For Quick Alerts
ALLOW NOTIFICATIONS  
For Daily Alerts

ನಿದ್ದೆ ಮಾಡುವಾಗ ಬೆವರುತ್ತಿರುವ ಮಗುವಿನ ಬಗ್ಗೆ ಇರಲಿ ಎಚ್ಚರ !

|

ಮನೆಯಲ್ಲಿ ಪುಟ್ಟಮಗು ಒಂದಿದ್ದರೆ ಅದರ ತುಂಟಾಟ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಮಗುವಿನ ಆಟ - ಪಾಠ, ನಗು - ಅಳುವಿನಲ್ಲಿ ನಮ್ಮ ಜೀವನದ ದುಃಖ ದುಮ್ಮಾನಗಳನ್ನು ಮರೆಯುತ್ತೇವೆ. ಅದರ ಕಲ್ಮಶವಿಲ್ಲದ ಮುದ್ದಾದ ಮುಖ ದೊಡ್ಡವರಾದ ನಮ್ಮನ್ನು ಸಹ ಮಗುವಿನಲ್ಲಿ ಮಗುವಾಗಿ ಬದಲಾಗುವಂತೆ ಮಾಡುತ್ತದೆ.

ನಮ್ಮ ಪುಟ್ಟ ಕಂದಮ್ಮ ಮಲಗಿಕೊಂಡರೆ ನೋಡಲು ಎಷ್ಟು ಮುದ್ದಾಗಿ ಕಾಣುತ್ತದೆ ಅಲ್ಲವೇ? ತನ್ನದೇ ಆದ ಶೈಲಿಯಲ್ಲಿ ತನ್ನದೇ ಆದ ಲೋಕದಲ್ಲಿ ಹೊರಗಿನ ಪ್ರಪಂಚದ ಅರಿವೇ ಇಲ್ಲವೇನೋ ಎಂಬಂತೆ ಆರಾಮವಾಗಿ ಮಲಗಿ ಅದರ ಮೇಲೆ ನಮ್ಮ ನೆಟ್ಟ ಕಣ್ಣು ಬೇರೆಡೆಗೆ ಹಾಯದಂತೆ ತನ್ನತ್ತ ಅದಾಗಲೇ ಸೆಳೆದಿರುತ್ತದೆ.

ಮಗುವಿನ ನಿದ್ರಾ ಸಮಯ ನಾವು ನಿದ್ರೆ ಮಾಡುವ ಸಮಯಕ್ಕಿಂತಲೂ ಬಹಳಷ್ಟು ಬದಲಾವಣೆ ಹೊಂದಿರುತ್ತದೆ. ಅಂದರೆ ನಾವು ಮಲಗಿದ್ದಾಗ ಮಗು ಎದ್ದಿರುತ್ತದೆ. ನಾವು ಎದ್ದಿದ್ದಾಗ ಮಗು ಮಲಗಿ ನಿದ್ರೆ ಮಾಡುತ್ತಿರುತ್ತದೆ. ಮಗುವಿನ ನಿದ್ರೆಯ ಸಮಯದಲ್ಲಿ ಅದಕ್ಕೆ ಕಿಂಚಿತ್ ತೊಂದರೆ ಆದರೂ ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಅಂತಹ ನಮ್ಮ ಮುದ್ದಾದ ಮಗು ನಿದ್ರೆ ಮಾಡುತ್ತಾ ಮೈ ತುಂಬಾ ಬೆವರಲು ಪ್ರಾರಂಭ ಮಾಡಿದರೆ, ನಮ್ಮ ಮನಸ್ಸಿಗೆ ಎಷ್ಟು ಘಾಸಿಯಾಗುತ್ತದೆ ಅಲ್ಲವೇ?

