For Quick Alerts
ALLOW NOTIFICATIONS  
For Daily Alerts

Karka Rashi Ugadi Bhavishya 2022 :ಯುಗಾದಿ ಪಂಚಾಂಗ 2022-23: ಹೇಗಿದೆ ಕರ್ಕ ರಾಶಿಯ ಭವಿಷ್ಯ?

|

ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಕರ್ಕ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

Ugadi Rashi Phala 2022 Karka Rashi Shubhakruth Nama Samvatsara Rashi Bhavishya In Kannada

ಕರ್ಕ ರಾಶಿ

ಕರ್ಕ ರಾಶಿಯವರ ಅಧಿಪತಿ ಚಂದ್ರ. ಕರ್ಕ ರಾಶಿಯೆಂದರೆ ಪುನರ್ವಸು ನಕ್ಷತ್ರ 4ನೇ ಪಾದ, ಪುಷ್ಯಾ ನಕ್ಷತ್ರ 1, 2, 3, 4, ಆಶ್ಲೇಷ, 1,2, 3 ನಕ್ಷತ್ರ ಸೇರಿ ಆಗಿದೆ. ಈ ರಾಶಿಯವರಿಗೆ ಯೋಗ, ಅವಮಾನ 2 ಇದೆ. ಕರ್ಕ ರಾಶಿಯವರ ವೃತ್ತಿ ಜೀವನ ಚೆನ್ನಾಗಿರುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ.

ಶಿಕ್ಷಣದ ಬಗ್ಗೆ ನೋಡುವುದಾದರೆ ಈ ವರ್ಷ ವಿದ್ಯಾರ್ಥಿಗಳಿಗೆ ಶುಭವಾಗಿದೆ. ಏಪ್ರಿಲ್‌ನಲ್ಲಿ ಗುರು ಗ್ರಹವು ಮೀನ ಪ್ರವೇಶಿಸಿದಾಗ ಈ ರಾಶಿಯ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚುವುದು.

ಆರ್ಥಿಕವಾಗಿಯೂ ತುಂಬಾ ಚೆನ್ನಾಗಿದೆ. 11ನೇ ಮನೆಯಲ್ಲಿ ರಾಹು ಇರುವುದರಿಂದ ಉಳಿತಾಯ ಮಾಡಲು ಸಾಧ್ಯವಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಮತ್ತಷ್ಟು ಕಠಿಣ ಪರಿಶ್ರಮ ಹಾಕಿ. ಅಲ್ಲದೆ ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ.

ಅಷ್ಟಮ ಗುರುವಿನ ಕಾರಣದಿಂದ ಪ್ರಥಮಾರ್ಧದಲ್ಲಿ ಸ್ವಲ್ಪ ಸಂಕಷ್ಟ ಎದುರಾಗಬಹುದು. ನೀವು ಯಾರಿಗೂ ಜಾಮೀನು ನಿಲ್ಲಬೇಡಿ, ನೀಡಿದರೆ ನೀವೇ ಸಂಕಷ್ಟಕ್ಕೆ ಒಳಗಾಗುವಿರಿ. ಕಂಟಕ ಶನಿಕೂಡ ಇರುತ್ತದೆ. ಹೋಟೆಲ್‌, ಹೈನುಗಾರಿಕೆ, ಲೆದರ್‌ ವ್ಯಾಪಾರ ಮಾಡುವವರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಇರಬೇಕು. ಕೇತುವಿನ ನಾಲ್ಕನೇ ಮನೆ ಮನೆಯ ನೆಮ್ಮದಿಯ ವಾತಾವರಣದಲ್ಲಿ ಸ್ವಲ್ಪ ಏರು-ಪೇರು ಉಂಟು ಮಾಡುತ್ತದೆ. ರಾಹು 10ನೇ ಮನೆಯಲ್ಲಿ ಇರುವುದರಿಂದ ಕೆಲಸದಲ್ಲಿ ಒತ್ತಡವನ್ನು ಉಂಟು ಮಾಡುತ್ತೆ.

