For Quick Alerts
ALLOW NOTIFICATIONS  
For Daily Alerts

ಜೂ. 10ಕ್ಕೆ ಶನಿ ಅಮವಾಸ್ಯೆ: ಶನಿ ದೋಷ ಮುಕ್ತಿಗಾಗಿ ಈ ದಿನ ಏನು ಮಾಡಬೇಕು?

|

ನ್ಯಾಯದ ದೇವರಾಗಿರುವ ಶನಿ ಜನಿಸಿದ ದಿನವನ್ನು ಶನಿ ಜಯಂತಿಯೆಂದು ಆಚರಿಸಲಾಗುವುದು. ಈ ವರ್ಷ ಶನಿ ಜಯಂತಿಯನ್ನು ಜೂನ್‌ 10 ಗುರುವಾರ ಆಚರಿಸಲಾಗುವುದು. ಶನಿ ಜಯಂತಿಯನ್ನು ಜ್ಯೇಷ್ಠ ಕೃಷ್ಣ ಪಕ್ಷ ಅಮವಾಸ್ಯೆ ತಿಥಿಯಲ್ಲಿ ಆಚರಿಸಲಾಗುವುದು. ಆದ್ದರಿಂದ ಈ ಅಮವಾಸ್ಯೆಯನ್ನು ಶನಿ ಅಮವಾಸ್ಯೆಯಂದು ಆಚರಿಸಲಾಗುವುದು. ಜಯಂತಿಯಂದು ಕೆಲವೊಂದು ಕಾರ್ಯಗಳನ್ನು ಮಾಡುವುದರಿಂದ ಶನಿದೋಷದಿಂದ ಮುಕ್ತಿ ಪಡೆಯಬಹುದು.

ಸಾಡೇಸಾತಿ ದೋಷ ಇರುವವರಿಗೆ ಅನೇಕ ಕಷ್ಟಗಳು ಎದುರಾಗುವುದು, ಶನಿ ಕೃಪೆಯಿದ್ದರೆ ಅವುಗಳು ದೂರವಾಗುವುದು, ಶನಿಯನ್ನು ಉಲಿಸಿಕೊಳ್ಳಲು ಶನಿ ಅಮವಾಸ್ಯೆಯಂದು ಏನು ಮಾಡಬೇಕು ಎಂದು ನೋಡೋಣ:

ಶನಿ ಅಮವಾಸ್ಯೆಯ ಸಮಯ

ಶನಿ ಅಮವಾಸ್ಯೆಯ ಸಮಯ

ಶನಿ ಜಯಂತಿ ತಿಥಿ ಪ್ರಾರಂಭ: ಜೂನ್ 9 ಮಧ್ಯಾಹ್ನ 01:57ಕ್ಕೆ

ಶನಿ ಜಯಂತಿ ತಿಥಿ ಮುಕ್ತಾಯ: ಜೂನ್ 10, ಸಂಜೆ 04:22ಕ್ಕೆ

ಶನಿ ಅಮವಾಸ್ಯೆಯ ಮಹತ್ವ

ಶನಿ ಅಮವಾಸ್ಯೆಯ ಮಹತ್ವ

ಶನಿ ಜಯಂತಿಯಂದು ಮಾಡುವ ಹೋಮ, ಹವನಗಳು ತುಂಬಾನೇ ಶ್ರೇಷ್ಠವಾದದ್ದು. ಶನಿ ತೈಲಾಭಿಷೇಕ ಮತ್ತು ಶನಿ ಶಾಂತಿ ಪೂಜೆ ಈ ದಿನದಂದು ಮಾಡುವ ಮಹತ್ವದ ಆಚರಣೆಯಾಗಿದೆ. ಶನಿದೋಷ ಇರುವವರು ತೈಲಾಭಿಷೇಕ ಹಾಗೂ ಶನಿ ಶಾಂತಿ ಪೂಜೆ ಮಾಡಿಸುವುದರಿಂದ ಕಷ್ಟಗಳು ನೀಗುವುದು.

ಶನಿ ಸಾಡೇಸಾತಿ ಹಾಗೂ ಮಹಾದೋಷ ಹೊಂದಿರುವವರು ಶನಿ ಅಮವಾಸ್ಯೆ ಪೂಜೆ ಮಾಡಿದರೆ ಶನಿಯ ಕೃಪೆಗೆ ಪಾತ್ರರಾಗಬಹುದು.

