ಕೆಂಪು ಸೀಬೆಕಾಯಿನಲ್ಲಿ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ ಗೊತ್ತಾ?

ನಮ್ಮನ್ನು ಆರೋಗ್ಯಕರವಾಗಿ ಇರಿಸುವುದರಲ್ಲಿ ನಾವು ಸೇವಿಸುವ ಆಹಾರ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಅದರಲ್ಲೂ ಕಾಲಕಾಲಕ್ಕೆ ತಕ್ಕ ಹಾಗೆ ಸಿಗುವ ಹಣ್ಣುಗಳನ್ನು ನಾವು ಸೇವಿಸಲೇಬೇಕು. ಒಂದುವೇಳೆ ಈ ರೀತಿ ಸೀಸನಲ್ ಹಣ್ಣುಗಳ ಸೇವನೆಯಿಂದ ತಪ್ಪಿಸಿಕೊಂಡರೆ ನಮ್ಮ ದೇಹಕ್ಕೆ ಬಹಳ ದೊಡ್ಡ ನಷ್ಟವಾಗುತ್ತದೆ ಎಂಬುದನ್ನ ನೆನಪಿಡಿ.

ನಾವು ಇಂದು ಮಧುಮೇಹ ಸ್ನೇಹಿ ಆಗಿರುವ ಒಂದು ಹಣ್ಣಿನ ಬಗ್ಗೆ ತಿಳಿಸುತ್ತೇವೆ. ಈ ಹಣ್ಣು ತಿನ್ನುವುದಕ್ಕೆ ರುಚಿಕರ ಮಾತ್ರವಲ್ಲ, ದೊಡ್ಡ ಪೋಷಕಾಂಶದ ಆಗರ ಎಂದೇ ಹೇಳಬಹುದು. ಈಗಂತೂ ಇದರದ್ದೇ ಸೀಸನ್. ಹಾಗಾಗಿ ತಪ್ಪದೆ ಈ ಹಣ್ಣನ್ನು ಮನೆಗೆ ತಂದು ವಾರದಲ್ಲಿ ಒಂದೆರಡು ಬಾರಿ ಆದ್ರೂ ತಿನ್ನಿ. ಅದರಿಂದ ಎಂತಹ ಆರೋಗ್ಯ ಬೆನಿಫಿಟ್ ಆಗಬಹುದು ಎಂಬುದನ್ನು ನೋಡೋಣ.

Pink Guava

ಪಿಂಕ್ಅ ಸೀಬೆ ಅಥವಾ ಪೇರಲೆ ಹಣ್ಣು!
ಪೇರಲೆ ಹಣ್ಣಿನಲ್ಲಿ ಸಾಕಷ್ಟು ವಿಧಗಳು ಕೂಡ ಇವೆ. ಕೆಲವು ಪೇರಲೆ ಹಣ್ಣುಗಳು ಗಾತ್ರದಲ್ಲಿ ಬಹಳ ದೊಡ್ಡದಾಗಿರುತ್ತವೆ. ಹೊರ ಭಾಗದಲ್ಲಿ ಹಸಿರು ಹಾಗೂ ಒಳಭಾಗದಲ್ಲಿ ಬಿಳಿಯ ಬಣ್ಣದಲ್ಲಿ ಇರುತ್ತವೆ. ಇನ್ನೊಂದು ಬಗೆಯ ಪೇರಲೆ ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುವಂತದ್ದು. ಹೊರ ಭಾಗದಲ್ಲಿ ಹಸಿರು ಬಣ್ಣದಿಂದ ಹಾಗೂ ಒಳಭಾಗದಲ್ಲಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಹಳ್ಳಿಗಳಲ್ಲಿ ಸುಲಭವಾಗಿ ಸಿಗುವ ಈ ಪೇರಲೆ ಹಣ್ಣನ್ನು ಈಗ ನಗರ ಪ್ರದೇಶಗಳಲ್ಲಿಯೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಹಾಗಾಗಿ ಪೇರಲೆ ಹಣ್ಣನ್ನ ನೀವು ಮನೆಗೆ ತಂದು ಸೇವನೆ ಮಾಡಿದರೆ ಒಳ್ಳೆಯದು ಈ ಪೇರಲೆ ಹಣ್ಣು ಮಧುಮೇಹಕ್ಕೆ ಬಹಳ ಒಳ್ಳೆಯದು ಹಣ್ಣು ಸ್ವಲ್ಪ ಸ್ವೀಟ್ ಎನಿಸಿದರು ಇದರಲ್ಲಿ ಇರುವ ಪೋಷಕಾಂಶಗಳಿಂದಾಗಿ ಮಧುಮೇಹಿಗಳು ಕೂಡ ಸುಲಭವಾಗಿ ಸೇವಿಸುವ ಒಂದು ಹಣ್ಣು.

