ಮಕ್ಕಳಲ್ಲಿ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ

By: Hemanth
Subscribe to Boldsky

ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿಯ ಕರ್ತವ್ಯ ಮತ್ತಷ್ಟು ಹೆಚ್ಚಾಗುವುದು. ಮುಂದೆ ಮಗು ದೊಡ್ಡದಾಗುವ ತನಕ ಅದನ್ನು ಸಾಕಿ ಸಲಹ ಬೇಕು. ಇದು ತಾಯಿಯಾದವಳಿಗೆ ತುಂಬಾ ಕಠಿಣ ಸವಾಲು ಎನ್ನಬಹುದು. ಯಾಕೆಂದರೆ ಸಣ್ಣ ಮಗುವನ್ನು ದೊಡ್ಡದು ಮಾಡಲು ತುಂಬಾ ಶ್ರಮ ವಹಿಸಬೇಕು. ಮಗುವಿಗೆ ಮಾತು ಬರದೇ ಇರುವಂತಹ ಸಮಯದಲ್ಲಿ ಅದರ ಅಳುವನ್ನೇ ಅರ್ಥ ಮಾಡಿಕೊಂಡು ತಾಯಿಯಾದವಳು ಪೋಷಣೆ ಮಾಡಬೇಕು.

ಅದರಲ್ಲೂ ಮೊದಲ ಕೆಲವು ವರ್ಷಗಳಲ್ಲಿ ಮಗುವಿನ ದೇಹವು ತುಂಬಾ ಸೂಕ್ಷ್ಮವಾಗಿರುವ ಕಾರಣದಿಂದ ಹಲವಾರು ರೀತಿಯ ಸೋಂಕು ಹಾಗೂ ಕಾಯಿಲೆಗಳು ಕಾಣಿಸಿಕೊಳ್ಳುವುದು. ಇದರಿಂದಾಗಿ ಇಂತಹ ಪರಿಸ್ಥಿತಿಯಲ್ಲಿ ಮಗುವಿನ ಆರೈಕೆಯನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕು. ಮಗುವಿಗೆ ಯಾವ ರೀತಿಯ ಸಮಸ್ಯೆಯಾಗಿದೆ ಎಂದು ತಿಳಿಯಲು ನೀವು ಕೆಲವೊಂದು ಲಕ್ಷಣಗಳನ್ನು ಮೊದಲು ತಿಳಿದುಕೊಳ್ಳಬೇಕು. 

ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು

ನಾವು ಹೊರಗಡೆ ಹೋದಂತೆ ಹಲವಾರು ರೀತಿಯ ಚರ್ಮದ ಸಮಸ್ಯೆಗಳು ನಮ್ಮನ್ನು ಕಾಡುವುದು. ಅದೇ ರೀತಿ ಮಗುವಿಗೂ ಈ ಸಮಸ್ಯೆ ಬರುತ್ತದೆ. ಇದನ್ನು ಬೇಗನೆ ಗುರುತಿಸಿಕೊಂಡು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಮಗುವಿಗೆ ಬರುವಂತಹ ಕೆಲವೊಂದು ಚರ್ಮದ ಸಮಸ್ಯೆ ಬಗ್ಗೆ ತಿಳಿದುಕೊಂಡು ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ಮುಂದೆ ಓದುತ್ತಾ ತಿಳಿಯಿರಿ.... 

