For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷ 2019: ಇತಿಹಾಸ, ಮಹತ್ವ ಮತ್ತು ಆಚರಣೆಯ ದಿನಗಳು

|
Pitru Paksha 2019 : ಪಿತೃ ಪಕ್ಷ 2019 | ಇತಿಹಾಸ, ಮಹತ್ವ ಹಾಗು ಆಚರಣೆಯ ದಿನಗಳು

ಹಿಂದೂ ಧರ್ಮವು ವಿಶಾಲವಾದ ವ್ಯಾಪ್ತಿ ಹಾಗೂ ಆಚರಣೆಯನ್ನು ಒಳಗೊಂಡಿದೆ. ದೇವತೆಗಳಿಗೆ ಆರಾಧನೆ ಹಾಗೂ ಪೂಜೆಯನ್ನು ಕೈಗೊಳ್ಳುವಂತೆ ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಹಿರಿಯರಿಗೂ ಗೌರವ ಹಾಗೂ ಪೂಜೆಯನ್ನು ಸಲ್ಲಿಸಲಾಗುವುದು. ನಮ್ಮ ಜೀವನಕ್ಕೆ ಬೆಳಕನ್ನು ತೋರಿ, ಆದರ್ಶ ಮಾರ್ಗದಲ್ಲಿ ನಡೆಯುವಂತೆ ಸಲಹೆ ನೀಡುವವರು ಹಿರಿಯರು. ಕುಟುಂಬದ ರಕ್ಷಣೆ ಹಾಗೂ ವ್ಯಕ್ತಿಯ ಅಭಿವೃದ್ಧಿಗೆ ಸಾಕಷ್ಟು ಶ್ರಮವನ್ನು ಗೈಯುವರು. ತಮ್ಮ ಜೀವನದ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಕ್ಕಳು, ಮೊಮ್ಮಕ್ಕಳ ಅಭಿವೃದ್ಧಿಗೆ ಶ್ರಮಿಸುವ ಮನುಷ್ಯ ರೂಪದ ದೇವರಾಗಿರುತ್ತಾರೆ.

ನಮ್ಮ ಜೀವಿತದ ಅವಧಿಯಲ್ಲಿ ನಾವು ದೇವರನ್ನು ಹೇಗೆ ಸ್ಮರಿಸುತ್ತೇವೆಯೋ ಹಾಗೆಯೇ ನಮ್ಮ ಹಿರಿಯರನ್ನು ಸಹ ಸ್ಮರಿಸಿಕೊಳ್ಳಬೇಕು. ಮನುಷ್ಯನ ಜೀವಿತದ ಅವಧಿ ಸೀಮಿತ ವರ್ಷಗಳನ್ನು ಒಳಗೊಂಡಿರುವುದರಿಂದ ನಾವು ನಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿಯ ಜೊತೆಗೆ ದೀರ್ಘ ಸಮಯವನ್ನು ಅಥವಾ ಜೀವನವನ್ನು ಕಳೆಯಲು ಸಾಧ್ಯವಿಲ್ಲ. ನಮಗಾಗಿ ಜೀವ ಸವೆದು ಸಾಗಿದ ಹಿರಿಯರನ್ನು ವರ್ಷಕ್ಕೊಮ್ಮೆ ನೆನೆಸಿಕೊಳ್ಳಬೇಕು. ಅವರಿಗಾಗಿ ಒಮ್ಮೆಯಾದರೂ ಆಹಾರವನ್ನು ನೀಡಬೇಕು. ಆಗಲೇ ಅವರ ಆತ್ಮಕ್ಕೆ ಶಾಂತಿ ಹಾಗೂ ಸಂತೋಷ ದೊರೆಯುವುದು ಎಂದು ಹೇಳಲಾಗುವುದು.

