For Quick Alerts
ALLOW NOTIFICATIONS  
For Daily Alerts

ಇಂದು (ಅ.6) ಪಾಪಾಂಕುಶ ಏಕಾದಶಿ : ಈ ಏಕಾದಶಿಯ ಮಹತ್ವವೇನು? ಪಾರಣ ಸಮಯ ಯಾವಾಗ?

|

ಪ್ರತಿತಿಂಗಳು ಏಕಾದಶಿಯಂದು ವ್ರತ ಮಾಡುವುದರಿಂದ ಶ್ರೀವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು. ಒಂದೊಂದು ಏಕಾದಶಿಗೆ ಒಂದೊಂದು ಮಹತ್ವವಿದೆ. ಈ ತಿಂಗಳಿನಲ್ಲಿ ಅಕ್ಟೋಬರ್‌ 6ರಂದು ಪಾಪಾಂಕುಶ ಏಕಾದಶಿ ಆಚರಿಸಲಾಗುವುದು.

Papankusha Ekadashi

ಯಾರು ಈ ದಿನ ಉಪವಾಸವಿದ್ದು ವ್ರತವನ್ನು ಆಚರಿಸುತ್ತಾರೋ ಅವರು ಮಾಡಿದ ಎಲ್ಲಾ ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಈ ದಿನ ಉಪವಾಸ ಇರುವವರು ನಾಳೆ ಬೆಳಗ್ಗೆಯವರೆಗೆ ಉಪವಾಸ ನಿಯಮವನ್ನು ಪಾಲಿಸಬೇಕಾಗುತ್ತದೆ.

ಪಾರಣ ಸಮಯ: ಅಕ್ಟೋಬರ್ 7ರಿಂದ ಬೆಳಗ್ಗೆ 06:17ರಿಂದ 07:26ರವರೆಗೆ

ಆಶ್ವಿನ್ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪಾಪಾಂಕುಶ ಏಕಾದಶಿ ಎಂದು ಕರೆಯಲಾಗುತ್ತದೆ. ಯುಧಿಷ್ಠರ ಶ್ರೀಕೃಷ್ಣನ ಬಳಿ ಈ ಏಕಾದಶಿಯ ಮಹತ್ವದ ಬಗ್ಗೆ ಕೇಳುತ್ತಾನೆ, ಆಗ ಶ್ರೀ ಕೃಷ್ಣ ಪಾಪಾಂಕುಶ ಏಕಾದಶಿಯ ಮಹತ್ವದ ಕುರಿತು ತಿಳಿಸಲು ಈ ಕತೆಯನ್ನು ಹೇಳುತ್ತಾನೆ.

