For Quick Alerts
ALLOW NOTIFICATIONS  
For Daily Alerts

ವಾಸ್ತು ಟಿಪ್ಸ್: ಮಗುವಿನ ಮಾನಸಿಕ ಬೆಳವಣಿಗೆಗೆ ಮಲಗುವ ಕೋಣೆ ಹೇಗಿರಬೇಕು?

|

ಮಗುವೊಂದು ಹೊಸ ಜಗತ್ತಿಗೆ ಕಾಲಿಡುತ್ತಿದ್ದ ಹಾಗೆ ಪೋಷಕರಿಗಾಗುವ ಸಂತೋಷ ಹೇಳ ತೀರದು. ಮಗು ಹುಟ್ಟಿದ ನಂತರ ಅದರ ಸಾರ್ವತ್ರಿಕ ಬೆಳವಣಿಗೆಗೆ ಪೋಷಕರು ಶತಾಯಗತಾಯ ಪ್ರಯತ್ನಿಸುತ್ತಾರೆ.

ಈ ಜಗತ್ತಿಗೆ ಹೊಸ ಜೀವವೊಂದನ್ನು ನೀಡುವುದು ಎಂದರೆ ಯಾವಾಗಲೂ ದಂಪತಿಗಳಿಗೆ ಬಹಳ ವಿಶೇಷವಾದ ಕ್ಷಣವಾಗಿದೆ. ಪೋಷಕರಾಗುವುದು ಸ್ವಾಗತಾರ್ಹ ಮತ್ತು ಸವಾಲಿನ ಸಂಗತಿಯೂ ಆಗಿದೆ. ಇಂದಿನ ಸಮಯ ಮತ್ತು ವಯಸ್ಸಿನಲ್ಲಿ ಹೆಚ್ಚಿನ ದಂಪತಿಗಳು ತಮ್ಮ ಮಗುವಿನ ಆರೋಗ್ಯ, ಸಂತೋಷ, ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಮಗುವನ್ನು ಪಡೆಯಲು ಯೋಚಿಸುವ ಮೊದಲೇ ಚಿಂತಿಸಿರುತ್ತಾರೆ!

ವಾಸ್ತು ತಜ್ಞ ಡಾ.ರವಿರಾಜ್ ಅಹಿರ್ರಾವ್, ಕೆಲವು ವಾಸ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ

ಯಾವುದೇ ಮಗುವಿಗೆ ಆರಂಭಿಕ ಕೆಲವು ವರ್ಷಗಳು ಎಷ್ಟು ಮಹತ್ವದ್ದಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇದು ಅವರ ಒಟ್ಟಾರೆ ಬೆಳವಣಿಗೆಯಲ್ಲಿ ಅವರಿಗೆ ಸಹಾಯ ಮಾಡುತ್ತದೆ ಮತ್ತು ಮುಂದಿನ ವರ್ಷಗಳಲ್ಲಿ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಒಂದು ಅಡಿಪಾಯವನ್ನು ಸೃಷ್ಟಿಸುತ್ತದೆ.

ಶಿಶುವೈದ್ಯರು ಸಲಹೆ ನೀಡುವ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಪೋಷಕರು ನಮ್ಮ ಪುರಾತನ ಭಾರತೀಯ ವಾಸ್ತುಶಾಸ್ತ್ರದ ಸಹಾಯವನ್ನು ತೆಗೆದುಕೊಳ್ಳಬಹುದು, ಇದು ಸಕಾರಾತ್ಮಕ ಶಕ್ತಿಯಿಂದ ತುಂಬಿದ ವಾತಾವರಣವನ್ನು ಸೃಷ್ಟಿಸುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಾಸ್ತು ತಜ್ಞ ಡಾ.ರವಿರಾಜ್ ಅಹಿರ್ರಾವ್, ತಮ್ಮ ಮಗುವಿನ ಕೋಣೆಯನ್ನು ವಿನ್ಯಾಸಗೊಳಿಸುವಾಗ ಪೋಷಕರು ನೆನಪಿನಲ್ಲಿಟ್ಟುಕೊಳ್ಳಬಹುದಾದ ಕೆಲವು ವಾಸ್ತು ಸಲಹೆಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ.