ಶನಿಯ ಕೃಪೆಗೆ ಪಾತ್ರರಾಗಿ ಕಷ್ಟದಿಂದ ಮುಕ್ತಿ ಹೊಂದಲು ಈ ರೀತಿ ಮಾಡಿ.

ಏನನ್ನೂ ನಿರೀಕ್ಷಿಸದೆ ದಾನ ಮಾಡಿ

ಏನನ್ನೂ ನಿರೀಕ್ಷಿಸದೆ ದಾನ ಮಾಡಿ

ಶನಿ ಪೂಜೆಯಲ್ಲಿ ದಾನಕ್ಕೂ ಮಹತ್ವದ ಸ್ನಾನವಿದೆ. ಶನಿ ಅಮವಾಸ್ಯೆಯಂದು ಬಡವರಿಗೆ, ನಿರ್ಗತಕರಿಗೆ ಏನೂ ಪ್ರತಿಫಲ ಬಯಸದೆ ದಾನ ಮಾಡಬೇಕು.

ಮನೆಯಲ್ಲಿರುವ ಮುರಿದ ವಸ್ತುಗಳನ್ನು ಹೊರಗೆ ಹಾಕಿ

ಮನೆಯಲ್ಲಿರುವ ಮುರಿದ ವಸ್ತುಗಳನ್ನು ಹೊರಗೆ ಹಾಕಿ

ಮನೆಯಲ್ಲಿ ಮುರುಕಲು ಕುರ್ಚಿ, ಮತ್ತಿತರ ಸಾಮಾನುಗಳಿದ್ದರೆ ಅವುಗಳನ್ನು ಹೊರಗಡೆ ಬಿಸಾಡಿ.. ಮನೆಯನ್ನು ಸ್ವಚ್ಛವಾಗಿ, ಒಪ್ಪವಾಗಿ ಇಡಿ.

ಶನಿ ದೇವನಿಗೆ ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಅರ್ಪಿಸಿ

ಶನಿ ದೇವನಿಗೆ ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಅರ್ಪಿಸಿ

ಭಕ್ತರು ಶನಿ ಅಮವಾಸ್ಯೆಯಂದು ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆಯನ್ನು ಶನಿ ದೇವನಿಗೆ ಅರ್ಪಿಸಿ 'ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಮಃ'' ಎಂಬ ಮಂತ್ರ ಪಠಿಸಬೇಕು.

ಉದ್ದಿನ ಬೇಳೆ ಕಿಚಡಿ ಮಾಡಿ ಹಂಚಿ

ಉದ್ದಿನ ಬೇಳೆ ಕಿಚಡಿ ಮಾಡಿ ಹಂಚಿ

ಶನಿ ಜಯಂತಿಯಂದು ಉದ್ದಿನ ಬೇಳೆಯಿಂದ ಕಿಚಡಿ ಮಾಡಿ ಅದನ್ನು ಹಸಿದವರಿಗೆ ನೀಡಬೇಕು.

ಕಪ್ಪು ಬಟ್ಟೆ ದಾನ ಮಾಡಿ

ಕಪ್ಪು ಬಟ್ಟೆ ದಾನ ಮಾಡಿ

ಈ ದಿನ ಕಡು ನೀಲಿ ಬಣ್ಣ, ಕಡು ನೇರಳೆ ಅಥವಾ ಕಪ್ಪು ಬಣ್ಣ ವಸ್ತ್ರಗಳನ್ನು ದಾನ ಮಾಡಿ. ಕಾಗೆಗಳಿಗೆ ಆಹಾರ ನೀಡಿ.

ಉಪವಾಸ ಮಾಡಿ, ಮದ್ಯ, ಮಾಂಸ ಮುಟ್ಟಬಾರದು

ಭಕ್ತರು ಈ ದಿನ ಉಪವಾಸವಿದ್ದು ವ್ರತ ಮಾಡಬೇಕು, ಅಲ್ಲದೆ ಮದ್ಯ, ಮಾಂಸ ಇವುಗಳನ್ನು ಮುಟ್ಟಬಾರದು.

English summary

Shani Amavasya 2021: Things to do to Nullify The Negative Effects Of Shani in Kannada

Shani amavasya 2021: things to do to nullify the negative effects of shani in Kannada, read on..
X
Desktop Bottom Promotion