ಮಗುವಿಗೆ ಒಂದು ವರ್ಷ ತುಂಬುವ ಮುನ್ನ ಹಣ್ಣಿನ ಜ್ಯೂಸ್ ನೀಡಬೇಡಿ!

By: Arshad
Subscribe to Boldsky

ನವಜಾತ ಶಿಶುವಿಗೆ ತಾಯಿಹಾಲೇ ಅಮೃತಸಮಾನ. ಆದರೆ ದಿನಗಳೆದಂತೆ ನಿಧಾನವಾಗಿ ತಾಯಿಹಾಲಿನೊಂದಿಗೆ ಇತರ ಸರಳ ಆಹಾರಗಳನ್ನೂ ನೀಡುತ್ತಾ ಹೋಗಬೇಕು. ಆದರೆ ಒಂದು ವರ್ಷವಾಗುವವರೆಗೂ ಯಾವುದೇ ಹಣ್ಣಿನ ರಸಗಳನ್ನು ನೀಡಬಾರದು. ಏಕೆಂದರೆ ಇದರಲ್ಲಿ ಇರದೇ ಇರುವ ಕರಗದ ನಾರು ಹಾಗೂ ಅತಿ ಹೆಚ್ಚಿನ ಪೋಷಕಾಂಶಗಳು ಮಗುವಿನ ತೂಕವನ್ನು ಹೆಚ್ಚಿಸಲು ಕಾರಣವಾಗಬಹುದು ಹಾಗೂ ಹಣ್ಣಿನ ರಸದಲ್ಲಿರುವ ಆಮ್ಲೀಯತೆಯನ್ನು ಮಗುವಿನ ಕೋಮಲ

ಜೀರ್ಣಾಂಗಗಳಿಗೆ ಭಾರಿಯಾಗಬಹುದು ಎಂದು ಮಕ್ಕಳ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಮಗುವಿಗೆ ಒಂದು ವರ್ಷವಾಗುವವರೆಗೂ ಹಣ್ಣಿನ ರಸದ ಸೇವನೆಯಿಂದ ಇದರ ಪೋಷಕಾಂಶಗಳನ್ನು ಪಡೆಯುವಷ್ಟು ಮಗುವಿನ ದೇಹ ಇನ್ನೂ ಬೆಳೆಯದೇ ಇರುವ ಕಾರಣ ಇವನ್ನು ನೀಡಬಾರದು ಎಂದು American Academy of Pediatrics ಎಂಬ ಮಕ್ಕಳ ಆರೋಗ್ಯ ಸಂಬಂಧಿತ ಸಂಸ್ಥೆಯೊಂದು ಸುತ್ತೋಲೆಯನ್ನು ಹೊರಡಿಸಿದೆ. 

Feed Fruit Juice for baby

"ಹಣ್ಣಿನ ರಸ ತುಂಬಾ ಒಳ್ಳೆಯದು ಹೌದು, ಆದರೆ ಒಂದು ವರ್ಷಕ್ಕೂ ಚಿಕ್ಕ ಮಕ್ಕಳಿಗೆ ಇದರಲ್ಲಿರುವ ಸಕ್ಕರೆ ಮತ್ತು ಕ್ಯಾಲೋರಿಗಳು ಆಗಾಧವಾಗಿದ್ದು ಈ ಪ್ರಮಾಣ ಮಕ್ಕಳ ಎಳೆಯ ದೇಹಕ್ಕೆ ಮಾರಕ" ಎಂದು Fellow of the American Academy of Pediatrics (FAAP) ಹಾಗೂ ಈ ಸುತ್ತೋಲೆ ಹೊರಡಿಸಿದ ಸಹಲೇಖಕರಲ್ಲೊಬ್ಬರಾದ ಮೆಲ್ವಿನ್ ಹೇಯ್ಮನ್ ರವರು ತಿಳಿಸಿದ್ದಾರೆ.

