BBK 12 ; ನೋವು, ಅವಮಾನ -ಕಣ್ಣೀರಧಾರೆ ; ಉಪವಾಸ ಸತ್ಯಾಗ್ರಹ ಆರಂಭಿಸಿದ ಅಶ್ವಿನಿ ಗೌಡ

By Staff

ದಿನಗಳು ಉರುಳಿದಂತೆ ಕನ್ನಡದ ''ಬಿಗ್ ಬಾಸ್‌''ನ ಹನ್ನೆರಡನೇ ಸೀಸನ್ ರಂಗೇರುತ್ತಿದೆ. ಆರಂಭದಲ್ಲಿ ಸಪ್ಪೆ ಎಂಬ ಭಾವನೆ ಮೂಡಿಸಿದ್ದ ಈ ಕಾರ್ಯಕ್ರಮವನ್ನು ಈಗ ಒಂದು ವರ್ಗ ಜಾತಕ ಪಕ್ಷಿಯಂತೆ ಕಾದು ನೋಡುತ್ತಿದೆ. ದಿನ ಬೆಳಗಾದರೆ ನಿನ್ನೆ ಏನೆಲ್ಲಾ ಆಯ್ತು..? ಯಾರದ್ದು ಸರಿ..? ಯಾರದ್ದು ತಪ್ಪು..? ಎಂಬ ಚರ್ಚೆಯನ್ನು ಕೂಡ ಇದೇ ವರ್ಗ ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿದೆ.

ಇನ್ನೂ ''ಬಿಗ್ ಬಾಸ್'' ಅಂದರೆ ಅಲ್ಲಿ ಜಗಳ-ಕಿರಿಕ್ಕು ಮಾಮೂಲಿ. ಈ ಸಂಪ್ರದಾಯ ಈ ವರ್ಷ ಕೂಡ ಮುಂದುವರೆದಿದ್ದು ಸದ್ಯ ಈ ಬಾರಿಯ ಪ್ರಬಲ ಸ್ಫರ್ಧಿ ಎಂದೇ ಬಿಂಬಿಸಲ್ಪಡುತ್ತಿರುವ ಅಶ್ವಿನಿ ಗೌಡ ಗಳಗಳನೆ ಅತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಪವಾಸ ಸತ್ಯಾಗ್ರಹವನ್ನು ಕೂಡ ಶುರು ಮಾಡಿದ್ದಾರೆ.


Tears amp amp Hunger Strike Ashwini Gowda Fights Humiliation in Bigg Boss 12

ಹೌದು, ಎಲ್ಲರಿಗೆ ಗೊತ್ತಿರುವಂತೆ ಮೊನ್ನೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ವಾಕ್ಸಮರ ನಡೆದಿತ್ತು. ನಾನಾ -ನೀನಾ ಎಂದು ಜಗಳಕ್ಕಿಳಿದಿದ್ದ ಇಬ್ಬರು ಪರಸ್ಪರ ನಿಂದಿಸಿದ್ದರು. ಒಬ್ಬರನ್ನೊಬ್ಬರ ಯೋಗ್ಯತೆಯ ಕುರಿತು ಪ್ರಶ್ನೆ ಮಾಡಿದ್ದರು.

ಇದಾದ ನಂತರ ರಘು ಅಖಾಡಕ್ಕಿಳಿದಿದ್ದರು. 2ನೇ ಬಾರಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ರಘು ಮನೆ ಮಂದಿ ಕೈಯಲ್ಲಿ ಕೆಲಸಗಳನ್ನು ಮಾಡಿಸುವಾಗ, ಎಲ್ಲರನ್ನು ಕರೆದಂತೆ ಅಶ್ವಿನಿ ಅವರನ್ನು ಕೂಡ ಕರೆದಿದ್ದರು. ಕಾಫಿ ಕಪ್ ತೊಳೆಯುವಂತೆ ಹೇಳಿದ್ದರು. ಆದರೆ.. ಅಶ್ವಿನಿ ಗೌಡ ಬೆನ್ನು ನೋವಿನ ಕಾರಣ ನೀಡಿದರು. ಆಮೇಲೆ ಬಂದು ಮಾಡುವುದಾಗಿ ಹೇಳಿದರು. ಹೀಗೆ ಶುರುವಾದ ಇಬ್ಬರ ಮಾತುಕತೆ ಆ ನಂತರ ವಾಗ್ಯುದ್ದವಾಗಿ ಬದಲಾಗಿತ್ತು. ಏಕವಚನದಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದು ಕೂಡ ಆಗಿತ್ತು.

