ಹೆಚ್ಚು ಮಗ್ನವಾಗುತ್ತದೆ, ಆದ್ದರಿಂದ ಅದು ಹಾಲು ಕುಡಿಯಲು ಇಷ್ಟಪಡದೆ ಕೊಡಲು ಹೋದಾಗ ಅಳಬಹುದು.

ಹಾಲು ತುಂಬಾ ಬಂದರೆ: ಕೆಲವೊಮ್ಮೆ ಅದು ಚೀಪಿ ಕುಡಿಯುವಾಗ ಹಾಲು ತುಂಬಾ ಬಂದರೆ ಕುಡಿಯಲು ಕಷ್ಟವಾಗುತ್ತದೆ. ಆಗ ಅಳಲಾರಂಭಿಸುತ್ತದೆ

ಹಾಲು ಬಾರದೇ ಹೋದಾಗ: ಹಾಲು ಕುಡಿಯಲು ಬಂದಾಗ ಹಾಲು ಸರಿಯಾಗಿ ಸಿಗದಿದ್ದರೆ ಕೂಡ ಅದಕ್ಕೆ ಸಿಟ್ಟು ಬಂದು ಹಾಲು ಕುಡಿಯಲು ಹಿಂದೇಟು ಹಾಕಬಹುದು.

ನೋವು: ಮಗುವಿಗೆ ಹಲ್ಲು ಬರುವ ಸಮಯದಲ್ಲಿ ಕಚ್ಚುತ್ತದೆ ಹಾಗೂ ಆ ಸಮಯದಲ್ಲಿ ಮಗುವಿಗೆ ಸ್ವಲ್ಪ ಕಿರಿಕಿರಿ ಅನಿಸಬಹುದು, ಇಲ್ಲದಿದ್ದರೆ ಹೊಟ್ಟೆ ನೋವು ಇದ್ದಾಗ, ಗ್ಯಾಸ್‌ ಸಮಸ್ಯೆ ಉಂಟಾದಾf ಮಗು ಹಾಲು ಕುಡಿಯಲು ಹಿಂದೇಟು ಹಾಕಿ ಅಳಲಾರಂಭಿಸುತ್ತದೆ.

ರುಚಿ: ಇನ್ನು ತಾಯಿ ಶರೀರದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾದಾಗ ಮಗುವಿಗೆ ಹಾಲಿನಲ್ಲಿ ರುಚಿ ಬದಲಾವಣೆಯಾದರೆ ಕೂಡ ಹಾಲು ಕುಡಿಯಲು ಬಯಸುವುದಿಲ್ಲ.

ಮಗು ಹಾಲು ಕುಡಿಯದಿದ್ದಾಗ ಏನು ಮಾಡಬೇಕು?

ಮಗು ಹಾಲು ಕುಡಿಯದಿದ್ದಾಗ ಏನು ಮಾಡಬೇಕು?

  • ಮಗುವನ್ನು ಸಮಧಾನ ಪಡಿಸಿ ಪ್ರತ್ಯೇಕ ಕೋಣೆಗೆ ಕರೆದುಕೊಂಡು ಹೋಗಿ ಹಾಲು ಕುಡಿಸಿ.
  • ಮಗು ತುಂಬಾ ಅಳುತ್ತಿದ್ದರೆ ವೈದ್ಯರಿಗೆ ತೋರಿಸಿ.
  • ಹಾಲು ಹೆಚ್ಚಾಗಿದ್ದರೆ ಅದನ್ನು ಪಂಪ್‌ ಮಾಡಿ ತೆಗೆದು ಬಾಟಲಿನಲ್ಲಿ ಕೊಡಿ.
  • ನವಜಾತ ಶಿಶುವಿಗೆ ಹಾಲುಣಿಸುವಾಗ ಕೂರುವ ಭಂಗಿ ಹಾಗೂ ಮಗುವನ್ನು ಹಿಡಿದುಕೊಳ್ಳುವ ಭಂಗಿ ಸರಿಯಾಗಿ ಇರಲಿ.
  • ಮಗುವಿಗೆ ಎರಡು ಗಂಟೆಗೊಮ್ಮೆ ಹಾಲುಣಿಸಿ, ಆದರೆ ಒತ್ತಾಯ ಮಾಡಬೇಡಿ.
  • ಮಗು ಸರಿಯಾಗಿ ಹಾಲು ಕುಡಿಯುವಂತಾಗುವವರೆಗೆ ತಾಳ್ಮೆ ವಹಿಸಿ.
English summary

When Your Baby Won't Breastfeed

Here is why and when your baby won't breastfeed, read on,
X
Desktop Bottom Promotion