ಸೂರ್ಯನ ಕಿರಣಗಳು ಮುಖ್ಯ

ಸೂರ್ಯನ ಕಿರಣಗಳು ಮುಖ್ಯ

ಮಗುವಿನ ಕೋಣೆಯ ಪ್ರಮುಖ ಅಂಶವೆಂದರೆ ಅದು ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಬೇಕು, ವಿಶೇಷವಾಗಿ ಮುಂಜಾನೆ ಸೂರ್ಯನ ಕಿರಣಗಳು ಮಗುವಿನ ಕೋಣೆಯನ್ನು ಪ್ರವೇಶಿಸುವಂತಿರಬೇಕು. ಸಾಕಷ್ಟು ಸಕಾರಾತ್ಮಕ ಶಕ್ತಿಯನ್ನು ನೀಡುವುದರ ಹೊರತಾಗಿ, ಬೆಳಗಿನ ಸೂರ್ಯನ ಕಿರಣಗಳು ಮಗುವಿನ ಕೋಣೆಯಲ್ಲಿರುವ ಹೆಚ್ಚಿನ ರೋಗಾಣುಗಳನ್ನು ಕೊಲ್ಲುತ್ತವೆ.

ಮಲಗುವ ವ್ಯವಸ್ಥೆ

ಮಲಗುವ ವ್ಯವಸ್ಥೆ

ಶಿಶುಗಳಿಗೆ ಮಲಗುವ ವ್ಯವಸ್ಥೆ ಕಟ್ಟುನಿಟ್ಟಾಗಿ ಈಶಾನ್ಯ ದಿಕ್ಕಿನಲ್ಲಿರಬೇಕು. ಉತ್ತರ, ಈಶಾನ್ಯ ಮತ್ತು ಪೂರ್ವ ಪ್ರದೇಶಗಳು ಶಿಶುಗಳ ಮಲಗುವ ಕೋಣೆಗೆ ಸೂಕ್ತವಾಗಿವೆ.

ತೊಟ್ಟಿಲು

ತೊಟ್ಟಿಲು

ತೊಟ್ಟಿಲು, ಗೋಡೆಯಿಂದ 2 ರಿಂದ 3 ಅಡಿ ದೂರದಲ್ಲಿರಬೇಕು ಮತ್ತು ಅದನ್ನು ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು.

ನಿದ್ದೆ ಮಾಡುವಾಗ ಮಗುವಿನ ತಲೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು.

ಶಾಂತಿಯುತ ನಿದ್ರೆ ಮುಖ್ಯ

ಶಾಂತಿಯುತ ನಿದ್ರೆ ಮುಖ್ಯ

ನಿದ್ದೆ ಮಾಡುವಾಗ ಮಗುವಿನ ತಲೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು.

ಸಮತೋಲನವನ್ನು ಕಾಪಾಡಿಕೊಳ್ಳಿ

ಸಮತೋಲನವನ್ನು ಕಾಪಾಡಿಕೊಳ್ಳಿ

ಗಾಳಿಯ ಅಂಶದೊಂದಿಗೆ ಸಂಯೋಜಿತವಾಗಿರುವ ಮನೆಯ ವಾಯುವ್ಯ ಪ್ರದೇಶದಲ್ಲಿನ ಸರಿಯಾದ ಸಮತೋಲನವು ಶಿಶುಗಳಲ್ಲಿನ ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಕಲ್ಲು ಉಪ್ಪಿನ ಜಾದೂ!

ಕಲ್ಲು ಉಪ್ಪಿನ ಜಾದೂ!

ಶಿಶುವಿನ ಕೋಣೆಯಲ್ಲಿ ಕಚ್ಚಾ ಅಥವಾ ಕಲ್ಲು ಉಪ್ಪು ಇರುವುದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಈ ಉಪ್ಪನ್ನು ಆಗಾಗ್ಗೆ ಬದಲಾಯಿಸಬೇಕು.

