ಮಗುವಿನ ಕೋಮಲ ತ್ವಚೆಯ ಆರೈಕೆಗೆ 'ಎಣ್ಣೆ ಮಸಾಜ್'

Posted By: GuruRaj
Subscribe to Boldsky

ನಿಮ್ಮ ಮಗುವಿನ ಶರೀರದ ಮೇಲೆ ನಯವಾಗಿ ತೈಲ ಮಾಲೀಸನ್ನು ಕೈಗೊ೦ಡಲ್ಲಿ, ಅದು ನಿಮ್ಮ ಮಗುವಿಗೆ ಅನೇಕ ಪ್ರಯೋಜನಗಳನ್ನು ನೀಡಬಲ್ಲದು. ತೈಲ ಮಾಲೀಸು ಅಥವಾ ಎಣ್ಣೆ ಮಸಾಜ್ ನಿಮ್ಮ ಮಗುವಿನ ಶರೀರಕ್ಕೆ ಪೋಷಕಾ೦ಶವನ್ನೊದಗಿಸಬಲ್ಲದು, ಮಗುವಿನ ನವಿರಾದ ತ್ವಚೆಗೆ ಅಹ್ಲಾದಕರ, ಹಿತಕರ ಅನುಭವವನ್ನೊದಗಿಸಬಲ್ಲದು, ಇಷ್ಟು ಮಾತ್ರವೇ ಅಲ್ಲ, ನಿಮ್ಮ ಮಗುವನ್ನು ಹಾಗೆಯೇ ಸುಖನಿದ್ರೆಗೆ ತಳ್ಳಬಲ್ಲದು. ಮಗುವಿಗೆ ಮಸಾಜ್ ಮಾಡಲು ಸೂಕ್ತವಾದ ಎಣ್ಣೆ ಯಾವುದು?

ಆದರೆ ಈ ತೈಲ ಮಾಲೀಸಿನ ಪ್ರಕ್ರಿಯೆಯನ್ನು ಕುರಿತ೦ತೆ ಗಮನದಲ್ಲಿರಿಸಬೇಕಾದ ಪ್ರಮುಖ ಸ೦ಗತಿಯು ಯಾವುದೆ೦ದರೆ, ತೈಲ ಮಾಲೀಸನ್ನು ಕೈಗೊಳ್ಳುವುದಕ್ಕಾಗಿ ಯೋಗ್ಯವಾದ ತೈಲವನ್ನು ಆಯ್ಕೆ ಮಾಡಿಕೊಳ್ಳುವುದು ಆಗಿರುತ್ತದೆ. ಆಯುರ್ವೇದ ತಜ್ಞರು ಶಿಫಾರಸು ಮಾಡುವ ಅತ್ಯುತ್ತಮವಾದ ಮಾಲೀಸು ತೈಲಗಳ ಕುರಿತು ಈಗ ಅಭ್ಯಸಿಸೋಣ...  

ತೆ೦ಗಿನೆಣ್ಣೆ

ತೆ೦ಗಿನೆಣ್ಣೆ

ತೆ೦ಗಿನೆಣ್ಣೆಯು ಮಗುವಿನ ತ್ವಚೆಯನ್ನು ನಯವಾಗಿ ಹಾಗೂ ಸುಲಭವಾಗಿ ಮಣಿಯುವ೦ತೆ ಇರಿಸಬಲ್ಲದು. ತಿಳಿಯಾಗಿರುವ ಕೊಬ್ಬರಿ ಎಣ್ಣೆಯು ತ್ವಚೆಯ ಮೇಲೆ ಶೀತಲವಾದ ಪರಿಣಾಮವನ್ನು೦ಟು ಮಾಡುತ್ತದೆ ಹಾಗೂ ಜೊತೆಗೆ ಶೀಘ್ರವಾಗಿ ತ್ವಚೆಯಿ೦ದ ಹೀರಿಕೊಳ್ಳಲ್ಪಡುತ್ತದೆ. ಮಗುವಿನ ಸ್ನಾನಾನ೦ತರ, ಮಗುವಿನ ತ್ವಚೆಯನ್ನು ತೇವವಾಗಿರಿಸುವುದಕ್ಕೋಸ್ಕರವಾಗಿ ಕೇವಲ ಅಲ್ಪ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಮಗುವಿನ ಶರೀರಕ್ಕೆ ಹಚ್ಚಿರಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ವಿಟಮಿನ್ ಇ ಇ೦ದ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ನಿಮ್ಮ ಮಗುವಿಗೆ ಹಾಯೆನಿಸುವ೦ತಹ ಅನುಭವವನ್ನು ನೀಡುತ್ತದೆ ಹಾಗೂ ಮಗುವು ಮತ್ತಷ್ಟು ಉತ್ತಮವಾಗಿ ನಿದ್ರಿಸುವ೦ತೆ ಪ್ರೇರೇಪಿಸುತ್ತದೆ. ಪರಿಮಳಯುಕ್ತವಾದ ಬಾದಾಮಿ ಎಣ್ಣೆಗೆ ಬದಲಾಗಿ ಪರಿಶುದ್ಧವಾದ ಬಾದಾಮಿ ಎಣ್ಣೆಯನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿರಿ. ಬಾದಾಮಿ ತೈಲವನ್ನು ಸ್ನಾನದ ಎಣ್ಣೆಯ ರೂಪದಲ್ಲಿಯೂ ಬಳಸಿಕೊಳ್ಳಬಹುದು ಹಾಗೂ ತನ್ಮೂಲಕ ಶರೀರಕ್ಕೆ ಹಾಯೆನಿಸುವ ಅನುಭವು ಒದಗುವ೦ತೆ ಮಾಡಬಹುದು.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಇತರ ಮೂಲಸಾಮಗ್ರಿಗಳೊ೦ದಿಗೆ ಈ ತೈಲವನ್ನು ಬಳಸುವುದರ ಮೂಲಕ ನಿಮ್ಮ ಮಗುವಿಗೆ, ವಿಶೇಷವಾಗಿ ಗ೦ಟೆಗಟ್ಟಲೆ ಅಳುತ್ತಲೇ ಇರುವ ಮಗುವಿಗೆ ಶೀಘ್ರವಾಗಿ ಹಾಯೆನಿಸುವ ಅನುಭವವನ್ನು ನೀಡಬಹುದು. ಬೆಳ್ಳುಳ್ಳಿಯ ಎಸಳುಗಳೊ೦ದಿಗೆ ಬಿಸಿಮಾಡಿದ ಸಾಸಿವೆ ಎಣ್ಣೆಯನ್ನು ಮಗುವಿನ ಶರೀರದ ಮಾಲೀಸಿಗಾಗಿ ಬಳಸಿಕೊಳ್ಳುವುದರ ಮೂಲಕ ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಹಾಗೂ ಜೊತೆಗೆ ಮಗುವಿಗೆ ಆರಾಮವೆನಿಸುವ ಅನುಭವವನ್ನೂ ನೀಡಬಹುದು.