ನಾವಾದರೆ ನಮಗೆ ಆಗುತ್ತಿರುವ ತೊಂದರೆಯನ್ನು ಬೇರೆಯವರ ಬಳಿ ಬಾಯಿ ಬಿಟ್ಟು ಹೇಳಿಕೊಳ್ಳುವ ವಿವೇಚನೆ ಮತ್ತು ಮಾತುಗಳನ್ನು ಕಲಿತಿರುತ್ತೇವೆ. ಆದರೆ ಪುಟ್ಟ ಮಗು ಅದರ ದೇಹದ ಒಳಗಡೆ ಆಗುತ್ತಿರುವ ಎಂತಹದೇ ತೊಂದರೆಯನ್ನು ಬಾಯಿ ಬಿಟ್ಟು ಹೇಳಲಾಗದೆ ಮೂಕ ವೇದನೆ ಅನುಭವಿಸುತ್ತಿರುತ್ತದೆ. ಮೈ ಬೆವರಿನ ವಿಷಯದಲ್ಲೂ ಅಷ್ಟೇ. ಈ ವಿಷಯವನ್ನು ದೊಡ್ಡವರಾದ ನಾವೇ ಅರ್ಥ ಮಾಡಿಕೊಂಡು, ಸದ್ಯದ ಪರಿಸ್ಥಿತಿಯಲ್ಲಿ ಮಗು ಅನುಭವಿಸುತ್ತಿರುವ ತೊಂದರೆಗೆ ಕಾರಣವೇನೆಂದು ವೈದ್ಯರ ಬಳಿ ಸಲಹೆ ಪಡೆದು ರೋಗ ಲಕ್ಷಣಗಳನ್ನು ಪತ್ತೆ ಹಚ್ಚಬೇಕು.

ಮಗು ನಿದ್ರಿಸುವಾಗ ಮೈ ಬೆವರಲು ಕಾರಣವಾದ ಅಂತಹ ಕೆಲವೊಂದು ಗಂಭೀರವಾದ ಕಾರಣಗಳನ್ನು ಈ ಲೇಖನದಲ್ಲಿ ತಿಳಿಸಿ ಕೊಡಲಾಗಿದೆ.

ಹಾಗಾದರೆ ಮಗುವಿನ ರಾತ್ರಿ ಬೆವರು ಎಂದರೇನು ?

ಹಾಗಾದರೆ ಮಗುವಿನ ರಾತ್ರಿ ಬೆವರು ಎಂದರೇನು ?

ಮಗುವಿಗೆ ಸ್ವಲ್ಪ ತೊಂದರೆ ಉಂಟಾದರೂ ಪೋಷಕರಿಗೆ ನೆಮ್ಮದಿಯ ಭಂಗ ಖಂಡಿತ. ಕೇವಲ ಚಿಕ್ಕ ಚಿಕ್ಕ ಬದಲಾವಣೆಗಳು ಪೋಷಕರನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿ ಬಿಡುತ್ತವೆ. ಏಕೆಂದರೆ ತಮ್ಮ ಮಗುವಿನ ಮೇಲಿನ ಆಕರ್ಷಣೆ ಅವರಿಗೆ ಅಷ್ಟರ ಮಟ್ಟಿಗೆ ಪಜೀತಿಗೆ ಸಿಲುಕಿಸುತ್ತದೆ.

ಹಾಗಾದರೆ ಮಗುವಿನ ರಾತ್ರಿ ಬೆವರು ಎಂದರೇನು ?

ಮಗುವಿನ ರಾತ್ರಿಯ ಸುದೀರ್ಘ ನಿದ್ರಾ ಸಮಯದಲ್ಲಿ ಇದ್ದಕ್ಕಿದ್ದಂತೆ ವಿಪರೀತ ಮೈ ಬೆವರಿ ಇಡೀ ದೇಹವೆಲ್ಲ ಒದ್ದೆಯಾಗುವಂತೆ ಮಾಡಿಕೊಂಡು ಬಿಡುತ್ತದೆ.

ಮಗುವಿನ ರಾತ್ರಿ ಬೆವರು ಉಂಟಾಗಲು ಕಾರಣಗಳೇನು ?

