For Quick Alerts
ALLOW NOTIFICATIONS  
For Daily Alerts

ಸೃಷ್ಟಿಯ ಅಚ್ಚರಿ: ಕಾಶ್ಮೀರದಲ್ಲಿ ಗರ್ಭಚೀಲದೊಂದಿಗೆ ಮಗು ಜನನ

|

ಸೃಷ್ಟಿ ಎಂಬುವುದು ಪ್ರಕೃತ್ತಿಯ ವಿಸ್ಮಯಗಳಲ್ಲಿ ಒಂದು. ಕೆಲವೊಂದು ಘಟನೆಗಳನ್ನು ನೋಡುವಾಗ ತುಂಬಾ ಅಚ್ಚರಿ ಅನಿಸುವುದು. ವಿಚಿತ್ರವಾದ ಮಗು ಹುಟ್ಟುವುದು, ಎಂಟು ಕಾಲಿನ , 3 ಕಣ್ಣಿನ ಹೀಗೆ ಅಸಹಜ ಪ್ರಾಣಿಗಳ ಜನನ ಎಲ್ಲಾ ನಡೆಯುತ್ತಲೇ ಇರುತ್ತದೆ. ಇದೀಗ ಅಂಥದ್ದೇ ಒಂದು ಘಟನೆ ಕಾಶ್ಮೀರದಲ್ಲಿ ನಡೆದಿದ್ದು ತುಂಬಾ ಸುದ್ದಿಯಾಗುತ್ತಿದೆ. ಮಗು ಗರ್ಭಚೀಲದಲ್ಲಿಯೇ ಜನಿಸಿದೆ. ಮಗು 3.3 ಕೆಜಿ ತೂಕ ಹೊಂದಿದ್ದು, ಗರ್ಭಚೀಲದಿಂದಲೇ ಹೊರಬಂದ ಈ ಅಪರೂಪದ ಮಗುವಿನ ಗರ್ಭಚೀಲವನ್ನು ವೈದ್ಯರು ತೆಗೆದಿದ್ದು ಮಗು ಹಾಗೂ ತಾಯಿ ಸುರಕ್ಷಿತವಾಗಿದ್ದಾರೆ.

What is an En Caul birth? Kashmir sees the first-ever En Caul birth

ಈ ರೀತಿಯಾಗುವುದು ಬಲು ಅಪರೂಪ, ಮಗು ಗರ್ಭದೊಳಗೆ ಆಮ್ನಿಯೋಟಿಕ್ ಚೀಲದೊಳಗೆ (ಗರ್ಭ ಚೀಲ) ರಕ್ಷಿಸಲ್ಪಟ್ಟಿರುತ್ತದೆ, ಹೆರಿಗೆ ಸಮಯದಲ್ಲಿ ಆ ಚೀಲ ಒಡೆದು ಮಗು ಹೊರಬರುವುದು, ನಂತರ ಆ ಚೀಲ ಬೀಳುವುದು, ಅದನ್ನು ಮಾಸು ಬೀಳುವುದು ಎಂದು ಕರೆಯಲಾಗುವುದು.

ಮಗು ಹೊಟ್ಟೆಯೊಳಗೆ ಗರ್ಭ ಚೀಲದಲ್ಲಿ ಸುರಕ್ಷಿತವಾಗಿರುತ್ತದೆ. ಈ ಚೀಲದೊಳಗೆ ತಶೇ. 98ರಷ್ಟು ನೀರು ತುಂಬಿರುತ್ತದೆ. ಸೇ. 2ರಷ್ಟು ಪ್ರೊಟೀನ್, ಹಾರ್ಮೋನ್‌, ಕೊಬ್ಬು, ಉಪ್ಪಿನಂಶವಿರುತ್ತದೆ. ಈ ಗರ್ಭ ಚೀಲ ಮಗುವಿಗೆ ಪೆಟ್ಟಾಗುವುದನ್ನು ತಡೆಗಟ್ಟುತ್ತೆ, ಮಗುವಿಗೆ ಬೇಕಾದ ಪೋಷಕಾಂಶಗಳು, ಆಮ್ಲಜನಕ ಕರುಳ ಬಳ್ಳಿಯ ಮೂಲಕ (umbilical cord)ಸಿಗುವುದು. ಮಗುವಿನ ದೇಹದ ಉಷ್ಣತೆಯನ್ನು ಈ ಗರ್ಭಚೀಲ ರಕ್ಷಣೆ ಮಾಡುತ್ತದೆ.

ಗರ್ಭ ಚೀಲವನ್ನು ಎರಡು ಪದರಗಳಿಂದ ಮಾಡಲ್ಪಟ್ಟಿರುತ್ತದೆ
* ಅಮ್ನಿಯನ್ ಪದರ: ಇದರ ಒಳಗಿನ ಪದರವಾಗಿದ್ದು ಇದರೊಳಗೆ ನೀರು ತುಂಬಿರುತ್ತದೆ
* ಕೋರಿಯನ್: ಹೊರಗಿನ ಪದರ ಜರಾಯುವಿನ ಭಾಗವಾಗಿರುತ್ತದೆ.

ಗರ್ಭಿಣಿ ತಿಂಗಳು ತುಂಬಿದಾಗ ನೈಸರ್ಗಿಕವಾಗಿ ಈ ಚೀಲ ಒಡೆಯುತ್ತದೆ, ಆಗ ಅದು ಹೆರಿಗೆಯ ಲಕ್ಷಣವಾಗಿದೆ, ನಂತರ ಮಗುವಿನ ಜನನವಾಗುವುದು.
ಆದರೆ ಕಾಶ್ಮೀರದಲ್ಲಿ ಜನಿಸಿದ ಈ ಮಗು ಗರ್ಭಚೀಲದೊಂದಿಗೆ ಜನಿಸಿದೆ. ಮಗು ಈ ರೀತಿ ಜನಿಸುವುದು ಆ ಭಾಗಕ್ಕೆ ಅದೃಷ್ಟ ಎಂದು ಹೇಳಲಾಗುವುದು.
ಇದೀಗ ಈ ಮಗುವಿನ ಫೋಟೋ ಎಲ್ಲಾ ಕಡೆ ವೈರಲ್ ಆಗಿದೆ.

ಕೆಲವೊಂದು ಘಟನೆಗಳನ್ನು ನೋಡುವಾಗ 'ಗಾಡ್‌ ಈಸ್ ಗ್ರೇಟ್‌' ಎಂದು ಹೇಳದೆ ಇನ್ನೇನು ಹೇಳಲು ಸಾಧ್ಯ ಅಲ್ವಾ?

English summary

What is an En Caul birth? Kashmir sees the first-ever En Caul birth

What is an En Caul birth? Kashmir sees the first-ever En Caul birth, Read on...
Story first published: Saturday, November 27, 2021, 16:43 [IST]
X
Desktop Bottom Promotion