ವ್ಯಕ್ತಿ ಸತ್ತರೂ ಅವನ ಆತ್ಮಕ್ಕೆ ಸಾವು ಇರುವುದಿಲ್ಲ. ಅದು ದೈವ ಸಮಾನವಾದದ್ದು ಎನ್ನುವ ಕಲ್ಪನೆ ಇದೆ. ಮಕ್ಕಳ ಜೀವನ ಶ್ರೇಯಸ್ಸಿನಿಂದ ಸಾಗ ಬೇಕು ಎಂದರೆ ಹಿರಿಯರ ಆಶೀರ್ವಾದ ಇರಬೇಕು. ಹಿರಿಯರ ಮನಸ್ಸಿಗೆ ನಾವು ಸಂತೋಷವನ್ನು ಉಂಟುಮಾಡಿದರೆ ಅವರು ನಮ್ಮನ್ನು ಹರಸುತ್ತಾರೆ. ಈ ನಿಟ್ಟಿನಲ್ಲಿಯೇ ವರ್ಷಕ್ಕೊಮ್ಮೆ ಕುಟುಂಬದ ಹಿರಿಯರನ್ನು ನೆನೆದು ಅವರಿಗೆ ಆಹಾರವನ್ನು ನೀಡಬೇಕು ಎನ್ನುವ ಪದ್ಧತಿ ಹಾಗೂ ಆಚರಣೆಯನ್ನು ಹಿಂದೂ ಧರ್ಮ ಹೊಂದಿದೆ. ಅದನ್ನೇ ಪಿತೃ ಪಕ್ಷದ ಆಚರಣೆ ಎನ್ನಲಾಗುವುದು. ಕೆಲವು ಜನಾಂಗದವರು ತಮ್ಮ ಹಿರಿಯರು ಮೃತರಾದ ತಿಥಿ ಹಾಗೂ ದಿನದ ಆಧಾರದ ಮೇಲೆ ಶ್ರಾದ್ಧವನ್ನು ಮಾಡುತ್ತಾರೆ. ಬಹುತೇಕ ಜನಾಂಗದವರು ಪಿತೃಪಕ್ಷದ ಮಾಸದಲ್ಲಿ ಆಚರಿಸಲಾಗುವ ಪಿತೃ ದಿನದಲ್ಲಿ ಶ್ರಾದ್ಧ ಮಾಡುವರು. ಇದರಿಂದ ಆನುವಂಶಿಕವಾಗಿ ಬಂದ ಎಲ್ಲಾ ಹಿರಿಯರನ್ನು ಕರೆದು ಪಿಂಡ ನೀಡುವುದು ಅಥವಾ ಆಹಾರ ನೀಡುವುದು ಎನ್ನಲಾಗುತ್ತದೆ.

ಪಿತೃಪಕ್ಷವು 15 ಚಂದ್ರನ ಅವಧಿಯನ್ನು ಹೊಂದಿದೆ. ಹಿಂದೂಗಳು ತಮ್ಮ ಪೂರ್ವಜರಿಗೆ ವಿಶೇಷವಾಗಿ ಆಹಾರ ಅರ್ಪಣೆ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ ಪಿತೃಪಕ್ಷವು ಭಾದ್ರಪದಾ ಹುಣ್ಣಿಮೆಯ ದಿನ ಅಥವಾ ಹುಣ್ಣಿಮೆಯ ಮರುದಿನ ಆರಂಭವಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಜನರು ಸಹ ಇದೇ ದಿನದಲ್ಲಿ ಶ್ರಾದ್ಧ ಆಚರಣೆಯನ್ನು ಮಾಡುತ್ತಾರೆ.

