For Quick Alerts
ALLOW NOTIFICATIONS  
For Daily Alerts

ನವರಾತ್ರಿ 2022: ನವರಾತ್ರಿಯಲ್ಲಿ ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ

|

ಸೆಪ್ಟೆಂಬರ್ 26ಕ್ಕೆ ನವರಾತ್ರಿ ಪ್ರಾರಂಭ. ಈ 9 ದಿನಗಳಲ್ಲಿ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುವುದು. ಒಂದೊಂದು ಅವತಾರವನ್ನು ಆರಾಧಿಸುವುದರಿಂದ ಒಂದೊಂದು ರೀತಿಯ ಫಲ ಸಿಗಲಿದೆ. ಈ ವರ್ಷದ ನವರಾತ್ರಿ ನಾಡಿನ ಜನತೆಗೆ ಶುಭ ಫಲಿತಾಂಶ ನೀಡಲಿದೆ. ಏಕೆಂದರೆ ಈ ವರ್ಷ ದೇವಿ ಆನೆಯ ಬೆನ್ನಿನ ಮೇಲೇರಿ ಬಂದು , ಆನೆಯ ಮೇಲೆಯೇ ಹಿಂತಿರುಗಲಿದೆ. ಆದ್ದರಿಂದ ಈ ವರ್ಷವನ್ನು ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ.

ಇನ್ನು ಈ ನವರಾತ್ರಿಯಲ್ಲಿ ಕೆಲವೊಂದು ರಾಶಿಯವರು ಆರ್ಥಿಕ ಜೀವನದಲ್ಲಿ ತುಂಬಾನೇ ಬದಲಾವಣೆ ಕಾಣುವಿರಿ. ನಾವಿಲ್ಲಿ ವೈದಿಕ ಶಾಸ್ತ್ರದ ಪ್ರಕಾರ ಯಾವೆಲ್ಲಾ ರಾಶಿಯವರಿಗೆ ಹೊಸ ಕೆಲಸ ಅಥವಾ ವ್ಯವಹಾರ ಪ್ರಾರಂಭಿಸಿದರೆ ಲಾಭ ಕಾಣುವಿರಿ. ಯಾವೆಲ್ಲಾ ರಾಶಿಯವರಿಗೆ ಈ ನವರಾತ್ರಿ ಮತ್ತಷ್ಟು ಮಂಗಳಕರವಾಗಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ

ಮೇಷ ರಾಶಿ

ನವರಾತ್ರಿಯಲ್ಲಿ ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ವಿಶೇಷ ಲಾಭಗಳು ದೊರೆಯಲಿವೆ. ನೀವು ಹಠಾತ್ ಹಣದ ಲಾಭವನ್ನು ಪಡೆಯುತ್ತೀರಿ. ಕೆಲಸದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ.

ಮಿಥುನ ರಾಶಿ

ಮಿಥುನ ರಾಶಿ

ನವರಾತ್ರಿಯಲ್ಲಿ ಮಿಥುನ ರಾಶಿಯವರು ಉದ್ಯೋಗ ಅಥವಾ ವ್ಯಾಪಾರದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಈ ಅವಧಿಯಲ್ಲಿ ಹೊಸ ಮನೆ ಅಥವಾ ವಾಹನ ಖರೀದಿಸಬಹುದು.ಈ ಸಮಯದಲ್ಲಿ ಪ್ರಾರಭಿಉವ ಕೆಲಸದಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತ ಫಲ ಸಿಗಲಿದೆ.

 ಕನ್ಯಾ ರಾಶಿ

ಕನ್ಯಾ ರಾಶಿ

ನಿಮ್ಮ ಸಕಾರಾತ್ಮಕ ಮನೋಭಾವ ಹಾಗೂ ಆಲೋಚನೆಯಿಂದ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಶುಭ ಫಲ ಪಡೆಯುವಿರಿ. ಅವಾಹಿತರಿಗೆ ಈ ಅವಧಿಯಲ್ಲಿ ಮದುವೆ ಆಲೋಚನೆ ಬಂದರೆ ಆ ಸಂಬಂಧ ಉತ್ತಮವಾಗಿರುತ್ತೆ.

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರ ಮನೆಯಲ್ಲಿ ಶುಭ ಕಾರ್ಯ ನಡೆಸಲು ಆಲೋಚಿಸಬಹುದು. ಯಾವುದೇ ಹಳೆಯ ಹೂಡಿಕೆಯಿಂದ ನೀವು ಲಾಭ ಪಡೆಯಬಹುದು. ಆದಾಯವೂ ಹೆಚ್ಚಾಗುವ ಸಾಧ್ಯತೆ ಇದೆ. ಕೌಟಂಬಿಕ ಜೀವನ ಚೆನ್ನಾಗಿರುತ್ತದೆ.

ಮೀನ ರಾಶಿ

ಮೀನ ರಾಶಿ

ನವರಾತ್ರಿಯಲ್ಲಿ ಮೀನ ರಾಶಿಯವರು ಬಲವಾದ ಅದೃಷ್ಟದ ಯೋಗವನ್ನು ಹೊಂದಿರುತ್ತಾರೆ, ನಿಮ್ಮ ಹಣಕಾಸು ಉತ್ತಮವಾಗಿರುತ್ತದೆ. ನಿಮ್ಮ ಕ್ಷೇತ್ರದಲ್ಲಿ ಲಾಭವನ್ನು ಪಡೆಯುತ್ತೀರಿ. ಮನೆಯಲ್ಲಿ ನಡೆಯುತ್ತಿರುವ ಪೂಜೆಯಿಂದ ಧನಾತ್ಮಕ ಶಕ್ತಿಯನ್ನು ಅನುಭವಿಸುವಿರಿ. ಈ ಅವಧಿಯಲ್ಲಿ ಯಾವುದಾದರೂ ಹೊಸ ಕೆಲಸ ಪ್ರಾರಂಭಿಸಿದರೆ ಶುಭವಾಗಲಿದೆ.

English summary

Navratri 2022:This Navratri Brings Lucky To These Zodiac Signs

Navratri 2022: This Navratri Brings Good for these zodiac signs, they will see financial growth, read on....
Story first published: Sunday, September 25, 2022, 19:50 [IST]
X
Desktop Bottom Promotion