For Quick Alerts
ALLOW NOTIFICATIONS  
For Daily Alerts

ಒಂದು ತಿಂಗಳ ಮಗುವಿನ ಆರೈಕೆಗೆ ಕೆಲವು ಸಲಹೆಗಳು

|

ನವಜಾತ ಶಿಶುಗಳು ತುಂಬಾ ಕೋಮಲ ದೇಹ ಹೊಂದಿರುವುದು. ನವಜಾತ ಶಿಶುಗಳ ಸೂಕ್ಷ್ಮ ದೇಹದ ಬಗ್ಗೆ ತಾಯಿಯಾದವಳು ತುಂಬಾ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮೊದಲ ಸಲ ತಾಯಿಯದವರಿಗೆ ಅನುಭವದ ಕೊರತೆಯು ಇರುವುದು. ಇದರಿಂದಾಗಿ ಬಾಣಂತಿಯರಿಗೆ ಆಕೆಯ ತಾಯಂದಿರು ತುಂಬಾ ನೆರವಾಗುವರು. ನವಜಾತ ಶಿಶುವಿನ ಆರೈಕೆ ಮಾಡುವ ವೇಳೆ ತಾಯಂದಿರು ಕೆಲವೊಂದು ವಿಚಾರಗಳನ್ನು ತುಂಬಾ ಸೂಕ್ಷ್ಮವಾಗಿ ಗಮನದಲ್ಲಿಡಬೇಕು. ಆದರೆ ಹೆಚ್ಚಿನ ತಾಯಂದಿರು ಗೊಂದಲದಿಂದ ಇರುವರು. ಯಾಕೆಂದರೆ ಅವರು ತಮ್ಮ ಮಗುವಿನ ಆರೈಕೆಯಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಬಯಸುವುದಿಲ್ಲ.

ಅದರಲ್ಲೂ ಮೊದಲ ಸಲ ತಾಯಿಯಾದವರಿಗೆ ಹಲವಾರು ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಇರುವುದು. ಮಗುವು ಈ ಭೂಮಿ ಮೇಲೆ ಬಂದ ವೇಳೆ ಅದರ ಆರೈಕೆಗೆ ನೀವು ಪಣತೊಡಬೇಕು. ಮೊದಲ ಸಲ ತಾಯಿಯಾದವರಿಗೆ ಮಗುವಿನ ಆರೈಕೆಗೆ ಮೊದಲ ತಿಂಗಳಲ್ಲಿ ತುಂಬಾ ಕಷ್ಟವಾಗಬಹುದು ಮತ್ತು ಆ ಬಳಿಕ ಅವರು ಹೊಂದಿಕೊಂಡು ಹೋಗುವರು. ನೀವು ಮಗುವಿಗೆ ಜನ್ಮ ನೀಡಿದ್ದರೆ ಅಥವಾ ಮೊದಲ ಸಲ ತಾಯಿಯಾಗಿದ್ದರೆ ಆಗ ನೀವು ನವಜಾತ ಶಿಶುವಿನ ಆರೈಕೆ ಬಗ್ಗೆ ಕೆಲವು ವಿಚಾರಗಳನ್ನು ಪಾಲಿಸಿಕೊಂಡು ಹೋಗಬೇಕು. ಅದು ಯಾವುದು ಎಂದು ನೀವು ತಿಳಿಯಿರಿ.

ಮಗುವಿಗೆ ಪದೇ ಪದೇ ಹಾಲುಣಿಸಿ

ಮಗುವಿಗೆ ಪದೇ ಪದೇ ಹಾಲುಣಿಸಿ

ನವಜಾತ ಶಿಶುವಿಗೆ ಕೇವಲ ಎದೆಹಾಲು ಮಾತ್ರ ಆಹಾರವಾಗಿರುವುದು. ಎದೆ ಹಾಲುಣಿಸುವ ಮೂಲಕ ನೀವು ಮಗುವಿನೊಂದಿಗೆ ಭಾಂದವ್ಯ ಬೆಸೆದುಕೊಳ್ಳಬಹುದು. ಮಗುವಿಗೆ ಹಾಲುಣಿಸಿದ ಸಮಯವನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕು. ದಿನದಲ್ಲಿ ಸರಿಸುಮಾರು ಆರು ಸಲ ಮಗುವಿಗೆ ಹಾಲುಣಿಸಬೇಕು. ಮಗುವಿನ ಅಗತ್ಯಕ್ಕೆ ತಕ್ಕಂತೆ ನೀವು ಮಗುವಿಗೆ ಎದೆ ಹಾಲುಣಿಸುವುದನ್ನು ಹೆಚ್ಚಿಸಿಕೊಳ್ಳಬೇಕು. ಮಗುವಿಗೆ ಹಾಲುಣಿಸುವ ಸಮಯ ಅಥವಾ ವೇಳಾಪಟ್ಟಿಯನ್ನು ನಿಯಂತ್ರಣ ಮಾಡಿಕೊಳ್ಳಲು ನೀವು ಪ್ರಯತ್ನ ಮಾಡಬೇಡಿ. ಮಗುವಿನ ಅಗತ್ಯಕ್ಕೆ ಬೇಕಾದಂತೆ ನೀವು ಎದೆ ಹಾಲುಣಿಸಬೇಕು. ವೈದ್ಯರು ತಿಳಿಸಿರುವಂತೆ ನೀವು ಸರಿಯಾದ ಕ್ರಮವನ್ನು ಅನುಸರಿಸಿ ಮಗುವಿಗೆ ಹಾಲುಣಿಸಬೇಕು.