ಪಿತೃಪಕ್ಷದ ಆಚರಣೆ

ಪಿತೃಪಕ್ಷದ ಆಚರಣೆ

ಪಿತೃಪಕ್ಷದ ಕೊನೆಯ ದಿನವನ್ನು ಸರ್ವ ಪಿತೃ ಅಮವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ಎಂದು ಕರೆಯಲಾಗುವುದು. ಈ ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅತ್ಯಂತ ಮಹತ್ವದ ದಿನ. ಈ ವರ್ಷ ಅಂದರೆ 2019ರ ಪಿತೃ ಪಕ್ಷದ ಆರಂಭವು ಸೆಪ್ಟೆಂಬರ್ 13 ಶುಕ್ರವಾರ ದಿಂದ ಆರಂಭವಾಗುವುದು. ಪಿತೃ ಪಕ್ಷದ ಮುಕ್ತಾಯ ಅಂದರೆ ಮಹಾಲಯ ಅಮವಾಸ್ಯೆಯು 2019 ಸೆಪ್ಟೆಂಬರ್ 28ರಂದು ಶನಿವಾರ ಆಗುವುದು.

ಪಿತೃ ಪಕ್ಷದ ವಿಶೇಷ ದಿನಗಳು

ಪಿತೃ ಪಕ್ಷದ ವಿಶೇಷ ದಿನಗಳು

ಪಿತೃ ಪಕ್ಷದ ಆರಂಭವು ವಿವಿಧ ಶ್ರಾದ್ಧ ದಿನವಾಗಿ ಕರೆಯಲಾಗುವುದು. ಕೆಲವು ಜನಾಂಗದವರು ವಿವಿಧ ಶ್ರಾದ್ಧ ದಿನ ತಮ್ಮ ಹಿರಿಯರಿಗೆ ಆಹಾರವನ್ನು ಅರ್ಪಿಸುವರು. 2019ರ ಪಿತೃ ಪಕ್ಷವು ಸೆಪ್ಟೆಂಬರ್ 13 ರಿಂದ ಆರಂಭವಾಗುವುದು. ಸೆಪ್ಟೆಂಬರ್ 13ರ ದಿನವನ್ನು ಪೂರ್ಣಿಮ ಶ್ರಾದ್ಧ, 14 ರಂದು ಪ್ರತಿಪಾದ ಶ್ರಾದ್ಧ, 15 ರಂದು ದ್ವಿತೀಯ ಶ್ರಾದ್ಧ, 17 ರಂದು ತೃತೀಯ ಶ್ರಾದ್ಧ, 18 ರಂದು ಮಹಾ ಭರಣಿ, 19 ರಂದು ಪಂಚಮಿ ಶ್ರಾದ್ಧ, 20 ರಂದು ಷಷ್ಟಿ ಶ್ರಾದ್ಧ, 21 ರಂದು ಸಪ್ತಮಿ ಶ್ರಾದ್ಧ, 22 ರಂದು ಅಷ್ಟಮಿ ಶ್ರಾದ್ಧ, 23 ನವಮಿ ಶ್ರಾದ್ಧ, 24 ದಶಮಿ ಶ್ರಾದ್ಧ, 25 ಏಕಾದಶಿ ಶ್ರಾದ್ಧ, 26 ಮಘಾ ಶ್ರಾದ್ಧ, 27 ಚತುರ್ದಶಿ ಶ್ರಾದ್ಧ, 28 ಸರ್ವಪಿತೃ ಅಮವಾಸ್ಯ ಎಂದು ಆಚರಿಸುತ್ತಾರೆ. ಸಮಾನ್ಯವಾಗಿ ಸರ್ವ ಪಿತೃ ಅಮವಾಸ್ಯ/ ಮಹಾಲಯಾ ಅಮವಾಸ್ಯ ದಿನದಂದು ಕುಟುಂಬದಲ್ಲಿ ಮೃತರಾದ ಎಲ್ಲಾ ಹಿರಿಯರಿಗೆ ಅಥವಾ ಪೂರ್ವಜರಿಗೆ ಆಹಾರವನ್ನು ನೀಡಲಾಗುವುದು.