ಪಾಪಾಂಕುಶ ಏಕಾದಶಿ ಉಪವಾಸದ ಕಥೆ

ಪಾಪಾಂಕುಶ ಏಕಾದಶಿ ಉಪವಾಸದ ಕಥೆ

ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದ ಪಾಪಾಂಕುಶ ಏಕಾದಶಿ ಉಪವಾಸದ ಕಥೆ ಹೀಗಿದೆ. ವಿಂಧ್ಯ ಪರ್ವತದ ಮೇಲೆ ಕ್ರೋಧನ ಎಂಬ ಬೇಟೆಗಾರ ವಾಸಿಸುತ್ತಿದ್ದನು. ಅವನು ತುಂಬಾ ಹಿಂಸಾತ್ಮಕ, ಕಠೋರ, ಅನೀತಿವಂತ, ಪಾಪ ಕಾರ್ಯಗಳಲ್ಲಿ ತೊಡಗಿರುವ ವ್ಯಕ್ತಿಯಾಗಿದ್ದ.ಕಾಲ ಕಳೆದಂತೆ ಅವನ ಜೀವನದ ಕೊನೆಯ ಕ್ಷಣ ಸಮೀಪಸಲಿದೆ. ಅವನ ಸಾವಿನ ಒಂದು ದಿನದ ಮೊದಲು, ಯಮದೂತರು ಅವನ ಬಳಿ ಬಂದು ನಾಳೆ ನಿನ್ನನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ಇದನ್ನು ಕೇಳಿ ಭಯಭೀತನಾದ ಆತ ಅಂಗೀರ ಋಷಿಯ ಆಶ್ರಮಕ್ಕೆ ಜೀವಮಾನವಿಡೀ ಪಾಪ ಕರ್ಮ ಮಾಡಿದ್ದೇನೆ, ಈ ಪಾಪಗಳಿಂದ ಮುಕ್ತನಾಗಬೇಕು, ಪರಿಹಾರ ಸೂಚಿಸಿ ಎಂದು ಕೇಳುತ್ತಾನೆ, ಆಗ ಋಷಿಗಳು ಅವನಿಗೆ ಪಾಪಾಂಕುಶ ಏಕಾದಶಿಯ ವ್ರತದ ಮಹತ್ವ ತಿಳಿಸುತ್ತಾರೆ. ಆತ ಆ ಉಪವಾಸವನ್ನು ಮಾಡುತ್ತಾನೆ, ಆತ ಮಾಡಿದ ಪಾಪಕರ್ಮಗಳಿಂದ ಮುಕ್ತನಾಗಿ ಸ್ವರ್ಗಕ್ಕೆ ಹೋಗುತ್ತಾನೆ.

ಪಾಪಾಂಕುಶ ಏಕಾದಶಿಯಂದು ಈ ಮಂತ್ರ ಪಠಿಸಿ

ಪಾಪಾಂಕುಶ ಏಕಾದಶಿಯಂದು ಈ ಮಂತ್ರ ಪಠಿಸಿ

ಶಾಂತಾಕಾರಂ ಭುಜಂಗಶಯನಂ ಪದ್ಮನಾಭಂ ಸುರೇಶಂ|

ವಿಶ್ವಧರಂ ಗಗನ ಸದೃಶಂ ಮೇಘವರ್ಣ ಶುಭಾಂಗಂ|

ಲಕ್ಷ್ಮೀಕಾಂತ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ

ವಂದೇ ವಿಷ್ಣು ಭವಭಯಹರಂ ಸರ್ವ ಲೋಕೈಕನಾಥಂ||

ಯಂ ಬ್ರಹ್ಮ ವರುಣೈಂದ್ರು ರುದ್ರಮೃತಃ ಸ್ತುನ್ವಾನಿ ದಿವ್ಯೈ ಸ್ತವೈವೇದೇಃ|

ಸಾಂಗ ಪದಕ್ರಮೋಪನಿಷದೈ ಗಾರ್ಯಂತಿ ಯಂ ಸಾಮಗಾಃ||

ಧ್ಯಾನಾವಸ್ಥಿತ ತದ್ಗತೇನ್ ಮನಸಾ ಪಶ್ಯತಿ ಯಂ ಯೋಗಿನೋ|

ಏಕಾದಶಿಯಂದು ಏನು ಮಾಡಬಾರದು?

ಏಕಾದಶಿಯಂದು ಏನು ಮಾಡಬಾರದು?

* ಮಾಂಸಾಹಾರ ಸೇವಿಸಬಾರದು, ಈ ದಿನ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸಿ.

* ಮದ್ಯ ಸೇವಿಸಬಾರದು

* ಈ ದಿನ ಕೋಪಗೊಳ್ಳಬಾರದು.

ಈ ದಿನ ಏನು ಮಾಡಬೇಕು?

* ಈ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ , ಶ್ರೀವಿಷ್ಣುವನ್ನು ಪೂಜಿಸಿ.

* ಏಕಾದಶಿಯಂದು ಉಪವಾಸ ಮಾಡಿ ದ್ವಾದಶಿಯಂದು ಉಪವಾಸ ಮುರಿಯಿರಿ.

* ಬಡವರಿಗೆ ದಾನಗಳನ್ನು ಮಾಡಿ.

English summary

Papankusha Ekadashi 2022 Date, Rituals, Significance, Vrat Katha in kannada

Papankusha Ekadashi 2022 date, rituals to follow, what are the significance read on...
X
Desktop Bottom Promotion