ಮೊಡವೆಗಳು

ಮೊಡವೆಗಳು

ಮಗುವಿನಲ್ಲೂ ಮೊಡವೆಗಳು ಮೂಡುವುದು. ತಾಯಿಯ ಹಾರ್ಮೋನಿನಲ್ಲಿ ಆಗುವಂತಹ ಬದಲಾವಣೆ ಮತ್ತು ಹುಟ್ಟುವಾಗ ವಾತಾವರಣದಲ್ಲಿ ಆಗುವ ಬದಲಾವಣೆಗಳು ಮೊಡವೆಗಳಿಗೆ ಕಾರಣವಾಗಬಹುದು. ಕೆಲವು ಮಕ್ಕಳಲ್ಲಿ ಹುಟ್ಟುವಾಗಲೇ ಮೊಡವೆಗಳು ಇರುತ್ತದೆ. ಇನ್ನು ಕೆಲವು ಮಕ್ಕಳು ಜನಿಸಿದ ಒಂದು ವಾರದಲ್ಲಿ ಮೊಡವೆ ಮೂಡುವುದು. ಕೆನ್ನೆಯಲ್ಲಿ ಸಾಮಾನ್ಯವಾಗಿ ಮೊಡವೆಗಳು ಮೂಡುವುದು. ಅದೇ ರೀತಿ ಹಣೆ, ಬೆನ್ನು ಮತ್ತು ಗಲ್ಲದಲ್ಲೂ ಮೊಡವೆ ಮೂಡಬಹುದು. ಮಗುವಿನ ಚರ್ಮಕ್ಕೆ ಹಾಲು, ಜೊಲ್ಲು ತಾಗಿದಾಗ ಅಥವಾ ಗಡಸು ಬಟ್ಟೆಯಿಂದ ಮೊಡವೆ ಮೂಡಬಹುದು. ಕೆಲವೊಂದು ಸಾಬೂನುಗಳಿಂದಲೂ ಮೊಡವೆ ಮೂಡಬಹುದು. ಮೊಡವೆಗಳು ತನ್ನಷ್ಟಕ್ಕೆ ಮಾಯವಾಗುವುದು. ಆದರೆ ಇದಕ್ಕೆ ಹೆಚ್ಚು ಸಮಯ ಬೇಕಾಗುವುದು.

ಸಿಡುಬು

ಸಿಡುಬು

ಮಗು ಹಾಗೂ ಸಣ್ಣ ಮಕ್ಕಳಲ್ಲಿ ಸಿಡುಬು ಕಾಣಿಸಿಕೊಳ್ಳುವುದು. ತಲೆನೋವು, ಜ್ವರ, ಹಸಿವಿಲ್ಲದೆ ಇರುವುದು, ವಾಕರಿಕೆ ಮತ್ತು ಸ್ನಾಯುಗಳ ನೋವು ಇದರ ಲಕ್ಷಣವಾಗಿದೆ. ಇದರಿಂದ ಚರ್ಮದಲ್ಲಿ ಬೊಕ್ಕೆಗಳು ಮೂಡಬಹುದು. ಈ ಬೊಕ್ಕೆಗಳಲ್ಲಿ ನೀರು ತುಂಬಿರುವುದು ಮತ್ತು ಕೆಂಪಾಗಿ ಕಾಣಿಸಿಕೊಳ್ಳಬಹುದು. ಇದು ನೋವುಂಟು ಮಾಡದಿದ್ದರೂ ಒಣಗುವ ಸಮಯದಲ್ಲಿ ತುಂಬಾ ತುರಿಕೆ ಉಂಟು ಮಾಡಬಹುದು. ಇದು ವೈರಲ್ ನಿಂದ ಬರುವುದರಿಂದ ಕೆಲವೇ ದಿನಗಳಲ್ಲಿ ಇದು ಶಮನವಾಗುವುದು. ಸಿಡುಬು ಮೂಡುವ ವೇಳೆ ಬರುವ ಜ್ವರ ಕಡಿಮೆ ಮಾಡಲು ವೈದ್ಯರ ಬಳಿಗೆ ಹೋಗಿ ಅವರು ಹೇಳಿದ ಚಿಕಿತ್ಸೆ ಮಾಡಬೇಕು. ಕ್ಯಾಲಮೈನ್ ಲೋಷನ್ ನಿಂದ ತುರಿಕೆ ಕಡಿಮೆ ಮಾಡಿಕೊಳ್ಳಬಹುದು. ಮಗುವಿಗೆ ಹೆಚ್ಚು ನೀರು ಮತ್ತು ಸರಿಯಾದ ಆಹಾರ ನೀಡಿ.