ಸುರಕ್ಷಾ ಕ್ರಮಗಳನ್ನು ಮರೆಯಬೇಡಿ

ಸುರಕ್ಷಾ ಕ್ರಮಗಳನ್ನು ಮರೆಯಬೇಡಿ

ನವಜಾತ ಶಿಶುವಿನ ರಕ್ಷಣೆಯು ನಿಮ್ಮ ಮೊದಲ ಆದ್ಯತೆ ಆಗಿರಬೇಕು. ಒಂದು ತಿಂಗಳ ಮಗುವಿಗೆ ಸರಿ, ತಪ್ಪುಗಳ ಬಗ್ಗೆ ತಿಳಿದಿರುವುದಿಲ್ಲ. ಮಗುವಿನ ಬಗ್ಗೆ ತೀರ ಎಚ್ಚರಿಕೆ ವಹಿಸಬೇಕು ಮತ್ತು ಅದರ ಸುತ್ತಲು ಯಾವುದೇ ವಸ್ತುಗಳನ್ನು ಇಡಬಾರದು. ತುಂಬಾ ಹರಿತವಾದ ಅಥವಾ ಭಾರವಾಗಿರುವ ವಸ್ತುಗಳನ್ನು ಮಗುವಿನ ಬಳಿ ಇಡಬಾರದು. ಮಗು ಮಲಗಿರುವ ವೇಳೆ ಮಗುವಿನ ಬಳಿಯಲ್ಲಿ ಯಾವುದೇ ರೀತಿಯ ಆಟಿಕೆಗಳನ್ನು ಇಡಬೇಡಿ. ಮಗು ಮಲಗಿರುವಾಗ ಅಥವಾ ಹಾಸಿಗೆ ಮೇಲೆ ಇರುವಾಗ ನೀವು ಅದರ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅದರ ಸುತ್ತಲು ತಲೆದಿಂಬನ್ನು ಇಟ್ಟುಕೊಳ್ಳಬೇಕು. ಯಾಕೆಂದರೆ ಮಗು ಮಂಚದಿಂದ ಕೆಳಗಿ ಬೀಳುವಂತಹ ಸಂಭವ ಇರುವುದು. ಹೆರಿಗೆಗೆ ಮೊದಲು ಮನೆಯನ್ನು ನೀವು ಮಗು ಸ್ನೇಹಿಯಾಗಿ ಮಾರ್ಪಾಡು ಮಾಡಿಕೊಳ್ಳಬೇಕು.

ಮಗುವಿನೊಂದಿಗೆ ಮಾತನಾಡಿ

ಮಗುವಿನೊಂದಿಗೆ ಮಾತನಾಡಿ

ಎದೆ ಹಾಲುಣಿಸುವುದರಿಂದ ಮಗುವಿನೊಂದಿಗಿನ ಭಾಂದವ್ಯವು ಹೆಚ್ಚಾಗುವುದು. ಅದೇ ರೀತಿ ಮಗುವಿನೊಂದಿಗೆ ಭಾಂದವ್ಯ ಹೆಚ್ಚಾಗಲು ನೀವು ಅದರೊಂದಿಗೆ ಮಾತನಾಡುತ್ತಲಿರಬೇಕು. ಮಗು ನಿದ್ರೆಯಿಂದ ಎದ್ದ ಬಳಿಕ ಅದರೊಂದಿಗೆ ಮಾತನಾಡಿ ಮತ್ತು ಸ್ವಲ್ಪ ಹೀಗೆ ಆಟವಾಡಿ. ಇದರಿಂದ ಮಗುವನ್ನು ಸರಿಯಾಗಿ ತಿಳಿದುಕೊಳ್ಳಲು ನಿಮಗೆ ನೆರವಾಗುವುದು ಮತ್ತು ನಿಮ್ಮ ಅಗತ್ಯತೆಯನ್ನು ಕೂಡ ಬೇಗನೆ ತಿಳಿಯಬಹುದು. ನೀವು ಮಗುವಿನೊಂದಿಗೆ ಮಾತನಾಡಲು ಬಣ್ಣಬಣ್ಣದ ಮತ್ತು ಸ್ವಲ್ಪ ಶಬ್ಧ ಮಾಡುವಂತಹ ಆಟಿಕೆಗಳನ್ನು ಬಳಸಿಕೊಳ್ಳಬಹುದು.