ಪಿತೃ ಪಕ್ಷದ ಪ್ರಾಮುಖ್ಯತೆ

ಪಿತೃ ಪಕ್ಷದ ಪ್ರಾಮುಖ್ಯತೆ

ಪುರಾಣದ ಪ್ರಕಾರ ಮನುಷ್ಯನ ಸಾವಿನ ನಂತರ ಮೋಕ್ಷ ದೊರೆಯಬೇಕು. ಮೋಕ್ಷ ಸಿಗದೆ ಹೋದರೆ ಆತ್ಮವು ಪಿಶಾಚಿಗಳಾಗಿ ಅಲೆದಾಡುತ್ತಲೇ ಇರುತ್ತವೆ. ಕೆಲವೊಮ್ಮೆ ದುರ್ಬಲ ಮನಸ್ಸಿನವರಲ್ಲಿ ಆತ್ಮವು ಸೇರಿಕೊಂಡು ತೊಂದರೆಯನ್ನು ನೀಡುವುದು. ಅದು ಕುಟುಂಬದ ಏಳಿಗೆಗೂ ತೊಡಕನ್ನುಂಟು ಮಾಡುವುದು ಎಂದು ಹೇಳುವುದು. ಹಾಗಾಗಿ ತಂದೆ ತಾಯಿ ತೀರಿದಾಗ ಮನೆಯ ಹಿರಿಯ ಮಗನು ಮೋಕ್ಷದ ಸಂಸ್ಕಾರವನ್ನು ಮಾಡಬೇಕು. ವರ್ಷಕ್ಕೊಮ್ಮೆ ಪಿಂಡ ಇಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಹಾಗೆ ಮಾಡದೆ ಇದ್ದರೆ ಆತನ ಕುಲವು ಮುಂದೆ ಅಭಿವೃದ್ಧಿಯನ್ನು ಹೊಂದುವುದಿಲ್ಲ ಎನ್ನಲಾಗುವುದು.

ಗಂಡು ಸಂತಾನ ಇಲ್ಲದವರ ಅಂತ್ಯ ಕ್ರಿಯೆ ಹಾಗೂ ಮೂಕ್ಷ ಕಾರ್ಯವನ್ನು ದಾಯಾದಿ ಗಂಡು ಮಕ್ಕಳು ನೆರವೇರಿಸಬೇಕು ಎನ್ನಲಾಗುವುದು. ಅನಾಥರು ಅಥವಾ ನಿರ್ಗತಿಕರು ಸಾವನ್ನು ಅಪ್ಪಿದಾಗ ಪುಣ್ಯ ಕ್ಷೇತ್ರಗಳಾದ ಗೋಕರ್ಣ ಮತ್ತು ಕಾಶಿಯಲ್ಲಿ ತಿಥಿ ಕಾರ್ಯಗಳನ್ನು ಮಾಡಿಸಬೇಕು ಎಂದು ಹೇಳಲಾಗುವುದು. ಪಿತೃಪಕ್ಷದಲ್ಲಿ ನೀಡುವ ಆಹಾರ ಹಾಗೂ ಶ್ರಾದ್ಧ ಕಾರ್ಯದ ಸಂಸ್ಕಾರವು ಮೂರು ತಲೆ ಮಾರಿನ ಹಿರಿಯರಿಗೆ ಸಲ್ಲುತ್ತದೆ ಎಂದು ಮಾರ್ಕಂಡೇಯ ಪುರಾಣ ಹೇಳುತ್ತದೆ.

