Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಮದುವೆ ವಾರ್ಷಿಕೋತ್ಸವಕ್ಕೆ ಈ ರೀತಿ ಶುಭ ಕೋರಿದರೆ ಚೆಂದ!
ಮದುವೆ ಅಂದ್ರೆ ಪ್ರತಿಯೊಬ್ಬರಿಗೂ ಸ್ಪೆಷಲ್ ಅಲ್ವಾ? ಪ್ರತಿ ವರ್ಷ ಮದುವೆಯ ವಾರ್ಷಿಕೋತ್ಸದ ದಿನ ಬಂದಾಗ ಅದೇನೋ ಒಂದು ರೀತಿಯ ಖುಷಿ. ಆ ದಿನ ಮದುವೆಯ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತೇವೆ. ಆ ದಿನ ನಮ್ಮವರು ಯಾರಾದರೂ ನಮಗೆ ಶುಭ ಕೋರಿದರೆ ತುಂಬಾನೇ ಖುಷಿಯಾಗುತ್ತೆ. ಮದುವೆಯ ವಾರ್ಷಿಕೋತ್ಸವಕ್ಕೆ ನಿಮ್ಮ ಆಪ್ತರಿಗೆ ಶುಭ ಕೋರಬೇಕಾ? ಹಾಗಾದ್ರೆ ಇಲ್ಲಿದೆ ಮದುವೆಯ ವಾರ್ಷಿಕೋತ್ಸವಕ್ಕೆ ಶುಭ ಕೋರಲು ಸ್ಪೆಷಲ್ ಮೆಸೇಜ್ ಗಳು.

ನೀವು ಅವರಿಗೆ ಇಷ್ಟೆಲ್ಲಾ ಚೆನ್ನಾಗಿ ವಿಶ್ ಮಾಡಿ ಅವರ ವಿವಾಹ ವಾರ್ಷಿಕೋತ್ಸವ ಮತ್ತಷ್ಟು ಸ್ಪೆಷಲ್ ಆಗಿಸಿ.

ಶುಭಾಶಯ1
1. ಸುಮಧುರ ದಾಂಪತ್ಯ ಜೀವನದ ಒಂದು ವರ್ಷವನ್ನು ಪೂರೈಸಿದ ನಲ್ಮೆಯ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು

ಶುಭಾಶಯ 2
2. ದಾಂಪತ್ಯ ಜೀವನದ ಪ್ರಥಮ ವರ್ಷವನ್ನು ನೀವು ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ, ನಿಮ್ಮಿಬ್ಬರ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಲಿ ಮತ್ತು ನಿಮ್ಮ ಜೀವನಪರ್ಯಂತ ನೀವಿಬ್ಬರೂ ತುಂಬು ಸಂತಸದೊಂದಿಗೆ ಜೊತೆಯಾಗಿ ಬಾಳುವಂತಾಗಲಿ ಎಂದು ನನ್ನ ಪ್ರಾರ್ಥನೆ, ಹಾರ್ಧಿಕ ಶುಭಕಾಮನೆಗಳು.

ಶುಭಾಶಯ 3
3. ದಾಂಪತ್ಯ ಜೀವನದ 25 ಅರ್ಥಪೂರ್ಣ ವರ್ಷಗಳನ್ನು ಪೂರೈಸಿದ ಅನುಪಮ ಜೋಡಿಗೆ ವೈವಾಹಿಕ ರಜತಮಹೋತ್ಸವದ ಹಾರ್ಧಿಕ ಅಭಿನಂದನೆಗಳು.

ಶುಭಾಶಯ 4
4. ನಿಜವಾದ ಪ್ರೀತಿ ಎಂದೆಂದಿಗೂ ಅಮರ. ಕಾಲಚಕ್ರ ಉರುಳಿದಂತೆಲ್ಲ ಅದು ಮತ್ತಷ್ಟು ಗಾಢವಾಗುತ್ತದೆ ಮತ್ತು ಇನ್ನಷ್ಟು ಪರಿಶುದ್ಧವಾಗುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಅತ್ಯಂತ ಗಾಢವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು ಅನ್ನೋದು ಹೊಳೆಯುವ ಸೂರ್ಯನಷ್ಟೇ ಸತ್ಯ. ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು.