ಮಗುವಿನ ನಿದ್ರೆಯ ಸಮಯ ತಿಳಿಯಿರಿ

ಮಗುವಿನ ನಿದ್ರೆಯ ಸಮಯ ತಿಳಿಯಿರಿ

ಮೊದಲ ತಿಂಗಳಲ್ಲಿ ಮಗುವಿನ ನಿದ್ರೆಯ ಅವಧಿಯನ್ನು ನೀವು ತುಂಬಾ ಎಚ್ಚರಿಕೆಯಿಂದ ಗಮನಿಸಬೇಕು. ಮಗುವಿಗೆ ಅನುಕೂಲವಾಗುವಂತೆ ನೀವು ಒಂದು ತಿಂಗಳ ಕಾಲ ಅದಕ್ಕೆ ನಿದ್ರೆ ಮಾಡಲು ಬಿಡಬೇಕು. ಮಗು ಯಾವ ಹೊತ್ತಿನಲ್ಲಿ ನಿದ್ರೆ ಮಾಡುತ್ತಿದೆ ಎಂದು ತಿಳಿದು ಬಳಿಕ ಅದಕ್ಕೆ ಎದೆ ಹಾಲುಣಿಸಬೇಕು. ಮಗು ಮಲಗಿರುವ ವೇಳೆ ನೀವು ಅದನ್ನು ಗಮನಿಸುತ್ತಾ ಇರಬೇಕು.

ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಿ

ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಿ

ನವಜಾತ ಶಿಶುವಿನ ದೇಹವು ತುಂಬಾ ಕೋಮಲವಾಗಿರುವುದು ಎಂದು ನಾವು ಹೀಗಾಗಲೇ ಹೇಳಿದ್ದೇವೆ. ಇದರಿಂದ ನವಜಾತ ಶಿಶುವಿನ ಬಗ್ಗೆ ಹೆಚ್ಚಿನ ಕಾಳಜಿ ಸಹಿಸಬೇಕು. ಅದರಲ್ಲೂ ಮಗುವಿನ ಸ್ವಚ್ಛತೆ ವಿಚಾರದಲ್ಲಿ ಗಮನ ಹರಿಸುವುದು ಅತೀ ಅಗತ್ಯ. ಯಾಕೆಂದರೆ ಮಗುವಿನ ದೇಹವು ಸೂಕ್ಷ್ಮವಾಗಿರುವ ಕಾರಣ ಸೋಂಕು ಹಾಗೂ ಬ್ಯಾಕ್ಟೀರಿಯಾ ದಾಳಿಯು ಬೇಗನೆ ಆಗುವುದು. ಈ ಕಾರಣದಿಂದಾಗಿ ಮಗು ಮಲಗುವ ಜಾಗ, ಮಗುವಿನ ಬಟ್ಟೆಬರೆ ಇತ್ಯಾದಿಗಳನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವುದೇ ರೀತಿಯ ಇಂಜೆಕ್ಷನ್ ಅಥವಾ ಮದ್ದು ಕೊಡುವುದನ್ನು ನೀವು ತಪ್ಪಿಸಬಾರದು. ನವಜಾತ ಶಿಶುವಿನ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವುದು. ಈ ಹಿನ್ನೆಲೆಯಲ್ಲಿ ಮಗುವನ್ನು ಮುಟ್ಟುವ ಮೊದಲು ಕೈಗಳನ್ನು ತೊಳೆಯಿರಿ. ಹೊರಗಡೆ ಹೋಗಿ ಬಂದು ನೇರವಾಗಿ ಮಗುವನ್ನು ಮುಟ್ಟಬೇಡಿ. ಸರಿಯಾಗಿ ಕೈಕಾಲು ಮುಖ ತೊಳೆದುಕೊಂಡ ಬಳಿಕ ಮಗುವನ್ನು ಮುಟ್ಟಿ. ಇತರರಿಗೂ ನೀವು ಇದೇ ಸೂಚನೆ ನೀಡಿ.

English summary

How to Care for Your One Month Old Baby

Newborns are very delicate. Every mother is very careful about her newborn and always tries the best for her baby. There are certain things that every mother should keep in mind to take care of her newborn. But every mother is confused about certain things because they don't want to compromise anything for their babies. First-time mothers are especially full of questions. When your baby enters the world, you promise to take care of it. It becomes very difficult to handle the baby in its first month and later you get used to it.
Story first published: Wednesday, February 27, 2019, 13:11 [IST]
X
Desktop Bottom Promotion