ಪಿತೃ ಪಕ್ಷದ ಆಹಾರ ತಯಾರಿ

ಪಿತೃ ಪಕ್ಷದ ಆಹಾರ ತಯಾರಿ

ಪೂರ್ವಜರಿಗೆ ಸಲ್ಲಿಸುವ ಆಹಾರವು ಮಡಿವಂತಿಕೆಯಿಂದ ಕೂಡಿರಬೇಕು. ತಯಾರಿಸುವ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮಾಂಸಗಳ ಬಳಕೆಯನ್ನು ಮಾಡಬಾರದು. ಆಹಾರ ತಯಾರಿಸುವಾಗ ಬೆಳ್ಳೆ ಅಥವಾ ತಾಮ್ರದ ಪಾತ್ರೆಯಲ್ಲಿ ಬೇಯಿಸಬೇಕು. ನಂತರ ಕೊಡಿ ಇರುವ ಬಾಳೆ ಎಲೆಯಲ್ಲಿ ಪಿಂಡವನ್ನು ಹಾಕಿ ಅದರ ಜೊತೆಗೆ ಮನೆಯಲ್ಲಿ ತಯಾರಿಸಿದ ಎಲ್ಲಾ ಬಗೆಯ ಆಹಾರವನ್ನು ನೀಡಿ, ಕಾಗೆಗೆ ನೀಡಬೇಕು.

ಯಾರಿಗೆ ಯಾವ ಶ್ರಾದ್ಧ ತಿಥಿ ಅಮೂಲ್ಯವಾದದ್ದು?

ಯಾರಿಗೆ ಯಾವ ಶ್ರಾದ್ಧ ತಿಥಿ ಅಮೂಲ್ಯವಾದದ್ದು?

* ಪೂರ್ಣಿಮ ಶ್ರಾದ್ಧ

13 ಸೆಪ್ಟೆಂಬರ್ 2019ರಂದು ಪೂರ್ಣಿಮ ಶ್ರಾದ್ಧವನ್ನು ಮಾಡುತ್ತಾರೆ. ಪೂರ್ಣಿಮೆಯ ತಿಥಿಯಲ್ಲಿ ನಿಧನರಾದವರಿಗೆ ಈ ತಿಥಿಯಂದು ಆಹಾರವನ್ನು ಅರ್ಪಿಸಲಾಗುವುದು.

* ಪ್ರತಿಪಾದ ಶ್ರಾದ್ಧ

14 ಸೆಪ್ಟೆಂಬರ್ 2019ರಂದು ಪ್ರತಿಪಾದ ಪ್ರತಿಪಾದ ಶ್ರಾದ್ಧ ಮಾಡುವರು. ಪ್ರತಿಪಾದ ತಿಥಿಯಲ್ಲಿ ಮೃತರಾದವರಿಗೆ ಅಂದು ಶ್ರಾದ್ಧ ಮಾಡಲಾಗುವುದು. ತಾಯಿಯ ಅಜ್ಜ ಮತ್ತು ಅಜ್ಜಿಗೆ ಶ್ರಾದ್ಧ ಮಾಡಲು ಈ ದಿನ ಅತ್ಯಂತ ಶ್ರೇಷ್ಠವಾದ ದಿನ. ಅದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುವುದು.

* ದ್ವಿತೀಯ ಶ್ರಾದ್ಧ

15 ಸೆಪ್ಟೆಂಬರ್ 2019ರಂದು ದ್ವಿತೀಯ ಶ್ರಾದ್ಧ ಮಾಡುವರು. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ದ್ವಿತೀಯ ತಿಥಿಯಲ್ಲಿ ಮೃತರಾಗಿರುತ್ತಾರೆ ಅವರಿಗೆ ಈ ದಿನ ಶ್ರಾದ್ಧ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಈ ದಿನದ ಶ್ರಾದ್ಧವನ್ನು ದೂಜ್ ಶ್ರಾದ್ಧ ಎಂದು ಸಹ ಕರೆಯುತ್ತಾರೆ.

* ತೃತೀಯ ಶ್ರಾದ್ಧ

17 ಸೆಪ್ಟೆಂಬರ್ 2019ರಂದು ತೃತೀಯ ಶ್ರಾದ್ಧ ಮಾಡುವರು. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ತೃತಿಯ ತಿಥಿಯಂದು ವಿಧಿವಶರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡಬೇಕು. ಇದನ್ನು ತ್ರೀಜ್ ಶ್ರಾದ್ಧ ಎಂದು ಕರೆಯುವರು.