ಬೇತಾಳದಂತೆ ಕಾಡುವ ಸಿಡುಬು ರೋಗಕ್ಕೆ ಬೇವಿನ ಚಿಕಿತ್ಸೆ

ಇಸಬು

ಇಸಬು

ಚರ್ಮದಲ್ಲಿ ಒಣಗಿದ ಹಾಗೂ ಕೆಂಪಾಗಿರುವ ಕಲೆಗಳು ಮೂಡುವುದನ್ನು ಇಸಬು ಎಂದು ಕರೆಯಲಾಗುವುದು. ಇದು ಒಡೆದುಹೋಗಿ ತುರಿಕೆ ಉಂಟು ಮಾಡಬಹುದು. ಇದರಿಂದ ರಕ್ತ ಅಥವಾ ನೀರು ಬರಬಹುದು. ಚರ್ಮದಲ್ಲಿ ವೃತ್ತಾಕಾರದಲ್ಲಿ ಕಾಣಿಸಿಕೊಳ್ಳುವ ಇಸುಬು ಕೆಲವೊಮ್ಮೆ ಹೆಚ್ಚಾಗಬಹುದು. ಕೈ, ಮೊಣಕೈ, ಕುತ್ತಿಗೆ, ಮುಖ ಮತ್ತು ಮೊಣಕಾಲಿನ ಕೆಳಗಡೆ ಇಸಬು ಕಾಣಿಸಬಹುದು. ಆರಂಭದಲ್ಲೇ ಈ ಸಮಸ್ಯೆಗೆ ಚಿಕಿತ್ಸೆ ನೀಡಿ. ಸಣ್ಣ ವಯಸ್ಸಿನ ಮಕ್ಕಳಲ್ಲಿ ಇಂತಹ ಸಮಸ್ಯೆಯು ಕಾಣಿಸಿಕೊಳ್ಳುವುದು.

ಚಡ್ಡಿದದ್ದು(ಚರ್ಮದ ಉರಿಯೂತ)

ಚಡ್ಡಿದದ್ದು(ಚರ್ಮದ ಉರಿಯೂತ)

ಮಗುವಿನ ಜನನಾಂಗದ ಮೇಲ್ಭಾಗ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಚರ್ಮವು ಕೆಂಪಾಗುವುದು. ಇದು ಮೊಡವೆಯಂತೆ,ಒಣ ಹಾಗೂ ನೀರಿನಾಂಶದಂತೆ ಕಾಣಿಸಿಕೊಳ್ಳಬಹುದು. ಮಗುವಿನ ಮೊದಲ ವರ್ಷದಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು. ಚರ್ಮ ಸೂಕ್ಷ್ಮವಾಗಿರುವಂತಹ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಕೆಲವೊಂದು ಸಾಬೂನುಗಳು ಮತ್ತು ಬಟ್ಟೆಯಿಂದಲೂ ಹೀಗೆ ಆಗಬಹುದು. ಮಗುವಿನ ಡೈಪರ್ ಅನ್ನು ಆಗಾಗ ಬದಲಾಯಿಸುತ್ತಾ ಇದ್ದರೆ ಇದನ್ನು ತಡೆಯಬಹುದು. ಮಗುವಿನ ದೇಹವನ್ನು ಸ್ವಚ್ಛ ಹಾಗೂ ಒಣಗಿರುವಂತೆ ನೋಡಿಕೊಳ್ಳಿ.

English summary

Skin Conditions That Occur In Babies And Toddlers

Taking into account the exposure our skin has to the outside world, it is not difficult to see/understand why there are so many skin conditions. Babies too are susceptible to various kinds of skin diseases and conditions. If recognized and treated early, our babies can escape lifelong implications. So, let's take a look at some of the most common skin diseases that babies may encounter.
Subscribe Newsletter