For Quick Alerts
ALLOW NOTIFICATIONS  
For Daily Alerts

ಮೊಬೈಲ್ ಬಳಸಿ ಮಾನಸಿಕ ಅಸ್ವಸ್ಥನಾದ ಬಾಲಕ!

|

ಪೋಷಕರು ಇಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಸಮಾಧಾನಿಸಲು ಮೊಬೈಲ್ ನ್ನು ನೀಡುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಮೊಬೈಲ್‌ನ್ನು ಮಕ್ಕಳ ಕೈಗೆ ಕೊಟ್ಟ ಬಳಿಕ ಪೋಷಕರು ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುವರು. ಆದರೆ ಇದು ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಕಾರ್ಟೂನ್ ಅಥವಾ ಬೇರೆ ಮಕ್ಕಳ ಆಟಗಳನ್ನು ನೋಡಲು ಅವರಿಗೆ ಮೊಬೈಲ್ ಕೊಡುತ್ತಿದ್ದರೂ ಇದು ತುಂಬಾ ಕೆಟ್ಟದು.

ವರದಿಗಳು ಹೇಳುವ ಪ್ರಕಾರ ಈ ಘಟನೆಯು ಚೀನಾದಲ್ಲಿ ನಡೆದಿದೆ ಮತ್ತು 13ರ ಹರೆಯದ ಬಾಲಕ ಝೆಜಿಯಾಂಗ್ ಪ್ರಾಂತ್ಯದ ನಿವಾಸಿ. ಆರು ತಿಂಗಳ ಮೊದಲು ಈ ಬಾಲಕನಿಗೆ ಮೊಬೈಲ್‌ನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಇದರ ಬಳಿಕ ಬಾಲಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾನೆ.

Teen Turns Sick After Using Mobile Phone

ಬಾಲಕನ ಪೋಷಕರು ಕೆಲಸದಲ್ಲಿ ತುಂಬಾ ವ್ಯಸ್ತರಾಗಿದ್ದ ಕಾರಣದಿಂದಾಗಿ ಆತನಿಗೆ ಒಂದು ಮೊಬೈಲ್ ಉಡುಗೊರೆ ನೀಡಲು ತಾಯಿ ನಿರ್ಧರಿಸಿದ್ದರು. ತಾನು ಮತ್ತು ಪತಿ ಯಾವಾಗಲೂ ಉದ್ಯೋಗದ ಜಾಗದಲ್ಲಿ ಇರುವ ಕಾರಣದಿಂದಾಗಿ ಮಗನಿಗೆ ಮೊಬೈಲ್ ಉಡುಗೊರೆ ನೀಡಿದರೆ ಅದರಿಂದ ಆತನೊಂದಿಗೆ ಸಂಪರ್ಕದಲ್ಲಿ ಇರಬಹುದು ಎಂದು ತಾಯಿ ಆಲೋಚಿಸಿ ಉಡುಗೊರೆ ನೀಡಿದರು.