ಪೇರಲೆ ಹಣ್ಣಿನಲ್ಲಿದೆ ಸಾಕಷ್ಟು ಪೋಷಕಾಂಶಗಳು!
ಕ್ಯಾಲ್ಸಿಯಂ, ಪ್ರೊಟೀನ್, ಫೈಬರ್ ಮೊದಲಾದ ಪೋಷಕಾಂಶಗಳ ಆಗರ ಈ ಪೇರಲೆ ಹಣ್ಣು. ಬಿಳಿಯ ಪೇರಲೆ ಹಣ್ಣುಗಳಿಗಿಂತಲೂ ಗುಲಾಬಿ ಪೇರಲೆ ಹಣ್ಣುಗಳು ಹೆಚ್ಚು ಆರೋಗ್ಯಕರ ಗುಣಲಕ್ಷಣಗಳನ್ನು ಹೊಂದಿವೆ ಎಂದು ತಜ್ಞರು ಕೂಡ ತಿಳಿಸುತ್ತಾರೆ. ಸೂಪರ್ ಫುಡ್ ಎಂದೇ ಕರೆಯಲ್ಪಡುವ ಗುಲಾಬಿ ಬಣ್ಣದ ಪೇರಲೆ ಹಣ್ಣಿನಲ್ಲಿ ಎಷ್ಟು ಆರೋಗ್ಯಕರ ಗುಣಲಕ್ಷಣಗಳು ಇವೆ ಗೊತ್ತಾ?

ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಲು ಇದುವೇ ಬೆಸ್ಟ್!
ಇತ್ತೀಚಿನ ದಿನಗಳಲ್ಲಿ ನಮ್ಮ ಲೈಫ್ ಸ್ಟೈಲ್ ಹಾಗೂ ಆಹಾರ ಕ್ರಮದಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಎನ್ನುವುದು ದೇಹವನ್ನು ಆವರಿಸಿ ಬಿಟ್ಟಿದೆ ಹಾಗಾಗಿ ಈ ಕೆಟ್ಟ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಲು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ದೇಹಕ್ಕೆ ಅಂಟುಕೊಳ್ಳದಂತೆ ತಡೆಗಟ್ಟಲು ಗುಲಾಬಿ ಬಣ್ಣದ ಪೇರಲೆ ಹಣ್ಣು ಸೇವನೆ ಬಹಳ ಒಳ್ಳೆಯದು ಎಂದು ತಜ್ಞರು ತಿಳಿಸುತ್ತಾರೆ. ಸುಮಾರು 100 ಗ್ರಾಂ ಪೇರಲೆ ಹಣ್ಣಿನಲ್ಲಿ ಏಳು ಗ್ರಾಂ ನಷ್ಟು ಫೈಬರ್ ಅಂಶ ಇರುತ್ತದೆ. ಹಾಗಾಗಿ ಫೈಬರ್ ಅಂಶ ನಮ್ಮ ದೇಹಕ್ಕೆ ಸೇರಿದರೆ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸುವುದು ಮಾತ್ರವಲ್ಲದೆ LDL ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಲು ರಾಮಬಾಣ!
ಸುಮಾರು 100 ಗ್ರಾಂ ಪೇರಲೆ ಹಣ್ಣಿನಲ್ಲಿ 228 ಮಿಲಿಗ್ರಾಂ ನಷ್ಟು ವಿಟಮಿನ್ ಸಿ ಅಂಶ ಇರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗುಲಾಬಿ ಪೇರಲೆಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ದೇಹದಲ್ಲಿ ಆಗಿರುವ ಗಾಯವನ್ನು ಬಹಳ ಶೀಘ್ರವಾಗಿ ಉಪಶಮನಗೊಳಿಸುತ್ತದೆ.

ತೂಕ ಇಳಿಕೆಗೆ ಸಹಾಯಕ!
ಗುಲಾಬಿ ಬಣ್ಣದ ಪೇರಲೆ ಹಣ್ಣುಗಳನ್ನು ತೂಕ ಇಳಿಕೆ ಮಾಡಲು ಬಯಸುವವರು ಮಧ್ಯಾಹ್ನದ ಊಟದ ಸಮಯದಲ್ಲಿ ಸೇವಿಸುವುದು ಒಳ್ಳೆಯದು. ಇದರಲ್ಲಿ ಫೈಬರ್ ಅಂಶ ಇರುವುದು ಮಾತ್ರವಲ್ಲದೆ, ನೀರಿನ ಅಂಶವೂ ಕೂಡ ಇರುತ್ತದೆ. ಹಾಗಾಗಿ ಪೇರಲೆ ಹಣ್ಣುಗಳನ್ನು ಸೇವನೆ ಮಾಡಿದರೆ ಬಹಳ ಬೇಗ ಹಸಿವಾಗುವುದಿಲ್ಲ. ಇನ್ನು ನಿಮ್ಮ ಬಾಯಿಗೆ ಸ್ವಲ್ಪ ರುಚಿ ಬೇಕು ಅಂದ್ರೆ ಪೇರಲೆ ಹಣ್ಣಿನ ಮೇಲೆ ಸ್ವಲ್ಪ ಚಾಟ್ ಮಸಾಲ ಉದುರಿಸಿಕೊಂಡು ಸೇವಿಸಿದರೆ ಬಾಯಿಗೆ ರುಚಿ ಸಿಗುತ್ತದೆ. ದೇಹಕ್ಕೆ ಉತ್ತಮ ಪೋಷಕಾಂಶಗಳು ಸಿಗುತ್ತವೆ.