"ಸುಮಾರು ಒಂದು ವರ್ಷ ಕಳೆದಿರುವ ಮಕ್ಕಳಿಗೆ ಚಿಕ್ಕ ಪ್ರಮಾಣದಲ್ಲಿ ಹಣ್ಣಿನ ರಸವನ್ನು ನೀಡಬಹುದು ಆದರೆ ಒಂದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಹಣ್ಣಿನ ರಸದ ಅಗತ್ಯವೇ ಇಲ್ಲ, ಹಿಂದಿನ ದಿನಗಳಲ್ಲಿ ಅಮೇರಿಕಾದ ಸಂಸ್ಥೆಯೊಂದು ಆರು ತಿಂಗಳಿಗೂ ಚಿಕ್ಕ ಮಕ್ಕಳಿಗೆ ಹಣ್ಣಿನ ರಸವನ್ನು ಸೇವಿಸಲು ನೀಡಬಹುದು ಎಂಬುದಾಗಿ ತಿಳಿಸಿತ್ತು. ಆದರೆ ಈಗ ಈ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ" ಎಂದು ಹೇಯ್ಮನ್ ರವರು ತಿಳಿಸುತ್ತಾರೆ. 

working women

Pediatrics ಎಂಬ ನಿಯತಕಾಲಿಕೆಯಲ್ಲಿ ಕಳೆದ ಸೋಮವಾರ ಪ್ರಕಟಗೊಂಡ ಈ ವರದಿಯಲ್ಲಿ American Academy of Pediatrics ಸಂಸ್ಥೆ 2001ರಲ್ಲಿ ಪ್ರಸ್ತುತಪಡಿಸಿದ್ದ ಸಲಹೆಗಳನ್ನು ಮರುವಿಮರ್ಶಿಸಿ ಈಗ ಹೊಸ ಸಲಹೆಗಳನ್ನು ನೀಡಲಾಗಿದೆ. "ಹಣ್ಣಿನ ರಸವನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಮಕ್ಕಳಲ್ಲಿ ಹೆಚ್ಚುವರಿ ತೂಕ ಹಾಗೂ ಹಲ್ಲುಗಳಲ್ಲಿ ಹುಳುಕು ಉಂಟಾಗಬಹುದು" ಎಂದು ಇನ್ನೋರ್ವ ಸಹಲೇಖಕರಾದ ಸ್ಟೀವರ್ನ್ ಅಬ್ರಾಮ್ಸ್ ರವರು ತಿಳಿಸುತ್ತಾರೆ.

ಒಂದು ವರ್ಷದವರೆಗೂ ಮಗುವಿಗೆ ತಾಯಿಹಾಲೇ ಸಾಕಾಗುತ್ತದೆ ಹಾಗೂ ಕೊಂಚ ಬೆಳೆದ ಬಳಿಕ ಕಡಿಮೆ ಕೊಬ್ಬಿನ ಅಥವಾ ಕೊಬ್ಬೇ ಇಲ್ಲದ ಹಾಲು ಮತ್ತು ನೀರು ಸಾಕಾಗುತ್ತದೆ ಎಂದು ಮಕ್ಕಳ ತಜ್ಞರು ತಿಳಿಸುತ್ತಾರೆ. ಹೊಸ ಸಲಹೆಯ ಪ್ರಕಾರ ಶೇಖಡಾ ನೂರು ಹಣ್ಣಿನ ರಸವೇ ಇರುವ ದ್ರವಾಹಾರ ಒಂದು ವರ್ಷ ಮೀರಿದ ಮಕ್ಕಳಿಗೆ ಅತ್ಯುತ್ತಮವಾಗಿದ್ದು ಇದನ್ನು ಇತರ ಸರಳ ಆಹಾರಗಳೊಂದಿಗೆ ಸಂಯೋಜಿಸಿ ನೀಡಬೇಕು. 

Fruit juice

ಆದರೆ ಇದರ ಪ್ರಮಾಣ ಮಾತ್ರ ಮಗುವಿನ ವಯಸ್ಸಿಗನುಗುಣವಾಗಿರಬೇಕು. ಒಂದರಿಂದ ಮೂರು ವರ್ಷದವರೆಗೆ ಪ್ರತಿದಿನ ನಾಲ್ಕು ಔನ್ಸ್ ಅಥವಾ 113.3 ಗ್ರಾಂ ಮೀರಬಾರದು ಎಂದು ಈ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

English summary

Don't Feed Fruit Juice In Child's First Year, Say Pediatricians

Fruit juice offers no nutritional benefit to children under age 1 and should not be included in their diet, according to a new policy statement issued by the American Academy of Pediatrics.
Subscribe Newsletter