ಬಣ್ಣಗಳಿಗೆ ಗಮನ ಕೊಡಿ

ಬಣ್ಣಗಳಿಗೆ ಗಮನ ಕೊಡಿ

ಗಾಢ ಮತ್ತು ಕಡು ಬಣ್ಣಗಳನ್ನು ಬಳಸಬೇಡಿ. ಜೊತೆಗೆ ಮಗುವಿನ ಕೋಣೆಯಲ್ಲಿ ತಿಳಿಯಾದ ಮತ್ತು ಆಕರ್ಷಕ ಬಣ್ಣಗಳನ್ನು ಬಳಸುವುದರ ಕಡೆಗೆ ವಿಶೇಷ ಗಮನ ನೀಡಬೇಕು. ಮಗು ಆಡುವ ಆಟಿಕೆಗಳು ಸಹ ತಿಳಿ ಮತ್ತು ಆಕರ್ಷಕ ಬಣ್ಣಗಳಲ್ಲಿರಬೇಕು.

 ಮಾನಸಿಕ ಬೆಳವಣಿಗೆ ಮುಖ್ಯ

ಮಾನಸಿಕ ಬೆಳವಣಿಗೆ ಮುಖ್ಯ

ಶಾಂತಿ, ಆಧ್ಯಾತ್ಮಿಕತೆ ಮತ್ತು ಪ್ರೇರಣೆಯ ದೃಶ್ಯಗಳನ್ನು ಬಿಂಬಿಸುವಂಥ ಚಿತ್ರಗಳು ಅಥವಾ ಪೇಂಟಿಂಗ್ ಗಳನ್ನು ಮಗುವಿನ ಕೋಣೆಯಲ್ಲಿ ಇಡಬೇಕು. ಅದಕ್ಕೆ ತಕ್ಕಂತೆ ಅವರ ಮನಸ್ಸನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ನಿರ್ದಿಷ್ಟವಾಗಿ ಸೂರ್ಯಕಾಂತಿಯ ವರ್ಣಚಿತ್ರಗಳು ಪಿಟ್ಯುಟರಿ ಗ್ರಂಥಿಯನ್ನು ಸಕ್ರಿಯಗೊಳಿಸುತ್ತವೆ ಮತ್ತು ಇದರಿಂದಾಗಿ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಪೋಷಕರ ಬಿಸಿಅಪ್ಪುಗೆ

ಪೋಷಕರ ಬಿಸಿಅಪ್ಪುಗೆ

ವಾಸ್ತುಶಾಸ್ತ್ರದ ಮೂಲಕ ಪೋಷಕರು ತಮ್ಮ ಮಕ್ಕಳ ಒಟ್ಟಾರೆ ಬೆಳವಣಿಗೆಯಲ್ಲಿ ಹೆಚ್ಚುವರಿ ಬೆಂಬಲವನ್ನು ನೀಡಬಹುದು. ಹೆತ್ತವರ ನಡುವಿನ ಸಾಮರಸ್ಯ ಮತ್ತು ಸಮನ್ವಯವು ಅತ್ಯುತ್ತಮವಾದಾಗ ಮಾತ್ರ ಮಗುವಿಗೆ ಅದನ್ನು ಒದಗಿಸಬಹುದು. ಮಕ್ಕಳು, ಅದರಲ್ಲೂ ವಿಶೇಷವಾಗಿ ಶಿಶುಗಳು ಅತೀ ಸೂಕ್ಷ್ಮ ಮತ್ತು ಸಂವೇದನಾಶೀಲ ಶಕ್ತಿಗಳಿಗೆ ಗುರಿಯಾಗುತ್ತಾರೆ ಆದ್ದರಿಂದ ಸಕಾರಾತ್ಮಕ ವಾತಾವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಶಾಂತಿಯುತವಾಗಿರಿಸುವುದು ಬಹಳ ಮುಖ್ಯ.

English summary

Vastu Tips To Plan New Born Baby Room

Room will impact on baby mental growth, here are vastu tips to plan for baby room for it's well being...
X