ರಾತ್ರಿಯ ಸಮಯದಲ್ಲಿ ಬೆವರುವ ಪ್ರತಿ ಮಕ್ಕಳಲ್ಲಿ ಸಹ ಎದುರಾಗುವ ಸಾಮಾನ್ಯ ಕಾರಣಗಳು ಈ ರೀತಿ ಇವೆ.

ಹುಟ್ಟುತ್ತಲೇ ಹುಟ್ಟಿಕೊಂಡ ಹೃದಯದ ಕಾಯಿಲೆ : -

ಹುಟ್ಟುತ್ತಲೇ ಹುಟ್ಟಿಕೊಂಡ ಹೃದಯದ ಕಾಯಿಲೆ : -

ಮಗುವಿನ ಜನನದ ಸಮಯದಲ್ಲಿ ದೇಹದಲ್ಲಿ ಕೆಲವೊಂದು ಏರುಪೇರುಗಳು ಉಂಟಾಗಿ ಜೀವಮಾನವಿಡಿ ಮಗು ಕಷ್ಟ ಪಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಗಂಭೀರ ಸಮಸ್ಯೆಗಳಲ್ಲಿ ಹೃದಯದ ಕಾಯಿಲೆ ಕೂಡ ಒಂದು. ಯಾವ ಮಗು ಹುಟ್ಟುತ್ತಲೇ ಹೃದಯದ ಸಮಸ್ಯೆಯನ್ನು ಹೊತ್ತು ಬಂದಿರುತ್ತದೋ, ಅಂತಹ ಮಗು ಬೆವರುವುದು ಹೆಚ್ಚು.

ಅದರಲ್ಲೂ ರಾತ್ರಿಯ ಸಮಯದ ವಿಪರೀತ ಬೆವರು ಆ ಮಗುವಿಗೆ ಸರ್ವೇಸಾಮಾನ್ಯ. ಆಹಾರ ಸೇವಿಸುವಾಗ ಮತ್ತು ಆಟ ಆಡುವಾಗ ಕೂಡ ಈ ಸಮಸ್ಯೆ ತಪ್ಪಿದ್ದಲ್ಲ. ವೈದ್ಯಕೀಯ ಸಂಶೋಧನೆಯ ಪ್ರಕಾರ ಜನಿಸಿದ 125 ಮಕ್ಕಳಲ್ಲಿ ಒಬ್ಬರಿಗೆ ಈ ಸಮಸ್ಯೆ ಇದ್ದೇ ಇರುತ್ತದೆ.

ಯಾವ ಮಗುವೂ ತನಗೆ ಹೀಗೇ ಆಗಲಿ ಎಂದು ವರ ಪಡೆದಿರುವುದಿಲ್ಲ. ಆದರೆ ತಾಯಿಯ ಹೊಟ್ಟೆಯಲ್ಲಿ ಭ್ರೂಣದ ರೂಪದಲ್ಲಿ ಇದ್ದಾಗಿನಿಂದ ಹೃದಯದ ಅಭಿವೃದ್ಧಿಯಲ್ಲಿ ಉಂಟಾದ ತೊಂದರೆಯ ಕಾರಣದಿಂದ ಈ ರೀತಿಯ ಸಮಸ್ಯೆಯನ್ನು ಮಗು ಎದುರಿಸಬೇಕಾಗುತ್ತದೆ.

ಸ್ಲೀಪ್ ಅಪ್ನಿಯಾ : -

ಸ್ಲೀಪ್ ಅಪ್ನಿಯಾ : -

ಇದು ಕೆಲವೊಂದು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ ಹಾಗೆಂದು ಇದನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಸ್ಲೀಪ್ ಅಪ್ನಿಯ ಹೊಂದಿದ ಮಕ್ಕಳು ತಮ್ಮ ಉಸಿರಾಟವನ್ನೇ ಕನಿಷ್ಠ 20 ಸೆಕೆಂಡ್ ಗಳ ಕಾಲ ನಿಲ್ಲಿಸಿ ಬಿಡುತ್ತಾರೆ. ಇದು ಎಂತಹ ಪೋಷಕರಲ್ಲೂ ಸಹ ಭಯ ಉಂಟು ಮಾಡುವ ಸಂದರ್ಭ ಆಗಿರುತ್ತದೆ.