ಕುಟುಂಬ ಜೀವನ ಚೆನ್ನಾಗಿರುತ್ತದೆ,ನಿಮ್ಮ ಸಾಮಾಜಿಕ ಗೌರವ ಹೆಚ್ಚುವುದು. ನವ ದಂಪತಿಗಳು ಶುಭ ಸುದ್ದಿ ನೀಡುವಿರಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಅಡೆತಡೆಗಳು ಇರಬಹುದು, ಆದರೆ ಕ್ರಮೇಣ ಎಲ್ಲವೂ ಸರಿ ಹೋಗುವುದು, ವರ್ಷದ ಕೊನೆಯಲ್ಲಿ ಎಲ್ಲವೂ ಸರಿ ಹೋಗುವುದು. ಮಕ್ಕಳ ವರ್ತನೆಯ ಚಿಂತೆ ಕಾಡಬಹುದು. ಇನ್ನು ಮೂರನೇಯ ವ್ಯಕ್ತಿ ನಿಮ್ಮ ಜೀವನದಲ್ಲಿ ಮೂಗು ತೂರಿಸಲು ಬಿಡಬೇಡಿ.

ಶನೇಶ್ವರ ಕೃಪೆಯಿಂದಾಗಿ ವ್ಯಾಪಾರದಲ್ಲಿ ಯಶಸ್ಸು ಪಡೆಯುತ್ತೀರಿ,ಅನಿರೀಕ್ಷಿತ ಲಾಭ ಕೂಡ ಬರುವುದು. ಒಳ್ಳೆಯ ಉಳಿತಾಯ ಮಾಡುವಿರಿ, ಆಸ್ತಿ, ವಾಹನ ಖರೀದಿಸುವ ಯೋಗವಿದೆ. ಇನ್ನು ಆಸ್ತಿಯನ್ನು ಮಾರಾಟ ಮಾಡಬಯಸುವವರಿಗೆ ಮಾರಾಟದಿಂದ ಲಾಭ ಗಳಿಸುವಿರಿ. ಇನ್ನು ಹೂಡಿಕೆ ಮಾಡುವಾಗ ಎಚ್ಚರಿಕೆವಹಿಸಿ.

ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ ವರ್ಷದ ಪ್ರಾರಂಭದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿದರೂ ವೈದ್ಯರಿಗೆ ತೋರಿಸಬೇಕು. ವರ್ಷದ ದ್ವಿತೀಯಾರ್ಧದಲ್ಲಿ ಆರೋಗ್ಯ ಸ್ಥಿರವಾಗಿರುತ್ತೆ. ನೀವು ಸಕಾರಾತ್ಮಕ ಯೋಚಿಸಿದರೆ ಅದರಿಂದ ಆರೋಗ್ಯ ಉತ್ತಮವಾಗಿರುತ್ತೆ. ಒಟ್ಟಿನಲ್ಲಿ ನೋಡುವುದಾದರೆ ಯುಗಾದಿ ಪಂಚಾಂಗ ಪ್ರಕಾರ ಕರ್ಕ ರಾಶಿಯವರಿಗೆ ಈ ವರ್ಷ ಶುಭವಾಗಿದೆ.

ಅದೃಷ್ಟ ಬಣ್ಣ: ಬಿಳಿ

ಪರಿಹಾರ
ರಾಜಕಾರಣಿಗಳು ಚಂದ್ರ, ಗುರು ಹಾಗೂಈ ಶನೇಶ್ವರನ ಶಾಂತಿ ಮಾಡಿಸಲೇಬೇಕು. ಇದರಿಂದ ಒಳ್ಳೆಯದಾಗಲಿದೆ.
ದುರ್ಗೆಯನ್ನು ಆರಾಧಿಸಿ.
ಬಡ ಮಕ್ಕಳಿಗೆ ವಿದ್ಯೆಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ.

ಯುಗಾದಿ ಪಂಚಾಂಗ ಪ್ರಕಾರ 2022 ಮಿಥುನ ರಾಶಿಯ ವಾರ್ಷಿಕ ಫಲ

ಯುಗಾದಿ ಪಂಚಾಂಗ: ವೃಷಭ ರಾಶಿಯವರಿಗೆ ಹೊಸ ಸಂವತ್ಸರ ತುಂಬಾನೇ ಒಳ್ಳೆಯದಿದೆ

ಮೇಷ ರಾಶಿ: ಯುಗಾದಿ ಪಂಚಾಂಗ ಪ್ರಕಾರ 2022-23ರ ವಾರ್ಷಿಕ ಭವಿಷ್ಯ

English summary

Ugadi Rashi Phala 2022 Karka Rashi Shubhakruth Nama Samvatsara Rashi Bhavishya In Kannada

Karka Rashi Ugadi Rashi Phala 2022: Here is the Cancer Ugadi Horoscope in Kannada. Karka Rashi Shubhakruth Nama Samvatsara Rashi Bhavishya In Kannada. Read on.
X
Desktop Bottom Promotion