ಶುಭಾಶಯ 5
5. ಮತ್ತೊಂದು ವರ್ಷ ಕಳೆದು ಹೋಯಿತಾದರೂ, ನಿಜವಾದ ಪ್ರೀತಿ ಅಸ್ತಿತ್ವದಲ್ಲಿರುತ್ತದೆ ಅನ್ನೋದನ್ನ ಜಗತ್ತಿಗೆ ತೋರಿಸಿಕೊಡೋದನ್ನ ನೀವು ಮುಂದುವರೆಸುತ್ತಿರುವಿರಿ. ವೈವಾಹಿಕ ವಾರ್ಷಿಕೋತ್ಸವದ ಹಾರ್ಧಿಕ ಅಭಿನಂದನೆಗಳು.

ಶುಭಾಶಯ 6
6. ನೀವಿಬ್ಬರೂ ಪರಸ್ಪರ ಹಂಚಿಕೊಳ್ಳುವ ಪ್ರತಿದಿನವೂ ಅದರ ಹಿಂದಿನ ದಿನಕ್ಕಿಂತ ಇನ್ನಷ್ಟು ರಸಮಯವಾಗಿರಲಿ. ಹ್ಯಾಪೀ ಆನವರ್ಸರಿ!

ಶುಭಾಶಯ 7
7. ನಿಮ್ಮಿಬ್ಬರ ಜೀವನದ ಮೈಲಿಗಲ್ಲುಗಳನ್ನಾಚರಿಸಲು ನೀವೇನೂ ನಿಮ್ಮ 10ನೆಯ, 20ನೆಯ, ಅಥವಾ 25ನೆಯ ವರ್ಷಾಚರಣೆಗಾಗಿ ಕಾಯುವ ಅಗತ್ಯವಿಲ್ಲ. ನಿಮ್ಮಿಬ್ಬರ ಪ್ರತೀ ವರ್ಷದ ವೈವಾಹಿಕ ವಾರ್ಷಿಕೋತ್ಸವವೂ ಒಂದು ವಿಶೇಷವಾದ ಮೈಲಿಗಲ್ಲೇ. ಹಾರ್ಧಿಕ ಶುಭಾಶಯಗಳು!!

ಶುಭಾಶಯ 8
8. ವೃದ್ಧ ದಂಪತಿಗಳಾಗಿರೋ ನಿಮ್ಮ ಕಾಲುಗಳ ಶಕ್ತಿ ಕುಂದಿರಬಹುದು ಹಾಗೂ ಸುಂದರ ಸುಕ್ಕುಗಳು ನಿಮ್ಮ ಮುದ್ದು ಮುಖಗಳನ್ನ ಅಲಂಕರಿಸಿರಲೂ ಬಹುದು, ಆದರೆ ಜೀವನದ ಯಾವುದೇ ಘಟ್ಟದಲ್ಲೇ ಆಗಿರಲೀ ನಿಮ್ಮಿಬ್ಬರ ನಡುವಿನ ಪ್ರೀತಿಯೆಂದೂ ಮಾಸಿದಂತೆ ಕಾಣೋಲ್ಲ. ವಿವಾಹಜೀವನದ ಸುವರ್ಣಮಹೋತ್ಸವದ ಹಾರ್ಧಿಕ ಶುಭಾಶಯಗಳು!

ಶುಭಾಶಯ 9
9. ನಿಮ್ಮೀರ್ವರ ದಾಂಪತ್ಯಜೀವನದ ರಜತ ಮಹೋತ್ಸವಕ್ಕೆ ಕೇವಲ 5 ವರ್ಷಗಳಷ್ಟೇ ಬಾಕಿ! ಆ ಐದು ವರ್ಷಗಳು ಹಾಗೂ ಮುಂಬರುವ ವರ್ಷಗಳೂ ಅತ್ಯಂತ ಸಂತಸದಾಯಕವಾಗಿರಲೆಂದು ಆಶಿಸುವೆ!! ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.

ಶುಭಾಶಯ 10
10. ಕೆಲವರ ಪಾಲಿಗೆ ಪರಿಪೂರ್ಣ ದಾಂಪತ್ಯ ಅನ್ನೋದು ಕೇವಲ ಒಂದು ಮಿಥ್ಯೆ, ದಂತಕಥೆ, ಕಾಗಕ್ಕ-ಗುಬ್ಬಕ್ಕ ಕಥೆ, ಅಥವಾ ಒಂದು ಸುಂದರ ಭ್ರಮೆಯೇ ಆಗಿರಬಹುದು. ಆದರೆ ನನ್ನ ಪಾಲಿಗೆ, ಪರಿಪೂರ್ಣ ದಾಂಪತ್ಯ ಅನ್ನೋದು ನಿಮ್ಮೀರ್ವರ ನಡುವೆ ಜೀವಂತವಾಗಿರೋ ಒಂದು ನೈಜ ಅದ್ಭುತ!! ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.



Click it and Unblock the Notifications