* ಮಹಾಭರಣಿ ಶ್ರಾದ್ಧ

18 ಸೆಪ್ಟೆಂಬರ್ 2019ರಂದು ಮಹಾಭರಣಿ ಶ್ರಾದ್ಧ ಮಾಡುವರು. ಯಾರು ಭರಣಿ ನಕ್ಷತ್ರ ಹಾಗೂ ಚತುರ್ಥಿ ತಿಥಿಯಲ್ಲಿ ಮೃತರಾದವರಿಗೆ ಈ ದಿನ ಶ್ರಾದ್ಧವನ್ನು ಮಾಡಬೇಕು. ಇದರಿಂದ ಅವರ ಆತ್ಮಕ್ಕೆ ಮೋಕ್ಷ ದೊರೆಯುವುದು. ಇದನ್ನು ಭರಣಿಶ್ರಾದ್ಧ ಎಂದು ಕರೆಯುವರು.

* ಪಂಚಮಿ ಶ್ರಾದ್ಧ:

19 ಸೆಪ್ಟೆಂಬರ್ 2019ರಂದು ತೃತೀಯ ಶ್ರಾದ್ಧ ಮಾಡುವರು. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಪಂಚಮಿಯ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಇದನ್ನು ಕುನ್ವಾರ ಪಂಚಮಿ ಎಂದು ಸಹ ಕರೆಯುತ್ತಾರೆ.

* ಷಷ್ಟಿ ಶ್ರಾದ್ಧ

20 ಸೆಪ್ಟೆಂಬರ್ 2019ರಂದು ಷಷ್ಟಿ ಶ್ರಾದ್ಧ ಮಾಡುವರು. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಷಷ್ಟಿ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಇದನ್ನು ಚಾತ್ ಶ್ರಾದ್ಧ ಎಂದು ಸಹ ಕರೆಯುತ್ತಾರೆ.

* ಸಪ್ತಮಿ ಶ್ರಾದ್ಧ

21 ಸೆಪ್ಟೆಂಬರ್ 2019ರಂದು ಸಪ್ತಮಿ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಸಪ್ತಮಿ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು.

* ಅಷ್ಟಮಿ ಶ್ರಾದ್ಧ

22 ಸೆಪ್ಟೆಂಬರ್ 2019ರಂದು ಅಷ್ಟಮಿ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಅಷ್ಟಮಿ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಇದನ್ನು ಪರ್ವನ್ ಶ್ರಾದ್ಧ ಎಂದು ಸಹ ಕರೆಯುತ್ತಾರೆ.

* ನವಮಿ ಶ್ರಾದ್ಧ

23 ಸೆಪ್ಟೆಂಬರ್ 2019ರಂದು ನವಮಿ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ನವಮಿ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಈ ದಿನ ತಾಯಿಯ ಶ್ರಾದ್ಧ ಮಾಡಲು ಅತ್ಯಂತ ಶ್ರೇಷ್ಠವಾದ ದಿನ. ಇದನ್ನು ಮಾತ್ರ ನವಮಿ ಎಂದು ಸಹ ಕರೆಯುತ್ತಾರೆ.

* ದಶಮಿ ಶ್ರಾದ್ಧ

24 ಸೆಪ್ಟೆಂಬರ್ 2019ರಂದು ದಶಮಿ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ದಶಮಿ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಇದರಿಂದ ಅವರ ಆತ್ಮಕ್ಕೆ ಮೋಕ್ಷ ದೊರೆಯುವುದು.

* ಏಕಾದಶಿ ಶ್ರಾದ್ಧ

25 ಸೆಪ್ಟೆಂಬರ್ 2019ರಂದು ಏಕಾದಶಿ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಏಕಾದಶಿ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಇದರಿಂದ ಅವರ ಆತ್ಮಕ್ಕೆ ಮೋಕ್ಷ ದೊರೆಯುವುದು.