ರಕ್ತದೊತ್ತಡ ನಿಯಂತ್ರಿಸಬಹುದು ಗುಲಾಬಿ ಪೇರಲೆ!
ದೇಹದ ತೂಕವನ್ನು ಇಳಿಸಿ ಹೈ ಫ್ಯಾಟ್ ಡಯಟ್ ಅನ್ನು ಪ್ರೇರೇಪಿಸುವಂತಹ ಗುಲಾಬಿ ಪೇರಲೆ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. ಈ ಪೇರಲೆಯಲ್ಲಿ ಇರುವ ಪೊಟ್ಯಾಶಿಯಂ ಅಂಶ, ನರ ಅಥವಾ ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ ಹಾಗೂ ಸ್ನಾಯುಗಳ ಕಾರ್ಯಾಚರಣೆಯನ್ನು ಉತ್ತಮಗೊಳಿಸುತ್ತದೆ. ಇದರಿಂದಾಗಿ ರಕ್ತದೊತ್ತಡ ಸಮಸ್ಯೆ ನಿವಾರಣೆ ಆಗುತ್ತದೆ.

ಮಧುಮೇಹಕ್ಕೆ ತುಂಬಾನೇ ಒಳ್ಳೆಯದು!
ಕಡಿಮೆ ಗ್ಲೈಸಮಿಕ್ ಸೂಚ್ಯಂಕವನ್ನು ಹೊಂದಿರುವ, ಪೇರಲೆ ಹಣ್ಣು ಡಯಾಬಿಟಿಸ್ ಇರುವವರಿಗೆ ಬಹಳ ಒಳ್ಳೆಯದು. ಇದು ರಕ್ತದಲ್ಲಿ ಇರುವ ಗ್ಲುಕೋಸ್ ಸ್ಪೈಕ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ನಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.

ಬಿಳಿ ಪೇರಲ ಅಥವಾ ಗುಲಾಬಿ ಪೇರಲ ಇವುಗಳಲ್ಲಿ ಯಾವುದು ಉತ್ತಮ?
ಬಿಳಿ ಪೇರಲ ಹಾಗೂ ಗುಲಾಬಿ ಪೇರಲ ಎರಡು ಪ್ರಭೇದಗಳನ್ನು ನೀವು ಕಾಣಬಹುದು. ಈ ಎರಡು ಪೇರಲದಲ್ಲಿ ಪೋಷಕಾಂಶಗಳು ಉತ್ತಮವಾಗಿರುತ್ತದೆ. ಸಮತೋಲಿತ ಆಹಾರದ ಭಾಗವಾಗಿ ಈ ಎರಡು ಪೇರಲೆಯಲ್ಲಿ ಯಾವುದನ್ನು ಬೇಕಾದರೂ ಸೇವಿಸಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಮ್ಮ ರುಚಿಗೆ ಅನುಸಾರವಾಗಿ ನೀವು ಪೇರಲೆ ಸೇವನೆ ಮಾಡಬಹುದು. ಡಯಟ್ ಮಾಡುವವರು ತಮ್ಮ ಡಯಟ್ ಫುಡ್ನಲ್ಲಿ ಪೇರಲೆಯನ್ನು ಕೂಡ ಸೇವಿಸಿದರೆ ಹೆಚ್ಚು ಆರೋಗ್ಯಕರ.

ಪೇರಲೆ ಹಣ್ಣಿನಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಇಂತಿದೆ.
ಕ್ಯಾಲ್ಸಿಯಂ - 14.22 ಮಿಗ್ರಾಂ
ಕಬ್ಬಿಣ - 0.40 ಮಿಗ್ರಾಂ
ಮೆಗ್ನೀಸಿಯಮ್ - 13.26 ಮಿಗ್ರಾಂ
ಪೊಟ್ಯಾಸಿಯಮ್ -270 ಮಿಗ್ರಾಂ
ಪ್ರೋಟೀನ್ -1.19 ಮಿಗ್ರಾಂ
ನೀರಿನ ಅಂಶ - 81.22 ಗ್ರಾಂ
ಫೈಬರ್ -7.39 ಗ್ರಾಂ
ಕಾರ್ಬೋಹೈಡ್ರೇಟ್ - 9.14 ಗ್ರಾಂ
ವಿಟಮಿನ್ ಸಿ - 228 ಮಿಗ್ರಾಂ

English summary

Super Health Benefits Of Pink Guava In Kannada

Here are amazing health benefits of pink guava, read on.....
Story first published: Saturday, January 6, 2024, 8:50 [IST]
X
Desktop Bottom Promotion