ಮಗು ಉಸಿರಾಟ ನಿಲ್ಲಿಸಿ ಮತ್ತೊಮ್ಮೆ ತನ್ನ ಉಸಿರಾಟವನ್ನು ಸಹಜ ಸ್ಥಿತಿಗೆ ತಂದುಕೊಳ್ಳಲು ಬಹಳ ಕಷ್ಟ ಪಡುತ್ತದೆ. ಈ ಸಮಸ್ಯೆ ಹೆಚ್ಚಾಗಿ ಅಕಾಲಿಕ ಕಂದಮ್ಮಗಳಲ್ಲಿ ಕಂಡು ಬರುತ್ತದೆ. ಒಂದು ವೇಳೆ ನಿಮ್ಮ ಮಗು ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿದ್ದರೆ, ಅದರ ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು, ಉಬ್ಬಸ ಸಮಸ್ಯೆ ಎದುರಿಸುವುದು ಜೊತೆಗೆ ರಾತ್ರಿಯ ಸಮಯದಲ್ಲಿ ಬೆವರುವುದು, ಇಂತಹ ಇನ್ನಿತರ ರೋಗ ಲಕ್ಷಣಗಳನ್ನು ಎದುರಿಸುತ್ತಿರುತ್ತದೆ .

ಸಡನ್ ಇನ್ಫ್ಯಾಂಟ್ ದೆತ್ ಸಿಂಡ್ರೋಮ್ : -

ಸಡನ್ ಇನ್ಫ್ಯಾಂಟ್ ದೆತ್ ಸಿಂಡ್ರೋಮ್ : -

ಇನ್ನೊಂದು ಹೆಸರಿನಲ್ಲಿ ಈ ಸಮಸ್ಯೆಯನ್ನು ಸಿಡ್ಸ್ ಎಂತಲೂ ಕರೆಯುತ್ತಾರೆ. ಈ ಸಮಸ್ಯೆಯ ಪ್ರಕಾರ ರಾತ್ರಿಯ ಸಮಯದಲ್ಲಿ ಮಗುವಿನ ದೇಹ ಇದ್ದಕ್ಕಿದ್ದಂತೆ ಅತಿ ಹೆಚ್ಚಾಗಿ ಬಿಸಿಯಾಗಿ ಮಗುವನ್ನು ವಿಪರೀತ ನಿದ್ದೆ ಮಾಡುವಂತೆ ಮಾಡುತ್ತದೆ. ಎಷ್ಟರ ಮಟ್ಟಿಗೆ ಮಗು ನಿದ್ದೆ ಮಾಡುತ್ತದೆ ಎಂದರೆ ನೀವು ಎಳಿಸಿದರೂ ಎಚ್ಚರವಾಗುವುದಿಲ್ಲ.

ಹೈಪರ್ಹಿಡ್ರೋಸಿಸ್ : -

ಹೈಪರ್ಹಿಡ್ರೋಸಿಸ್ : -

ನಿಮ್ಮ ಮಗು ಸಾಮಾನ್ಯ ಕೊಠಡಿಯ ತಾಪಮಾನದಲ್ಲಿ ಆರಾಮವಾಗಿ ನಿದ್ರಿಸುತ್ತಿದ್ದರೂ ಸಹ ಮೈ ಬೆವರುತ್ತಿದ್ದರೆ, ಅದು ಹೈಪರ್ಹಿಡ್ರೋಸಿಸ್ ನಿಮ್ಮ ಸಮಸ್ಯೆಯಿಂದ ಬಳಲುತ್ತಿರಬಹುದು. ಮಗುವಿನ ಹಣೆಯ ಭಾಗ, ಕೈಗಳು ಮತ್ತು ಕಾಲುಗಳ ಪಾದಗಳಲ್ಲಿ ಬೆವರಿನ ಲಕ್ಷಣಗಳು ಕಂಡು ಬರುತ್ತವೆ. ಆದರೆ ಇದೇನು ಅಂತಹ ಗಂಭೀರ ಆರೋಗ್ಯ ಸಮಸ್ಯೆ ಅಲ್ಲ. ಬೆವರು ನಿರ್ವಹಣೆಯ ಕೆಲವೊಂದು ಸಾಮಾನ್ಯ ಟಿಪ್ಸ್ ಗಳನ್ನು ಅನುಸರಿಸಿದರೆ ನಿಮ್ಮ ಮಗುವನ್ನು ಈ ಸಮಸ್ಯೆಯಿಂದ ಪಾರು ಮಾಡಬಹುದು.