ವರದಿಗಳು ಹೇಳುವ ಪ್ರಕಾರ ಹುಡುಗ ದಿನವಿಡಿ ಮೊಬೈಲ್ ನಲ್ಲಿ ಆಡುತ್ತಲಿದ್ದ. ಕೆಲವು ತಿಂಗಳ ಮೊದಲು ಆತ ಮೊಬೈಲ್ ಫೋನ್ ನ್ನು ಬಳಸುತ್ತಿದ್ದ ಕಾರಣದಿಂದಾಗಿ ಆತ ದಿನವಿಡಿ ಅದರಲ್ಲೇ ಕಳೆಯುತ್ತಿದ್ದ. ಶಾಲೆಗೆ ಹೋಗುತ್ತಿದ್ದ ಬಾಲಕ ಒಮ್ಮೆಲೇ ಆಘಾತವಾದಂತೆ ಆಗಿ ಹುಚ್ಚನಂತೆ ವರ್ತಿಸಲು ಆರಂಬಿಸಿದ. ಆತ ತನ್ನ ತಲೆಯನ್ನು ಗೋಡೆಗೆ ನಿರಂತರವಾಗಿ ಬಡಿಯಲು ಆರಂಭಿಸಿದ. ಆತನ ಶಿಕ್ಷಕಿ ಇದನ್ನು ತಡೆದರು ಮತ್ತು ಕೆಲವು ಹೊತ್ತಿನ ಬಳಿಕ ತಾಯಿಯನ್ನು ಶಾಲೆಗೆ ಕರೆಸಲಾಯಿತು. ಮಲಗಿದ್ದ ಆತನ ದೇಹವು ನಡುಗುತ್ತಿತ್ತು. ಮುಖವು ಸೆಳೆದುಕೊಂಡಿತ್ತು ಮತ್ತು ತಾಯಿಯ ಮಾತಿಗೂ ಆತ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಬಾಲಕನನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅಲ್ಲಿ ಆತನಿಗೆ 28 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಬಾಲಕನ ಸ್ಥಿತಿ ಮಾತ್ರ ಸುಧಾರಣೆ ಆಗಲೇ ಇಲ್ಲ ಮತ್ತು ಆತನ ಸ್ಥಿತಿ ಮತ್ತಷ್ಟು ಕೆಟ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ವರದಿ ಹೇಳಿದೆ. ಈ ಬಾಲಕನು ಈಗ ಸಣ್ಣ ಮಗುವಿನಂತೆ ವರ್ತಿಸಲು ಆರಂಭಿಸಿದ್ದು, ನಡೆಯಲು ಮತ್ತು ಮಾತನಾಡಲು ಬರದಂತೆ ವರ್ತಿಸುತ್ತಿದ್ದಾನೆ. ಆತನ ದೈನಂದಿನ ಚಟುವಟಿಕೆ ಕೂಡ ಮಾಡುತ್ತಿಲ್ಲ. ಈ ಬಾಲಕನ ಪರಿಸ್ಥಿತಿಯನ್ನು ಈಗ ಡಿಪಾರ್ಟ್ ಮೆಂಟ್ ಆಫ್ ನ್ಯೂರಾಲಜಿ ಅಧ್ಯಯನ ಮಾಡುತ್ತಲಿದೆ.

ಬಾಲಕನನ್ನು ವೈದ್ಯರು ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಹಲವಾರು ಪರೀಕ್ಷೆಗಳನ್ನು ಅವರು ವರದಿಯನ್ನು ಪಡೆದಿದ್ದಾರೆ. ಆಟೋಇಮ್ಯೂನ್ ಎನ್ಸೆಫಾಲಿಟಿಸ್ ಎನ್ನುವ ಸಮಸ್ಯೆಯು ಬಾಲಕನನ್ನು ಕಾಡುತ್ತಲಿದೆ. ಇದು ಒಂದು ರೀತಿಯ ರೋಗನಿರೋಧಕ ಮಧ್ಯಸ್ಥ ರೋಗವಾಗಿದೆ. ಇದು ಕೇಂದ್ರ ನರ ವ್ಯವಸ್ಥೆ ಮೇಲೆ ಹಾನಿಯನ್ನು ಉಂಟು ಮಾಡುತ್ತದೆ.

ಬಾಲಕನಿಗೆ ಈ ಸಮಸ್ಯೆಯು ಇದೆ ಎಂದು ಪತ್ತೆ ಮಾಡಿದ ಬಳಿಕ ಆತನಿಗೆ ಈಗ ಸರಿಯಾದ ಚಿಕಿತ್ಸೆ ಆರಂಭಿಸಲಾಗಿದೆ. ಇದರ ಪರಿಣಾಮವಾಗಿ ಬಾಲಕ ಈಗ ಸಂಪೂರ್ಣವಾಗಿ ಗುಣಮುಖವಾಗುತ್ತಾ ಬಂದಿದ್ದಾನೆ. ಆತ ಈಗ ಮಾತನಾಡುತ್ತಿದ್ದಾನೆ ಮತ್ತು ತನ್ನ ಪೋಷಕರ ಗುರುತು ಹಿಡಿಯುತ್ತಿದ್ದಾನೆ. ಬಾಲಕನನ್ನು ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಮೊಬೈಲ್ ಬಳಸಿ ಮಾನಸಿಕನಾದ ಬಾಲಕ