* ಮಘಾ ಶ್ರಾದ್ಧ

26 ಸೆಪ್ಟೆಂಬರ್ 2019ರಂದು ಮಘಾ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಮಘಾ ತಿಥಿಯಲ್ಲಿ ಮೃತರಾಗಿರುತ್ತಾರೆ, ಅವರಿಗೆ ಈ ದಿನ ಶ್ರಾದ್ಧ ಮಾಡುವುದರ ಮೂಲಕ ಆಹಾರವನ್ನು ಅರ್ಪಿಸಬೇಕು. ಅಪರಾಹ್ನ ಕಾಲದಲ್ಲಿ ಮಘಾ ನಕ್ಷತ್ರದ ದಿನ ಈ ಶ್ರಾದ್ಧ ಮಾಡಬೇಕು.

*27 ಚತುರ್ದಶಿ ಶ್ರಾದ್ಧ

27 ಸೆಪ್ಟೆಂಬರ್ 2019ರಂದು ಚತುರ್ದಶಿ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಚತುರ್ದಶಿ ತಿಥಿಯಲ್ಲಿ ಮೃತರಾಗಿರುತ್ತಾರೆ ಅವರಿಗೆ ಶ್ರಾದ್ಧ ಮಾಡಬೇಕು. ಯಾರು ಶಸ್ತ್ರಾಸ್ತ್ರಗಳಿಂದ ಕೊಲ್ಲಲ್ಪಟ್ಟಿದ್ದಾರೆ, ಅಪಘಾತದಲ್ಲಿ ಮರಣ ಹೊಂದಿದ್ದಾರೆ, ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಅವರಿಗೆ ಪಿಂಡ ಹಾಕಲು ಚತುರ್ದಶಿ ಶ್ರಾದ್ಧ ಶ್ರೇಷ್ಠವಾದದ್ದು. ಈ ಚತುರ್ದಶಿ ತಿಥಿಯಲ್ಲಿ ಕೊಡುವ ಆಹಾರವು ಮೃತ ಆತ್ಮಕ್ಕೆ ಸಲ್ಲುವುದು.

* ಸರ್ವಪಿತೃ ಅಮವಾಸ್ಯ /ಮಹಾಲಯ ಅಮವಾಸ್ಯೆ ಶ್ರಾದ್ಧ

28 ಸೆಪ್ಟೆಂಬರ್ 2019ರಂದು ಮಹಾಲಯ ಶ್ರಾದ್ಧವನ್ನು ಆಚರಿಸುತ್ತಾರೆ. ಯಾರು ಶುಕ್ಲ ಮತ್ತು ಕೃಷ್ಣ ಪಕ್ಷದ ಪೂರ್ಣಿಮೆ ಮತ್ತು ಚತುರ್ದಶಿ ತಿಥಿಯಲ್ಲಿ ಮೃತರಾಗಿರುತ್ತಾರೆ ಅವರಿಗೆ ಶ್ರಾದ್ಧ ಮಾಡಬೇಕು. ಈ ದಿನದಂದು ಕುಟುಂಬದಲ್ಲಿ ಮೃತರಾದ ಎಲ್ಲಾ ಪೂರ್ವಜರಿಗೂ ಶ್ರಾದ್ಧ ಮಾಡಲು ಸೂಕ್ತವಾದ ದಿನ. ಹಾಗಾಗಿಯೇ ಈ ದಿನವನ್ನು ಸರ್ವ ಪಿತೃ ಅಮವಾಸ್ಯೆ ದಿನ ಎಂದು ಕರೆಯುವರು.

English summary

Pithru Paksha 2019: Dates, History And Significance

Pitru Paksha is a 15 lunar days period when Hindus pay homage to their ancestors, especially through food offerings. According to South Indian Amavasyant calendar it falls in the lunar month of Bhadrapada beginning with the full moon day or day after full moon day.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more