ಮಗುವನ್ನು ರಾತ್ರಿ ಬೆವರುವಿಕೆಯಿಂದ ಕಾಪಾಡುವ ಕೆಲವೊಂದು ಟಿಪ್ಸ್ : -

ಮಗುವನ್ನು ರಾತ್ರಿ ಬೆವರುವಿಕೆಯಿಂದ ಕಾಪಾಡುವ ಕೆಲವೊಂದು ಟಿಪ್ಸ್ : -

ರಾತ್ರಿಯ ಸಮಯದಲ್ಲಿ ನಿಮ್ಮ ಮಗು ಬೆವರುತ್ತಿದ್ದರೆ, ಈ ಟಿಪ್ಸ್ ಗಳನ್ನು ಅನುಸರಿಸಿ ನಿಮ್ಮ ಮಗುವನ್ನು ಬೆವರಿನಿಂದ ರಕ್ಷಿಸಬಹುದು.1. ಸದಾ ನಿಮ್ಮ ಕೊಠಡಿಯ ತಾಪಮಾನವನ್ನು ಆಗಾಗ ಪರೀಕ್ಷಿಸುತ್ತಿರಿ : -

ನಿದ್ರೆಯ ಸಮಯದಲ್ಲಿ ನಿಮ್ಮ ಮಗು ಬೆವರುವುದನ್ನು ತಪ್ಪಿಸಲು ಮಗು ಮಲಗುವ ಕೊಠಡಿಯ ತಾಪಮಾನವನ್ನು ಆದಷ್ಟು ತಂಪಾಗಿ ಇರುವಂತೆ ನೋಡಿಕೊಳ್ಳಬೇಕು. ನಿಮ್ಮ ಕೊಠಡಿಯ ತಾಪಮಾನ ಬಿಸಿಯಾಗಿದೆಯೋ ಅಥವಾ ತಂಪಾಗಿದೆಯೋ ಎಂದು ಕಂಡು ಹಿಡಿಯುವುದು ಬಹಳ ಸುಲಭ. ಕೊಠಡಿಗೆ ಹೋದ ತಕ್ಷಣ ಸುತ್ತಲಿನ ಬಿಸಿ ನಿಮಗೆ ಆವರಿಸಿ, ನಿಮಗೆ ಸ್ವಲ್ಪ ಬಿಸಿ ಎನಿಸಿದರೆ ಅದು ನಿಮ್ಮ ಮಗುವಿಗೆ ಬಹಳಷ್ಟು ಬಿಸಿಯ ವಾತಾವರಣವನ್ನು ಉಂಟು ಮಾಡುತ್ತಿದೆ ಎಂದರ್ಥ. ಅದೇ ಕೊಠಡಿಯಲ್ಲಿ ತಣ್ಣಗಿನ ಅನುಭವ ನಿಮಗಾದರೆ, ಅದು ಮಗು ಸುಖವಾಗಿ ನಿದ್ರಿಸಲು ಸೂಕ್ತವಾದ ವಾತಾವರಣ ಆಗಿರುತ್ತದೆ. ಇದರ ಜೊತೆಯಲ್ಲಿ ಮಗುವಿನ ಮೇಲೆ ಹೊದಿಸಿರುವ ಬ್ಲಾಂಕೆಟ್ ಗಳು ಮತ್ತು ಹೊದಿಕೆಗಳನ್ನು ತೆಗೆದುಬಿಡಿ. ಆಗ ಮಗುವಿನ ಮೈ ಬೆವರು ಕ್ರಮೇಣವಾಗಿ ಕಡಿಮೆಯಾಗುತ್ತದೆ.