ಪೋಷಕರು ಇಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಸಮಾಧಾನಿಸಲು ಮೊಬೈಲ್ ನ್ನು ನೀಡುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಮೊಬೈಲ್ ನ್ನು ಮಕ್ಕಳ ಕೈಗೆ ಕೊಟ್ಟ ಬಳಿಕ ಪೋಷಕರು ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುವರು. ಆದರೆ ಇದು ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಕಾರ್ಟೂನ್ ಅಥವಾ ಬೇರೆ ಮಕ್ಕಳ ಆಟಗಳನ್ನು ನೋಡಲು ಅವರಿಗೆ ಮೊಬೈಲ್ ಕೊಡುತ್ತಿದ್ದರೂ ಇದು ತುಂಬಾ ಕೆಟ್ಟದು.

ವರದಿಗಳು ಹೇಳುವ ಪ್ರಕಾರ ಈ ಘಟನೆಯು ಚಿನಾದಲ್ಲಿ ನಡೆದಿದೆ ಮತ್ತು 13ರ ಹರೆಯದ ಬಾಲಕ ಝೆಜಿಯಾಂಗ್ ಪ್ರಾಂತ್ಯದ ನಿವಾಸಿ. ಆರು ತಿಂಗಳ ಮೊದಲು ಈ ಬಾಲಕನಿಗೆ ಮೊಬೈಲ್ ನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಇದರ ಬಳಿಕ ಬಾಲಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾನೆ. ಬಾಲಕನ ಪೋಷಕರು ಕೆಲಸದಲ್ಲಿ ತುಂಬಾ ವ್ಯಸ್ತರಾಗಿದ್ದ ಕಾರಣದಿಂದಾಗಿ ಆತನಿಗೆ ಒಂದು ಮೊಬೈಲ್ ಉಡುಗೊರೆ ನೀಡಲು ತಾಯಿ ನಿರ್ಧರಿಸಿದ್ದರು. ತಾನು ಮತ್ತು ಪತಿ ಯಾವಾಗಲೂ ಉದ್ಯೋಗದ ಜಾಗದಲ್ಲಿ ಇರುವ ಕಾರಣದಿಂದಾಗಿ ಮಗನಿಗೆ ಮೊಬೈಲ್ ಉಡುಗೊರೆ ನೀಡಿದರೆ ಅದರಿಂದ ಆತನೊಂದಿಗೆ ಸಂಪರ್ಕದಲ್ಲಿ ಇರಬಹುದು ಎಂದು ತಾಯಿ ಆಲೋಚಿಸಿ ಉಡುಗೊರೆ ನೀಡಿದರು.

