For Quick Alerts
ALLOW NOTIFICATIONS  
For Daily Alerts

Vinayaka Chaturthi March 2021: ಗಣೇಶನ ಭಕ್ತರಿಗೆ ಈ ದಿನ ತುಂಬಾ ಮಹತ್ವವಾದದ್ದು ಏಕೆ?

|

ಮಾರ್ಚ್‌ 17ಕ್ಕೆ ವಿನಾಯಕ ಚತುರ್ಥಿ. ವಿಘ್ನ ನಿವಾರಕನನ್ನು ಆರಾಧಿಸುವ ದಿನ. ವಿಘ್ನ ನಿವಾರಕನನ್ನು ಆರಾಧಿಸಿದರೆ ಆತ ಎಂದಿಗೂ ತನ್ನ ಭಕ್ತರನ್ನು ಕೈ ಬಿಡುವುದಿಲ್ಲ. ವಿನಾಯಕ ಚತುರ್ಥಿಯನ್ನು ಪ್ರತಿ ತಿಂಗಳು ಆಚರಿಸಲಾಗುವುದು.

Vinayaka Chaturthi March

ಈ ದಿನ ಭಕ್ತರು ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ, ಸ್ನಾನ ಮಾಡಿ ಮಧ್ಯಾಹ್ನ ವಿನಾಯಕನಿಗೆ ಪೂಜೆ ಮಾಡಿ ಸೂರ್ಯ ಮುಳುಗುವವರೆಗೆ ಉಪವಾಸ ವ್ರತ ಪಾಲಿಸುತ್ತಾರೆ.

ನಾವಿಲ್ಲಿ ವಿನಾಯಕ ಚತುರ್ಥಿ ಮುಹೂರ್ತ, ತಿಥಿ ಸಮಯ, ವ್ರತದ ನಿಯಮಗಳ ಕುರಿತು ಹೇಳಲಾಗಿದೆ ನೋಡಿ:

 ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ

ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ

ಕೃಷ್ಣ ಪಕ್ಷದಲ್ಲಿ ಸಂಕಷ್ಟಿ ಆಚರಿಸಿದರೆ ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ ಆಚರಿಸಲಾಗುವುದು. ಈ ದಿನ ಭಕ್ತರು ಬೆಳಗ್ಗೆಯಿಂದ ಉಪವಾಸವಿದ್ದು ಸೂರ್ಯಾಸ್ತವಾದ ಮೇಲೆ ಉಪವಾಸ ವ್ರತ ಮುಕ್ತಾಯವಾಗುವುದು.

 ಮುಹೂರ್ತ, ತಿಥಿ ಸಮಯ

ಮುಹೂರ್ತ, ತಿಥಿ ಸಮಯ

ವಿನಾಯಕ ಚತುರ್ಥಿಯ ತಿಥಿ ಪ್ರಾರಂಭ ಮಾರ್ಚ್ 16, 8:58ಕ್ಕೆ ಪ್ರಾರಂಭ

ಮುಕ್ತಾಯ: ಮಾರ್ಚ್ 17, ರಾತ್ರಿ 11:28

ಪೂಜೆಗೆ ಸಮಯ: ಬೆಳಗ್ಗೆ 11:17ರಿಂದ ಮಧ್ಯಾಹ್ನ 1:42

ವಿನಾಯಕ ಚತುರ್ಥಿಯಂದು ಪಾಲಿಸಬೇಕಾದ ನಿಯಮಗಳು

ವಿನಾಯಕ ಚತುರ್ಥಿಯಂದು ಪಾಲಿಸಬೇಕಾದ ನಿಯಮಗಳು

* ಬೆಳಗ್ಗೆ ಬೇಗನೆ ಅಂದ್ರೆ ಸೂರ್ಯೋದಯಕ್ಕಿಂತ 2 ಗಂಟೆ ಮುಂಚೆ ಎದ್ದೇಳಿ.

* ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ.

* ಈ ದಿನ ಏನಾದರೂ ಸಂಕಲ್ಪ ಕೈಗೊಳ್ಳಿ.

* ಗಣೇಶನಿಗೆ ಧ್ಯಾನ ಮಾಡಿ.

* ದೇವರಿಗೆ ಅರ್ಘ್ಯ ನೀಡಿ.

* ಈ ದಿನ ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಸೇವಿಸಬೇಡಿ.

* ಈ ದಿನ ತಂಬಾಕು ಹಾಗೂ ಮದ್ಯ ಸೇವನೆ ಒಳ್ಳೆಯದಲ್ಲ.

* ಪೂಜಾ ಸಮಯದಲ್ಲಿ ಪೂಜೆ ಸಲ್ಲಿಸಿ.

* ಗಣೇಶನಿಗೆ ಮೋದಕ, ಹಣ್ಣುಮ ಹಂಪಲು ಅರ್ಪಿಸಿ.

 ಮಹತ್ವ

ಮಹತ್ವ

ಈ ದಿನ ಗಣೇಶನನ್ನು ಆರಾಧನೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತೆ ಅಲ್ಲದೆ ಏನಾದರೂ ಸಂಕಲ್ಪ ತೆಗೆದುಕೊಂಡರೆ ಅದು ನೆರವೇರಲು ಗಣೇಶ ಸಹಾಯ ಮಾಡುತ್ತಾನೆ ಎಂಬ ಅಚಲ ನಂಬಿಕೆ ಆತನನ್ನು ನಂಬಿದ ಭಕ್ತರಲ್ಲಿ ಇರುತ್ತದೆ.

English summary

Vinayaka Chaturthi March 2021: Date, Tithi timings, Puja Timing, Rules and Significance in Kannada

Vinayaka Chaturthi March 2021: Date, Tithi timings, Puja Timing, Rules and Significance, Read on
X
Desktop Bottom Promotion