2. ಮಗುವಿನ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿರಲಿ : -

ವೈದ್ಯರು ಸಹಜವಾಗಿ ನಮಗೆ ಸೂಚಿಸಿರುವಂತೆ ಯಾರು ಹೆಚ್ಚಿಗೆ ನೀರು ಕುಡಿಯುವರು ಅವರಿಂದ ಕಾಯಿಲೆಗಳು ಬಹಳ ದೂರ ಉಳಿಯುತ್ತವೆ ಎಂಬ ಮಾತು ನಿಮ್ಮ ಮನೆಯ ಪುಟ್ಟ ಮಗುವಿಗೂ ಅನ್ವಯವಾಗುತ್ತದೆ. ಮಗುವಿನ ದೇಹದಲ್ಲಿ ನೀರಿನಂಶ ಕಡಿಮೆಯಾದರೆ, ಮಗು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ರಾತ್ರಿ ಹೊತ್ತು ಮಗು ಮಲಗಿರಬೇಕಾದರೆ ಬೆವರಲು ಪ್ರಾರಂಭ ಮಾಡಿದರೆ ದೇಹದಿಂದ ಹೆಚ್ಚಿನ ನೀರಿನ ಅಂಶ ಹೊರಬರುತ್ತದೆ. ಆದ್ದರಿಂದ ರಾತ್ರಿಯ ಸಮಯದಲ್ಲಿ ಮಗು ಮಲಗುವ ಮುಂಚೆ ಮಗುವಿನ ದೇಹದ ನೀರಿನ ಅಂಶದ ಸಮತೋಲನವನ್ನು ಕಾಪಾಡಿ.

ಈ ಅಂಶಗಳು ನೆನಪಿರಲಿ : -

ಈ ಅಂಶಗಳು ನೆನಪಿರಲಿ : -

ಮೇಲಿನ ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರವೂ ನಿಮ್ಮ ಮಗು ಬೆವರುತ್ತಿದ್ದರೆ, ನಿರ್ಲಕ್ಷ ಮಾಡಿದೆ ಮೊದಲು ಮಕ್ಕಳ ತಜ್ಞರನ್ನು ಬೇಟಿ ಮಾಡಿ. ಅವರ ಅನುಭವದ ಪ್ರಕಾರ ಮಗುವಿನ ಬೆವರಿಗೆ ಕಾರಣ ಏನಿರಬಹುದು ಎಂಬುದನ್ನು ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆಗೆ ಸಲಹೆ ನೀಡುತ್ತಾರೆ.

ನಿಮ್ಮ ಮಗು ರಾತ್ರಿಯ ಸಮಯದಲ್ಲಿ ಬೆವರುವ ಜೊತೆಗೆ ಅತ್ತಿಂದಿತ್ತ ತಲೆ ಆಡಿಸುವುದು, ಹಲ್ಲು ಕಡಿಯುವುದು, ಗೊರಕೆ ಹೊಡೆಯುವುದು ಕಂಡುಬಂದರೆ, ಇನ್ನಿತರ ಸಮಸ್ಯೆಗಳಲ್ಲಿ ಸಿಲುಕಿರಬಹುದು. ಆದ್ದರಿಂದ ಮಕ್ಕಳ ವೈದ್ಯರನ್ನು ಭೇಟಿಯಾಗಿ ಮಗುವಿನ ಎಲ್ಲಾ ಸಮಸ್ಯೆಗಳನ್ನು ತಿಳಿಸಿ ಹೇಳಿ ಅವರಿಂದ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

English summary

Baby Sweating while Sleeping You Must Know This Things

If your baby sweating while sleeping, you must know the reason behind baby sweating.
Story first published: Friday, February 21, 2020, 12:24 [IST]
X