ವರದಿಗಳು ಹೇಳುವ ಪ್ರಕಾರ ಹುಡುಗ ದಿನವಿಡಿ ಮೊಬೈಲ್ ನಲ್ಲಿ ಆಡುತ್ತಲಿದ್ದ. ಕೆಲವು ತಿಂಗಳ ಮೊದಲು ಆತ ಮೊಬೈಲ್ ಫೋನ್ ನ್ನು ಬಳಸುತ್ತಿದ್ದ ಕಾರಣದಿಂದಾಗಿ ಆತ ದಿನವಿಡಿ ಅದರಲ್ಲೇ ಕಳೆಯುತ್ತಿದ್ದ. ಶಾಲೆಗೆ ಹೋಗುತ್ತಿದ್ದ ಬಾಲಕ ಒಮ್ಮೆಲೇ ಆಘಾತವಾದಂತೆ ಆಗಿ ಹುಚ್ಚನಂತೆ ವರ್ತಿಸಲು ಆರಂಬಿಸಿದ. ಆತ ತನ್ನ ತಲೆಯನ್ನು ಗೋಡೆಗೆ ನಿರಂತರವಾಗಿ ಬಡಿಯಲು ಆರಂಭಿಸಿದ. ಆತನ ಶಿಕ್ಷಕಿ ಇದನ್ನು ತಡೆದರು ಮತ್ತು ಕೆಲವು ಹೊತ್ತಿನ ಬಳಿಕ ತಾಯಿಯನ್ನು ಶಾಲೆಗೆ ಕರೆಸಲಾಯಿತು. ಮಲಗಿದ್ದ ಆತನ ದೇಹವು ನಡುಗುತ್ತಿತ್ತು. ಮುಖವು ಸೆಳೆದುಕೊಂಡಿತ್ತು ಮತ್ತು ತಾಯಿಯ ಮಾತಿಗೂ ಆತ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಬಾಲಕನನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅಲ್ಲಿ ಆತನಿಗೆ 28 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಬಾಲಕನ ಸ್ಥಿತಿ ಮಾತ್ರ ಸುಧಾರಣೆ ಆಗಲೇ ಇಲ್ಲ ಮತ್ತು ಆತನ ಸ್ಥಿತಿ ಮತ್ತಷ್ಟು ಕೆಟ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ವರದಿ ಹೇಳಿದೆ. ಈ ಬಾಲಕನು ಈಗ ಸಣ್ಣ ಮಗುವಿನಂತೆ ವರ್ತಿಸಲು ಆರಂಭಿಸಿದ್ದು, ನಡೆಯಲು ಮತ್ತು ಮಾತನಾಡಲು ಬರದಂತೆ ವರ್ತಿಸುತ್ತಿದ್ದಾನೆ. ಆತನ ದೈನಂದಿನ ಚಟುವಟಿಕೆ ಕೂಡ ಮಾಡುತ್ತಿಲ್ಲ. ಈ ಬಾಲಕನ ಪರಿಸ್ಥಿತಿಯನ್ನು ಈಗ ಡಿಪಾರ್ಟ್ ಮೆಂಟ್ ಆಫ್ ನ್ಯೂರಾಲಜಿ ಅಧ್ಯಯನ ಮಾಡುತ್ತಲಿದೆ.

ಬಾಲಕನನ್ನು ವೈದ್ಯರು ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಹಲವಾರು ಪರೀಕ್ಷೆಗಳನ್ನು ಅವರು ವರದಿಯನ್ನು ಪಡೆದಿದ್ದಾರೆ. ಆಟೋಇಮ್ಯೂನ್ ಎನ್ಸೆಫಾಲಿಟಿಸ್ ಎನ್ನುವ ಸಮಸ್ಯೆಯು ಬಾಲಕನನ್ನು ಕಾಡುತ್ತಲಿದೆ. ಇದು ಒಂದು ರೀತಿಯ ರೋಗನಿರೋಧಕ ಮಧ್ಯಸ್ಥ ರೋಗವಾಗಿದೆ. ಇದು ಕೇಂದ್ರ ನರ ವ್ಯವಸ್ಥೆ ಮೇಲೆ ಹಾನಿಯನ್ನು ಉಂಟು ಮಾಡುತ್ತದೆ.

ಬಾಲಕನಿಗೆ ಈ ಸಮಸ್ಯೆಯು ಇದೆ ಎಂದು ಪತ್ತೆ ಮಾಡಿದ ಬಳಿಕ ಆತನಿಗೆ ಈಗ ಸರಿಯಾದ ಚಿಕಿತ್ಸೆ ಆರಂಭಿಸಲಾಗಿದೆ. ಇದರ ಪರಿಣಾಮವಾಗಿ ಬಾಲಕ ಈಗ ಸಂಪೂರ್ಣವಾಗಿ ಗುಣಮುಖವಾಗುತ್ತಾ ಬಂದಿದ್ದಾನೆ. ಆತ ಈಗ ಮಾತನಾಡುತ್ತಿದ್ದಾನೆ ಮತ್ತು ತನ್ನ ಪೋಷಕರ ಗುರುತು ಹಿಡಿಯುತ್ತಿದ್ದಾನೆ. ಬಾಲಕನನ್ನು ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

English summary

Teen Turns Sick After Using Mobile Phone

According to a recent report, a 13-year-old boy from Zhejiang, China, was left mentally disabled after he continuously used his mobile phone. The phone was gifted by his mother so that they could stay in contact as she and her husband were often busy with work. One day at school, he suddenly went berserk & crazy.
X
Desktop Bottom Promotion