ಈಗ ಗಿಲ್ಲಿ.. ರಘು.. ಹೀಗೆ ಮನೆಯಲ್ಲಿದ್ದ ಎಲ್ಲರು ತನ್ನನ್ನು ಏಕವಚನದಲ್ಲಿ ಮಾತನಾಡಿಸುತ್ತಿರುವುದಕ್ಕೆ.. ಏಕವಚನದಲ್ಲಿ ಬೈದಾಡುತ್ತಿರುವುದಕ್ಕೆ.. ಅಶ್ವಿನಿ ಗೌಡ ನೊಂದು ಬೆಂದು ಹೋಗಿದ್ದಾರೆ. ಕಣ್ಣೀರು ಹಾಕಿದ್ದಾರೆ. ಊಟ ಮಾಡಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಸದ್ಯ ಇಂದು (ನವೆಂಬರ್ 20 ) ಬಿಡುಗಡೆಯಾದ ಪ್ರೋಮೋದಲ್ಲಿ ತಮ್ಮ ಆಪ್ತ ಗೆಳತಿ ಅಶ್ವಿನಿಗೆ ಊಟ ನೀಡಲು ಜಾಹ್ನವಿ ಬರುತ್ತಾರೆ. ಆದರೆ ಅಶ್ವಿನಿ ಮಾತನಾಡುವುದಿಲ್ಲ. ಅಶ್ವಿನಿ ಗೌಡ ಅವರು ನಿನ್ನೆ ರಾತ್ರಿಯೂ ಊಟ ಮಾಡಿಲ್ಲ, ಈಗಲೂ ಊಟ ಮಾಡಿಲ್ಲ ಎಂದು ಜಾಹ್ನವಿ ಹೇಳಿದಾಗ ಹೆಸರು ಕರೆದರೂ ಅವರಿಗೆ ಬೇಸರ ಆಗತ್ತಾ? ಎಂದು ರಘು ಪ್ರಶ್ನೆ ಮಾಡಿದ್ದಾರೆ. ಇನ್ನೂ ಧ್ರುವಂತ್ ಅವರಿಗೆ ಬಿಗ್‌ ಬಾಸ್‌ ಮನೆಯಲ್ಲಿರುವಷ್ಟು ದಿನ ಊಟ ಮಾಡಲ್ವಾ? ಎನ್ನುವ ಚಿಂತೆ ಸದ್ಯ ಕಾಡುತ್ತಿದೆ.


ಇನ್ನೊಂದು ಕಡೆ ನನಗೆ ತುಂಬಾ ನೋವಾಗಿದೆ. ನನ್ನ ವಯಸ್ಸಿಗೆ, ನನ್ನ ಮೆಚ್ಯುರಿಟಿಗೆ ಈ ಥರಹದ ಅವಮಾನ ಸಹಿಸಲು ಸಾಧ್ಯ ಇಲ್ಲ. ನನ್ನ ಸ್ವಾಭಿಮಾನ ಕೊಂದುಕೊಂಡು ತಿನ್ನೋಕೆ ಮನಸ್ಸು ಬರುತ್ತಾ? ನನಗೆ ನಾನೇ ಸ್ಟ್ಯಾಂಡ್‌ ತೆಗೋಬೇಕು ಎಂದು ಸದ್ಯ ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ.

ಸದ್ಯ ಇಂದು (ನವೆಂಬರ್ 20 ) ಬಿಡುಗಡೆಯಾದ ಈ ಪ್ರೋಮೋ ನೋಡಿ ನೀವು ಎಲ್ಲರಿಗೂ ಕೊಡೊ ಮರ್ಯಾದೆ ಗೊತ್ತು. ''ಬಿಗ್ ಬಾಸ್‌'' ರೂಲ್ಸ್ ಗೆ ಮರ್ಯಾದೆ ಕೊಡಿ ಮೊದಲು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ವಯಸ್ಸಿಗೆ ನಿಮ್ಮ ಮೆಚ್ಯೂರಿಟಿ ಲೆವೆಲ್‌ಗೆ ಯಾವನೋ ನೀನು ಲೇ ಅಂತ ನೀವು ಹೇಳೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಡ್ರಾಮಾ ಕ್ವೀನ್ ಎಂಬ ಬಿರುದನ್ನು ಕೂಡ ಕೊಡುತ್ತಿದ್ದಾರೆ.

ಒಟ್ನಲ್ಲಿ ಸದ್ಯ ಅಶ್ವಿನಿ ಗೌಡ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಶುರುಮಾಡಿದ್ದಾರೆ. ಅಶ್ವಿನಿ ಗೌಡ ಅವರ ಮನವೊಲಿಸುವುದು ಯಾರು ? ಬೇರೆ ದಾರಿಯಿಲ್ಲದೇ ರಘು ಬಂದು ಅಶ್ವಿನಿ ಗೌಡ ಅವರಲ್ಲಿ ಕ್ಷಮೆ ಕೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Credit: Filmibeat

X
Desktop Bottom Promotion