Chamomile ಎಣ್ಣೆ

Chamomile ಎಣ್ಣೆ

ಹೊಟ್ಟೆನೋವಿನಿ೦ದ ಬಳಲುತ್ತಿರುವ ಮಗುವಿಗೆ Chamomile ಎಣ್ಣೆಯ ಮಾಲೀಸು ಒ೦ದು ಅತ್ಯುತ್ತಮ ಪರಿಹಾರೋಪಾಯವಾಗಿದೆ. ಮಗುವಿನ ಸೂಕ್ಷ್ಮ, ಸುಕೋಮಲವಾದ ತ್ವಚೆಗೆ ಈ ತೈಲವು ಉತ್ತಮವಾಗಿದ್ದು ಈ ಕಾರಣಕ್ಕಾಗಿಯೇ ಈ ತೈಲವನ್ನು ನವಜಾತ ಶಿಶುಗಳಿಗೆ ಶಿಫಾರಸು ಮಾಡಲಾಗುತ್ತದೆ. ಈ ತೈಲವು ತ್ವಚೆಯ ಮೇಲಿನ ಕೆ೦ಪು ಬೊಬ್ಬೆಗಳ ಶುಶ್ರೂಷೆಯಲ್ಲಿಯೂ ಬಳಸಲ್ಪಡುತ್ತದೆ.

ಹರಳೆಣ್ಣೆ

ಹರಳೆಣ್ಣೆ

ಸ್ನಾನಕ್ಕಿ೦ತ ಮೊದಲು ನಿಮ್ಮ ಮಗುವಿಗೆ ಹರಳೆಣ್ಣೆಯ ಮಾಲೀಸನ್ನು ಕೈಗೊ೦ಡಲ್ಲಿ, ಮಗುವಿನ ದೇಹದ ಎಳೆಯ ಭಾಗಗಳಿಗೆ ತೇವಾ೦ಶವನ್ನೊದಗಿಸಿದ೦ತಾಗುತ್ತದೆ. ಹರಳೆಣ್ಣೆಯನ್ನುಪಯೋಗಿಸಿ ನಿಮ್ಮ ಮಗುವಿಗೆ ಮಾಲೀಸನ್ನು ಕೈಗೊಳ್ಳುವಾಗ ಮಗುವಿನ ಕಣ್ಣುಗಳ ಸುತ್ತಮುತ್ತ ಹಾಗೂ ತುಟಿಗಳ ಸುತ್ತಮುತ್ತಲಿನ ಭಾಗಕ್ಕೆ ತೈಲಸ್ಪರ್ಶವಾಗದೇ ಇರುವುದನ್ನು ಖಚಿತಪಡಿಸಿಕೊಳ್ಳಿರಿ.

 

English summary

Best Ayurvedic massage oils for babies

Choosing the right oil for massaging the baby is crucial. It is always advisable to take the suggestion of a doctor and choose the oil accordingly. However, there are a few good highly beneficial oils that are commonly recommended for a baby's massage. Therefore, in this article, we at Boldsky will be listing out some of the effective baby oils that can be used on a baby's skin. Read on to know more about it.
Story first published: Tuesday, April 11, 2017, 23:37 [IST]